YouVersion Logo
Search Icon

ಯೇಸುವಿನೊಂದಿಗೆ ಮುಖಾಮುಖಿSample

ಯೇಸುವಿನೊಂದಿಗೆ ಮುಖಾಮುಖಿ

DAY 26 OF 40

ಆತ್ಮರಕ್ಷಣೆ ಪ್ರತಿಯೊಬ್ಬ ಮನುಷ್ಯನಿಗೂ ಸಾಮಾನ್ಯವಾದ ಲಕ್ಷಣವಾಗಿದೆ. ನಮ್ಮನ್ನು ಯಾವುದೇ ಅಪಾಯದಿಂದ ರಕ್ಷಿಸಿಕೊಳ್ಳಲು ಮತ್ತು ಸುರಕ್ಷಿತವಾಗಿ ಕಾಪಡಿಕೊಳ್ಳಲು ನಮ್ಮ ದೇಹವನ್ನು ರಚಿಸಿ ನಮ್ಮ ಮಿದುಳನ್ನು ಹೆಣೆಯಲಾಗಿದೆ. ಆದ್ದರಿಂದ ಅದನ್ನು ಸುರಕ್ಷಿತವಾಗಿ ಆಡುವ ಪೇತ್ರನ ಸ್ವಾಭಾವಿಕ ಪ್ರವೃತ್ತಿಯನ್ನು ಯೇಸು ಶಾಂತಗೊಳಿಸಬೇಕಾಗಿರುವುದು ಆಶ್ಚರ್ಯವೇನಿಲ್ಲ. ಯೇಸು ಅಲ್ಲಿಗೆ ನಿಲ್ಲಿಸಲಿಲ್ಲ, ಆದರೆ ಶಿಷ್ಯತ್ವದ ಕ್ರಯದ ಬಗ್ಗೆ ಮಾತನಾಡುತ್ತಾ ಮುಂದುವರೆಸುತ್ತಾನೆ. ಯೇಸುವಿನ ಯಾವುದೇ ಹಿಂಬಾಲಕನು ಕೊಡುವ ಹೆಚ್ಚಿನ ಕ್ರಯದ ಬಗ್ಗೆ ಆತನು ಮಾತನಾಡುತ್ತಾನೆ, ಬಹುಶಃ ಮರಣವು ಸಹ ಆಗಿದ್ದು ಇದು ಅಂತಿಮವಾಗಿ ನಿತ್ಯಜೀವಕ್ಕೆ ನಡೆಸುತ್ತದೆ. ಅನೇಕ ಸಾರಿ ನಮ್ಮ ಸ್ವಯಂ ರಕ್ಷಣಾ ಪ್ರವೃತ್ತಿಗಳು ದೇವರಿಗೆ ಸಂಪೂರ್ಣವಾಗಿ ಸಮರ್ಪಣೆ ಮತ್ತು ಸೇವೆ ಮಾಡುವುದರಿಂದ ನಮ್ಮನ್ನು ತಡೆಹಿಡಿಯುತ್ತವೆ. ಅವರು ಕ್ರಿಸ್ತನನ್ನು ಅನುಸರಿಸುವಾಗ ಎಲ್ಲದಕ್ಕೂ ಹೋಗದಂತೆ ನಮಗೆ ನೆಪಗಳನ್ನು ಕೊಡುತ್ತಾರೆ ಮತ್ತು ಉತ್ಸಾಹಭರಿತ ಕ್ರೈಸ್ತ ಜೀವನವನ್ನು ಜೀವಿಸುವುದನ್ನು ಬದಿಯಲ್ಲಿರಿಸುತ್ತಾರೆ. ಯೇಸು ಪರಲೋಕದ ಪ್ರತಿಫಲ ವ್ಯವಸ್ಥೆಯ ಬಗ್ಗೆ ಬಹಳ ಸ್ಪಷ್ಟವಾಗಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಗೆ (ಮತ್ತೆ ಬಂದಾಗ) ಅವರು ನಡತೆಗೆ ತಕ್ಕಂತೆ ಪ್ರತಿಫಲ ಕೊಡುವೆನೆಂದು ಆತನು ಹೇಳುತ್ತಾನೆ.

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನೀವು ಆಕ್ರಮಿಸಿಕೊಂಡಿರುವ ಪ್ರಪಂಚದ ಸಣ್ಣ ಭಾಗದಲ್ಲಿ ದೇವರ ಸೇವೆ ಮಾಡಲು ನೀವು ಏನು ಮಾಡುತ್ತಿದ್ದೀರಿ?
ನೀವು ಕ್ರಿಸ್ತನಿಂದ ಮತ್ತು ಆತನ ದೇಹದಿಂದ ದೂರ ಉಳಿಯುವ ಮೂಲಕ ನಿಮ್ಮನ್ನು ಕಾಪಾಡಿಕೊಳ್ಳಲು ಮತ್ತು ಸಂರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ನೀವು ಅದನ್ನು ಹೇಗೆ ಬದಲಾಯಿಸಬಹುದು?

About this Plan

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More