YouVersion Logo
Search Icon

ನನಗೆ ಆಜ್ಞಾಪಿಸು - ಶೂನ್ಯ ಸಮ್ಮೇಳನSample

ನನಗೆ ಆಜ್ಞಾಪಿಸು - ಶೂನ್ಯ ಸಮ್ಮೇಳನ

DAY 2 OF 4

ಮೇಲಕ್ಕೆ ನೋಡಿ

ಸ್ಥಿರವಾದ ದೃಷ್ಟಿಯ ಬಲ

ಪೇತ್ರನು ದೋಣಿಯಿಂದ ಹೊರಬಂದ ತಕ್ಷಣವೇ, ನೈಸರ್ಗಿಕ ನಿಯಮಗಳು ಇನ್ನು ಮೇಲೆ ಅನ್ವಯಿಸದ ಕ್ಷೇತ್ರವನ್ನು ಅವನು ಪ್ರವೇಶಿಸಿದನು. ಅವನನ್ನು ನುಂಗಬೇಕಾಗಿದ್ದ ಅದೇ ನೀರು ಅವನ ಪಾದಗಳ ಕೆಳಗೆ ಗಟ್ಟಿ ನೆಲವಾಯಿತು. ಈ ವ್ಯತ್ಯಾಸವನ್ನು ಉಂಟುಮಾಡಿದ ಸಂಗತಿ ಯಾವುದು? ಅವನ ದೃಷ್ಟಿಯು ಯೇಸುವಿನ ಮೇಲೆ ಕೇಂದ್ರೀಕೃತವಾಗಿತ್ತು.

ಈ ದೃಶ್ಯವನ್ನು ಪರಿಗಣಿಸಿ: ಕತ್ತಲೆಯ ರಾತ್ರಿ, ಬಲವಾದ ಗಾಳಿ, ಭಯಾನಕ ಅಲೆಗಳು. ಆದರೂ ಮತ್ತಾಯನ ಸುವಾರ್ತೆಯು ಸರಳವಾಗಿ ಹೀಗೆ ಹೇಳುತ್ತದೆ, "ಅವನು ನೀರಿನ ಮೇಲೆ ನಡೆದು ಯೇಸುವಿನ ಬಳಿಗೆ ಬಂದನು." ಈ ವಿವರಣೆಯ ಸರಳತೆಯು ಆಳವಾದ ಸತ್ಯವನ್ನು ಪ್ರಕಟಿಸುತ್ತದೆ: ನಮ್ಮ ಕಣ್ಣುಗಳು ಯೇಸುವಿನ ಮೇಲೆ ದೃಷ್ಟಿಯಿಟ್ಟಾಗ, ಆತನ ಕಡೆಗಿರುವ ಪ್ರಯಾಣದಲ್ಲಿ ಅಸಾಧ್ಯವೂ ಸಹ ಕೇವಲ ಸರಳವಾಗುತ್ತದೆ.

"ಈ ಕಡೆಗೆ ಬಂದನು" ಎಂಬುದಕ್ಕೆ ಉಪಯೋಗಿಸಲಾದ ಗ್ರೀಕ್ ಪದವು ನಿರಂತರ ಕ್ರಿಯೆಯನ್ನು ಸೂಚಿಸುತ್ತದೆ. ಪೇತ್ರನು ಕೇವಲ ಹೆಜ್ಜೆಗಳನ್ನು ತೆಗೆದುಕೊಳ್ಳುವುದು ಮಾತ್ರವಲ್ಲದೆ, ಆದರೆ ಅವನು ಅಭಿವೃದ್ಧಿಯಾಗುತ್ತಿದ್ದನು. ಪ್ರತಿಯೊಂದು ಹೆಜ್ಜೆಯೂ ಸತ್ಯದ ಮೇಲಿರುವ ನಂಬಿಕೆಯ ಜಯವಾಗಿತ್ತು ಅಂದರೆ ಭೌತಿಕ ಅಸಾಧ್ಯತೆಯ ಮೇಲೆ ಆತ್ಮೀಕ ವಾಸ್ತವಿಕತೆಯ ಜಯವಾಗಿತ್ತು.

ಪ್ರಾರ್ಥನೆಯ ಅಂಶಗಳು:

ನಿಮ್ಮ ಗಮನಕ್ಕೆ ಯಾವ ಗೊಂದಲಗಳು ಸ್ಪರ್ಧಿಸುತ್ತಿವೆ?

ಯೇಸುವನ್ನು ನೋಡುವುದಕ್ಕೆ ಬದಲಾಗಿ ನಿಮ್ಮ ಪರಿಸ್ಥಿತಿಗಳನ್ನು ನೋಡಲು ನೀವು ಎಷ್ಟು ಸಮಯವನ್ನು ಕಳೆಯುತ್ತಿದ್ದೀರಿ?

ದೇವರ ಮೇಲೆ ನಿಮ್ಮ ಗಮನವನ್ನು ಕಾಪಾಡಿಕೊಳ್ಳುವುದಕ್ಕಾಗಿ ಸಹಾಯ ಮಾಡಲು ಆತನನ್ನು ಬೇಡಿಕೊಳ್ಳಿರಿ.

ಯೇಸುವಿನ ಕಡೆಯಿಂದ ನಿಮ್ಮ ದೃಷ್ಟಿಯನ್ನು ಬೇರೆ ಕಡೆಗೆ ಸೆಳೆಯುವ ಸಂಗತಿಯನ್ನು ಗುರುತಿಸಲು ವಿವೇಚನೆಗಾಗಿ ಪ್ರಾರ್ಥಿಸಿ.

ಪ್ರಾಯೋಗಿಕ ಚಟುವಟಿಕೆ:

ಇಂದು "ದೃಷ್ಟಿಯ ದಿನಚರಿ" ಇಟ್ಟುಕೊಳ್ಳಿರಿ:

ನೀವು ಯೇಸುವಿನ ಮೇಲೆ ಕೇಂದ್ರೀಕರಿಸಿದ ಕ್ಷಣಗಳನ್ನು ಗಮನಿಸಿ.

ನಿಮ್ಮನ್ನು ವಿಚಲಿತಗೊಳಿಸಿದ ಸಂಗತಿಯನ್ನು ಬರೆದಿಡಿ.

ನೀವು ಎಲ್ಲಿ ನೋಡುತ್ತಿದ್ದೀರಿ ಎಂಬ ಆಧಾರದ ಮೇಲೆ ನಿಮ್ಮ ದೃಷ್ಟಿಕೋನವು ಹೇಗೆ ಬದಲಾಯಿತು ಎಂಬುದನ್ನು ಬರೆಯಿರಿ.

ಅವಲೋಕನದ ಪ್ರಶ್ನೆಗಳು:

ನೀವು ಯೇಸುವಿನ ಮೇಲೆ ಕೇಂದ್ರೀಕರಿಸಿದಾಗ, ನಿಮ್ಮ ಪರಿಸ್ಥಿತಿಗಳನ್ನು ನೀವು ಮರೆತುಹೋದಂತ ಕೊನೆಯ ಸಮಯ ಯಾವುದಾಗಿತ್ತು?

ಕಷ್ಟದ ಸಮಯದಲ್ಲಿ ಕ್ರಿಸ್ತನ ಮೇಲೆ ನಿಮ್ಮ ಗಮನವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುವ ಸಂಗತಿ ಯಾವುದು?

ನಿಮ್ಮ ದೃಷ್ಟಿಯನ್ನು ಯೇಸುವಿನ ಮೇಲೆ ಇಟ್ಟಾಗ ನಿಮ್ಮ ಪರಿಸ್ಥಿತಿಯು ಹೇಗೆ ಬದಲಾಗುತ್ತದೆ?

About this Plan

ನನಗೆ ಆಜ್ಞಾಪಿಸು - ಶೂನ್ಯ ಸಮ್ಮೇಳನ

"ನನಗೆ ಆಜ್ಞಾಪಿಸು." ಈ ಎರಡು ಪದಗಳು ಪೇತ್ರನ ಜೀವಿತವನ್ನು ಬಿರುಗಾಳಿಯಿಂದ ಅಲುಗಾಡುತ್ತಿದ್ದ ದೋಣಿಯಿಂದ ಕೆರಳಿದ ನೀರಿನ ಮೇಲೆ ಹೆಜ್ಜೆ ಹಾಕಿದನು. ದೋಣಿಯಿಂದ ಯೇಸುವಿನ ಕಡೆಗೆ ಅವನ ಪ್ರಯಾಣವು ನಂಬಿಕೆ, ಗಮನ ಮತ್ತು ಮಹತ್ವದ ತಿರುವು ಕಾಲಾತೀತ ಸತ್ಯಗಳನ್ನು ಪ್ರಕಟಿಸುತ್ತದೆ. ಈ 4-ದಿನದ ಧ್ಯಾನವು ಮತ್ತಾಯ 14:28-33 ನ್ನು ಅನ್ವೇಷಿಸುತ್ತದೆ, ಯೇಸುವಿನ ಕರೆಯನ್ನು ಗುರುತಿಸಲು, ನಂಬಿಕೆಯಿಂದ ಭಯವನ್ನು ಜಯಿಸಲು ಮತ್ತು ಆತನ ಮೇಲೆ ಅಚಲವಾದ ದೃಷ್ಟಿಯನ್ನು ಕಾಪಾಡಿಕೊಳ್ಳಲು ನಿಮಗೆ ಮಾರ್ಗದರ್ಶನ ಕೊಡುತ್ತದೆ. ನೀವು ನಿಮ್ಮ ದೋಣಿಯ ಅಂಚಿನಲ್ಲಿದ್ದರೂ ಅಥವಾ ನೀರಿನ ಮೇಲೆ ನಡೆಯಲು ಕಲಿಯುತ್ತಿದ್ದರೆ, ಸಾಮಾನ್ಯ ವಿಶ್ವಾಸಿಗಳು "ನನಗೆ ಆಜ್ಞಾಪಿಸು" ಎಂದು ಹೇಳಲು ಧೈರ್ಯಮಾಡಿದಾಗ ಏನಾಗುತ್ತದೆ ಎಂಬುದನ್ನು ಕಂಡುಕೊಳ್ಳಿರಿ

More