YouVersion Logo
Search Icon

ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳುSample

ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳು

DAY 4 OF 10

ಸತ್ಯವೆಂಬ ನಡುಕಟ್ಟು

ಸತ್ಯವೇದ ಕಥೆ – ಅನನೀಯ ಮತ್ತು ಸಫೈರಳು "ಅಪೊ 5:1-10"

ಎಫೆಸ 6 ನೇ ಅಧ್ಯಾಯದಲ್ಲಿ ತಿಳಿಸಲಾಗರವ ಮೊದಲನೆಯ ಸರ್ವಾಯುಧ ಸತ್ಯವೆಂಬ ನಡುಕಟ್ಟು, ಇದನ್ನು ಸಿಪಾಯಿಗಳು ತಮ್ಮ ನಡುವಿಗೆ ಬಿಗಿದುಕೊಳ್ಳುತ್ತಾರೆ, ಇದರಿಂದ ಸರ್ವಾಯುಧಗಳನ್ನು ಬಿಗಿಯಾಗಿ ಹಿಡಿದುಕೊಳ್ಳಲು ಸಾಧ್ಯವಾಗುತ್ತದೆ. ನಡುಕಟ್ಟು ಸಿಪಾಯಿಯು ಧರಿಸಿಕೊಳ್ಳುವ ಸರ್ವಾಯುಧಗಳನ್ನು ಬಿಗಿಗೊಳಿಸುತ್ತದೆ, ಕತ್ತಿಯನ್ನು ಬಿಗಿಯಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ, ಸಿಪಾಯಿಗಳು ಇದನ್ನು ತೆಗೆಯಲು ಮುಂದಾಗವದಲ್ಲ. ನಿಜವಾಗಿ ಹೇಳುವದಾದರೆ ಒಂದುವೇಳೆ ಸಿಪಾಯಿಯ ಹತ್ತಿರ ಸತ್ಯದ ನಡುಕಟ್ಟು ಇಲ್ಲವೆಂದರೆ, ಬಹುಶಃ ಅವರು ಹಾಕಿಕೊಂಡಿರುವ ವಸ್ತ್ರಗಳೂ ಬಿದ್ದು ಹೋಗುತ್ತವೆ ಮತ್ತು ಅವರು ಎಲ್ಲರ ಎದುರು ನಾಚಿಕೆಪಡಬೇಕಾಗುತ್ತದೆ!

ಸತ್ಯದ ಒಂದು ಭಾಗವು ನಮ್ಮ ಬಾಯೊಳಗಿಂದ ಬರುತ್ತದೆ. ನಾವು ನಮ್ಮ ತಂದೆತಾಯಿಗಳಿಗೆ ಅಥವಾ ದೇವರಿಗೆ ಸುಳ್ಳು ಹೇಳದೆ ಯಾವಾಗಲೂ ಸತ್ಯವನ್ನೇ ಹೇಳುವ ಕ್ರೈಸ್ತರಾಗಿ ಜೀವಿಸಬೇಕು. ಆದರೆ ಸತ್ಯವೆಂಬ ನಡುಕಟ್ಟಿನ ಮತ್ತೊಂದು ಭಾಗ ದೇವರು ಹಾಗೂ ಆತನ ವಾಕ್ಯಗಳನ್ನು ನಂಬುವ ಆಯ್ಕೆಯನ್ನು ನಾವು ಮಾಡಿಕೊಳ್ಳುವದಾಗಿದೆ. ನಿಜ ಸಂಗತಿ ಏನೆಂದರ ನಮ್ಮ ವೈರಿಯಾಗಿರುವ ಸೈತಾನನು, ಯಾವಾಗಲೂ ಸುಳ್ಳು ಹೇಳಲು ಪ್ರಯತ್ನಿಸುತ್ತಾನೆ ಮತ್ತು ಸತ್ಯವಲ್ಲದ ಕಾರ್ಯಗಳನ್ನು ನಾವು ನಂಬುವಂತೆ ನಮ್ಮನ್ನು ಪ್ರೇರೇಪಿಸುತ್ತಾನೆ.

ಇಂದಿನ ಸತ್ಯವೇದದ ಕಥೆಯಲ್ಲಿ ಬರುವ ಅನನೀಯ ಮತ್ತು ಸಫೈರಳು ಒಂದುವೇಳೆ ಶಿಷ್ಯರಿಗೆ ಪ್ರಾಮಾಣಿಕರಾಗಿದ್ದರೆ, ಪ್ರಾಮುಖ್ಯವಲ್ಲದ ಸುಳ್ಳನ್ನು ನಂಬುತ್ತಿರಲಿಲ್ಲ. ನಾವು ನಮ್ಮ ಭೂಮಿಯನ್ನು ಕಡಿಮೆ ಹಣಕ್ಕೆ ಮಾರಿದ್ದೇವೆ ಎಂಬ ರೀತಿಯಲ್ಲಿ ಅವರು ಮಾತನಾಡಿದರು, ಆದರೆ ಅವರು ನಿಜವಾಗಿಯೂ ಹೆಚ್ಚು ಹಣಕ್ಕೆ ಅದನ್ನು ಮಾರಿದ್ದರು. ದೇವರ ನಮ್ಮನ್ನು ನೋಡುವದಿಲ್ಲ ಅಥವಾ ಮಾರಾಟದ ಮಾಹಿತಿಗಳು ಆತನಿಗೆ ಗೊತ್ತಾಗುವದಿಲ್ಲ ಎಂಬದಾಗಿ ಆಲೋಚಿಸುವಂತೆ ಮಾಡಿದ ವೈರಿಯ ಮಾತುಗಳನ್ನು ಅವರು ನಂಬಿದರು. ಆದರೆ ದೇವರು ಎಲ್ಲವನ್ನೂ ನೋಡುತ್ತಾನೆ. ಶಿಷ್ಯರು ದೇವರ ಪ್ರತಿನಿಧಿಗಳಾಗಿದ್ದರು. ಅವರು ಶಿಷ್ಯರಿಗೆ ಸುಳ್ಳು ಹೇಳಿದ್ದರಿಂದ, ದೇವರಿಗೇ ಸುಳ್ಳು ಹೇಳಿದರು. ಅವರು ತಮ್ಮ ಮಾರಾಟದ ಕುರಿತಾದ ಸತ್ಯವನ್ನು ಬಚ್ಚಿಟ್ಟರು ಯಾಕಂದರೆ ತಮ್ಮ ಕಿವಿಗಳಲ್ಲಿ ಪಿಸುಗುಟ್ಟಿದ ಸೈತಾನನ ಸುಳ್ಳುಗಳನ್ನು ಅವರು ನಂಬಿದರು. ನಿಮ್ಮ ಸರ್ವಾಯುಧಗಳು ಬೀಳುವಂತೆ ನೀವು ಯಾವ ಸುಳ್ಳುಗಳನ್ನು ನಂಬುತಿದ್ದೀರಿ?

ನಾವು ಯಾವಾಗಲೂ ಸತ್ಯವನ್ನು ಹೇಳುತ್ತಾ ಮತ್ತು ದೇವರು ಹಾಗೂ ಆತನ ವಾಕ್ಯಗಳ ಕುರಿತಾದ ಸತ್ಯವನ್ನು ನಂಬುತ್ತಾ ಎಲ್ಲಾ ಸಮಯಗಳಲ್ಲಿಯೂ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಳ್ಳಬೇಕಾದದ್ದು ಪ್ರಾಮುಖ್ಯವಾಗಿದೆ.

“ನಾನು ಪ್ರಾಮಾಣಿಕತೆಯಿಂದ ಜೀವಿಸುವ ಆಯ್ಕೆ ಮಾಡಿಕೊಂಡಿದ್ದೇನೆ.”

ಪ್ರಶ್ನೆಗಳು:

1. ಒಂದುವೇಳೆ ನೀವು ಪ್ರಾಮಾಣಿಕರಲ್ಲದಿದ್ದರೆ, ನಿಮ್ಮ ಸತ್ಯವೆಂಬ ನಡುಕಟ್ಟು ಏನಾಗುತ್ತದೆ? ಇದರಿಂದ ನಿಮ್ಮ ಇತರೆ ಸರ್ವಾಯುಧಗಳಿಗೆ ತೊಂದರೆಯಾಗುತ್ತದೆಯೇ?

2. ನೀವು “ಸುಳ್ಳು” ಹೇಳುವದಿಲ್ಲ ಆದರೆ “ಪ್ರಾಮಾಣಿಕರಾಗಿ” ನಡೆದುಕೊಳ್ಳಲು ಆಗದಿರುವಂಥ ನಿರ್ದಿಷ್ಟವಾದ ಪರಿಸ್ಥಿತಿ ಯಾವುದು?

3. ಸುಳ್ಳು ಹೇಳುವದರ ಫಲಿತಾಂಶ ಏನು?

4. ಅನನೀಯ ಮತ್ತು ಸಫೈರಳು ಪೇತ್ರನೊಂದಿಗೆ 3 ತಾಸುಗಳ ಅಂತರದ ನಂತರ ಮಾತನಾಡಿದರೂ ಸ್ಥಳ ಮಾರಾಟದ ಬಗ್ಗೆ ಒಂದೇ ರೀತಿಯ ಕಥೆಯನ್ನು ಹೇಗೆ ಹೇಳಿದರು?

5. ಅನನೀಯ ಮತ್ತು ಸಫೈರಳು ಯಾರಿಗೆ ಸುಳ್ಳು ಹೇಳಿದರು? ಜನರು ಇಂದು ಸುಳ್ಳು ಹೇಳುವಾಗ, ಯಾರಿಗೆ ಸುಳ್ಳು ಹೇಳುವವರಾಗಿದ್ದಾರೆ?

About this Plan

ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳು

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳುವದು ಪ್ರತಿದಿನ ಮುಂಜಾನೆ ಮಾಡುವ ಪ್ರಾರ್ಥನೆಯ ಸಂಪ್ರದಾಯವಲ್ಲ ಬದಲಾಗಿ ಚಿಕ್ಕವರಾಗಿರುವಾಗಲೇ ನಾವು ಪ್ರಾರಂಭಿಸಬೇಕಾಗಿರುವ ಜೀವನದ ಮಾರ್ಗವಾಗಿದೆ. ಕ್ರಿಸ್ಟಿ ಕ್ರಾಸ್ ರವರು ಬರೆದಿರುವ ಪಾರಾಯಣದ ಈ ಯೋಜನೆಯು ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿರುವ ವೀರರ ಕಡೆಗೆ ಗಮನ ಕೊಡುತ್ತದೆ.

More