YouVersion Logo
Search Icon

ಯೇಸುವಿನೊಂದಿಗೆ ಮುಖಾಮುಖಿSample

ಯೇಸುವಿನೊಂದಿಗೆ ಮುಖಾಮುಖಿ

DAY 21 OF 40

ಉಡುಪಿನ ಅಂಚು ಒಬ್ಬರ ಬಟ್ಟೆಯ ತುದಿಯಾಗಿದೆ. ಹನ್ನೆರಡು ವರ್ಷಗಳ ಕಾಲ ರಕ್ತಸ್ರಾವದಿಂದ ಬಳಲುತ್ತಿದ್ದ ಒಬ್ಬ ಮಹಿಳೆ ಒಂದು ಅವಕಾಶವನ್ನು ಪಡೆದುಕೊಳ್ಳಲು ನಿರ್ಧರಿಸಿದಳು ಮತ್ತು ಸ್ವಸ್ಥತೆಗಾಗಿ ಯೇಸುವಿನ ವಸ್ತ್ರದ ಅಂಚನ್ನು ಮುಟ್ಟಿದಳು. ಆಕೆಯು ಎಲ್ಲಾ ಇತರ ಆಯ್ಕೆಗಳನ್ನು ಪ್ರಯತ್ನಿಸಿದಳು ಮತ್ತು ಯಾವುದೂ ಕೆಲಸ ಮಾಡಲಿಲ್ಲ. ಇದು ಬಹುಶಃ ಆಕೆಯ ಕೊನೆಯ ಆಯ್ಕೆಯಾಗಿತ್ತು ಮತ್ತು ಇನ್ನೂ ಯೇಸುವಿನ ಶಕ್ತಿಯಲ್ಲಿ ಆಕೆಯ ನಂಬಿಕೆಯು ಖಚಿತವಾದದೆಂದು ತೋಚಿತು. ವಿಪರೀತ ಜನಸಂದಣಿಯ ನಡುವೆಯೂ, ಶಕ್ತಿಯು ತನ್ನನ್ನು ಬಿಟ್ಟುಹೋಯಿತು ಎಂದು ಯೇಸು ಭಾವಿಸಿದನು ಮತ್ತು ಯಾರೋ ತನ್ನನ್ನು ಮುಟ್ಟಿದ್ದಾರೆಂದು ತಿಳಿದಿದ್ದನು. ಆತನು ವಿಚಾರಿಸಿದಾಗ ಆಕೆಯು ಮುಂದೆ ಬಂದು ತನ್ನ ಕಥೆಯನ್ನು ಹಂಚಿಕೊಂಡಳು. ಆಕೆಯ ನಂಬಿಕೆಯು ಅವಳನ್ನು ಗುಣಪಡಿಸಿದೆ ಎಂದು ಹೇಳುವ ಮೂಲಕ ಆತನು ಅವಳ ಸ್ವಸ್ಥತೆಯನ್ನು ದೃಢೀಕರಿಸುತ್ತಾನೆ!

ಅನೇಕ ಸಾರಿ ನಮಗೆ ಪ್ರಗತಿಯ ಅಗತ್ಯವಿರುವಾಗ ನಾವು "ನನಗೆ ಏನು ಬೇಕು ಎಂದು ದೇವರಿಗೆ ಈಗಾಗಲೇ ತಿಳಿದಿದೆ" ಅಥವಾ "ಬಹುಶಃ ಇದು ಶಾಶ್ವತವಾಗಿ ಹೀಗೆಯೇ ಇರುತ್ತದೆ" ಎಂದು ಹೇಳುತ್ತೇವೆ. ಆತನ ಗುಣಪಡಿಸುವ ಸದ್ಗುಣವು ನಿಮಗೆ ಹರಿಯುವಂತೆ ನೀವು ರಕ್ಷಕನಿಗೆ ಹತ್ತಿವಾಗಿಯೇ ಇರಬೇಕಾದರೆ ಹೇಗಿರುತ್ತದೆ? ನಿಮ್ಮ ಅದ್ಭುತಕ್ಕಾಗಿ ಹಲವು ವರ್ಷಗಳು ಕಾದಿರುವಿಕೆಯ ನಂತರ ನೀವು ಯೇಸುವಿಗೆ ಹತ್ತಿರವಾಗಿ ವೈಯಕ್ತಿಕವಾಗುವ ಮೂಲಕ "ಆತನ ಉಡುಪನ್ನು" ಸ್ಪರ್ಶಿಸುವ ಸಮಯ ಈಗ ಬಂದರೆ ಹೇಗಿರುತ್ತದೆ?

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನನ್ನನ್ನು ಗುಣಪಡಿಸಲು ಆತನ ಸ್ಪರ್ಶಕ್ಕಾಗಿ ದೇವರಿಗೆ ತೋರಿಸಲು ನಾನು ಭಯಪಡುವ ಯಾವುದೇ ಭಾಗವು ನನ್ನ ಜೀವನದಲ್ಲಿ ಇದೆಯೇ?
ಪ್ರತಿದಿನ ದೇವರ ಪ್ರಸನ್ನತೆಗೆ ನಡೆಸಲು ನನಗೆ ಸಹಾಯ ಮಾಡುವ ಶಿಸ್ತು ನನ್ನ ಜೀವನದಲ್ಲಿ ಇರಬೇಕೇ?

About this Plan

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More