YouVersion Logo
Search Icon

ಯೇಸುವಿನೊಂದಿಗೆ ಮುಖಾಮುಖಿSample

ಯೇಸುವಿನೊಂದಿಗೆ ಮುಖಾಮುಖಿ

DAY 38 OF 40

ತಾವು ಏನು ಮಾಡಿದ್ದಾರೆಂದು ತಿಳಿಯದ ಜನರ ಪರವಾಗಿ ಯೇಸು ತಾನು ಮಾಡದ ಅಪರಾಧಕ್ಕಾಗಿ ಶಿಲುಬೆಯಲ್ಲಿ ತೂಗುಹಾಕಲ್ಪಟ್ಟನು. ತನ್ನ ಅಂತಿಮ ಕ್ಷಣಗಳಲ್ಲಿ, ಯೇಸು ತನ್ನ ಪಕ್ಕದಲ್ಲಿ ತೂಗುಹಾಕಲ್ಪಟ್ಟ ಇತರ ಅಪರಾಧಿಗಳಲ್ಲಿ ಒಬ್ಬನೊಂದಿಗೆ ಸಂಭಾಷಣೆ ನಡೆಸುತ್ತಾನೆ. ಯೇಸು ಯಾರು ಮತ್ತು ಅಪರಾಧಿಗಳ ಪಕ್ಕದಲ್ಲಿ ಕೊಲ್ಲಲ್ಪಡುವುದು ಆತನಿಗೆ ಎಷ್ಟು ಅನ್ಯಾಯವಾಗಿದೆ ಎಂದು ಈ ವ್ಯಕ್ತಿಯು ಹೆಚ್ಚಾಗಿ ತಿಳಿದಿದ್ದನು. ಯೇಸುವಿನಲ್ಲಿ ಅವನ ಮನವಿಯು ಅವನ ಭವಿಷ್ಯವನ್ನೇ ಶಾಶ್ವತವಾಗಿ ಬದಲಾಯಿಸಿತು. ಯೇಸು ತನ್ನ ರಾಜ್ಯವನ್ನು ಪ್ರವೇಶಿಸಿದಾಗ ತನ್ನನ್ನು ನೆನಪಿಸಿಕೊಳ್ಳಬೇಕೆಂದು ಅವನು ಬೇಡಿಕೊಂಡನು ಮತ್ತು ಅವರು ಪರದೈಸಿಯಲ್ಲಿ (ಪರಲೋಕದಲ್ಲಿ) ಒಟ್ಟಿಗೆ ಇರುತ್ತಾರೆ ಎಂದು ಯೇಸು ಅವನಿಗೆ ಹೇಳಿದನು. ಎಂತಹ ಭರವಸೆ. ಇದು ಯೇಸುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬರಿಗೂ ಗಮ್ಯಸ್ಥಾನವಾಗಿದೆ, ಅವರು ದೃಢವಾಗಿರುವರು ಮತ್ತು ಕಡೆಯವರೆಗೂ ಸಹಿಸಿಕೊಳ್ಳುವರು.

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು:
ಯೇಸುವಿನಲ್ಲಿರುವ ನಿತ್ಯಜೀವವನ್ನು ಕುರಿತು ನಿಮಗೆ ಭರವಸೆ ಇದೆಯೇ?
ನಿಮ್ಮ ಜೀವನವನ್ನು ಸಂಪೂರ್ಣವಾಗಿ ಆತನಿಗೆ ತಿರಿಗಿ ಸಮರ್ಪಿಸಬೇಕಾಗಿದೆಯೇ?

About this Plan

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More