ಯೇಸುವಿನೊಂದಿಗೆ ಮುಖಾಮುಖಿSample

ದೇವಾಲಯದಲ್ಲಿ ಪೂರ್ಣ-ಸಮಯ ದೇವರಿಗೆ ಸಮರ್ಪಿತವಾದ ಮತ್ತು ಹಿರಿಯ ಯಾಜಕನಿಂದ ಮಾರ್ಗದರ್ಶನ ಪಡೆದ ಒಬ್ಬನೇ ಚಿಕ್ಕ ಹುಡುಗ. ದೇವರು ಸಮುವೇಲನೊಂದಿಗೆ ಮೊದಲು ಮಾತನಾಡಿದ ಸನ್ನಿವೇಶ ಅದು. ಅವನು ಯೆಹೋವನ ಪ್ರಬಲ ಪ್ರವಾದಿಯಾಗಿ ಬೆಳೆದನು, ಅವನ ಯಾವುದೇ ಮಾತುಗಳು ನೆಲಕ್ಕೆ ಬೀಳಲಿಲ್ಲ. ಅದರ ಹಿಂದಿರುವ ಅರ್ಥ ಬಹುಶಃ ಅವನು ದೇವರ ಸ್ವರಕ್ಕೆ ಕೂಡಿದ ಕಿವಿಯನ್ನು ಹೊಂದಿದ್ದನು, ಅವನು ಮಾತನಾಡುವ ಎಲ್ಲವನ್ನೂ ದೇವರು ಅವನಿಗೆ ಕೊಟ್ಟನು ಆದ್ದರಿಂದ ಆ ಮಾತುಗಳು ನಿಷ್ಪ್ರಯೋಜಕ ಅಥವಾ ನಿಷ್ಪರಿಣಾಮಕಾರಿಯಾಗಲು ಯಾವುದೇ ಅವಕಾಶವಿರಲಿಲ್ಲ. ಅದು ಅದ್ಭುತವಲ್ಲವೇ? ಸಮುವೇಲನ ಕೆಲಸವು ಸುಲಭವಾಗಿರಲಿಲ್ಲ ಏಕೆಂದರೆ ಅವನು ಹೃದಯದಲ್ಲಿ ದಾರಿ ತಪ್ಪಿದ ಜನರಿಗೆ ಸೇವೆ ಸಲ್ಲಿಸಿದನು. ಅವರು ಅಂತಿಮವಾಗಿ ತಮಗೆ ಅರಸನು ಬೇಕು ಎಂದು ಹೇಳಿದರು. ಅವರು ಏನನ್ನೂ ಹೇಳಲಿಲ್ಲ ಆದರೆ ಸಂಪೂರ್ಣವಾಗಿ ಉದ್ದೇಶಿಸಿದ್ದೇನಂದರೆ ಅವರು ಇನ್ನು ಮುಂದೆ ಸಮುವೇಲನ ಬಾಯಿಯಿಂದ ಸೂಚನೆ ಮತ್ತು ಮಾರ್ಗದರ್ಶನಕ್ಕಾಗಿ ದೇವರ ವಾಕ್ಯವನ್ನು ಬಯಸುವುದಿಲ್ಲ ಎಂಬುದೇ ಆಗಿತ್ತು. ಅವರನ್ನು ಯುದ್ಧದಲ್ಲಿ ಮುನ್ನಡೆಸುವ ಮತ್ತು ಸುತ್ತಮುತ್ತಲಿನ ಎಲ್ಲಾ ರಾಷ್ಟ್ರಗಳಂತೆ ಅವರನ್ನು ಆಳುವ ಯಾರಾದರೂ ಬೇಕಾಗಿದ್ದರು. ದೇವರು ಅವರನ್ನು ಪ್ರತ್ಯೇಕಿಸಲು ಬಯಸಿದಾಗ ಅವರು ಇತರರಂತೆ ಇರಬೇಕೆಂದು ಬಯಸಿದ್ದರು.
ಆ ನಿರಾಕರಣೆಯ ಮೂಲಕ ನಡೆದಾಗಲೂ ದೇವರು ಸಮುವೇಲನಿಗೆ ಭರವಸೆ ನೀಡುತ್ತಾನೆ, ಅವರು ಆತನನ್ನು ತಿರಸ್ಕರಿಸುತ್ತಿದ್ದರು ಹೊರತು ಸಮುವೇಲನನ್ನು ಅಲ್ಲ. ದೇವರು ಸೂಚಿಸಿದಂತೆ ಸಮುವೇಲನು ಮುಂದುವರಿಯುತ್ತಾನೆ ಮತ್ತು ಸೌಲನನ್ನು ಇಸ್ರಾಯೇಲಿನ ಮೊದಲ ಅರಸನನ್ನಾಗಿ ಅಭಿಷೇಕಿಸುತ್ತಾನೆ ಆದರೆ ಮೊದಲು ಅರಸನು ಅವರಿಂದ ಏನನ್ನು ಬಯಸುತ್ತಾನೆ ಎಂಬುದನ್ನು ಕುರಿತು ಶಾಸನಬದ್ಧ ಎಚ್ಚರಿಕೆಯನ್ನು ಕೊಡಲಿಲ್ಲ. ಸಮುವೇಲನು ತನ್ನ ಇಡೀ ಜೀವನದಲ್ಲಿ ತನ್ನ ಕಿವಿಗೊಡುವ ಕೌಶಲಗಳನ್ನು ಹೆಚ್ಚಿಸಿಕೊಂಡಿದ್ದನು ಮತ್ತು ಆದ್ದರಿಂದ ಅವನು ಎಂದಿಗೂ ದೇವರ ಆತ್ಮದೊಂದಿಗೆ ಸಂಪರ್ಕದಿಂದ ಹೊರಗುಳಿಯಲಿಲ್ಲ.
ನಿಮ್ಮನ್ನು ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು:
ನಿಮಗಾಗಿ ಆತನ ಚಿತ್ತದಲ್ಲಿ ಸ್ಪಷ್ಟವಾಗಿಲ್ಲದ ಸಮಯದಲ್ಲಿ ದೇವರಿಂದ ನೀವು ಏನನ್ನು ಕೇಳುತ್ತಿದ್ದೀರಿ?
ಪವಿತ್ರಾತ್ಮನ ಸ್ವರಕ್ಕೆ ನೀವು ಎಷ್ಟು ಹೊಂದಿಕೆಯಾಗಿದ್ದೀರಿ?
ನಿಮ್ಮ ಭಾವನೆಗಳಿಗೆ ಪವಿತ್ರಾತ್ಮನ ಪ್ರವೇಶವನ್ನು ನೀವು ಅನುಮತಿಸಿದ್ದೀರಾ, ಹೀಗೆ ಆತನು ನಿಮಗೆ ಅವುಗಳನ್ನು ಅನುಭವಿಸಲು ಮತ್ತು ಅನಗತ್ಯವಾದದ್ದನ್ನು ಬಿಡುಗಡೆ ಮಾಡಲು ಸಹಾಯ ಮಾಡಬಹುದೇ?
About this Plan

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.
More
Related Plans

After Your Heart

Overcoming Offense

Journey Through Minor Prophets, Part 2

POWER UP: 5 Days of Inspiration for Connecting to God's Power

GRACE Abounds for the Spouse

Battling Addiction

2 Chronicles | Chapter Summaries + Study Questions

Forever Open: A Pilgrimage of the Heart

Journey Through Jeremiah & Lamentations
