ರಕ್ಷಿಸುವುದು Sample

ರಾಜರು ರಕ್ಷಿಸಲು ಪ್ರಯತ್ನಿಸಿದರು
ದೇವರ ಜನರು ನಮ್ಮಂತೆಯೇ ಇದ್ದರು, ಹೋಲಿಕೆಯು ಬಹುತೇಕ ಬೆದರಿಸವಂತದ್ದು. ನ್ಯಾಯಾಸ್ಥಾಪಕರು ದೇಶವನ್ನು ನೋಡಿಕೊಳ್ಳುವ ಸಮಯದ ನಂತರ, ದೇವರು ತನ್ನ ಸ್ವರದೊಂದಿಗೆ ಬಹಳ ಪರಿಚಿತನಾಗಿದ್ದ ಒಬ್ಬ ಪ್ರವಾದಿಯನ್ನು ಕರೆತಂದನು. ಸಮುವೇಲನು ಸ್ವತಃ ದೇವರ ಸೂಚನೆಗಳಂತೆ ಇಸ್ರಾಯೇಲ್ಯರನ್ನು ಮುನ್ನಡೆಸಿದನು. ಅವನು ಮಧ್ಯಸ್ಥನಾಗಿದ್ದನು ಮತ್ತು ತನ್ನ ಜನರ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸಿದನು. ಅವನ ನಾಯಕತ್ವವು ಜೀವಂತ ದೇವರೊಂದಿಗಿನ ನಿಕಟ ಅನ್ಯೋನ್ಯತೆಯ ಫಲಿತಾಂಶವಾಗಿತ್ತು, ಹೀಗಿರುವಾಗ ಜನರು ಇನ್ನು ಮುಂದೆ ಈ ಪ್ರವಾದಿಯು ತಮ್ಮನ್ನು ನಡೆಸುವುದನ್ನು ಬಯಸುವುದಿಲ್ಲವೆಂದು ನಿರ್ಧರಿಸಿದಾಗ ಅವನ ನಿರಾಶೆಯನ್ನು ನೀವು ಊಹಿಸಬಹುದು. ಬದಲಿಗೆ ಅರಸನು ಬೇಕೆಂದು ಕೇಳಿಕೊಂಡರು. ಮುಂಚೂಣಿಯಲ್ಲಿದ್ದು ಬದಲಾವಣೆಯನ್ನು ಕೇಳುವುದು ತಪ್ಪಲ್ಲವಾದರೂ, ಅದನ್ನು ಕೇಳುವ ಹಿಂದಿನ ನಮ್ಮ ಉದ್ದೇಶಗಳು ಮುಖ್ಯವಾಗಿದೆ. ತಮ್ಮನ್ನು ನಡೆಸುವ ಅರಸನನ್ನು ಹೊಂದಿರುವ ಸುತ್ತಮುತ್ತಲಿನ ದೇಶಗಳಂತೆ ನಮಗೂ ಇರಬೇಕೆಂದು ಹೇಳಿದರು. ತಮ್ಮ ಅಸ್ತಿತ್ವಕ್ಕೆ ಮೂಲಭೂತವಾದ ಆಧಾರವೆಂದರೆ ದೇವರು ಅವರನ್ನು ಉಳಿದ ದೇಶಗಳಿಂದ ಪ್ರತ್ಯೇಕಿಸಲು ಬಯಸುತ್ತಾನೆ ಎಂಬುದನ್ನು ಅವರು ಮರೆತಿದ್ದರು. ಆತನು ಅವರನ್ನು ತನಗಾಗಿ ಆರಿಸಿಕೊಂಡಿದ್ದನು. ಆತನು ಅವರಿಗಾಗಿ ಅಸೂಯೆ ಹೊಂದಿದ್ದನು ಮತ್ತು ಆತನು ಅವರಿಗಾಗಿ ನೇಮಿಸಿದ ಮಹಾ ಉದ್ದೇಶಗಳಿಗಾಗಿ ಅವರನ್ನು ಪವಿತ್ರಗೊಳಿಸಬೇಕೆಂದು ಬಯಸಿದ್ದನು. ಆದರೂ, ಅವರು ಈ ಬೇಡಿಕೆಯನ್ನು ಮಾಡಿದಾಗ, ಆತನು ಒಪ್ಪಿ ಸೌಲನನ್ನು ಇಸ್ರಾಯೇಲ್ಯರ ಅರಸನನ್ನಾಗಿ ಅಭಿಷೇಕಿಸಿದನು. ಸೌಲನು ಅಪನಂಬಿಗಸ್ತನು ಎಂದು ಸಾಬೀತಾಯಿತು ಮತ್ತು ದೇವರು ಅಂತಿಮವಾಗಿ ದಾವೀದನನ್ನು ಕರೆತಂದನು, ಅವನು ಮುಂದಿನ ಸಂತಾನಕ್ಕೆ ಮಾದರಿ ಅರಸನಾಗಿದ್ದನು. ಪ್ರತಿಯೊಬ್ಬ ಅರಸನ ಪ್ರಮುಖ ಅವಶ್ಯಕತೆ ಏನೆಂದರೆ, ಅವನು ದೇವರ ವಾಕ್ಯದ ಆಧಾರದ ಮೇಲೆ ತನ್ನ ಜೀವನವನ್ನು ನಡೆಸಬೇಕು, ಜ್ಞಾನದಿಂದ ಆಳಬೇಕು ಮತ್ತು ನೀತಿ ನ್ಯಾಯದಿಂದ ವ್ಯವಹರಿಸಬೇಕಾಗಿತ್ತು. ನಿರೀಕ್ಷಿಸಿದಂತೆ, ಅತ್ಯುತ್ತಮ ಅರಸರು ಸಹ ಪರಿಪೂರ್ಣರಾಗಿರಲಿಲ್ಲ. ರಾಜಮನೆತನವು ಹಂತಹಂತವಾಗಿ ಹೆಚ್ಚು ನೈತಿಕವಾಗಿ ವಂಚಿತವಾಯಿತು ಮತ್ತು ಅತ್ಮೀಕತೆಯನ್ನು ಕಳೆದುಕೊಂಡಿತು, ದೇವರು ಅಂತಿಮವಾಗಿ ಅವರನ್ನು ಮತ್ತು ಅವರ ಜನರನ್ನು ನಿರ್ದಯ ಮತ್ತು ಕ್ರೂರ ಶತ್ರು ದೇಶಗಳ ಕೈಗೆ ಒಪ್ಪಿಸಿದನು. ಕೆಟ್ಟ ಭಾಗವೆಂದರೆ ವಾಗ್ದಾನ ಮಾಡಿದ ದೇಶವು ಈಗ ಆಕ್ರಮಣಕಾರರಿಂದ ಆಕ್ರಮಿಸಲ್ಪಟ್ಟಿತು ಮತ್ತು ಜನರನ್ನು ಪರದೇಶಕ್ಕೆ ಗಡಿಪಾರು ಮಾಡಲಾಯಿತು. ದುರದೃಷ್ಟವಶಾತ್, ಗಡಿಪಾರುಮಾಡಲಾದ ಸಮಯದಲ್ಲಿ ಆಳ್ವಿಕೆ ನಡೆಸಿದ ಅರಸರು ಕತ್ತಲೆಯ ಹೊದಿಕೆಯಡಿಯಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಮೂಲಕ ಮುಂಬರುವ ವಿನಾಶವನ್ನು ತಪ್ಪಿಸಲು ಪ್ರಯತ್ನಿಸಿದರು ಆದರೆ ಅವರನ್ನು ಸೆರೆಹಿಡಿದು ಕರೆದೊಯ್ಯಲಾಯಿತು. ತಮ್ಮ ಜನರನ್ನು ರಕ್ಷಿಸಲು ಆಯ್ಕೆಮಾಡಲ್ಪಟ್ಟ ಆಡಳಿತಗಾರರ ಅಸಮರ್ಪಕತೆಯ ಎಂಥಾ ಒಂದು ಚಿತ್ರಣವಾಗಿದೆ. ಅರಸರು ತಮ್ಮ ಜನಾಂಗವನ್ನು ದೇವರ ಕಡೆಗೆ ಮತ್ತು ಅವರ ದೇವರು-ನೇಮಿಸಿದ ನಿರ್ದಿಷ್ಟ ಕಡೆಗೆ ತಿರುಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ.
ಆಲೋಚನೆ:
ನಮ್ಮ ನಾಯಕರಿಗಾಗಿ ಪ್ರಾರ್ಥನೆ ಮಾಡುವುದು ಮುಖ್ಯ, ಆದ್ದರಿಂದ ಅವರು ನಮ್ಮನ್ನು ಶಕ್ತಿ ಮತ್ತು ಜ್ಞಾನದಿಂದ ನಡೆಸುವಲ್ಲಿ ಸಹಕಾರಿಯಾಗಬಹುದು.
Scripture
About this Plan

ಕ್ರಿಸ್ತನನ್ನು ನಮ್ಮ ರಕ್ಷಣೆಗಾಗಿ ಕಳುಹಿಸುವಲ್ಲಿ ದೇವರು ನಮಗೆ ಮಾಡಿದ ಎಲ್ಲವನ್ನೂ ಹಿಂತಿರುಗಿ ನೋಡಲು ಮತ್ತು ಅವಲೋಕನ ಮಾಡಲು ಕ್ರಿಸ್ಮಸ್ ಸೂಕ್ತ ಸಮಯವಾಗಿದೆ. ನೀವು ಈಗ ಇದನ್ನು ಓದುತ್ತಿರುವಾಗ, ನಿಮ್ಮ ಸ್ವಂತ ರಕ್ಷಣೆಯನ್ನು ನೀವು ನೆನಪಿಸಿಕೊಂಡು, ಮುಂದೆ ಇರುವ ಹಾದಿಯಲ್ಲಿ ನೀವು ಹಾದು ನಡೆಯಬೇಕಾದ ಎಲ್ಲವುಗಳಿಂದ ಆತನು ನಿಮ್ಮನ್ನು ತಿರಿಗಿ ರಕ್ಷಿಸುತ್ತಾನೆ ಎಂಬ ದೃಢವಿಶ್ವಾಸದಿಂದ ಹೊಸ ವರ್ಷಕ್ಕೆ ಕಾಲಿಡಬೇಕೆಂದು ನಾನು ಪ್ರಾರ್ಥಿಸುತ್ತೇನೆ.
More
Related Plans

Revelation | Reading Plan + Study Questions

BEMA Liturgy I — Part C

Journey Through Genesis 1-11

Go

Evangelistic Prayer Team Study - How to Be an Authentic Christian at Work

Loving Well in Community

The Journey of Prayer

Romans: The Glory of the Gospel

Connect With God Through Reformation | 7-Day Devotional
