ಆಮೋಸ 1:1-2

ಆಮೋಸ 1:1-2 KSB

ತೆಕೋವದ ಕುರುಬರಲ್ಲಿ ಒಬ್ಬನಾದ ಆಮೋಸನು, ಯೆಹೂದದ ಅರಸನಾದ ಉಜ್ಜೀಯನ ದಿವಸಗಳಲ್ಲಿಯೂ ಇಸ್ರಾಯೇಲಿನ ಅರಸನಾದ ಯೋವಾಷನ ಮಗ ಯಾರೊಬ್ಬಾಮನ ದಿವಸಗಳಲ್ಲಿಯೂ ಭೂಕಂಪಕ್ಕೆ ಎರಡು ವರ್ಷಗಳ ಮುಂಚೆ ಇಸ್ರಾಯೇಲಿನ ವಿಷಯವಾಗಿ ಕಂಡ ದರ್ಶನಗಳು. ಆಮೋಸನು ಹೇಳಿದ್ದೇನೆಂದರೆ: “ಯೆಹೋವ ದೇವರು ಚೀಯೋನಿನಿಂದ ಗರ್ಜಿಸಿ, ಯೆರೂಸಲೇಮಿನಿಂದ ತಮ್ಮ ಧ್ವನಿ ಗೈಯುವರು. ಕುರುಬರ ಹುಲ್ಲುಗಾವಲುಗಳು ಬಾಡಿ ಹೋಗುತ್ತಿವೆ, ಕರ್ಮೆಲಿನ ತುದಿಯ ಗಿಡಗಳು ಒಣಗಿ ಹೋಗುತ್ತವೆ.”