ರಕ್ಷಿಸುವುದು Sample

ಪ್ರವಾದಿಗಳು ರಕ್ಷಣೆಯನ್ನು ಕುರಿತು ಮಾತನಾಡಿದರು
ಇಸ್ರಾಯೇಲಿನ ಅರಸರು ತಮ್ಮ ಜನರನ್ನು ದೇಶಭ್ರಷ್ಟರನ್ನಾಗಿ ನಡೆಸಿದಾಗ, ಅವರ ಪ್ರವಾದಿಗಳು ಅವರನ್ನು ಗಡಿಪಾರು ಮತ್ತು ನಂತರದ ಜೀವನಕ್ಕಾಗಿ ಸಿದ್ಧಪಡಿಸಿದರು. ಅವರ ಹೆಚ್ಚಿನ ಸಂದೇಶಗಳು ವಿನಾಶ ಮತ್ತು ಕತ್ತಲೆಯದ್ದಾಗಿದ್ದರೂ, ನಿರೀಕ್ಷೆಯ ಮಿನುಗುಗಳು ಇದ್ದವು. ದೇವರು ತನ್ನ ವಾಕ್ಯವನ್ನು ನಂಬಿಗಸ್ತಿಕೆಯಿಂದ ಸಾರಿದ ತನ್ನ ಪ್ರವಾದಿಗಳೊಂದಿಗೆ ಮಾತನಾಡಿದನು, ಆದರೆ ಸಂದೇಶವನ್ನು ನಿರಾಶಾದಾಯಕವಾಗಿ ಅಥವಾ ಸಂದೇಶವನ್ನು ಮುನ್ಸೂಚಿಸಿದರು. ಜನರ ಪ್ರತಿಕ್ರಿಯೆಯು ಕೈಗೂಡಿಸಿಕೊಳ್ಳುವಂತದ್ದು ಮತ್ತು ನಮ್ರತೆಯಿಂದ ಇರಲಿಲ್ಲ ಆದರೆ ಅಸಹ್ಯ ಮತ್ತು ನಿರಾಸಕ್ತಿಯಿಂದ ಕೂಡಿತ್ತು. ಕೆಲವು ಹಂತದಲ್ಲಿ ಅವರು ಜೀವಂತ ದೇವರನ್ನು ಹಿಂಬಾಲಿಸುವುದನ್ನು ಬಿಟ್ಟು ಮರ ಮತ್ತು ಕಲ್ಲಿನ ವಿಗ್ರಹಗಳನ್ನು ಹಿಂಬಾಲಿಸಿದರು. ಅವರು ಒಬ್ಬನೇ ಸತ್ಯ ದೇವರ ಆರಾಧನೆಗಾಗಿ ನಿಲ್ಲುವ ಬದಲು ತಮ್ಮ ದೇಶಭ್ರಷ್ಟ ದೇಶಗಳಲ್ಲಿ ಬೆರೆಯಲು ಆಯ್ಕೆಮಾಡಿಕೊಂಡರು. ಪ್ರವಾದಿಗಳು ತಮ್ಮ ಎಲ್ಲಾ ಹಿನ್ನಡೆಯ ನಡುವೆಯೂ ಆತನ ಜನರಿಗೆ ದೇವರ ನಿರಂತರ ಪ್ರೀತಿಯನ್ನು ಸಾರಿದರು. ತಮ್ಮ ಮೇಲೆ ದೇವರ ತೀರ್ಪನ್ನು ದೇಶದ ಗಮನಕ್ಕೆ ತರುವ ಪ್ರಯತ್ನದಲ್ಲಿ ಅವರು ಪಟ್ಟುಬಿಡದೆ ಇದ್ದರು. ಅವರ ಹಠಮಾರಿತನ, ಅವಿಧೇಯತೆ ಮತ್ತು ಘೋರ ಪಾಪಪ್ರಜ್ಞೆಯ ಪರಿಣಾಮವಾಗಿ ಈ ತೀರ್ಪು ಯೋಗ್ಯವಾಗಿತ್ತು. ದೇವರ ಪುರುಷರು ಮಾತುಗಳನ್ನು ಕಡಿಮೆ ಮಾಡಲಿಲ್ಲ ಮತ್ತು ತಮ್ಮ ಪ್ರಾಮಾಣಿಕತೆಗಾಗಿ ಬಾಧೆಪಟ್ಟರು. ತಿರಸ್ಕಾರಕ್ಕೊಳಗಾದ, ಹಿಂಸೆಗೊಳಗಾದ ಮತ್ತು ತಮ್ಮ ಸ್ವಂತದವರಿಂದ ದೂರಮಾಡಲ್ಪಟ್ಟ ಈ ಪುರುಷರು ಬೆಂಕಿಯ ಅಡಿಯಲ್ಲಿ ಧೈರ್ಯಕ್ಕೆ ಮಾದರಿಯಾಗಿದ್ದರು. ದುಃಖಕರವಾದ ಭಾಗವೆಂದರೆ, ದೇಶದ ಜನರಿಗೆ ದೈವಿಕ ದರ್ಶನದ ಕೊರತೆಯಿತ್ತು ಅಥವಾ ಅವರು ದೈವಿಕ ದರ್ಶನ ಹೊಂದಿರುವವರನ್ನು ನಂಬಲಿಲ್ಲ ಮತ್ತು ಅವರ ಶತ್ರುಗಳ ಕೈಯಲ್ಲಿ ನಾಶವಾದರು. ಉಳಿದ ಕೆಲವೇ ಜನರು, ಮುಂತಿಳಿಸಿದಂತೆ ಯೆರೂಸಲೇಮಿಗೆ ಹಿಂತಿರುಗಿದರು. ಇಸ್ರಾಯೇಲ್ಯರ ಅಪನಂಬಿಗಸ್ತಿಕೆಗೆ ಒಂದು ಮೂಲ ಕಾರಣವನ್ನು ನಿರ್ಣಯಿಸಬೇಕಾದರೆ, ಅದು ಅವರ ದೇವರ ಹೊರಗಿನ ಸಂಗತಿಗಳು ಮತ್ತು ಹೊರಗಿನ ಜನರ ಮೇಲೆ ಅವಲಂಬನೆಯಾಗಿತ್ತು. ಸರಳವಾಗಿ ಹೇಳುವುದಾದರೆ, ವಿಗ್ರಹಾರಾಧನೆಯ ಹೃದಯವೇ ಅವರನ್ನು ಕಾಡುತ್ತಿತ್ತು. ಅವರ ಭಾವೋದ್ರೇಕಗಳು ಮತ್ತು ವಾತ್ಸಲ್ಯಗಳು ದೇವರ ಕಡೆಗೆ ಮಾರ್ಗದರ್ಶಿಸಲ್ಪಡಲಿಲ್ಲ - ಆದ್ದರಿಂದ ಅವರ ಆರಾಧನೆಯು ನೀರಿಗಿಳಿಯಿತು ಮತ್ತು ಕ್ರಮೇಣವಾಗಿ ದಾರಿ ತಪ್ಪಿತು. ಒಬ್ಬ ಪ್ರವಾದಿಯಾದರೂ ಜನರನ್ನು ಅವರ ತಪ್ಪುದಾರಿಯಿಂದ ರಕ್ಷಿಸಲು ಸಾಧ್ಯವಾಗಲಿಲ್ಲ.
ಆಲೋಚನೆ:
ದರ್ಶನವಿಲ್ಲದೆ ಜನರು ನಾಶವಾಗುತ್ತಾರೆ.
About this Plan

ಕ್ರಿಸ್ತನನ್ನು ನಮ್ಮ ರಕ್ಷಣೆಗಾಗಿ ಕಳುಹಿಸುವಲ್ಲಿ ದೇವರು ನಮಗೆ ಮಾಡಿದ ಎಲ್ಲವನ್ನೂ ಹಿಂತಿರುಗಿ ನೋಡಲು ಮತ್ತು ಅವಲೋಕನ ಮಾಡಲು ಕ್ರಿಸ್ಮಸ್ ಸೂಕ್ತ ಸಮಯವಾಗಿದೆ. ನೀವು ಈಗ ಇದನ್ನು ಓದುತ್ತಿರುವಾಗ, ನಿಮ್ಮ ಸ್ವಂತ ರಕ್ಷಣೆಯನ್ನು ನೀವು ನೆನಪಿಸಿಕೊಂಡು, ಮುಂದೆ ಇರುವ ಹಾದಿಯಲ್ಲಿ ನೀವು ಹಾದು ನಡೆಯಬೇಕಾದ ಎಲ್ಲವುಗಳಿಂದ ಆತನು ನಿಮ್ಮನ್ನು ತಿರಿಗಿ ರಕ್ಷಿಸುತ್ತಾನೆ ಎಂಬ ದೃಢವಿಶ್ವಾಸದಿಂದ ಹೊಸ ವರ್ಷಕ್ಕೆ ಕಾಲಿಡಬೇಕೆಂದು ನಾನು ಪ್ರಾರ್ಥಿಸುತ್ತೇನೆ.
More
Related Plans

Go

Leviticus: Living in God's Holy Presence | Video Devotional

Renew Your Mind

BEMA Liturgy I — Part D

Receive

Connect

Hebrews: The Better Way | Video Devotional

Inspire 21-Day Devotional: Illuminating God's Word

Zechariah: Hope for God's Presence | Video Devotional
