YouVersion Logo
Search Icon

ರಕ್ಷಿಸುವುದು Sample

ರಕ್ಷಿಸುವುದು

DAY 6 OF 7

ಪವಿತ್ರಾತ್ಮನು ರಕ್ಷಣೆಯನ್ನು ಮುಂದುವರೆಸುತ್ತದೆ

ಯೇಸು ಭೂಮಿಯ ಮೇಲಿದ್ದಾಗ ಆತನು ಪ್ರತಿ ಸಾರಿ ಯಾರನ್ನಾದರೂ ಮುಟ್ಟಿ ಅವರನ್ನು ಗುಣಪಡಿಸಿದಾಗ ಅಥವಾ ಆತನು ಬಲವಾದ ಸತ್ಯವನ್ನು ಬೋಧಿಸಿ ಜನರನ್ನು ಪರಿವರ್ತಿಸಿದಾಗ ಆತನು ಪರಲೋಕವನ್ನು ಸ್ವಲ್ಪ ಹತ್ತಿರಕ್ಕೆ ತರುತ್ತಿದ್ದನು. ಆತನು ತನ್ನ ತಂದೆಯ ಪಕ್ಕದಲ್ಲಿ ತನ್ನ ಹಕ್ಕಿನ ಸ್ಥಾನವನ್ನು ಪಡೆಯಲು ಪರಲೋಕಕ್ಕೆ ಏರಿಹೋದ ನಂತರ, ಆತನು ತನ್ನ ಪ್ರತಿಯೊಬ್ಬ ಹಿಂಬಾಲಕರೊಂದಿಗೆ ಇರಲು ದೇವರ ಮೂರನೇ ವ್ಯಕ್ತಿಯನ್ನು ಭೂಮಿಗೆ ಕಳುಹಿಸಿದನು. ಪವಿತ್ರಾತ್ಮನು ನೂರಕ್ಕೆ ನೂರು ಪ್ರತಿಶತ ದೇವರು ಮತ್ತು ಪರಕಾಲಿಯೊ (ಜೊತೆಯಲ್ಲಿ ಬರುವವನು), ಸತ್ಯದ ಆತ್ಮನು, ಸಹಾಯಕನು, ಸಲಹೆಗಾರನು, ಸಂತೈಸುವವನು ಮತ್ತು ರುವಾಚ್ (ಗಾಳಿ) ಮುಂತಾದ ವಿವಿಧ ಹೆಸರುಗಳಿಂದ ಕರೆಯಲ್ಪಟ್ಟನು. ಪ್ರತಿಯೊಬ್ಬ ವಿಶ್ವಾಸಿಯನ್ನು ದೇವರ ಶಕ್ತಿಯಿಂದ ತುಂಬಲು ಮತ್ತು ದೇವರನ್ನು ಹೆಚ್ಚು ತಿಳಿದುಕೊಳ್ಳಲು ನಮಗೆ ಸಹಾಯ ಮಾಡಲು ಆತನು ಮುಖ್ಯವಾಗಿ ಕಳುಹಿಸಲ್ಪಟ್ಟಿದ್ದಾನೆ. ಆತನು ದೇವರ ಆತ್ಮವಾಗಿರುವುದರಿಂದ ಆತನು ದೇವರ ಮನಸ್ಸು ಮತ್ತು ಹೃದಯವನ್ನು ಚೆನ್ನಾಗಿ ತಿಳಿದುಕೊಳ್ಳಲು ನಮಗೆ ಸಹಾಯ ಮಾಡುತ್ತಾನೆ. ಕ್ರಿಸ್ತನ ದೇಹದಲ್ಲಿ ಪರಸ್ಪರರನ್ನು ಆಶೀರ್ವದಿಸಲು ನಮಗೆ ಸಹಾಯ ಮಾಡುವ ವಿಭಿನ್ನ ವರಗಳನ್ನು ಆತನು ನಮಗೆ ಕೊಡುತ್ತಾನೆ ಮತ್ತು ಸಭೆಯ ಹೊರಗಿನವರೂ ಸಹ ನಮ್ಮ ಮೂಲಕ ಕ್ರಿಸ್ತನನ್ನು ಅನುಭವಿಸಲು ನಮಗೆ ಫಲವನ್ನು ಕೊಡುವನು. ಆತನು ನಮಗೆ ಧರ್ಮಗ್ರಂಥಗಳ ಆಳವಾದ ತಿಳುವಳಿಕೆಯನ್ನು ಕೊಡುತ್ತಾನೆ ಮತ್ತು ಕ್ರಿಸ್ತನಲ್ಲಿ ನಮ್ಮ ಹೊಸ ಜೀವನವನ್ನು ಶಕ್ತಿ ಮತ್ತು ಉದ್ದೇಶದಿಂದ ಬದುಕಲು ಸಹಾಯ ಮಾಡುವವನು. ನಾವು ದೈವಿಕ ಜೀವನವನ್ನು ನಡೆಸಲು ಅಗತ್ಯವಿರುವ ಎಲ್ಲವನ್ನೂ ಆತನು ನಮಗೆ ಕೊಡುತ್ತಾನೆ, ಅದು ದೇವರನ್ನು ಮೆಚ್ಚಿಸುತ್ತದೆ ಮತ್ತು ನಮ್ಮನ್ನು ಆತನೊಂದಿಗೆ ನಿಕಟ ಸಂಪರ್ಕಕ್ಕೆ ತರುತ್ತದೆ. ಪವಿತ್ರಾತ್ಮನನ್ನು ಪರಿಶುದ್ಧ ಆತ್ಮನು ಎಂದು ಸಹಕರೆಯುತ್ತಾರೆ ಆದರೆ ಅದು ಯಾವುದೋ ಆತ್ಮೀಕ ಅಲೌಕಿಕ ಜೀವಿಯಲ್ಲ. ಬದಲಾಗಿ ಆತನು ಶಕ್ತಿಶಾಲಿ, ಯಾಕೆಂದರೆ ಆತನು ವಸ್ತುಗಳನ್ನು ಚಲಿಸುವ ಗಾಳಿಯಂತೆ ಚಲಿಸಿದಾಗ, ಆತನು ನಮ್ಮ ಜೀವನದ ವಿನ್ಯಾಸವನ್ನೇ ಬದಲಾಯಿಸುತ್ತಾನೆ. ಆತನು ಬುಗ್ಗೆಯ ಶುದ್ಧ ನೀರಿನಂತಿದ್ದಾನೆ, ಅದು ಪ್ರತಿಯೊಂದು ಅಶುದ್ಧತೆಯನ್ನು ಶುದ್ಧೀಕರಿಸುತ್ತದೆ ಮತ್ತು ಅದು ಮುಟ್ಟಿದ ಎಲ್ಲದಕ್ಕೂ ಜೀವವನ್ನು ತರುತ್ತದೆ. ಆತನು ಕಲ್ಮಶಗಳನ್ನು ಸುಟ್ಟುಹಾಕುವಾಗ ಬಂಗಾರವನ್ನು ಶುದ್ಧೀಕರಿಸುವ ಬೆಂಕಿಯಂತೆ ಮತ್ತು ಅದನ್ನು ಹಿಂದೆಂದಿಗಿಂತಲೂ ಹೆಚ್ಚಿನ ಮೌಲ್ಯ ಮತ್ತು ಸೌಂದರ್ಯವನ್ನು ಕೊಡುತ್ತಾನೆ. ಪ್ರತಿನಿತ್ಯ ನಮ್ಮನ್ನು ಶತ್ರುಗಳ ಹಿಡಿತದಿಂದ ರಕ್ಷಿಸುತ್ತಾ, ಕಲ್ವಾರಿಯಲ್ಲಿ ಯೇಸು ನಮಗೆ ಗೆದ್ದ ಜಯದಲ್ಲಿ ಬದುಕಲು ಸಹಾಯ ಮಾಡುವವನು ಆತನೇ.

ಆಲೋಚನೆ:

ಪವಿತ್ರಾತ್ಮನ ಸಹಾಯವಿಲ್ಲದೆ ನೀವು ಕ್ರೈಸ್ತೀಯ ಜೀವನವನ್ನು ನಡೆಸಲು ಸಾಧ್ಯವಿಲ್ಲ

About this Plan

ರಕ್ಷಿಸುವುದು

ಕ್ರಿಸ್ತನನ್ನು ನಮ್ಮ ರಕ್ಷಣೆಗಾಗಿ ಕಳುಹಿಸುವಲ್ಲಿ ದೇವರು ನಮಗೆ ಮಾಡಿದ ಎಲ್ಲವನ್ನೂ ಹಿಂತಿರುಗಿ ನೋಡಲು ಮತ್ತು ಅವಲೋಕನ ಮಾಡಲು ಕ್ರಿಸ್ಮಸ್ ಸೂಕ್ತ ಸಮಯವಾಗಿದೆ. ನೀವು ಈಗ ಇದನ್ನು ಓದುತ್ತಿರುವಾಗ, ನಿಮ್ಮ ಸ್ವಂತ ರಕ್ಷಣೆಯನ್ನು ನೀವು ನೆನಪಿಸಿಕೊಂಡು, ಮುಂದೆ ಇರುವ ಹಾದಿಯಲ್ಲಿ ನೀವು ಹಾದು ನಡೆಯಬೇಕಾದ ಎಲ್ಲವುಗಳಿಂದ ಆತನು ನಿಮ್ಮನ್ನು ತಿರಿಗಿ ರಕ್ಷಿಸುತ್ತಾನೆ ಎಂಬ ದೃಢವಿಶ್ವಾಸದಿಂದ ಹೊಸ ವರ್ಷಕ್ಕೆ ಕಾಲಿಡಬೇಕೆಂದು ನಾನು ಪ್ರಾರ್ಥಿಸುತ್ತೇನೆ.

More