ಕ್ರಿಸ್ತನನ್ನು ಅನುಸರಿಸಲುSample

ನಾವು ಯಾರನ್ನು ಹಿಂಬಾಲಿಸುತ್ತೇವೋ ಆತನು ನಮ್ಮ ಮಾರ್ಗವನ್ನು ನಿರ್ಧರಿಸುವನು
ನಾವು ಯಾರನ್ನು ಹಿಂಬಾಲಿಸುತ್ತೇವೆ ಎನ್ನುವುದು ಹಿಂಬಾಲಿಸುವುದರ ಪ್ರಮುಖ ವಿಷಯವಾಗಿದೆ. ನಾವು ಆತನನ್ನು ಹಿಂಬಾಲಿಸುವುದರಲ್ಲಿ ಮಹತ್ಕಾರ್ಯ ಇರುವುದಿಲ್ಲ ಹೊರತಾಗಿ ಆತನು ಯಾರೆಂಬುವುದರಲ್ಲಿದೆ. ನಾವು ಯೇಸುವನ್ನು, ದೇವಕುಮಾರನನ್ನು ಮತ್ತು ಶರೀರದಲ್ಲಿನ ದೇವರನ್ನು ಹಿಂಬಾಲಿಸುತ್ತೇವೆ. ಆತನು ತನ್ನ ಮೊದಲ ಶಿಷ್ಯರನ್ನು ಆರಿಸಿಕೊಂಡಾಗ, ತನ್ನನ್ನು ರೊಟ್ಟಿಗಳನ್ನು ಹೆಚ್ಚಿಸುವವನು, ಬಿರುಗಾಳಿಯನ್ನು ನಿಲ್ಲಿಸುವವನು, ನೀರನ್ನು ತುಳಿಯುವವನು, ವಿಮೋಚಕನು, ವೈದ್ಯನು ಮತ್ತು ಶಿಕ್ಷಕನಾಗಿ ತೋರಿಕೊಂಡನು. ಜನರು ಇನ್ನು ತಿಳಿಯದಿದ್ದರೂ ಏಕೆ ಅವರಿಗೆ ಆತನ ಅಗತ್ಯ ತೀವೃವಾಗಿದೆ ಎಂದು ಅವರು ಅರ್ಥಮಾಡಿಕೊಳ್ಳಲು ಯೇಸು ತನ್ನನ್ನು ಇನ್ನು ಅನೇಕ ಹೆಸರುಗಳಲ್ಲಿ ಕರೆದುಕೊಂಡನು. ಆತನು ಧರ್ಮಶಾಸ್ತ್ರವನ್ನು ನೆರವೇರಿಸಿದವನು, ಪರಲೋಕದ ರೊಟ್ಟಿ, ಜೀವಜಲ, ಬಾಗಿಲು, ಒಳ್ಳೆಯ ಕುರುಬ, ಲೋಕದ ಬೆಳಕು, ಮಾರ್ಗ, ಸತ್ಯ ಮತ್ತು ಜೀವ ಎಂದನು. ಇಂದು ನಾವು ಅದೇ ದೇವರನ್ನು ಹಿಂಬಾಲಿಸುತ್ತೇವೆ. ಆದರೆ ಆತನು ಏನಾಗಿದ್ದನು ಎಂದು ಶಿಷ್ಯರು ತಿಳಿದುಕೊಳ್ಳುವುದಕ್ಕಿಂತ ಹೆಚ್ಚಾಗಿ ನಾವು ತಿಳಿದುಕೊಂಡಿದ್ದೇವೆ. ಆತನು ಬರಲಿರುವ ರಾಜನು ಮತ್ತು ಇಡೀ ಲೋಕದ ನ್ಯಾಯಾಧಿಪತಿಯಾಗಿದ್ದಾನೆ. ಆತನು ಸಿಂಹ ಮತ್ತು ಕುರಿಮರಿಯಾಗಿದ್ದಾನೆ.
ಆತನು ಇಡೀ ಜಗತ್ತಿನ ರಕ್ಷಕ ಮತ್ತು ವಿಮೋಚಕನಾಗಿದ್ದಾನೆ. ಆತನು ಪುನರುತ್ಥಾನ ಹೊಂದಿದ ಮೊದಲನೆಯ ವ್ಯಕ್ತಿಯಾಗಿದ್ದಾನೆ ಮತ್ತು ಪಾಪ ಹಾಗೂ ಮರಣದ ಮೇಲೆ ಜಯಶಾಲಿಯಾಗಿದ್ದಾನೆ. ಆತನು ನಿತ್ಯನಾದ ತಂದೆ ಹಾಗೂ ಸತ್ಯದ ಆತ್ಮನಾಗಿದ್ದಾನೆ. ಆತನು ನಮ್ಮ ನಿರಂತರ ಒಡನಾಡಿಯಾಗಿದ್ದು, ನಮಗೆ ಸಲಹೆ, ಸಾಂತ್ವಾನವನ್ನು ತರುತ್ತಾ ನಮ್ಮೊಳಗೆ ವಾಸಿಸುವನು. ನಮ್ಮಲ್ಲಿ ಪ್ರತಿಯೊಬ್ಬರೂ ನಾವು ಸಂಬಂಧಿಸಿರುವ ಮತ್ತು ಹೆಚ್ಚು ಆರಾಮದಾಯಕವಾಗಿರುವ ದೇವರ ಪಾತ್ರಕ್ಕೆ ಒಲವು ತೋರುತ್ತೇವೆ. ಆದರೆ ಕ್ರಿಸ್ತನನ್ನು ಅನುಸರಿಸುವ ಈ ಪ್ರಯಾಣವು ರೋಮಾಂಚನಕಾರಿಯಾಗಿದೆ ಏಕೆಂದರೆ ನಾವು ಆತನ ಎಲ್ಲಾ ಅದ್ಭುತವಾದ ವಿಶಾಲತೆಯಲ್ಲಿ ದೇವರನ್ನು ಅನುಭವಿಸುತ್ತೇವೆ!
ಆತನು ಪವಿತ್ರತೆಯಲ್ಲಿ ಅದ್ಭುತನು.
ಆತನು ಆನಂದವಾಗಿ ಅನಿರೀಕ್ಷಿತನು.
ಆತನು ಅಧೀಕ ಶಕ್ತಿಶಾಲಿ.
ಆತನು ಅನಂತ ಸೃಜನಶೀಲ.
ಆತನು ತನ್ನ ರಕ್ಷಣ ತಂತ್ರಗಳಲ್ಲಿ ಮತ್ತು ಪುನಶ್ಚೈತನ್ಯಕಾರಿ ಕ್ರಮಗಳಲ್ಲಿ ಹುಚ್ಚುಚ್ಚಾಗಿ ಅವಿಷ್ಕಾರವನ್ನು ಹೊಂದಿದ್ದಾನೆ.
ನಮ್ಮ ಸಣ್ಣ ಮಿದುಳುಗಳು ಮತ್ತು ಸೀಮಿತ ಕಲ್ಪನೆಗಳಿಂದ ಆತನನ್ನು ನಿರ್ಬಂಧಿಸಲು, ನಿಯಂತ್ರಿಸಲು ಅಥವಾ ಸೀಮಿತಗೊಳಿಸಲು ಸಾಧ್ಯವಿಲ್ಲ.
ತಾನು ಸೃಷ್ಟಿಸಿದ ಲೋಕವನ್ನು ಆತನು ಅನಂತವಾಗಿ ಪ್ರೀತಿಸುವನು.
ತನ್ನಿಂದ ದೂರ ಹೋದವರ ಅನ್ವೇಷಣೆಯನ್ನು ಬಿಡುವುದಿಲ್ಲ.
ಯೇಸು ನಮಗೆ ನೀಡಿದ ದೊಡ್ಡಆಜ್ಞೆಯು ಮೂಲತಃ ಧರ್ಮೋಪದೇಶಕಾಂಡದಿಂದ ಬಂದಿದೆ. ಅದು ಹೀಗೆ ಹೇಳುತ್ತದೆ, “ಓ ಇಸ್ರಾಯೇಲ್, ನಿನ್ನ ದೇವರಾದ ಕರ್ತನು ಒಬ್ಬನೇ.” ನಮ್ಮ ಸೀಮಿತ ಅನುಭವದ ಆಧಾರದ ಮೇಲೆ ದೇವರನ್ನು ಕೇವಲ ನಮ್ಮ ವೈದ್ಯ ಅಥವಾ ಒದಗಿಸುವವನು ಎಂದು ವಿಭಾಗಿಸುವುದು ಬಹಳ ಸುಲಭ ಆದರೆ ಆತನು ನಮ್ಮ ಗ್ರಹಿಕೆಯನ್ನು ಮೀರಿದವನಾಗಿದ್ದಾನೆ. ಈತನು ದೊಡ್ಡ, ಬಹುಮುಖಿ, ಅಸಂಖ್ಯವಾದ ಅದ್ಭುತವನ್ನು ಮಾಡಿದ ಏಕೈಕ ದೇವರನಾಗಿದ್ದಾನೆ.
ಯೇಸುವನ್ನು ಹಿಂಬಾಲಿಸುವಾಗ, ನಿಮ್ಮ ಜೀವನದ ಪ್ರತಿ ಋತುವಿನಲ್ಲಿ ಆತನ ಎಲ್ಲಾ ಅನುಭವವನ್ನು ಹೊಂದುವಿರಿ. ಒಂದು ಋತುವಿನಲ್ಲಿ, ನೀವು ಆತನನ್ನು ಗುಣಪಡಿಸುವವನಾಗಿ ತೋರಿಸಲು ನಿರೀಕ್ಷಿಸಬಹುದು ಆದರೆ ಆತನು ಪುನಃಸ್ಥಾಪಕನಾಗಿ ಕಾಣಿಸಿಕೊಳ್ಳುವನು. ನಿಮಗೆ ಪೂರೈಸುವವನ ಅಗತ್ಯವಿರಬಹುದು ಆತದೆ ಪ್ರತಿ ಸನ್ನಿವೇಶವನ್ನು ಪುನಃ ಪಡೆದುಕೊಳ್ಳುವ ಆತನ ಸಾಮರ್ಥ್ಯವನ್ನು ನೀವು ಕೊಂಡುಕೊಳ್ಳುವಿರಿ. ಕೆಲವೊಮ್ಮೆ ನಾವು ನಿರೀಕ್ಷಿಸಿಕೊಂಡಂತೆ ದೇವರು ಕಾಣಿಸಿಕೊಳ್ಳದಿದ್ದಾಗ ನಮ್ಮ ಪ್ರಯಾಣದಲ್ಲಿ ನಿರಾಶೆಯನ್ನು ಅನುಭವಿಸುತ್ತೇವೆ. ಪ್ರಸ್ತುತ ನಿಮ್ಮ ಜೀವನದಲ್ಲಿ ಆತನು ಹೇಗೆ ಪರಿಚಯಿಸುತ್ತಿದ್ದಾನೆ ಎಂಬುವುದನ್ನು ತೋರಿಸಲು ನಿಮ್ಮ ಆಧ್ಯಾತ್ಮಿಕ ಕಣ್ಣುಗಳನ್ನು ತೆರೆಯಲು ನೀವು ದೇವರನ್ನು ಕೇಳುವ ಸಮಯ ಇದಾಗಿದೇ. ನಿಮ್ಮ ದೇವರಾದ ಯೆಹೋವನು ನಿಮ್ಮ ಸಂಗಡ ಇರುವನು ಮತ್ತು ನಿಮ್ಮ ಕೈಬಿಡುವುದಿಲ್ಲ ಎಂಬ ತನ್ನ ವಾಗ್ದಾನವನ್ನು ಉಳಿಸುಕೊಳ್ಳುವನು.
ಘೋಷಣೆ: ನನ್ನ ಜೀವಿತದಲ್ಲಿ ದೇವರು ಕ್ರಿಯೆ ಮಾಡುತ್ತಿರುವನು ಎಂದು ನನಗೆ ತಿಳಿದಿದೆ.
About this Plan

ಪ್ರತಿದಿನ ಯೇಸುವನ್ನು ಹೇಗೆ ಅನುಸರಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಸತ್ಯವೇದದ ಈ ಯೋಜನೆಯು ನಿಮಗೆ ಸೂಕ್ತವಾಗಿರುತ್ತದೆ. ಸಹಜವಾಗಿ ಯೇಸುವಗೆ ಒಪ್ಪಿಗೆ ಎಂದು ಹೇಳುವುದೇಈ ಪಠ್ಯಕ್ರಮದ ಮೊದಲನೆಯ ಹೆಜ್ಜೆಯಾಗಿರುತ್ತದೆ. ಜೀವಮಾನದಾದ್ಯಂತ ಪದೇ ಪದೇ ಒಪ್ಪಿಗೆ ಒಪ್ಪಿಗೆ ಎಂದು ಹೇಳಿ ಆತನೊಂದಿಗೆ ಹೆಜ್ಜೆ ಹಾಕುವ ಪ್ರಯಾಣವು ಇದನ್ನು ಹಿಂಬಾಲಿಸುವ ಹೆಜ್ಜೆಗಳಾಗಿವೆ.
More
Related Plans

OVERCOME Lust WITH TRUST

Everyone Should Know - Thanksgiving Special

What the Bible Says About Advent - 29 Days of Advent Meditations

Your Prayer Has Been Heard: How God Meets Us in Seasons of Weariness and Waiting

When Heaven Touched Earth - a 7 Day Journey to Christmas

The Mandate to Multiply.

Hope in Creator’s Promises

Lessons From Some Hidden Heroes in the Bible

Adversity
