ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳುSample

ನೀತಿಯೆಂಬ ವಜ್ರಕವಚ
ಸತ್ಯವೇದ ಕಥೆ – ಕೊರ್ನೇಲ್ಯನು "ಅಪೊ 10:9-23"
ಎಫೆಸ 6 ನೇ ಅಧ್ಯಾಯದಲ್ಲಿ ಕೊಡಲಾಗಿರುವ ಎರಡನೇ ಸರ್ವಾಯುಧ ನೀತಿಯೆಂಬ ವಜ್ರಕವಚ. ನೀತಿ ಎಂದರೆ ದೇವರ ಸ್ವಭಾವವನ್ನು ತೋರಿಸುವಂಥದ್ದು ಅಥವಾ ಒಳ್ಳೆಯ, ಸರಿಯಾದ ಮತ್ತು ನಂಬಿಗಸ್ತವಾದ ಕಾರ್ಯಗಳನ್ನು ಮಾಡುವಂಥದ್ದು. ದೇವರ ದೃಷ್ಟಿಗೆ ಸರಿಯಾಗಿರುವ ಕಾರ್ಯಗಳನ್ನು ಸತತವಾಗಿ ಮಾಡುವಂಥದ್ದು ನಮ್ಮ ವಜ್ರಕವಚವನ್ನು ಸರಿಯಾದ ಸ್ಥಳದಲ್ಲಿ ಇರಿಸುತ್ತದೆ. ದೇವರು ಸತ್ಯವೇದದಲ್ಲಿ ನಮಗೆ ಬುದ್ದಿವಂತರಾಗಿರ್ರಿ ಮತ್ತು ಸರಿಯಾದ ಕಾರ್ಯಗಳನ್ನು ಮಾಡಿರಿ ಎಂದು ಹೇಳಿದ್ದಾನೆ. ಈ ಕಾರ್ಯಗಳನ್ನು ನಾವು ಮಾಡುವಾಗ, ನಾವು ವಜ್ರಕವಚವನ್ನು ಧರಿಸಿಕೊಂಡಿದ್ದೇವೆ ಎಂದು ಭರವಸೆಯಿಂದರಬಹುದು ಮತ್ತು ನಮ್ಮ ಹೃದಯಗಳು ನಾವು ಯುದ್ಧದಲ್ಲಿರುವಾಗ ಸಂಪೂರ್ಣವಾಗಿ ರಕ್ಷಿಸಲ್ಪಡುತ್ತವೆ. ವಜ್ರಕವಚದ ವಿಷಯದಲ್ಲಿ ಅತ್ಯಂತ ಪ್ರಾಮುಖ್ಯವಾದ ಮತ್ತೊಂದು ಸಂಗತಿ ಇದೆ, ಪ್ರಾಮುಖ್ಯವಾಗಿರುವ ಅಂಗವಾದ ಹೃದಯವನ್ನು ಅದು ಮುಂಭಾಗದಲ್ಲಿ ಕಾಪಾಡುತ್ತದೆ. ಇದನ್ನು ಧರಿಸಿಕೊಂಡಿರುವಾಗ, ನಾವು ಗಾಯಗೊಂಡರೂ ಎದ್ದು ಹೋರಾಟವನ್ನು ಮುಂದುವರಸಬಹುದಾಗಿದೆ. ಆದರೂ, ನಾವು ಯುದ್ಧವನ್ನು ಎದುರಿಸಲೇಬೇಕು ಯಾಕಂದರೆ ವಜ್ರಕವಚವು ಮುಂಭಾಗದಲ್ಲಿ ಮಾತ್ರ ನಮಗೆ ರಕ್ಷಣೆಯನ್ನು ಕೊಡುತ್ತದೆ. ಒಂದುವೇಳೆ ನಾವು ಹಿಂದಿರುಗಿದರೆ ಅಥವಾ ಬೆನ್ನು ಕೊಟ್ಟು ಓಡಿದರ ಇದು ನಮ್ಮನ್ನು ರಕ್ಷಿಸಲಾರದು. ದೈವೀಕ ಸ್ವಭಾವ ಮತ್ತು ನೀತಿವಂತಿಕೆ ಎಂದರೆ ಏನು? ಇವು ನಮ್ಮಲ್ಲಿದೆಯೇ ಎಂದು ನಾವು ತಿಳಿದುಕೊಳ್ಳುವದು ಹೇಗೆ? ಸತ್ಯವೇದವು ಹೇಳುವದೇನೆಂದರೆ ಕೊರ್ನೇಲ್ಯನು ಭಕ್ತನು, ದೇವರಿಗೆ ಭಯಪಡುವವನು ಮತ್ತು ಜನರಿಗೆ ಬಹಳವಾಗಿ ದಾನಧರ್ಮ ಮಾಡುವವನು ಹಾಗೂ ದೇವರಿಗೆ ನಿತ್ಯವೂ ಪ್ರಾರ್ಥನೆ ಮಾಡುವವನಾಗಿದ್ದನು. ಯೆಹೂದ್ಯರೆಲ್ಲರೂ ಅವನನ್ನು ಗೌರವಿಸುತ್ತಿದ್ದರು ಎಂಬದಾಗಿಯೂ ಸತ್ಯವೇದವು ಹೇಳುತ್ತದೆ. ನೀವು ನೀತಿವಂತರಾಗಿದ್ದರೆ ಅದು ಇತರರಿಗೆ ಗೊತ್ತಾಗುತ್ತದೆ ಯಾಕಂದರೆ ಸಮಯದೊಂದಿಗೆ ಎಲ್ಲರೂ ಅದನ್ನು ನೋಡಬಹುದಾಗಿದೆ. ಕೊರ್ನೇಲ್ಯನು ನೀತಿಯೆಂಬ ವಜ್ರಕವಚವನ್ನು ಧರಿಸಿಕೊಂಡಿದ್ದನು. ಆ ಸಮಯದಲ್ಲಿ, ಯೆಹೂದ್ಯರು ಅನ್ಯರನ್ನು ಭೇಟಿ ಮಾಡುವದು ಅಥವಾ ಅವರೊಂದಿಗೆ ಸೇರಿಕೊಳ್ಳುವದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿತ್ತು. (ಅಪೊ 10:28) ದೇವರು ಪೇತ್ರನಿಗೆ ಒಂದು ದರ್ಶನವನ್ನು ಕೊಟ್ಟನು ಆದ್ದರಿಂದ ಅವನು ಕೊರ್ನೇಲ್ಯನ ಬಳಿಗೆ ಹೋಗಿ ಅವನಿಗೆ ಸುವಾರ್ತೆ ಸಾರಿದನು.
ಕೊರ್ನೇಲ್ಯನು ದೇವರಲ್ಲಿ ಭಯಭಕ್ತಿಯುಳ್ಳವನಾದ್ದರಿಂದ, (ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದ್ದರೂ) ಅವನನ್ನು ಮತ್ತು ಅವನ ಕುಟುಂಬದವರನ್ನು ರಕ್ಷಣೆ ಮಾರ್ಗಕ್ಕೆ ನಡೆಸಲು ದೇವರು ಅಪೊಸ್ತಲನನ್ನು ಅವನ ಮನೆಗೆ ಕಳುಹಿಸಿದನು!
“ನಾನು ಯಾವಾಗಲೂ ಒಳ್ಳೆಯ ಕಾರ್ಯಗಳನ್ನು ಮಾಡುವ ಆಯ್ಕೆ ಮಾಡಿಕೊಂಡಿದ್ದೇನೆ.”
ಪ್ರಶ್ನೆಗಳು:
1. ನಿಮ್ಮ ಜೀವಿತದ ಯಾವ ಪರಿಸ್ಥಿತಗಳಲ್ಲಿ ನೀವು ನೀತಿಯೆಂಬ ವಜ್ರಕವಚವನ್ನು ಧರಿಸಿಕೊಂಡಿದ್ದೀರಿ ಎಂದು ತೋರಿಸಿದ್ದೀರಿ ಮತ್ತು ಯಾವ ಪರಿಸ್ತಿತಿಯಲ್ಲಿ ಇಲ್ಲ ಎಂದು ತೋರಿಸಿದ್ದೀರಿ?
2. ನೀತಿವಂತಿಕೆಯನ್ನು ಹೇಗೆ ನಕಲು ಮಾಡಬಹುದು ಎಂಬದನ್ನು ವಿವರಿಸಿರಿ.
3. ಅವಮಾನಕ್ಕೆ ಒಳಗಾಗುವ ಬದಲು ಯಾವ ಪರಿಸ್ಥಿತಿಗಳಲ್ಲಿ ನೀವು ಏನೂ ಮಾಡದೆ ಸುಮ್ಮನಿರುವ ಆಯ್ಕೆಯನ್ನು ಮಾಡಿಕೊಳ್ಳುತ್ತೀರಿ?
4. ಪೇತ್ರನು ಯಾರ ಮನೆಗೆ ಹೋದನು? ಯಾಕೆ ಅದು ಸಹಜವಾದ ಕಾರ್ಯವಾಗಿರಲಿಲ್ಲ?
5. ಕೊರ್ನೇಲ್ಯನು ಆ ಸ್ಥಳದಲ್ಲಿ ಜೀವಿಸತ್ತಿದ್ದ ಇತರರಗಿಂತ ಹೇಗ ಭಿನ್ನನಾಗಿದ್ದನು?
Scripture
About this Plan

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳುವದು ಪ್ರತಿದಿನ ಮುಂಜಾನೆ ಮಾಡುವ ಪ್ರಾರ್ಥನೆಯ ಸಂಪ್ರದಾಯವಲ್ಲ ಬದಲಾಗಿ ಚಿಕ್ಕವರಾಗಿರುವಾಗಲೇ ನಾವು ಪ್ರಾರಂಭಿಸಬೇಕಾಗಿರುವ ಜೀವನದ ಮಾರ್ಗವಾಗಿದೆ. ಕ್ರಿಸ್ಟಿ ಕ್ರಾಸ್ ರವರು ಬರೆದಿರುವ ಪಾರಾಯಣದ ಈ ಯೋಜನೆಯು ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿರುವ ವೀರರ ಕಡೆಗೆ ಗಮನ ಕೊಡುತ್ತದೆ.
More
Related Plans

When God Doesn't Make Sense

The Judas in Your Life: 5 Days on Betrayal

Ruins to Royalty

From PlayGrounds to Psychwards

Making the Most of Your Marriage; a 7-Day Healing Journey

Lies & Truth Canvas

Blessed Are the Spiraling: 7-Days to Finding True Significance When Life Sends You Spiraling

When God Says “Wait”

And He Shall Be Called: Advent Devotionals, Week 5
