YouVersion Logo
Search Icon

ಯೇಸುವಿನೊಂದಿಗೆ ಮುಖಾಮುಖಿSample

ಯೇಸುವಿನೊಂದಿಗೆ ಮುಖಾಮುಖಿ

DAY 23 OF 40

ಪೇತ್ರನು ಬಹಳ ಆಸಕ್ತಿದಾಯಕ ವ್ಯಕ್ತಿ ಮತ್ತು ಖಂಡಿತವಾಗಿಯೂ ನೆನಪಿಸಿಕೊಳ್ಳಲು ಯೋಗ್ಯವಾದ ಶಿಷ್ಯನು. ಅವನು ಯೇಸು ನೀರಿನ ಮೇಲೆ ನಡೆಯುವುದನ್ನು ನೋಡುತ್ತಾನೆ ಮತ್ತು ಆತನ ಬಳಿಗೆ ಬರುತ್ತೇನೆಂದು ಕೇಳುತ್ತಾನೆ (ಒಂದು ಅಸಾಮಾನ್ಯ ಮನವಿ). ಯೇಸು ಅವನನ್ನು ಬರಲು ಕರೆದನು ಮತ್ತು ಪೇತ್ರನು ವಿಧೇಯನಾದಾಗ ಅವನು ನೀರಿನ ಮೇಲೆ ಕೆಲವು ಸೆಕೆಂಡುಗಳ ಕಾಲ ನಡೆದು ಸುತ್ತಲೂ ಬಿರುಗಾಳಿಯ ಚಂಡಮಾರುತವನ್ನು ನೋಡಿದನು. ಅವನು ಮುಳುಗಲು ಪ್ರಾರಂಭಿಸಿದಾಗ ಯೇಸು ಕೈಚಾಚಿ ಅವನನ್ನು ಹಿಡಿದು ನಿಧಾನವಾಗಿ ಅವನನ್ನು ಗದರಿಸಿದನು. ಪೇತ್ರನಿಗೆ ಹಾಕಿದ ಯೇಸುವಿನ ಪ್ರಶ್ನೆಯನ್ನು ನಮ್ಮ ಸ್ವಂತ ಜೀವನದಲ್ಲಿ ನಾವು ನೋಡಬಹುದು. ನಮ್ಮ ನಂಬಿಕೆಯನ್ನು ಹಳಿತಪ್ಪಿಸಲು ಮತ್ತು ದೇವರ ಶಕ್ತಿ ಮತ್ತು ಸಾಮರ್ಥ್ಯಗಳನ್ನು ದುರ್ಬಲಗೊಳಿಸಲು ಶತ್ರುಗಳು ಅನೇಕ ಸಾರಿ ಬಳಸುವ ಎರಡು ಆಯುಧಗಳು ಅನುಮಾನ ಮತ್ತು ಭಯವನ್ನು ತರುತ್ತವೆ. ನಾವು ಕಷ್ಟಗಳು ಮತ್ತು ಸಂಕಟಗಳಿಂದ ಸುತ್ತುವರೆದಿರುವಾಗ ಕೆಲವೊಮ್ಮೆ ರಕ್ಷಕನಿಗಿಂತ ಹೋರಾಟದ ಮೇಲೆ ಕೇಂದ್ರೀಕರಿಸುವುದು ಸುಲಭವಾಗುತ್ತದೆ. ನಾವು ಅನುಮಾನ ಮತ್ತು ಭಯದಿಂದ ಬಾಧಿತರಾಗಿದ್ದರೂ ಸಹ ನಮ್ಮ ಸಹಾಯಕ್ಕಾಗಿ ಉದ್ದೇಶಪೂರ್ವಕವಾಗಿ ದೇವರ ಕಡೆಗೆ ನೋಡುವ ಸಮಯ ಇರಬಹುದು.

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನಾನು ಪ್ರಸ್ತುತ ಹೊಂದಿರುವ ದೊಡ್ಡ ಭಯಗಳು ಯಾವುವು?
ನಾನು ಯೇಸುವಿನ ಪಾದಗಳ ಬಳಿಗೆ ತರಬೇಕಾದ ದೇವರ ಬಗ್ಗೆ ನನಗಿರುವ ಅನುಮಾನಗಳು ಯಾವುವು?

About this Plan

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More