ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳುSample

ಸಮಾಧಾನದ ವಿಷಯವಾದ ಸುವಾರ್ತೆ
ಸತ್ಯವೇದ ಕಥೆ – ಫಿಲಿಪ್ಫನು ಮತ್ತು ಐಥಿಯೊಪ್ಯದವನು "ಅಪೊ 8:26-40"
ಈಗ ನಾವು ನಮ್ಮ ಕೆರಗಳನ್ನು ಮೆಟ್ಟಿಕೊಳ್ಳುವ ಸಮಯವಾಗಿದೆ, ಇದರಿಂದ ಸಿದ್ಧರಾಗಿ ಹೊರಡಲು ಸಾಧ್ಯವಾಗುತ್ತದೆ! ಇದರ ಅರ್ಥ ನಾವು ಸುವಾರ್ತೆ ಸಾರಲು ಸಿದ್ಧರಾಗಿದ್ದೇವೆ, ಅಥವಾ ಯಾವುದೇ ಕ್ಷಣದಲ್ಲಾದರೂ ವಿಧೇಯರಾಗಲು ಸಿದ್ಧರಾಗಿದ್ದೇವೆ ಅಥವಾ ಒಳ್ಳೆಯ ಕಾರ್ಯಗಳನ್ನು ಮಾಡುವ ಸಲುವಾಗಿ ಹೋಗಲು ಸಿದ್ಧರಾಗಿದ್ದೇವೆ.
ನಾವು ಪಾದಗಳಿಗೆ ಏನು ಹಾಕಿಕೊಳ್ಳುತ್ತೇವೆ ಎಂಬದು ನಮ್ಮ ಸ್ಥಿರತೆ ಹಾಗೂ ಚಲನಶೀಲತೆಯನ್ನು ದೃಢಪಡಿಸುತ್ತದೆ. ನಾವು ಯಾವ ರೀತಿಯ ಪಾದರಕ್ಷೆಗಳನ್ನು ಹಾಕಿಕೊಳ್ಳುತ್ತೇವೆ ಎಂಬದು ಅನಾಯಾಸವಾಗಿ ಎಷ್ಟು ದೂರ ನಡೆಯಬಹುದು ಅಥವ ಓಡಬಹುದು ಎಂಬದರ ಮೇಲೆ ಪರಿಣಾಮ ಬೀರುತ್ತದೆ. ತಪ್ಪಾದ ಪಾದರಕ್ಷೆಗಳನ್ನು ಆಯ್ಕೆಮಾಡಿಕೊಳ್ಳುವದರಿಂದ ಅವು ನಮ್ಮನ್ನು ವಿಕಲರನ್ನಾಗಿಸುತ್ತವೆ, ನಿಧಾನರನ್ನಾಗಿಸುತ್ತವೆ ಮತ್ತು ನಾವು ಹೋರಾಟದಿಂದ ಹಿಂದೆ ಸರಿಯುವಂತೆ ಮಾಡುತ್ತದೆ. ಬರೀಕಾಲುಗಳಲ್ಲಿರುವ ಸೈನಿಕನು ನಿಜವಾದ ತೊಂದರೆಗಳಿಗೆ ಒಳಗಾಗುತ್ತಾನೆ. ನಾವು ರಣರಂಗದಲ್ಲಿರುವಾಗ ಎಲ್ಲಿ ಹೆಜ್ಜೆಯನ್ನಿಡುತ್ತೇವೆ ಎಂಬದರ ಬಗ್ಗೆ ಕಡೆಯದಾಗಿ ಚಿಂತಿಸುವವರಾಗಿರಬೇಕು. ನಾವು ನಮ್ಮ ಪೂರ್ಣ ಗಮನವನ್ನು ಯುದ್ಧದ ಕಡೆಗೆ ಹರಿಸುವಾಗ ಯಾವುದೇ ಭಯವಿಲ್ಲದೆ ಸ್ವತಂತ್ರರಾಗಿ ಹೆಜ್ಜೆಯನ್ನಿಡಲು ಪಾದರಕ್ಷೆಗಳು ನಮಗೆ ಸಹಾಯ ಮಾಡುತ್ತವೆ. ದೇವರ ರಾಜ್ಯದ ಸುವಾರ್ತೆಯನ್ನು ಪ್ರಕಟಿಸುವದಕ್ಕಾಗಿ ಯೇಸು ಕ್ರಿಸ್ತನ ದೇಹವು ಕಳುಹಿಸಲ್ಪಟ್ಟಿದೆ, ಅದುವೇ ಇಡೀ ಲೋಕಕ್ಕೆ ಆತನ ಸಮಧಾನವನ್ನು ಪ್ರಚುರಪಡಿಸುತ್ತದೆ. ನಾವು ನಮ್ಮ ಪಾದರಕ್ಷೆಗಳನ್ನು ಹಾಕಿಕೊಂಡಿರುವಾಗ, ಮುಂದೆ ಸಾಗಲು ಮತ್ತು ಇತರರಿಗೆ ಸುವಾರ್ತೆಯನ್ನು ಸಾರಲು ಸಿದ್ಧರಾಗಿರುತ್ತೇವೆ.
ಅಪೊಸ್ತಲರ ಕೃತ್ಯಗಳಲ್ಲಿರುವ ಫಿಲಿಪ್ಫನ ಕಥೆ ಸುವಾರ್ತೆ ಸಾರಲು ಸಿದ್ಧರಾಗಿರಬೇಕು ಎಂಬದನ್ನು ತಿಳಿಸುತ್ತದೆ. ಎಲ್ಲಿಂದಲೋ ದೇವದೂತನು ಅವನಿಗೆ ಪಟ್ಟಣದ ಯಾವ ದಾರಿಯಲ್ಲಿ ಹೋಗಬೇಕು ಎಂಬ ನಿರ್ದಿಷ್ಟವಾದ ಸೂಚನೆಗಳನ್ನು ಕೊಟ್ಟು ಎದ್ದು ಹೊರಡು ಎಂದು ಹೇಳಿದನು. ಅವನು ಅಲ್ಲಿಗೆ ತಲುಪಿದಾಗ, ಒಂದು ವಾಹನದ ಹಿಂದೆ ಓಡು ಎಂಬದಾಗಿ ಹೇಳಿದನು. ಹಾಗೆಯೇ ಅವನು ಓಡುತ್ತಾ ವಾಹನದಳಗೆ ಕುಳಿತುಕೊಂಡಿರವವನಿಗೆ ನೀನು ಓದತ್ತಿರುವದು ನಿನಗೆ ತಿಳಿಯುತ್ತದೋ ಎಂದು ಕೇಳಿದನು, ಓದುತ್ತಿದ್ದವನು ಅವನನ್ನು ತನ್ನ ವಾಹನ ಹತ್ತುವಂತೆ ಹೇಳಿದನು, ಕೂಡಲೇ ಫಿಲಿಪ್ಫನು ಅವನ ಸಂಗಡ ಕುಳಿತುಕೊಂಡು ಅವನಿಗೆ ಸುವಾರ್ತೆ ಹೇಳಿದನು. ಆ ಐಥಿಯೊಪ್ಯದವನು ಯೇಸು ಕ್ರಿಸ್ತನನ್ನು ಅಂಗೀಕರಿಸಕೊಳ್ಳಲು ತೀರ್ಮಾನಿಸಿದನು ಮತ್ತು ಅಲ್ಲಿಯೇ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ತನ್ನ ವಾಹನವನ್ನು ನಿಲ್ಲಿಸಿದನು. ಫಿಲಿಪ್ಫನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು, ಆದರೆ ಅವರಿಬ್ಬರು ನೀರಿನಿಂದ ಹೊರಗೆ ಬಂದ ಕೂಡಲೇ ಫಿಲಿಪ್ಫನು ಕಣ್ಮರೆಯಾದನು! ಸುವಾರ್ತೆ ಸಾರುವದನ್ನು ಮುಂದುವರೆಸಲು ದೇವರಾತ್ಮನು ಫಿಲಿಪ್ಫನನ್ನು ಬೇರೊಂದು ಸ್ಥಳಕ್ಕೆ ಕರದುಕೊಂಡು ಹೋದನು.
ಸುವಾರ್ತೆ ಸಾರಲು ಬಯಸುತ್ತಾ ಸಿದ್ಧನಾಗಿದ್ದವನ ಈ ನಿಜ ಕಥಯು ಅದ್ಭುತವಾದದ್ದಾಗಿದೆ!
“ನಾನು ದೇವರೊಂದಿಗೆ ಒಳ್ಳೆಯ ಸಂಬಂಧವುಳ್ಳವನಾಗಿರುವ ಆಯ್ಕೆ ಮಾಡಿಕೊಂಡಿದ್ದೇನೆ ಮತ್ತು ಯಾವಾಗಲೂ ಆತನ ಸೇವೆ ಮಾಡಲು ಸಿದ್ಧನಾಗಿರುತ್ತೇನೆ.”
ಪ್ರಶ್ನೆಗಳು:
1.ಮುಂಚಿತವಾಗಿಯೇ ಸಿದ್ಧತೆಗಳನ್ನು ಮಾಡಿಕೊಳ್ಳದೆ, ಯಾವ ಪರಿಸ್ಥಿತಿಯಲ್ಲಿ ಕೂಡಲೇ ಸುವಾರ್ತೆಯನ್ನು ಹಂಚಿಕೊಳ್ಳಲು ನೀವು ಬಯಸುತ್ತೀರಿ?
2.ಎಚ್ಚರಿಕೆ ಕೊಡದೆಯೇ ಒಂದುವೇಳೆ ತರಗತಿಯನ್ನು ಮುನ್ನಡೆಸಬೇಕಾದರೆ ಯಾವ ವಿಷಯವನ್ನು ಕಲಿಸುವಿರಿ?
3.ಭಯದ ಸುವಾರ್ತೆಗೆ ಹೋಲಿಸಿದರೆ “ಸಮಾಧಾನದ” ಸುವಾರ್ತೆ ಏನಾಗಿದೆ?
4.ಐಥಿಯೊಪ್ಯದವನು ಫಿಲಿಪ್ಫನಿಗೆ ಏನೆಂದು ಕೇಳಿದನು?
5.ಐಥಿಯೊಪ್ಯದವನು ನೀರನ್ನು ನೋಡಿದಾಗ ಏನೆಂದು ಹೇಳಿದನು?
Scripture
About this Plan

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳುವದು ಪ್ರತಿದಿನ ಮುಂಜಾನೆ ಮಾಡುವ ಪ್ರಾರ್ಥನೆಯ ಸಂಪ್ರದಾಯವಲ್ಲ ಬದಲಾಗಿ ಚಿಕ್ಕವರಾಗಿರುವಾಗಲೇ ನಾವು ಪ್ರಾರಂಭಿಸಬೇಕಾಗಿರುವ ಜೀವನದ ಮಾರ್ಗವಾಗಿದೆ. ಕ್ರಿಸ್ಟಿ ಕ್ರಾಸ್ ರವರು ಬರೆದಿರುವ ಪಾರಾಯಣದ ಈ ಯೋಜನೆಯು ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿರುವ ವೀರರ ಕಡೆಗೆ ಗಮನ ಕೊಡುತ್ತದೆ.
More
Related Plans

When God Doesn't Make Sense

The Judas in Your Life: 5 Days on Betrayal

Ruins to Royalty

From PlayGrounds to Psychwards

Making the Most of Your Marriage; a 7-Day Healing Journey

Lies & Truth Canvas

Blessed Are the Spiraling: 7-Days to Finding True Significance When Life Sends You Spiraling

When God Says “Wait”

And He Shall Be Called: Advent Devotionals, Week 5
