YouVersion Logo
Search Icon

ಕ್ರಿಸ್ತನನ್ನು ಅನುಸರಿಸಲುSample

ಕ್ರಿಸ್ತನನ್ನು  ಅನುಸರಿಸಲು

DAY 9 OF 12

ನಿಮ್ಮ ಪೂರ್ಣ ಹೃದಯದಿಂದ ಆತನನ್ನು ಹಿಂಬಾಲಿಸಿ

ನಮ್ಮ ಹೃದಯವು ಬಹಳವಾಗಿ ವಿಭಜನೆಯಾಗುತ್ತವೆ. ನಮ್ಮ ಪ್ರೀತಿ ಮತ್ತು ನಿಷ್ಠೆಗಳು ಸ್ವಾಭಾವಿಕವಾಗಿ ಕುಟುಂಬ, ಕೆಲಸ, ಸ್ನೇಹಿತರು, ಹವ್ಯಾಸ ಮತ್ತು ಕೆಲವೊಮ್ಮೆ ಆಹಾರದ ನಡುವೆ ವಿಭಜನೆಯಾಗುತ್ತದೆ. ಇವುಗಳಲ್ಲಿ ಯಾವುದೂ ತಪ್ಪಿಲ್ಲದಿದ್ದರೂ, ಕೆಲವೊಮ್ಮೆ ಈ ಎಲ್ಲಾ ವಿಷಯಗಳನ್ನು ನಮಗೆ ಇವುಗಳನ್ನು ನೀಡಿದವನಿಂದ ನಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ಕದಿಯಬಹುದು. ನಾವು ಯೇಸುವನ್ನು ಹಿಂಬಾಲಿಸುವಾಗ, ನಮಗೆ ನಮ್ಮ ಹೃದಯದ ಸಂಪೂರ್ಣ ಪುನಃಸ್ಥಾಪನೆಯ ಅಗತ್ಯವಿರುವುದು ಮತ್ತು ಇದರಿಂದ ನಾವು ಆತನಿಗೆ ಮೊದಲ ಮತ್ತು ಪ್ರಮುಖ್ಯ ಸ್ಥಳಾವಕಾಶವನ್ನು ನೀಡಬಹುದು. ಹೃದಯವು ಎಲ್ಲಕ್ಕಿಂತ ಹೆಚ್ಚಾಗಿ ಮೋಸದಾಯಕವಾಗಿದೆ ಎಂದು ಪ್ರವಾದಿಯಾದ ಯೆರೆಮಿಯನು ಹೇಳಿರುವನು. ಹೀಗಾಗಿ ನಾವು ಅದನ್ನು ಕಾಪಾಡಿಕೊಳ್ಳಬೇಕು ಮತ್ತು ಅದರ ಮೇಲೆ ನಿಕಟ ನಿಗಾ ಇರಿಸಬೇಕು. ಪ್ರತಿತೊಂದು ಆಸೆ, ಆಕಾಂಕ್ಷೆಯನ್ನು ದೇವರನ್ನು ಮೆಚ್ಚಿಸುವ ಬಯಕೆಯೊಂದಿಗೆ ಬದಲಾಯಿಸಬೇಕಾಗಿದೆ. ಕ್ರಿಸ್ತನಿಗೆ ಸಂಪೂರ್ಣವಾಗಿ ಮೀಸಲಾಗಿರುವ ಹೃದಯದಲ್ಲಿ ತಮ್ಮ ಸ್ಥಾನವನ್ನು ಕಂಡುಕೊಂಡಾಗ ಆಸೆಗಳು ಮತ್ತು ಆಕಾಂಕ್ಷೆಗಳು ಎಂದಿಗೂ ತಪ್ಪಾಗುವುದಿಲ್ಲ. ವಾಗ್ದಾನದ ದೇಶವನ್ನು ಗೂಡಾಚಾರ ಮಾಡಲು ಕಳುಹಿಸಿಕೊಟ್ಟ ಇತರ ಹತ್ತು ಇಸ್ರಾಯೇಲ್ಯರ ಮಧ್ಯೆ ಕಾಲೇಬ್ ಮತ್ತು ಯೆಹೂಶುವ ದೇವರ ಮುಂದೆ ನಿಂತರು. ದೇವರಿಗೆ ಅವರ ನಿರಂತರ ಮತ್ತು ಪೂರ್ಣ ಹೃದಯದ ಭಕ್ತಿಯ ಕಾರಣದಿಂದ ಅವರು ಎದ್ದು ನಿಂತರು. ಅವರ ಹೃದಯವು ದೇವರಿಗೆ ವಿಧೇಯರಾಗಲು ಸಿದ್ಧವಾದದರಿಂದ ದಾರಿಯುದ್ದಕ್ಕೂ ಅವರು ಸೈತಾನನನ್ನು ಎದುರಿಸಬೇಕಾದರೂ ಸಹ ದೇವರು ನಡೆಸುವ ಸ್ಥಳವನ್ನು ಹಿಂಬಾಲಿಸುವುದರಲ್ಲಿ ನಿರ್ಭಯರಾಗಿದ್ದರು.

ನಮ್ಮ ಹೃದಯವು ಯೇಸುವನ್ನು ಅನುಸರಿಸಲು ಸಂಪೂರ್ಣವಾಗಿ ಬದ್ದವಾಗಿದ್ದರೆ, ಅದು ದೇವರಿಗಾಗಿ ಮತ್ತು ಆತನ ರಾಜ್ಯಕ್ಕಾಗಿ ನಾವು ಹೊಂದಿರುವ ಉತ್ಸಾಹ ಮತ್ತು ಬೆಂಕಿಯ ಮೂಲಕ ಪ್ರಕಟವಾಗುತ್ತದೆ. ದೇವರ ವಿಷಯ ಹಾಗೂ ಈ ಲೋಕದ ವಿಷಯದ ನಡುವಿನ ನಮ್ಮ ವಿಭಜಿತ ಪ್ರೀತಿಯಲ್ಲಿ ಅರೆ ಮನಸ್ಸಿನ ಹೃದಯವು ಕಾಣಿಸಿಕೊಳ್ಳುತ್ತದೆ. ನಾವು ವಾಸಿಸುವ ಉದ್ರಿಕ್ತ ಕಾಲದಲ್ಲಿ, ನಮ್ಮ ಸುತ್ತುಮುತ್ತ ನಡೆಯುವ ಸಂಗತಿಗಳಿಗೆ ದೃಢವಾದ ಹೃದಯವನ್ನು ಬೆಳೆಸಿಕೊಳ್ಳುವುದು ಮತ್ತೊಂದು ಸಮಸ್ಯೆವಾಗಿದೆ. ಈ ರೀತಿಯಾದ ಹೃದಯವುಳ್ಳ ಜನರು ದೇವರ ಸ್ಪರ್ಶಕ್ಕೆ ಸಂವೇದನಾಶೀಲರಾಗಿರುವುದಿಲ್ಲ ಮತ್ತು ಅಂತಿಮವಾಗಿ ತಮ್ಮ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದ ಕಾರಣ ಕ್ರಿಸ್ತನನ್ನು ಹಿಂಬಾಲಿಸುವುದನ್ನು ಬಿಟ್ಟುಬಿಡುವರು. ಮತ್ತೊಂದೆಡೆ ಮೃದು ಹೃದಯವುಳ್ಳವರು ದೇವರ ಸ್ಪರ್ಶಕ್ಕೆ ಬಗ್ಗುವವರಾಗಿದ್ದಾರೆ ಮತ್ತು ತಮ್ಮ ಸುತ್ತುಮುತ್ತಲಿನ ಪ್ರದೇಶದಲ್ಲಿ ನಡೆಯುವ ಕೆಲಸಗಳನ್ನು ಸ್ವೀಕರಿಸುತ್ತಾರೆ. ನಮ್ಮ ಮೊದಲ ಪ್ರೀತಿಯಾದ ಯೇಸುವಿಗೆ ನಮ್ಮ ಹೃದಯದಲ್ಲಿ ಸ್ಥಳಾವಕಾಶ ಕಲ್ಪಿಸುವುದು ನಮ್ಮ ಅತ್ಯುನ್ನತ ಆದ್ಯತೆಗಳಲ್ಲಿ ಒಂದಾಗಿರಬೇಕು.

ಘೋಷಣೆ:ನಾನು ಯಾವಾಗಲೂ ನನ್ನ ಹೃದಯವನ್ನು ಕಾಪಾಡಿಕೊಳ್ಳುತ್ತೇನೆ

About this Plan

ಕ್ರಿಸ್ತನನ್ನು  ಅನುಸರಿಸಲು

ಪ್ರತಿದಿನ ಯೇಸುವನ್ನು ಹೇಗೆ ಅನುಸರಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಸತ್ಯವೇದದ ಈ ಯೋಜನೆಯು ನಿಮಗೆ ಸೂಕ್ತವಾಗಿರುತ್ತದೆ. ಸಹಜವಾಗಿ ಯೇಸುವಗೆ ಒಪ್ಪಿಗೆ ಎಂದು ಹೇಳುವುದೇಈ ಪಠ್ಯಕ್ರಮದ ಮೊದಲನೆಯ ಹೆಜ್ಜೆಯಾಗಿರುತ್ತದೆ. ಜೀವಮಾನದಾದ್ಯಂತ ಪದೇ ಪದೇ ಒಪ್ಪಿಗೆ ಒಪ್ಪಿಗೆ ಎಂದು ಹೇಳಿ ಆತನೊಂದಿಗೆ ಹೆಜ್ಜೆ ಹಾಕುವ ಪ್ರಯಾಣವು ಇದನ್ನು ಹಿಂಬಾಲಿಸುವ ಹೆಜ್ಜೆಗಳಾಗಿವೆ.

More