YouVersion Logo
Search Icon

ಯೇಸುವಿನೊಂದಿಗೆ ಮುಖಾಮುಖಿSample

ಯೇಸುವಿನೊಂದಿಗೆ ಮುಖಾಮುಖಿ

DAY 32 OF 40

ನೀವು ಪ್ರೀತಿಯನ್ನು ಹೇಗೆ ಲೆಕ್ಕ ಹಾಕುತ್ತೀರಿ? ಯೇಸುವಿನ ಪ್ರಕಾರ, ಹೆಚ್ಚು ಕ್ಷಮಿಸಲ್ಪಟ್ಟವರು ಹೆಚ್ಚು ಪ್ರೀತಿಸುತ್ತಾರೆ ಮತ್ತು ಕಡಿಮೆ ಕ್ಷಮಿಸಲ್ಪಟ್ಟವರು ಕಡಿಮೆ ಪ್ರೀತಿಸುತ್ತಾರೆ. ಘೋರವಾದ ಪಾಪಮಯ ಜೀವನವನ್ನು ನಡೆಸಿದ ಒಬ್ಬ ಮಹಿಳೆಯು ಆಹ್ವಾನಿಸದಿದ್ದರೂ ಯೇಸುವಿನ ಭೋಜನಕ್ಕೆ ಬಂದು ತನ್ನ ಕಣ್ಣೀರಿನಿಂದ ಮತ್ತು ದುಬಾರಿ ಸುಗಂಧ ದ್ರವ್ಯದಿಂದ ಆತನನ್ನು ಅಭಿಷೇಕಿಸಿದಳು. ಈ ಮಹಿಳೆ ತಾನು ದೈವತ್ವದ ಪ್ರಸನ್ನತೆಯಲ್ಲಿ ನಿಂತಿದ್ದೇನೆ ಮತ್ತು ಆತನು ಮಾತ್ರ ತನ್ನ ಬಗ್ಗೆ ತಿಳಿದಿರಬಹುದು ಮತ್ತು ಎಲ್ಲದಕ್ಕೂ ತನ್ನನ್ನು ಕ್ಷಮಿಸಬಹುದು ಎಂದು ತಿಳಿದಿದ್ದಳು. ಆತನ ಕ್ಷಮೆಯನ್ನು ತಿಳಿದುಕೊಂಡದರಿಂದ ಅದು ಅವಳನ್ನು ಹೆಚ್ಚಿನ ಭಕ್ತಿ ಮತ್ತು ಸ್ವಯಂ ತ್ಯಾಗದ ಔದಾರ್ಯಕ್ಕೆ ಪ್ರೇರೇಪಿಸಿತು. ಬೇರೆ ಯಾವುದೂ ಅವಳನ್ನು ಅಷ್ಟು ದೊಡ್ಡ ಮಟ್ಟಕ್ಕೆ ಚಲಿಸಲು ಸಾಧ್ಯವಾಗಲಿಲ್ಲ, ಅವಳು ಆತನನ್ನು ಅಂತಹ ತ್ಯಾಗದಿಂದ ಆರಾಧಿಸುತ್ತಾಳೆ.

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ಆರಾಧನೆಯು ನಿಮಗೆ ಹೇಗೆ ಕಾಣುತ್ತದೆ?
ಯೇಸುವಿನ ಮೇಲೆ ನಿಮಗಿರುವ ಪ್ರೀತಿಯನ್ನು ವರ್ಣಿಸಬಲ್ಲಿರಾ?

About this Plan

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More