BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳSample

ಪೌಲ ಮತ್ತು ಬಾರ್ನಬನನ್ನು ಅಂತಿಯೋಕ್ಯದಿಂದ ಹೊರಹಾಕಲಾದ ನಂತರ, ಅವರು ಯೇಸುವಿನ ರಾಜ್ಯದ ಬಗ್ಗೆ ಒಳ್ಳೆಯ ಸುದ್ದಿಯೊಂದಿಗೆ ಇಕೋನ್ಯದ ನಗರಕ್ಕೆ ಪ್ರಯಾಣಿಸುತ್ತಾರೆ. ಕೆಲವರು ಅವರ ಸಂದೇಶವನ್ನು ನಂಬುತ್ತಾರೆ, ಆದರೆ ಅದನ್ನು ತಿರಸ್ಕರಿಸುವವರು ಅವರ ವಿರುದ್ಧ ತೊಂದರೆ ಉಂಟುಮಾಡುತ್ತಾರೆ.ಇಡೀ ನಗರವು ಈ ವಿಷಯದ ಬಗ್ಗೆ ವಿಭಜಿಸುವಷ್ಟು ಪರಿಸ್ಥಿತಿ ಬಿಸಿಯಾಗುತ್ತದೆ. ಮತ್ತು ಶಿಷ್ಯರು ತಮ್ಮ ವಿರುದ್ಧದ ಮಾರಣಾಂತಿಕ ಬೆದರಿಕೆಗಳ ಬಗ್ಗೆ ತಿಳಿದಾಗ, ಅವರುಲುಕವೋನ್ಯ , ಲುಸ್ತ, ದೆರ್ಬೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಗುತ್ತಾರೆ.
ಲುಸ್ತದಲ್ಲಿದ್ದಾಗ, ಪೌಲನು ಹಿಂದೆಂದೂ ನಡೆಯದ ಒಬ್ಬ ವ್ಯಕ್ತಿಯನ್ನು ಭೇಟಿಯಾಗುತ್ತಾನೆ. ಯೇಸುವಿನ ಶಕ್ತಿಯಿಂದ ಪೌಲನು ಅವನನ್ನು ಗುಣಪಡಿಸಿದಾಗ, ಜನರು ತಮನ್ನು ಭೇಟಿ ಮಾಡಲು ಇಳಿದು ಬಂದ ಗ್ರೀಕ್ ದೇವರು ಎಂದು ತಪ್ಪಾಗಿ ಭಾವಿಸಿ ಅವರು ಆತನನ್ನು ಆರಾಧಿಸಲು ಪ್ರಯತ್ನಿಸುತ್ತಾರೆ. ಪೌಲನು ಮತ್ತು ಬಾರ್ನಬನು, ಜನರನ್ನು ಸರಿಪಡಿಸಲು ಧಾವಿಸುತ್ತಾರೆ, ಒಬ್ಬನೇ ನಿಜವಾದ ದೇವರು ಇದ್ದಾನೆ ಮತ್ತು ಅವರು ಅವನ ಸೇವಕರು ಎಂದು ಒತ್ತಾಯಿಸಿದರು. ಆದರೆ ಜನರು ಅದನ್ನು ಅರ್ಥಮಾಡಿಕೊಳ್ಳದೇ, ಪೌಲನಿಗೆ ಮರಣದಂಡನೆ ನೀಡಬೇಕೆಂದು ಪೌಲ ಮತ್ತು ಬಾರ್ನಬನ ಶತ್ರುಗಳಿಂದ ಬೇಗನೆ ಮನವರಿಕೆಯಾಗುತ್ತಾರೆ. ಪೌಲನು ಪ್ರಜ್ಞಾಹೀನನಾಗುವವರೆಗೂ ಅವರು ಕಲ್ಲುಗಳನ್ನು ಎಸೆಯುತ್ತಾರೆ. ಅವನು ಸತ್ತಿದ್ದಾನೆಂದು ಭಾವಿಸಿ ಅವನ ದೇಹವನ್ನು ಲುಸ್ತದಿಂದ ಹೊರಗೆ ಎಳೆಯುತ್ತಾರೆ. ಪೌಲನು ಎದ್ದು ನಿಂತು ನಗರದೊಳಗೆ ನಡೆದು ಹೋದಾಗ ಆತನ ಸ್ನೇಹಿತರು ಆಶ್ಚರ್ಯಚಕಿತರಾಗಿ ಸುತ್ತು ನಿಂತಿರುತ್ತಾರೆ. ಮರುದಿನ ಪೌಲನು ಮತ್ತು ಬಾರ್ನಬನು ಸುವಾರ್ತೆಯನ್ನು ಸಾರುವುದಕ್ಕಾಗಿ ದೆರ್ಬೆಗೆ ಭೇಟಿ ನೀಡುತ್ತಾರೆ ಮತ್ತು ನಂತರ, ಪ್ರತಿ ಹೊಸ ದೇವಾಲಯಕ್ಕೆ ಹೆಚ್ಚಿನ ನಾಯಕರನ್ನು ನೇಮಿಸಲು ಮತ್ತು ಕ್ರೈಸ್ತರನ್ನು ಪ್ರೋತ್ಸಾಹಿಸಲು ಲುಸ್ತ, ಮತ್ತು ಸುತ್ತಮುತ್ತಲಿನ ನಗರಗಳಿಗೆ ಹಿಂತಿರುಗುತ್ತಾರೆ.
ಓದಿ, ಯೋಚಿಸಿ ಮತ್ತು ಪ್ರತಿಫಲಿಸಿ :
• ಇಂದಿನ ಅಧ್ಯಾಯವನ್ನು ನೀವು ಓದುವಾಗ ನಿಮಗೆ ಆಶ್ಚರ್ಯ, ಕಾಳಜಿ ಅಥವಾ ಆಶ್ಚರ್ಯ ಉಂಟುಮಾಡಿದ ವಿಷವೇನು?
• ದೇವಾಲಯಗಳನ್ನು ಬಲಪಡಿಸಲು ಅಪೊಸ್ತಲರು ಹಂಚಿಕೊಂಡ ಮಾತುಗಳನ್ನು ಗಮನಿಸಿ (14:22 ನೋಡಿ). ಯೇಸುವಿನ ಮೇಲೆ ಅವಲಂಬಿತವಾಗಿರುವುದರಿಂದ ನೀವು ಜೀವನದಲ್ಲಿ ಯಾವ ಕಷ್ಟಗಳನ್ನು ಎದುರಿಸಿದ್ದೀರಿ? ಈ ಸಂದೇಶವು ಇಂದು ನಿಮ್ಮನ್ನು ಹೇಗೆ ಪ್ರೋತ್ಸಾಹಿಸುತ್ತದೆ?
• ನಿಮ್ಮ ಓದುವಿಕೆ ಮತ್ತು ಪ್ರತಿಫಲನೆಯನ್ನು ಪ್ರಾರ್ಥನೆಯನ್ನಾಗಿ ಮಾಡಿ. ವಿಷಯವನ್ನುಪ್ರೇರೇಪಿಸಿದ್ದೇನು ಮತ್ತು ಅವರ ಸಂದೇಶವನ್ನು ನೀವು ಹೇಗೆ ಒಪ್ಪುತ್ತೀರಿ ಎಂಬುದರ ಕುರಿತು ದೇವರೊಂದಿಗೆ ಮಾತನಾಡಿ. ನಿಮ್ಮ ನಂಬಿಕೆ ಬಗ್ಗೆ ಪ್ರಾಮಾಣಿಕವಾಗಿರಿ, ಮತ್ತು ನೀವು ಸತತವಾಗಿ ಪ್ರಯತ್ನಿಸಬೇಕಾದದ್ದನ್ನು ಕೇಳಿ.
Scripture
About this Plan

ವ್ಯಕ್ತಿಗಳು, ಸಣ್ಣ ಗುಂಪುಗಳು ಮತ್ತು ಕುಟುಂಬಗಳನ್ನು 20 ದಿನಗಳಲ್ಲಿ ಅಪೊಸ್ತಲರ ಕೃತ್ಯಗಳನ್ನು ಓದಲು ಪ್ರೇರೇಪಿಸಲು ಬೈಬಲ್ ಪ್ರಾಜೆಕ್ಟ್ ಅಪ್‌ಸೈಡ್-ಡೌನ್ ಕಿಂಗ್ಡಮ್ ಭಾಗ 2 ವಿನ್ಯಾಸಗೊಳಿಸಿದೆ. ಈ ಯೋಜನೆಯು ಅನಿಮೇಟೆಡ್ ವೀಡಿಯೊಗಳು, ಒಳನೋಟವುಳ್ಳ ಸಾರಾಂಶಗಳು ಮತ್ತು ಪ್ರತಿಫಲಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ, ಇದು ಭಾಗವಹಿಸುವವರಿಗೆ ಯೇಸುವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಲೇಖಕರ ಅದ್ಭುತ ಸಾಹಿತ್ಯ ವಿನ್ಯಾಸ ಮತ್ತು ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳುತ್ತದೆ.
More
Related Plans

The Way of St James (Camino De Santiago)

The Making of a Biblical Leader: 10 Principles for Leading Others Well

Live Like Devotional Series for Young People: Daniel

Prayer Altars: Embracing the Priestly Call to Prayer

Here Am I: Send Me!

Journey Through Jeremiah & Lamentations

Journey Through Proverbs, Ecclesiastes & Job

Sickness Can Draw You and Others Closer to God, if You Let It – Here’s How

How Stuff Works: Prayer
