ಯೇಸುವಿನೊಂದಿಗೆ ಮುಖಾಮುಖಿSample

ಸತ್ಯವೇದದ ಮೂಲಕ ಈ 40-ದಿನದ ಪ್ರಯಾಣದ ಸಮಯದಲ್ಲಿ, ನಾವು ದೇವರು ಮತ್ತು ಮನುಷ್ಯನ (ಅಥವಾ ಮಹಿಳೆಯ ವಿಷಯದಲ್ಲಿ) ನಡುವಿನ ವಿವಿಧ ಪರಸ್ಪರ ಸಂಭಾಷಣೆಗಳನ್ನು ನೋಡುತ್ತೇವೆ. ಈ ಸಂಭಾಷಣೆಗಳಲ್ಲಿ, ಈ ಸಾಮಾನ್ಯ ಜನರಿಂದ ದೇವರು ಏನನ್ನು ಬಯಸುತ್ತಾನೆ ಮತ್ತು ಅವರು ದೇವರಿಗೆ ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ನಾವು ನೋಡುತ್ತೇವೆ. ಇವುಗಳು ನೈಜ-ಲೋಕದ, ಕ್ರಮವಾದ ಸಂಭಾಷಣೆಗಳಾಗಿವೆ ಆದರೆ ದೇವರು ಯಾರು ಮತ್ತು ಅವರು ಆತನನ್ನು ಹೇಗೆ ಚೆನ್ನಾಗಿ ತಿಳಿದುಕೊಳ್ಳಬಹುದು ಎಂಬ ಹೊಸ ಪ್ರಕಟನೆಯೊಂದಿಗೆ ಜನರು ಯಾವಾಗಲೂ ಬದಲಾಗುತ್ತಾರೆ.
ನಾವು ಇಂದು ಏದೆನ್ ತೋಟದಲ್ಲಿ ಆದಾಮನು ಮತ್ತು ಹವ್ವ ಇವರೊಂದಿಗೆ ತ್ರಯೇಕ ಸೃಷ್ಟಿಕರ್ತ ದೇವರು (ಎಲ್ಲೋಹಿಮ್) ನಡೆದುಕೊಂಡು ಹೋಗುವುದನ್ನು ಮತ್ತು ಅವರ ಸುರಕ್ಷತೆ ಮತ್ತು ದೀರ್ಘಾವಧಿಯ ಆನಂದಕ್ಕಾಗಿ ಸರಳವಾದ ಸೂಚನೆಗಳನ್ನು ಕೊಡುವುದನ್ನು ನಾವು ಓದುತ್ತೇವೆ. ಅವರು ಆತನ ಉದ್ದೇಶಗಳ ಬಗ್ಗೆ ಅನುಮಾನಪಡುತ್ತಾರೆ, ಆತನ ಸೂಚನೆಗಳನ್ನು ಉಲ್ಲಂಘಿಸುತ್ತಾರೆ ಮತ್ತು ಆತನೊಂದಿಗೆ ಆನಂದಿಸಿದ ಅನ್ಯೋನ್ಯತೆಯನ್ನು ಕಳೆದುಕೊಳ್ಳುತ್ತಾರೆ. ದೇವರು ಆದಾಮನನ್ನು ಮಣ್ಣಿನಿಂದ ಸೃಷ್ಟಿಸಿದನು ಮತ್ತು ಅವನಿಗೆ “ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ, ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿರಿ. ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ” ಎಂದು ಹೇಳಿದನು (ಆದಿಕಾಂಡ 1:28). ಆತನು ಹವ್ವ ಮತ್ತು ಆದಾಮನ ಪಕ್ಕೆಲುಬಿನಿಂದ ಸೃಷ್ಟಿಸಿದನು ಮತ್ತು ಅವಳಿಗೆ ಆದಾಮನಿಗೆ ಸಹಾಯಕಳ ಪಾತ್ರವನ್ನು ಕೊಟ್ಟನು. ನಂತರದ ಪತನವು ಯೇಸು ಭೂಮಿಗೆ ಬರುವವರೆಗೂ ಈ ಸಂಗತಿಗಳನ್ನು ತೀವ್ರವಾಗಿ ಬದಲಾಯಿಸಿತು. ಆತನ ವಿಮೋಚನಾ ಶಕ್ತಿಯ ಮುನ್ಸೂಚನೆಯು ಆದಿಕಾಂಡ 3 ವಚನ 21 ರಲ್ಲಿ ಕಂಡುಬರುತ್ತದೆ, ಅಲ್ಲಿ ಯೆಹೋವ ದೇವರು ಆದಾಮನಿಗೂ ಅವನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದನು, ಅದು ರಕ್ತ ಚೆಲ್ಲುವ ಮೂಲಕ ಸಂಭವಿಸಬೇಕಾಗಿತ್ತು. ಯೇಸುವಿನ ಪಾಪರಹಿತ ರಕ್ತವು ನಮ್ಮ ಪಾಪಗಳನ್ನು ಶಾಶ್ವತವಾಗಿ ಆವರಿಸಿತು ಮತ್ತು ನಮ್ಮನ್ನು ನಿರ್ಮಲವಾಗಿ ಶುದ್ಧೀಕರಿಸಿತು. ನಾವು ಆತನ ಮಗನಾದ ಯೇಸುವಿನ ಮೂಲಕ ದೇವರಿಗೆ ಹತ್ತಿರವಾಗಲು ಆರಿಸಿಕೊಳ್ಳುತ್ತೇವೆಯೇ ಅಥವಾ ನಾವು ಆತನನ್ನು ತೋಳುಗಳ ಅಂತರದಲ್ಲಿ ತಿಳಿದುಕೊಳ್ಳುವುದರಿಂದ ತೃಪ್ತಿ ಮತ್ತು ಸುಖವಾಗಿದ್ದೇವೋ ಎಂಬ ಪ್ರಶ್ನೆ ಉಳಿಯುತ್ತದೆ.
ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು:
ನೀವು ಎಂದಾದರೂ ದೇವರ ಸ್ವಭಾವವನ್ನು ಕುರಿತು ಅನುಮಾನ ಪಟ್ಟಿದ್ದೀರಾ?
ದೇವರೊಂದಿಗಿನ ನಿಮ್ಮ ಸಂಬಂಧವು ಭಯದಿಂದಲೋ ಅಥವಾ ಪ್ರೀತಿಯಿಂದ ಪ್ರೇರಿತವಾಗಿದೆಯೇ?
ದೇವರೊಂದಿಗೆ ನಿಕಟ ಸಂಪರ್ಕಕ್ಕಿಂತ ನಿಮ್ಮ ಸ್ವಂತ ಸೌಕರ್ಯವನ್ನು ನೀವು ಆರಿಸಿಕೊಳ್ಳುತ್ತೀರಾ?
About this Plan

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.
More
Related Plans

One Chapter a Day: Matthew

Psalms of Lament

Prayer Altars: Embracing the Priestly Call to Prayer

YES!!!

Horizon Church August Bible Reading Plan: Prayer & Fasting

The Way of the Wise

Journey Through Genesis 12-50

Moses: A Journey of Faith and Freedom

Faith-Driven Impact Investor: What the Bible Says
