YouVersion Logo
Search Icon

ಯೇಸುವಿನೊಂದಿಗೆ ಮುಖಾಮುಖಿSample

ಯೇಸುವಿನೊಂದಿಗೆ ಮುಖಾಮುಖಿ

DAY 35 OF 40

ಮಾರ್ಥಳು ತನ್ನ ಮನೆಯನ್ನು ಯೇಸುವಿಗೆ ತೆರೆದಳು ಮತ್ತು ಎಲ್ಲವೂ ಆತನಿಗಾಗಿ ಕ್ರಮದಲ್ಲಿದೆ ಎಂದು ಖಚಿತಪಡಿಸಿಕೊಂಡಳು. ಆಕೆಯು ನಿಸ್ಸಂಶಯವಾಗಿ ದೊಡ್ಡ ಅತಿಥೇಯಾಗಿದ್ದಳು. ಮತ್ತೊಂದೆಡೆ, ಮರಿಯಳು, ಆಕೆಯ ಸಹೋದರಿ ಯೇಸುವಿನ ಪಾದದ ಬಳಿ ಕುಳಿತು ಆತನ ವಾಕ್ಯವನ್ನು ಕೇಳುತ್ತಿದ್ದಳು. ಆಕೆಯು "ಉತ್ತಮವಾದದ್ದನ್ನು" ಆರಿಸಿಕೊಂಡಿದ್ದಾಳೆ ಎಂದು ಯೇಸು ಹೇಳಿದನು. ಸಹಾಯ ಮಾಡದಿರುವುದು ಮತ್ತು ನೆಲದ ಮೇಲೆ ಒಬ್ಬರ ಸಮಯವನ್ನು ಕಳೆಯುವುದು ಹೇಗೆ ಉತ್ತಮವಾಗಿರಲು ಸಾಧ್ಯ?

ಯೇಸುವಿಗಾಗಿ ಕೆಲಸ ಮಾಡುವುದಕ್ಕಿಂತ ಯೇಸುವಿನೊಂದಿಗೆ ಇರುವುದು ಹೆಚ್ಚು ಪ್ರಾಮುಖ್ಯವೆಂದು ಇಂದು ನಮ್ಮಲ್ಲಿ ಬಹಳಷ್ಟು ಜನರಿಗೆ ಇನ್ನೂ ಅರ್ಥವಾಗದಿರುವುದನ್ನು ಮರಿಯಳು ಕಂಡುಕೊಂಡಳು. ನಾವು ಸಭೆಯಲ್ಲಿ ಸೇವೆ ಸಲ್ಲಿಸಬಹುದು, ಹಿಂದುಳಿದವರಿಗೆ ವಾರವಿಡೀ ಒಳ್ಳೆಯದನ್ನು ಮಾಡಬಹುದು ಮತ್ತು ವಾಕ್ಯವನ್ನು ಸಹ ಬೋಧಿಸಬಹುದು, ಆದರೆ ನಾವು ದೇವರ ಸ್ವರವನ್ನು ಕೇಳಲು ಆತನಿಗೆ ಸಮಯ ಕೊಡಲು ಆದ್ಯತೆ ಮಾಡಿಕೊಳ್ಳದಿದ್ದರೆ, ಅದು ದೊಡ್ಡ ನಷ್ಟವಾಗಿದೆ! ನಾವು ಸತ್ಯವೇದವನ್ನು ಓದಬಹುದು ಮತ್ತು ನಿಯಮಿತವಾಗಿ ಪ್ರಾರ್ಥಿಸಬಹುದು ಆದರೆ ಶಾಂತವಾಗಿರಲು ಮತ್ತು ದೇವರ ಸ್ವರವನ್ನು ಕೇಳಲು ಸಮಯವನ್ನು ಮೀಸಲಿಡುವುದು ಯೇಸುವಿನ ಪ್ರತಿಯೊಬ್ಬ ಹಿಂಬಾಲಕರಿಗೆ ಆಟದ ಬದಲಾವಣೆಯಾಗಿರುತ್ತದೆ.

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆ
ನಾನು ಇಂದು 5 ನಿಮಿಷಗಳ ಕಾಲ ನಿಶ್ಚಲವಾಗಿರಲು ಪ್ರಯತ್ನಿಸಿ ನನ್ನೊಂದಿಗೆ ಮಾತನಾಡಲು ದೇವರನ್ನು ಅನುಮತಿಸುತ್ತೇನೆಯೇ?

Scripture

About this Plan

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More