YouVersion Logo
Search Icon

ಯೇಸುವಿನೊಂದಿಗೆ ಮುಖಾಮುಖಿSample

ಯೇಸುವಿನೊಂದಿಗೆ ಮುಖಾಮುಖಿ

DAY 40 OF 40

ಎಮ್ಮಾಹುಗೆ ಹೋಗುವ ದಾರಿಯಲ್ಲಿ ತನ್ನ ಇಬ್ಬರು ಹಿಂಬಾಲಕರಿಗೆ ಕಾಣಿಸಿಕೊಂಡಾಗ ಯೇಸು ಗುಟ್ಟಾಗಿ ಇದ್ದನು. ಆತನು ಅವರಿಗೆ ತನ್ನನ್ನು ಬಹಿರಂಗಪಡಿಸಿಕೊಳ್ಳಲಿಲ್ಲ ಆದರೆ ಅವರ ಎಲ್ಲಾ ಆಲೋಚನೆಗಳು ಮತ್ತು ಭಾವನೆಗಳನ್ನು ಆತನೊಂದಿಗೆ ಪ್ರಕ್ರಿಯೆಗೊಳಿಸಲು ಅವರಿಗೆ ಅವಕಾಶ ಮಾಡಿಕೊಟ್ಟನು. ನಂತರ ಆತನು ಅವರಿಗೆ ಸಂಗತಿಗಳನ್ನು ವಿವರಿಸಿ, ಆತನು ಯಾಕೆ ಬಂದನು, ಸತ್ತನು ಮತ್ತು ಪುನರುತ್ಥಾನಗೊಂಡನು ಎಂಬುದನ್ನು ತಿಳಿಸಲು ಮೋಶೆ ಮತ್ತು ಪ್ರವಾದಿಗಳ ಕಾಲದಿಂದಲೂ ಅವರಿಗೆ ಚುಕ್ಕೆಗಳನ್ನು ಸೇರಿಸಿ ವಿವರಿಸಿದನು. ಆತನು ಅವರಿಗೆ ಬೋಧಿಸಿ ಸಂಗತಿಗಳನ್ನು ವಿವರಿಸಿದಾಗ ಅವರಿಗೆ ತಮ್ಮ ಹೃದಯವು ತಮ್ಮೊಳಗೆ ಉರಿಯುತ್ತಿರುವ ಅನುಭವವಾಯಿತು.

ಪುನರುತ್ಥಾನಗೊಂಡ ರಕ್ಷಕನು ಅದನ್ನೇ ಮಾಡುತ್ತಾನೆ. ಆತನ ಆತ್ಮವು ನಮ್ಮೊಂದಿಗೆ ಬರುತ್ತದೆ, ಆತನ ಮಾತುಗಳ ಗುಪ್ತ ಸತ್ಯಗಳನ್ನು ನಮಗೆ ಬಹಿರಂಗಪಡಿಸುತ್ತದೆ, ನಮಗೆ ಸಂಭವಿಸುವ ಕೆಲವು ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ನಮ್ಮ ಜೀವನದ ಚುಕ್ಕೆಗಳನ್ನು ಸೇರಿಸುವನು ಮತ್ತು ನಮ್ಮ ಹೃದಯದಲ್ಲಿ ಉರಿಯುವ ಉತ್ಸಾಹವನ್ನು ಇಡುವನು. ಪುನರುತ್ಥಾನಗೊಂಡ ದೇವರ ಆತ್ಮವು ನಮ್ಮಲ್ಲಿ ಮತ್ತು ನಮ್ಮ ಮೂಲಕ ಚಲಿಸದೆ ನಾವು ಜೀವನವನ್ನು ಮಾಡಲು ಸಾಧ್ಯವಿಲ್ಲ!

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ಪುನರುತ್ಥಾನದ ಜೀವನವನ್ನು ನಡೆಸಲು ನೀವು ಸಿದ್ಧರಾಗಿದ್ದೀರಾ?
ಈ ವರ್ಷದ ಉಳಿದ ಭಾಗಗಳಲ್ಲಿ ನಿಮಗೆ ಮಾರ್ಗದರ್ಶನ ಕೊಡಲು ದೇವರ ಆತ್ಮಕ್ಕೆ ನೀವು ಸ್ಥಳಾವಕಾಶವನ್ನು ಕೊಡುತ್ತೀರಾ?

Scripture

About this Plan

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More