ರಕ್ಷಿಸುವುದು Sample

ಒಳ್ಳೆಯ ಜನರ ತಾತ್ಕಾಲಿಕ ಸಂರಕ್ಷಣೆಯನ್ನು ತರುತ್ತಾರೆ
ದೇವರು ಅಬ್ರಹಾಮನನ್ನು ತಾನು ಸೃಷ್ಟಿಸಿದ ದೊಡ್ಡ ಜನಸಮೂಹದಿಂದ ತಾನು ಆರಿಸಿಕೊಂಡ ಜನರ ತಂದೆಯಾಗಲು ಆಯ್ಕೆಮಾಡಿಕೊಂಡನು. ಅವನ ವಂಶಸ್ಥರು ಅಸಂಖ್ಯಾತರು ಮತ್ತು ಅವರು ಲೋಕದ ಜನಾಂಗಗಳನ್ನು ಆಶೀರ್ವದಿಸುವರು ಎಂದು ಆತನು ಅವನಿಗೆ ವಾಗ್ದಾನ ಮಾಡಿದನು. ದೇವರು ಅಬ್ರಹಾಮ, ಇಸಾಕ ಮತ್ತು ಯಾಕೋಬರನ್ನು ಎಷ್ಟು ದೊಡ್ಡ ಮಟ್ಟಕ್ಕೆ ಆಶೀರ್ವದಿಸಿದನೆಂದರೆ ಅದನ್ನು ಅವರಿಗೆ ಹೊಂದಲು ಸಾಧ್ಯವಾಗಲಿಲ್ಲ, ಮತ್ತು ಅವರು ನಿಜವಾಗಿಯೂ ಜನಸಮೂಹದಲ್ಲಿ ಪ್ರಸಿದ್ಧರಾಗಲು ಪ್ರಾರಂಭಿಸಿದರು. ಅವರು ಹೆಚ್ಚಾಗಿ ಅಭಿವೃದ್ಧಿಯಾದರು, ಐಗುಪ್ತದ ಫರೋಹನು ಅವರನ್ನು ಅಧೀನಗೊಳಿಸಲು ಮತ್ತು ಅವರ ಮೇಲೆ ದಬ್ಬಾಳಿಕೆ ಮಾಡಲು ನಿರ್ಧರಿಸಿದನು. ಅವರು ಹೊಂದಿಕೊಂಡ ದೈವಿಕ ಆಶೀರ್ವಾದವನ್ನು ಅವನು ತುಂಬಾ ಕಡಿಮೆ ಅಂದಾಜು ಮಾಡಿದನು. ಅವರಿಗೆ ವಿಮೋಚನೆಯ ಅಗತ್ಯವಿತ್ತು ಮತ್ತು ದೇವರು ಅವರನ್ನು ಐಗುಪ್ತದಿಂದ ಹೊರತಂದು ವಾಗ್ದಾನದ ದೇಶಕ್ಕೆ ನಡೆಸಲು ಅವರಲ್ಲಿ ಒಬ್ಬನನ್ನು ಕಳುಹಿಸಿದನು. ಮೋಶೆಯು 6 ದಶಲಕ್ಷ ಇಸ್ರಾಯೇಲ್ಯರನ್ನು ಅವರ ಆಶೀರ್ವಾದದ ಹಂತಕ್ಕೆ ತರುವಲ್ಲಿ ಜೀವನದಾದ್ಯಂತ ನಂಬಿಗಸ್ತನಾಗಿದ್ದನು. ನಂತರ ಯೆಹೋಶುವನು ಮೋಶೆಯು ನಿಲ್ಲಿಸಿದ ಸ್ಥಳದಿಂದ ಜನರನ್ನು ಕಾನಾನಿಗೆ ನಡೆಸಲು ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಮುಂದುವರಿಸಿದನು. ಐಗುಪ್ತದಲ್ಲಿ ಅನ್ಯಧರ್ಮದ ಮಾರ್ಗಗಳನ್ನು ಅಳವಡಿಸಿಕೊಂಡು ತಮ್ಮ ಪಿತೃಗಳ ದೇವರ ಬಗ್ಗೆ ಅಲ್ಪ ತಿಳುವಳಿಕೆಯನ್ನು ಹೊಂದಿದ್ದ ಪುರುಷರು ಮತ್ತು ಸ್ತ್ರೀಯರನ್ನು ನಡೆಸುವುದು ಮೋಶೆ ಮತ್ತು ಯೆಹೋಶುವನಿಗೆ ಸುಲಭವಾಗಿರಲಿಲ್ಲ. ವಿಗ್ರಹಾರಾಧನೆ ಮತ್ತು ಬಂಡಾಯವು ಅವರಲ್ಲಿ ಆಳವಾಗಿ ಬೇರೂರಿದರಿಂದ, ದೇವರು ಅವರಿಗೆ ವಾಗ್ದಾನದ ದೇಶಕ್ಕೆ ಹೊಸ ಜನಾಂಗವನ್ನು ನಡೆಸುವ ಮೊದಲು ಇಡೀ ಪೀಳಿಗೆಯು ಸಾಯುವವರೆಗೆ ಕಾದಿದ್ದನು.ಯೆಹೋಶುವನ ಕಾಲದ ನಂತರ ಅದು ದುರದೃಷ್ಟಕರವಾಗಿತ್ತು, ಆದರೆ ತಮ್ಮ ಪಿತೃಗಳ ದೇವರ ಬಗ್ಗೆ ಏನೂ ತಿಳಿಯದ ಜನಾಂಗವು ಹುಟ್ಟಿಕೊಂಡಿತು. ತನ್ನ ಜನರ ಪರವಾಗಿ ಆತನ ಶಕ್ತಿಶಾಲಿ ಕಾರ್ಯಗಳ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಆದ್ದರಿಂದ, ಅವರು ನಿರಂತರವಾಗಿ ನಂಬಿಕೆಯಿಲ್ಲದ ಸ್ಥಿತಿ ಮತ್ತು ದೇವರ ಮೇಲಿನ ತಾತ್ಕಾಲಿಕ ನಂಬಿಕೆಯ ನಡುವೆ ಹೋರಾಟವಿತ್ತು. ಆದ್ದರಿಂದ, ದೇವರು ತನ್ನ ಸಾರ್ವಭೌಮತ್ವದಲ್ಲಿ ಶತ್ರು ಸೇನೆಗಳು ಬಂದು ದೇಶವನ್ನು ಹಾಳುಮಾಡಲು ಮತ್ತು ಆತನ ಜನರ ಮೇಲೆ ದಬ್ಬಾಳಿಕೆ ಮಾಡಲು ಅವಕಾಶ ಮಾಡಿಕೊಟ್ಟನು. ಜನರು ಅದನ್ನು ಸಹಿಸಲಾರದೆ ಆತನಿಗೆ ಮೊರೆಯಿಟ್ಟಾಗ ಆತನು ಮನಮರುಗಿ ವಿಮೋಚಕನನ್ನು ಕಳುಹಿಸಿದನು. ಈ ವಿಮೋಚಕನು ಕೇವಲ ಶತ್ರುಗಳ ಮೇಲೆ ಜಯವನ್ನು ತರುವುದು ಮಾತ್ರವಲ್ಲದೆ, ಅವರು ಜನರ ಸಾಮಾಜಿಕ ಮತ್ತು ಆತ್ಮೀಕ ಅಗತ್ಯಗಳನ್ನು ನೋಡಿಕೊಳ್ಳುವ ನ್ಯಾಯಾಸ್ಥಾಪಕರ ಸೇವೆಮಾಡಿದರು. ನ್ಯಾಯಾಸ್ಥಾಪಕರು ಸತ್ತಾಗ ಜನರು ದೇವರನ್ನು ಬೇಗನೆ ಮರೆತುಬಿಡುವುದರಿಂದ ಇದು ಶಾಶ್ವತ ಪರಿಹಾರವಾಗಿರಲಿಲ್ಲ. ಈ ಜನರ ಆತ್ಮೀಕ ಜೀವನದಲ್ಲಿನ ಏರಿಳಿತಗಳನ್ನು ನೋಡುವುದು ಬೇಸರವಾಗುತ್ತದೆ ಮತ್ತು ಅವರು ನಮ್ಮಿಂದ ಹೆಚ್ಚು ಭಿನ್ನವಾಗಿಲ್ಲ!
ಆಲೋಚನೆ:
ನಮ್ಮ ಪ್ರತಿಯೊಬ್ಬರ ಜೀವನದಲ್ಲಿ ದೇವರು-ರೂಪಿಸಿದ ಬರಿದನ್ನು ಯಾವುದೇ ಮನುಷ್ಯನು ತುಂಬಿಸಲು ಸಾಧ್ಯವಿಲ್ಲ.
About this Plan

ಕ್ರಿಸ್ತನನ್ನು ನಮ್ಮ ರಕ್ಷಣೆಗಾಗಿ ಕಳುಹಿಸುವಲ್ಲಿ ದೇವರು ನಮಗೆ ಮಾಡಿದ ಎಲ್ಲವನ್ನೂ ಹಿಂತಿರುಗಿ ನೋಡಲು ಮತ್ತು ಅವಲೋಕನ ಮಾಡಲು ಕ್ರಿಸ್ಮಸ್ ಸೂಕ್ತ ಸಮಯವಾಗಿದೆ. ನೀವು ಈಗ ಇದನ್ನು ಓದುತ್ತಿರುವಾಗ, ನಿಮ್ಮ ಸ್ವಂತ ರಕ್ಷಣೆಯನ್ನು ನೀವು ನೆನಪಿಸಿಕೊಂಡು, ಮುಂದೆ ಇರುವ ಹಾದಿಯಲ್ಲಿ ನೀವು ಹಾದು ನಡೆಯಬೇಕಾದ ಎಲ್ಲವುಗಳಿಂದ ಆತನು ನಿಮ್ಮನ್ನು ತಿರಿಗಿ ರಕ್ಷಿಸುತ್ತಾನೆ ಎಂಬ ದೃಢವಿಶ್ವಾಸದಿಂದ ಹೊಸ ವರ್ಷಕ್ಕೆ ಕಾಲಿಡಬೇಕೆಂದು ನಾನು ಪ್ರಾರ್ಥಿಸುತ್ತೇನೆ.
More
Related Plans

12 Days of Purpose

Journey Through Isaiah & Micah

Create: 3 Days of Faith Through Art

02 - LORD'S PRAYER - Jesus Taught Us How to Pray

Ups & Downs of Motherhood - God in 60 Seconds

Battling Addiction

Two-Year Chronological Bible Reading Plan (First Year-October)

When the Heart Cries Out for God: A Look Into Psalms

Into the Clouds (Bible App for Kids)
