YouVersion Logo
Search Icon

ರಕ್ಷಿಸುವುದು Sample

ರಕ್ಷಿಸುವುದು

DAY 7 OF 7

ನಿತ್ಯತ್ವವು ರಕ್ಷಿಸಲ್ಪಟ್ಟವರಿಗೆ ಗಮ್ಯಸ್ಥಾನವಾಗಿದೆ

ನಾವು ನಮ್ಮ ಏಳು ದಿನಗಳ ಪ್ರಯಾಣವನ್ನು ಪೂರ್ಣಗೊಳಿಸಿದಾಗ, ಗಮ್ಯಸ್ಥಾನವು ನಿತ್ಯತ್ವ ಎಂದು ನೀವು ತಿಳಿದುಕೊಳ್ಳುವುದು ಪ್ರಾಮುಖ್ಯವಾಗಿದೆ. ನೀವು ಈಗ ಭೂಮಿಯ ಮೇಲೆ ವಾಸಿಸುತ್ತಿರುವಾಗ, ನೀವು ಮಾನವರಾಗಿರುವ ಹೋರಾಟಗಳು ಮತ್ತು ಆಶೀರ್ವಾದಗಳನ್ನು ಹಾದುಹೋಗುತ್ತಿದ್ದೀರಿ. ಈಗ ನಿತ್ಯತ್ವವನ್ನು ನಿಮ್ಮ ಹೃದಯದಲ್ಲಿ ಕೆತ್ತಿರುವ ಯೇಸುವಿಗೆ ಧನ್ಯವಾದಗಳು, ಆತನು ಅಲ್ಲಿ ನೆಲೆಸುತ್ತಾನೆ. ಆದ್ದರಿಂದ, ನೀವು ಏನೇನು ಹಾದುಹೋದರೂ ಅಥವಾ ಸಹಿಸಿಕೊಳ್ಳಬೇಕಾಗಿದ್ದರೂ, ಬಾಧೆ ಮತ್ತು ದುಃಖದಿಂದ ಮುಕ್ತವಾಗಿರುವ ನಿತ್ಯತ್ವದ ಬಗ್ಗೆ ನಿಮಗೆ ಭರವಸೆ ಕೊಡಲಾಗುತ್ತದೆ. ನಿಮ್ಮ ಜೀವನವು ಎಷ್ಟೇ ಯಶಸ್ವಿಯಾಗಿದ್ದರೂ, ನಿತ್ಯತ್ವವು ನೀವು ಊಹಿಸಿರುವುದಕ್ಕಿಂತ ಹೆಚ್ಚಿನ ಪ್ರತಿಫಲವನ್ನು ತರುತ್ತದೆ. ಯೇಸುವಿನೊಂದಿಗಿನ ಜೀವನವು ನಿತ್ಯವಾಗಿ ನೀವು ಸಂತೋಷದಾಯಕವಾಗಿ ನಿರೀಕ್ಷೆಯಿಂದ ಎದುರುನೋಡಬಹುದು. ನಿತ್ಯತ್ವವು ಈಗ ಪ್ರಾರಂಭವಾಗುತ್ತದೆ, ಆದ್ದರಿಂದ ನೀವು ಇಂದು ಹೇಗೆ ಬದುಕುತ್ತೀರಿ ಎಂಬುದು ನಿಮ್ಮ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ. ನೀವು ದೇವರು ಕೊಟ್ಟ ದರ್ಶನದಂತೆಜೀವಿಸಿದಾಗ, ಪರಿಶುದ್ದರಾಗಿ ಬದುಕಲು ಮತ್ತು ಪ್ರತ್ಯೇಕವಾಗಲು ನಿರ್ಧರಿಸಿದಾಗ, ನಿಮ್ಮ ಜೀವನವು ಸ್ವಯಂಚಾಲಿತವಾಗಿ ಯೇಸು ಮಾಡಿದಂತೆ ಕಾಣಲು ಪ್ರಾರಂಭಿಸುತ್ತದೆ. ನೀವು ಪ್ರವೇಶಿಸುವ ಪ್ರಪಂಚದ ಭಾಗಗಳಲ್ಲಿ ನೀವು ಆಳವಾದ ಪ್ರಭಾವವನ್ನು ಬೀರುತ್ತೀರಿ ಮತ್ತು ನೀವು ಎಲ್ಲಿಗೆ ಹೋದರೂ, ನಿಮ್ಮ ಸಮಯವನ್ನು ಮೀರಿಯೂ ಸಹ ಗುರುತನ್ನು ಬಿಡುತ್ತೀರಿ. ಹೀಗೆ ನಿತ್ಯತ್ವದ ಮನಸ್ಥಿತಿ ಶಕ್ತಿಯುತವಾಗಿರುತ್ತದೆ.

ನಿಮ್ಮ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳು ಮುಖ್ಯವಾಗಿವೆ - ಆದ್ದರಿಂದ ಅವುಗಳನ್ನು ಬಿಟ್ಟುಕೊಡಬೇಡಿ ಆದರೆ ದೇವರು ನಿಮ್ಮ ಹೃದಯದಲ್ಲಿ ನೀವು ಏನು ಮಾಡಬೇಕೆಂದು ಇಡುವನೋ ಅದನ್ನು ಅನುಸರಿಸಿ. ಎಲ್ಲಾ ಸಮಯದಲ್ಲೂ ಬಹುಮಾನದ ಮೇಲೆ ನಿಮ್ಮ ಕಣ್ಣುಗಳನ್ನು ಇಡಿ, ಅದು ಯೇಸು ತಾನೇ ಆಗಿದ್ದಾನೆ. ನೀವು ಯಶಸ್ಸು, ಸಂಪತ್ತು ಅಥವಾ ಪ್ರಭಾವವನ್ನು ಬಯಸಬಹುದು, ಅದು ಒಳ್ಳೆಯದು, ಆದರೆ ನೀವು ಯೇಸುವಿನೊಂದಿಗೆ ಸಂಬಂಧವನ್ನು ಹೊಂದಿಲ್ಲದಿದ್ದರೆ ಅದು ವ್ಯರ್ಥವಾಗುತ್ತದೆ. ಇಂದು ಮತ್ತು ಪ್ರತಿದಿನ ಆತನನ್ನು ಆಯ್ಕೆಮಾಡಿಕೊಳ್ಳಿರಿ. ಆತನ ವಾಕ್ಯದ ಮೂಲಕ ಆತನನ್ನು ಹುಡುಕಿರಿ. ನಿಮ್ಮ ಹೃದಯ ಮತ್ತು ಮನಸ್ಸು ನೂತನವಾಗುವಂತೆ ಪವಿತ್ರಾತ್ಮನೊಂದಿಗೆ ಹೆಜ್ಜೆ ಹಾಕಿರಿ.

ಆಲೋಚನೆ:

ಜೀವನವು ನಿಮ್ಮನ್ನು ಕೆಳಕ್ಕೆ ಬಿಡುವಾಗ ಮೇಲಕ್ಕೆ ನೋಡುತ್ತಲೇ ಇರಿ, ಹೀಗೆ ನೀವು ನಿತ್ಯತ್ವ ತರಬೇತಿ ಹೊಂದಿದವರು ಮತ್ತು ಅದಕ್ಕೆ ಸಿದ್ಧರಾಗಿರುವಿರಿ.

About this Plan

ರಕ್ಷಿಸುವುದು

ಕ್ರಿಸ್ತನನ್ನು ನಮ್ಮ ರಕ್ಷಣೆಗಾಗಿ ಕಳುಹಿಸುವಲ್ಲಿ ದೇವರು ನಮಗೆ ಮಾಡಿದ ಎಲ್ಲವನ್ನೂ ಹಿಂತಿರುಗಿ ನೋಡಲು ಮತ್ತು ಅವಲೋಕನ ಮಾಡಲು ಕ್ರಿಸ್ಮಸ್ ಸೂಕ್ತ ಸಮಯವಾಗಿದೆ. ನೀವು ಈಗ ಇದನ್ನು ಓದುತ್ತಿರುವಾಗ, ನಿಮ್ಮ ಸ್ವಂತ ರಕ್ಷಣೆಯನ್ನು ನೀವು ನೆನಪಿಸಿಕೊಂಡು, ಮುಂದೆ ಇರುವ ಹಾದಿಯಲ್ಲಿ ನೀವು ಹಾದು ನಡೆಯಬೇಕಾದ ಎಲ್ಲವುಗಳಿಂದ ಆತನು ನಿಮ್ಮನ್ನು ತಿರಿಗಿ ರಕ್ಷಿಸುತ್ತಾನೆ ಎಂಬ ದೃಢವಿಶ್ವಾಸದಿಂದ ಹೊಸ ವರ್ಷಕ್ಕೆ ಕಾಲಿಡಬೇಕೆಂದು ನಾನು ಪ್ರಾರ್ಥಿಸುತ್ತೇನೆ.

More