YouVersion Logo
Search Icon

ನನಗೆ ಆಜ್ಞಾಪಿಸು - ಶೂನ್ಯ ಸಮ್ಮೇಳನSample

ನನಗೆ ಆಜ್ಞಾಪಿಸು - ಶೂನ್ಯ ಸಮ್ಮೇಳನ

DAY 1 OF 4

ಹೆಜ್ಜೆ ಹಾಕಿ

"ನನಗೆ ಆಜ್ಞಾಪಿಸು" ಎಂದು ಹೇಳಲು ಧೈರ್ಯ

ಪೇತ್ರನ ಮನವಿಯು ಅಸಾಧಾರಣವಾಗಿದೆ ಎಂದು ನೀವು ಎಂದಾದರೂ ಗಮನಿಸಿದ್ದೀರಾ? ಬಿರುಗಾಳಿಯ ನಡುವೆ, ಇತರರು ತಮ್ಮ ದೋಣಿಯ ಸುರಕ್ಷತೆಗೆ ಅಂಟಿಕೊಂಡಿದ್ದಾಗ, ಪೇತ್ರನು ಒಂದು ವ್ಯತ್ಯಾಸವಾದ ಸಂಗತಿಯನ್ನು ಕಂಡನು. ಅವನು ನೈಸರ್ಗಿಕ ನಿಯಮಗಳು ಮತ್ತು ಮಾನವ ತರ್ಕವನ್ನು ಧಿಕ್ಕರಿಸಿ ಯೇಸುವನ್ನು ಎದುರುಗೊಳ್ಳುವ ಅವಕಾಶವನ್ನು ಕಂಡನು.

"ಕರ್ತನೇ, ಅದು ನೀನೇ ಆಗಿದ್ದರೆ, ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರಲು ನನಗೆ ಆಜ್ಞಾಪಿಸು" ಎಂದು ಪೇತ್ರನು ಹೇಳಿದನು.ಈ ಪದಗಳು ನಂಬಿಕೆಯಿಂದ ಹೆಜ್ಜೆ ಹಾಕುವ ಮೂರು ಪ್ರಬಲ ಅಂಶಗಳನ್ನು ಪ್ರಕಟಿಸುತ್ತವೆ:

ಗುರುತಿಸುವುದು ("ಅದು ನೀನೇ ಆಗಿದ್ದರೆ") - ಪೇತ್ರನು ಯೇಸುವಿನ ಉಪಸ್ಥಿತಿಯ ಖಚಿತತೆಯನ್ನು ಕೋರಿದನು.

ಅಧೀನತೆ ("ನನಗೆ ಆಜ್ಞಾಪಿಸು") - ಅವನು ತನ್ನನ್ನೇ ಯೇಸುವಿನ ಅಧಿಕಾರದ ಅಧೀನಕ್ಕೆ ಒಪ್ಪಿಸಿದನು.

ಮಾರ್ಗದರ್ಶನ ("ನಿನ್ನ ಬಳಿಗೆ ಬರಲು") - ಅವನ ನಂಬಿಕೆಯ ಹೆಜ್ಜೆಯು ಸ್ಪಷ್ಟವಾದ ಉದ್ದೇಶ ಮತ್ತು ಗಮ್ಯಸ್ಥಾನವನ್ನು ಹೊಂದಿತ್ತು.

ಇದನ್ನು ಕುರಿತು ಆಲೋಚಿಸಿ: ಪೇತ್ರನು ಯೇಸುವನ್ನು ತನ್ನ ಬಳಿಗೆ ಬರಬೇಕೆಂದು ಹೇಳಲಿಲ್ಲ. ಅವನು ಬೇರೊಂದು ಅದ್ಭುತಕಾರ್ಯವನ್ನು ಕೋರಲಿಲ್ಲ. ಯೇಸುವಿನೊಂದಿಗೆ ಇರುವುದೆಂದರೆ ಅಪಾಯಕ್ಕೆ ಯೋಗ್ಯವಾಗಿದೆ ಎಂಬ ಆಳವಾದ ಸಂಗತಿಯನ್ನು ಅರ್ಥಮಾಡಿಕೊಂಡ ಕಾರಣ ಅವನು ಅಸಾಧ್ಯವಾದ ಪರಿಸ್ಥಿತಿಗೆ ಆಜ್ಞಾಪಿಸಬೇಕೆಂದು ಕೇಳಿಕೊಂಡನು.

ಪ್ರಾರ್ಥನೆಯ ಅಂಶಗಳು:

ನಿಮ್ಮ ಜೀವಿತದ ಯಾವ ಭಾಗದಲ್ಲಿ, ಯೇಸು "ಬಾ" ಎಂದು ಹೇಳುತ್ತಿದ್ದಾನೆ?

ಯಾವ ಸುಖದ ದೋಣಿಯನ್ನು ಬಿಡಬೇಕೆಂದು ನಿಮಗೆ ಹೇಳಲಾಗುತ್ತಿದೆ?

ನೀವು ವಿಧೇಯರಾಗುವುದಕ್ಕೆ ಮೊದಲು ಪರಿಪೂರ್ಣವಾದ ಪರಿಸ್ಥಿತಿಗಳಿಗಾಗಿ ಕಾಯುತ್ತಿದ್ದೀರಾ?

ನೀವು ಹಿಂಜರಿದಿರುವ ಭಾಗಗಳಲ್ಲಿ "ನನಗೆ ಆಜ್ಞಾಪಿಸು" ಎಂದು ಹೇಳಲು ಧೈರ್ಯವನ್ನು ಕೊಡಬೇಕೆಂದು ಕೇಳಿಕೊಳ್ಳಿರಿ.

ವೈಯಕ್ತಿಕ ಅನ್ವಯ:

"ನನಗೆ ಆಜ್ಞಾಪಿಸು" ಎಂಬ ನಿಮ್ಮ ಸ್ವಂತ ಪ್ರಾರ್ಥನೆಯನ್ನು ಬರೆಯಿರಿ. ಇವುಗಳನ್ನು ಕುರಿತು ನಿರ್ದಿಷ್ಟವಾಗಿರ್ರಿ:

ನೀವು ಪ್ರಸ್ತುತ ಇರುವ ಸುಖಕರವಾದ "ದೋಣಿ"

ನೀವು ಅದರ ಮೇಲೆ ನಡೆಯಬೇಕೆಂದು ಯೇಸು ಹೇಳುತ್ತಿರುವ "ನೀರು"

ನೀವು ಜಯಿಸಬೇಕಾದ ಭಯಗಳು

ನೀವು ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆ

ಅವಲೋಕನದ ಪ್ರಶ್ನೆಗಳು:

ಯೇಸುವಿಗೆ ಪೇತ್ರನ ತಕ್ಷಣದ ಪ್ರತಿಕ್ರಿಯೆಯನ್ನು ಕುರಿತು ನಿಮಗೆ ಯಾವ ಆಲೋಚನೆ ಬರುತ್ತದೆ?

ಇತರ ಶಿಷ್ಯರು ದೋಣಿಯಲ್ಲೇ ಉಳಿದುಕೊಂಡದ್ದನ್ನು ಕುರಿತು ನೀವು ಏನು ಆಲೋಚಿಸುತ್ತೀರಿ?

ಪೇತ್ರನ ಕರೆಗೆ ಹೊಲಿಸಿದರೆ ದೇವರ ಕರೆಗೆ ನಿಮ್ಮ ಪ್ರತಿಕ್ರಿಯೆಯು ಹೇಗಿದೆ?

About this Plan

ನನಗೆ ಆಜ್ಞಾಪಿಸು - ಶೂನ್ಯ ಸಮ್ಮೇಳನ

"ನನಗೆ ಆಜ್ಞಾಪಿಸು." ಈ ಎರಡು ಪದಗಳು ಪೇತ್ರನ ಜೀವಿತವನ್ನು ಬಿರುಗಾಳಿಯಿಂದ ಅಲುಗಾಡುತ್ತಿದ್ದ ದೋಣಿಯಿಂದ ಕೆರಳಿದ ನೀರಿನ ಮೇಲೆ ಹೆಜ್ಜೆ ಹಾಕಿದನು. ದೋಣಿಯಿಂದ ಯೇಸುವಿನ ಕಡೆಗೆ ಅವನ ಪ್ರಯಾಣವು ನಂಬಿಕೆ, ಗಮನ ಮತ್ತು ಮಹತ್ವದ ತಿರುವು ಕಾಲಾತೀತ ಸತ್ಯಗಳನ್ನು ಪ್ರಕಟಿಸುತ್ತದೆ. ಈ 4-ದಿನದ ಧ್ಯಾನವು ಮತ್ತಾಯ 14:28-33 ನ್ನು ಅನ್ವೇಷಿಸುತ್ತದೆ, ಯೇಸುವಿನ ಕರೆಯನ್ನು ಗುರುತಿಸಲು, ನಂಬಿಕೆಯಿಂದ ಭಯವನ್ನು ಜಯಿಸಲು ಮತ್ತು ಆತನ ಮೇಲೆ ಅಚಲವಾದ ದೃಷ್ಟಿಯನ್ನು ಕಾಪಾಡಿಕೊಳ್ಳಲು ನಿಮಗೆ ಮಾರ್ಗದರ್ಶನ ಕೊಡುತ್ತದೆ. ನೀವು ನಿಮ್ಮ ದೋಣಿಯ ಅಂಚಿನಲ್ಲಿದ್ದರೂ ಅಥವಾ ನೀರಿನ ಮೇಲೆ ನಡೆಯಲು ಕಲಿಯುತ್ತಿದ್ದರೆ, ಸಾಮಾನ್ಯ ವಿಶ್ವಾಸಿಗಳು "ನನಗೆ ಆಜ್ಞಾಪಿಸು" ಎಂದು ಹೇಳಲು ಧೈರ್ಯಮಾಡಿದಾಗ ಏನಾಗುತ್ತದೆ ಎಂಬುದನ್ನು ಕಂಡುಕೊಳ್ಳಿರಿ

More