YouVersion Logo
Search Icon

ಕ್ರಿಸ್ತನನ್ನು ಅನುಸರಿಸಲುSample

ಕ್ರಿಸ್ತನನ್ನು  ಅನುಸರಿಸಲು

DAY 10 OF 12

ನಿಮ್ಮ ಪೂರ್ಣ ಮನಸ್ಸಿನಿಂದ ಆತನನ್ನು ಹಿಂಬಾಲಿಸಿ

ಇಂದಿನ ಕೆಲವು ಪ್ರಮುಖ ಕಾಯಿಲೆಗಳು ನಮ್ಮ ಮನಸ್ಸಿಗೆ ಸಂಬಂಧಿಸಿವೆ. ಮಾನಸಿಕ ಆರೋಗ್ಯವು ಇಂದು ದೊಡ್ಡ ದಾಳಿಯಲ್ಲಿದೆ. ಹೀಗಾಗಿ ನಮ್ಮ ಆಲೋಚನೆಗಳನ್ನು ಮತ್ತು ವಿಚಾರಗಳ ಮಾದರಿಯ ಮರುಹೊಂದಿಸಲು ನಮ್ಮ ಮನಸ್ಸನ್ನು ನಿಯತಕಾಲಿಕವಾಗಿ ನವೀಕರಿಸಬೇಕಾಗಿದೆ ಎಂಬುವುದು ಸ್ಪಷ್ಟವಾಗಿದೆ. ಕ್ರಿಸ್ತನನ್ನು ಅನುಸರಿಸಲು ಸಿದ್ಧವಾಗಿರುವ ಮನಸ್ಸು ಒಂದಾಗಿರಬೇಕು, ಅದು ಆತನಿಂದ ಮಾತ್ರ ಬದಲಾಗಲು ತೆರೆದಿರುತ್ತದೆ. ಕೆಲವು ಜನರು, ಸಂಸ್ಕೃತಿ ಮತ್ತು ಸನ್ನಿವೇಶಗಳ ಅಭಿಪ್ರಾಯ ಮತ್ತು ಆಲೋಚನೆಗಳನ್ನು ಹೊಂದಿರುವ ಮೈಂಡ್ ಬ್ಲಾಕ್ ಗಳ ಬಗ್ಗೆ ಕೇಳಿದ್ದೇವೆ. ಯೇಸುವನ್ನು ಹಿಂಬಾಲಿಸುವವರಿಗೆ ಪ್ರೀತಿ ಮತ್ತು ಏಕತೆಯ ಜೀವನವನ್ನು ನೆಡೆಸಲು ಈ ಮೈಂಡ್ ಬ್ಲಾಕ್ ಬಹಳ ವಿನಾಶಕಾರಿಯಾಗಬಹುದು. ಆದುದರಿಂದ, ದೈವಿಕ ದೃಷ್ಟಿಕೋನದಿಂದ ಬದುಕಲು ಜನರು ಮತ್ತು ಸನ್ನಿವೇಶಗಳ ಬಗ್ಗೆ ನಮ್ಮ ಆಲೋಚನೆಯನ್ನು ನವೀಕರಿಸಲು ದೇವರಿಗೆ ಅವಕಾಶ ನೀಡುವುದು ಅಗತ್ಯವಾಗಿದೆ. ಕ್ರಿಸ್ತನನ್ನು ಹಿಂಬಾಲಿಸಲು ನಾವು ಕ್ರಿಸ್ತನ ಮನಸ್ಸನ್ನು ಹೊಂದುವ ಅಗತ್ಯವಿರುತ್ತದೆ. ಅದು ಪವಿತ್ರಾತ್ಮನಿಂದ ಕ್ರಮೇಣವಾಗಿ ರೂಪಾಂತರಗೊಳ್ಳುತ್ತದೆ. ಅನೇಕ ಬಾರಿ ನಮ್ಮ ಮನಸ್ಸು ಭಾವನೆ ಮತ್ತು ಹೃದಯದ ಭಾವೋದ್ರೇಕಗಳನ್ನು ನಡೆಸುತ್ತದೆ. ಆದುದರಿಂದ ಹಳೆಯ ಅನಗತ್ಯ ಮತ್ತು ಹಾನಿಕಾರಕ ಚಿಂತನಶೀಲ ಮಾದರಿಗಳನ್ನು ಬದಲಿಸಲು ಮನಸ್ಸಿನ ಕೂಲಂಕಷ ಪರೀಕ್ಷೆಯು ಅವಶ್ಯಕವಾಗಿದೆ. ಯೇಸುವಿನ ಹಿಂಬಾಲಿಕರಾದ ನಾವುಎದುರಿಸುವ ಇನ್ನೊಂದು ಸಮಸ್ಯೆಯೆಂದರೆ ನಮ್ಮ ಮನಸ್ಸು ಸಂವೇದನಾಶೀಲ ಮತ್ತು ಸುರಕ್ಷಿತವಾದ ತರ್ಕವನ್ನು ಒಳಗಾಗುತ್ತದೆ ಆದರೆ ಅದು ದೇವರನ್ನು ಮಿತಿಗೊಳಿಸುತ್ತದೆ. ದೇವರು ಮಾತ್ರ ನಮ್ಮ ಹಣಕಾಸಿನ ಕೊರತೆ, ಸಂಪೂನ್ಮೂಲಗಳು, ಪರಿಣತಿ, ಆರೋಗ್ಯ ಇತ್ಯಾದಿಯನ್ನು ಸರಿ ಮಾಡುತ್ತಾನೆಂಬುವುದನ್ನು ನಂಬುವ ಆಯ್ಕೆಯ ಮೇಲೆ ನಮ್ಮ ಗಮನವಾಗುತ್ತದೆ. ನಮ್ಮ ಮನಸ್ಸನ್ನು ನವೀಕರಿಸಲು ನಾವು ಭಯಕ್ಕೆ ದಾರಿ ಮಾಡಿಕೊಡದೇ ನಂಬಿಕೆಗೆ ಮಾತ್ರ ದಾರಿ ಕೊಡಬೇಕು!

ಪವಿತ್ರಾತ್ಮನೇ ನವೀಕರಣ ಮತ್ತು ಪುನಃಸ್ಥಾಪನೆಯ ಕಾರ್ಯಕರ್ತನಾಗಿರುತ್ತಾನೆ. ನಮ್ಮ ಆಲೋಚನೆಯ ಜೀವನವನ್ನು ರೂಪಿಸಲು ಜೀವನವು ನಮ್ಮ ಮೇಲೆ ಎಸೆಯುವ ಪ್ರತಿಯೊಂದು ಸನ್ನಿವೇಶದ ಮೂಲಕ ಆತನು ನಮ್ಮ ಜೀವನದಲ್ಲಿ ಕ್ರೀಯೆ ಮಾಡುತ್ತಾನೆ. ನೀವು ಯೇಸುವಿನಂತೆ ಆಲೋಚಿಸಲು ಪ್ರಾರಂಭಿಸಲು ಆತನನ್ನು ನಿಮ್ಮ ಮನಸ್ಸಿನಲ್ಲಿ ಆಮಂತ್ರಿಸುವೀರಾ?

ಘೋಷಣೆ:ನಮ್ಮ ಮನಸ್ಸು ಕ್ರಿಸ್ತನಿಂದ ನವೀಕರಿಸಲ್ಪಟ್ಟಿದೆ ಮತ್ತು ಪುನಃಸ್ಥಾಪಿಸಲ್ಪಟ್ಟಿದೆ.

About this Plan

ಕ್ರಿಸ್ತನನ್ನು  ಅನುಸರಿಸಲು

ಪ್ರತಿದಿನ ಯೇಸುವನ್ನು ಹೇಗೆ ಅನುಸರಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಸತ್ಯವೇದದ ಈ ಯೋಜನೆಯು ನಿಮಗೆ ಸೂಕ್ತವಾಗಿರುತ್ತದೆ. ಸಹಜವಾಗಿ ಯೇಸುವಗೆ ಒಪ್ಪಿಗೆ ಎಂದು ಹೇಳುವುದೇಈ ಪಠ್ಯಕ್ರಮದ ಮೊದಲನೆಯ ಹೆಜ್ಜೆಯಾಗಿರುತ್ತದೆ. ಜೀವಮಾನದಾದ್ಯಂತ ಪದೇ ಪದೇ ಒಪ್ಪಿಗೆ ಒಪ್ಪಿಗೆ ಎಂದು ಹೇಳಿ ಆತನೊಂದಿಗೆ ಹೆಜ್ಜೆ ಹಾಕುವ ಪ್ರಯಾಣವು ಇದನ್ನು ಹಿಂಬಾಲಿಸುವ ಹೆಜ್ಜೆಗಳಾಗಿವೆ.

More