ಮಕ್ಕಳಿಗಾಗಿ ಬೈಬಲ್Sample

ಅದ್ಭುತನಾದ ದೇವರು ನಮ್ಮನ್ನು ಉಂಟು ಮಾಡಿರುವನೆಂದು ಮತ್ತು ನಾವು ಆತನನ್ನು ಕಂಡುಕೊಳ್ಳಬೇಕೆಂದು ದೇವರು ಇಷ್ಟಪಡುತ್ತಾನೆಂದು ಈ ಬೈಬಲ್ ಕಥೆಯು ತಿಳಿಸುತ್ತದೆ.
ನಾವು ಕೆಟ್ಟ ಕೆಲಸಗಳನ್ನು ಮಾಡಿರುವದು ದೇವರಿಗೆ ತಿಳಿದಿರುತ್ತದೆ. ಈ ಕೆಟ್ಟ ಕೆಲಸಗಳನ್ನು ದೇವರು ಪಾಪವೆಂದು ಕರೆಯುತ್ತಾನೆ. ಪಾಪದ ಶಿಕ್ಷೆಯು ಮರಣವಾಗಿದೆ. ಆದರೆ ನಮ್ಮ ಪಾಪದ ಶಿಕ್ಷೆಯನ್ನು ತನ್ನ ಮೇಲೆ ಹೊತ್ತುಕೊಂಡು ಶಿಲುಬೆಯ ಮೇಲೆ ಪ್ರಾಣ ಕೊಡಲು ದೇವರು ತನ್ನ ಒಬ್ಬನೇ ಮಗನಾದ ಯೇಸುಕ್ರಿಸ್ತನನ್ನು ಈ ಲೋಕಕ್ಕೆ ಕಳುಹಿಸಿಕೊಟ್ಟನು. ಯೇಸುಕ್ರಿಸ್ತನು ಸತ್ತವರೊಳಗಿಂದ ತಿರುಗಿ ಎದ್ದು ಬಂದು ಪರಲೋಕಕ್ಕೆ ಏರಿಹೋಗಿದ್ದಾನೆ. ನಿನ್ನ ಪಾಪದ ಶಿಕ್ಷೆಯನ್ನು ಯೇಸುಕ್ರಿಸ್ತನು ತೀರಿಸಿದ್ದಾನೆ. ಆತನು ನಿನ್ನ ಪಾಪಗಳನ್ನು ಕ್ಷಮಿಸುತ್ತಾನೆ. ಆದರೆ ನಿನ್ನ ಪಾಪಗಳನ್ನು ಕ್ಷಮಿಸಬೇಕೆಂದು ನೀನು ಆತನಿಗೆ ಕೇಳಿಕೊಳ್ಳಬೇಕು. ಆತನು ಖಂಡಿತವಾಗಿ ನಿನ್ನ ಪಾಪಗಳನ್ನು ಕ್ಷಮಿಸುವನು ಮತ್ತು ಈಗಲೇ ನಿನ್ನ ಹೃದಯದೊಳಗೆ ಬಂದು ವಾಸಿಸಬಲ್ಲನು! ನೀನು ಆತನೊಂದಿಗೆ ಯಾವಾಗಲೂ ಜೀವಿಸುವಿ.
ನೀನು ಈ ಸತ್ಯವನ್ನು ನಂಬುವದಾದರೆ, ದೇವರಿಗೆ ಈ ಮಾತುಗಳನ್ನು ಹೇಳು: ಕರ್ತನಾದ ಯೇಸುವೇ, ನೀನು ದೇವರು ಆಗಿರುವಿ ಎಂದು ಮತ್ತು ನನ್ನ ಪಾಪಕ್ಕಾಗಿ ನಿನ್ನ ಪ್ರಾಣವನ್ನು ಕೊಡಲು ಮನುಷ್ಯನಾಗಿ ಬಂದಿರುವಿ ಎಂದು ನಂಬುತ್ತೇನೆ. ಈಗ ನೀನು ಸತ್ತವರೊಳಗಿಂದ ಎದ್ದು ಬಂದು ಯಾವಾಗಲೂ ಜೀವಿಸುವವನಾಗಿರುವಿ, ನನ್ನ ಪಾಪಗಳನ್ನು ದಯವಿಟ್ಟು ಕ್ಷಮಿಸಿ ನನ್ನ ಹೃದಯದೊಳಗೆ ಬಂದು ವಾಸಿಸು. ಹೀಗೆ ಹೊಸ ಜೀವವನ್ನು ಪಡೆದುಕೊಂಡು ಒಂದು ದಿನ ನಾನು ನಿನ್ನ ಬಳಿಗೆ ಬಂದು ನಿನ್ನೊಂದಿಗೆ ಯಾವಾಗಲೂ ಇರುವೆನು. ನಿನಗೆ ವಿಧೇಯನಾಗುವದಕ್ಕೆ ಮತ್ತು ನಿನ್ನ ಮಗನಾಗಿ ಜೀವಿಸುವದಕ್ಕೆ ನನಗೆ ಸಹಾಯಮಾಡು. ಆಮೆನ್.
ನೀನು ಪ್ರತಿದಿನವೂ ಬೈಬಲ್ ಓದು ಮತ್ತು ಪ್ರಾರ್ಥನೆಯಲ್ಲಿ ದೇವರೊಂದಿಗೆ ಮಾತಾಡು!
About this Plan

ಅದು ಹೇಗೆ ಪ್ರಾರಂಭವಾಯಿತು? ನಾವು ಎಲ್ಲಿಂದ ಬಂದಿದ್ದೇವೆ? ಜಗತ್ತಿನಲ್ಲಿ ಏಕೆ ತುಂಬಾ ದುಃಖವಿದೆ? ಯಾವುದೇ ಭರವಸೆ ಇದೆಯೇ? ಸಾವಿನ ನಂತರ ಜೀವನವಿದೆಯೇ? ಈ ನೈಜ ಇತಿಹಾಸವನ್ನು ನೀವು ಓದಿದ ಉತ್ತರಗಳನ್ನು ಹುಡುಕಿ.
More