YouVersion Logo
Search Icon

ಯೇಸುವಿನೊಂದಿಗೆ ಮುಖಾಮುಖಿSample

ಯೇಸುವಿನೊಂದಿಗೆ ಮುಖಾಮುಖಿ

DAY 34 OF 40

ನಾವು ದುಃಖವನ್ನು ವಿವರಿಸಲು ಪ್ರಯತ್ನಿಸುತ್ತೇವೆ ಅಥವಾ ಕನಿಷ್ಠ ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಅನೇಕ ಸಾರಿ ನಾವು ಹಾದುಹೋಗುತ್ತಿರುವ ಪರಿಸ್ಥಿತಿಯನ್ನು ಯಾಕೆ ಎದುರಿಸುತ್ತಿದ್ದೇವೆ ಎಂಬುದಕ್ಕೆ ಯಾವುದೇ ವಿವರಣೆಯಿರುವದಿಲ್ಲ. ಮೌನವಾಗಿರುವುದು ಮತ್ತು ದೇವರು ನಮ್ಮಲ್ಲಿ ಪ್ರಾರಂಭಿಸಿದ ಕೆಲಸವನ್ನು ಪೂರ್ಣಗೊಳಿಸಲು ಅನುಮತಿಸುವುದು ಉತ್ತಮವಾಗಿದೆ, ಇದರಿಂದ ಆತನ ಮಹಿಮೆಯು ನಮ್ಮಲ್ಲಿ ಮತ್ತು ನಮ್ಮ ಮೂಲಕ ಪ್ರಕಟವಾಗುತ್ತದೆ. ಸ್ವೀಕರಿಸಲು ಕಷ್ಟವಾಗಿದ್ದರೂ, ಯಶಸ್ಸಿಗಿಂತ ದುಃಖವು ನಮಗೆ ಹೆಚ್ಚು ಒಳ್ಳೆಯದನ್ನು ಮಾಡುತ್ತದೆ. ಇದು ನಮ್ಮ ಒರಟು ಅಂಚುಗಳನ್ನು ಪರಿಷ್ಕರಿಸುತ್ತದೆ, ಸಹಿಷ್ಣುತೆಯನ್ನು ಬೆಳೆಸುತ್ತದೆ, ನಮ್ಮ ಪ್ರಾರ್ಥನಾ ಜೀವಿತವನ್ನು ಬೆಳೆಸುತ್ತದೆ ಮತ್ತು ನಮ್ಮ ಜೀವನದಲ್ಲಿ ದೇವರ ಚಲನೆಗೆ ನಮ್ಮನ್ನು ಹೆಚ್ಚು ಸಂವೇದನಾಶೀಲರನ್ನಾಗಿ ಮಾಡುತ್ತದೆ. ಬಹುಶಃ, ಇಂದಿನ ವಾಕ್ಯದಲ್ಲಿ ಆ ಮನುಷ್ಯನಂತೆ, ನಿಮ್ಮ ಜೀವನದಲ್ಲಿ ಅಥವಾ ನಿಮ್ಮ ಕುಟುಂಬದಲ್ಲಿ ಪಾಪದಿಂದಾಗಿ ನಿಮ್ಮ ಬಾಧೆಗಳು ಉಂಟಾಗಿವೆ ಎಂದು ಹೇಳಲಾಗಿದೆ. ಯೇಸುವಿನ ಬಳಿಗೆ ಬರುವುದು ಮತ್ತು ನಿಮ್ಮ ಅಸಾಧ್ಯವಾದ ಕಠಿಣ ಪರಿಸ್ಥಿತಿಯಿಂದ ಆತನು ಹೇಗೆ ಮಹಿಮೆಗೆ ತರುತ್ತಾನೆ ಎಂದು ಕೇಳುವುದು ನಿಮ್ಮ ಆಯ್ಕೆಯಾಗಿದೆ.

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನಿಮ್ಮ ಭಾದೆಗಳು ಏನೂ ಅಲ್ಲ ಎಂದು ನೀವು ಭಾವಿಸಿದ್ದೀರಾ?
ಇದುವರೆಗಿನ ನಿಮ್ಮ ಜೀವನದ ಯಾವುದೇ ಕಾಲದಲ್ಲಿ ಮಹಿಮೆಯು ಹೊರಹೊಮ್ಮಿದೆಯೇ?

About this Plan

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More