YouVersion Logo
Search Icon

ಗ್ರೇಸ್‌ ಇನ್‌ ಯುವರ್‌ ಸ್ಟೋರಿSample

ಗ್ರೇಸ್‌ ಇನ್‌ ಯುವರ್‌ ಸ್ಟೋರಿ

DAY 3 OF 5

ಕೃಪೆಯ ವ್ಯಾಖ್ಯಾನ

ದೇವರು ಎಲ್ಲಾ ಸೃಷ್ಟಿಗಳಿಗೂ ನೀಡಿದ ಉಡುಗೊರೆಯೆಂದರೆ ಅದು ಕೃಪೆ. ಇದಕ್ಕೆ ಯಾವುದೇ ಉಡುಗೊರೆಯನ್ನು ಹೋಲಿಸಲಾಗುವುದಿಲ್ಲ.

ಕೃಪೆ ಎಂದರೆ ದೇವರಿಂದ ದೊರಕುವ ಅಪೇಕ್ಷಿಸದ ಅಥವಾ ಅರ್ಹತೆಯಿಲ್ಲದ ಕೃಪೆ. ದೇವರು ಯಾರೆಂಬುದಕ್ಕೆ ಕೃಪೆ ಅತ್ಯಗತ್ಯ. ಇದು ಎಲ್ಲರಿಗೂ ಲಭ್ಯವಿರುವ ಮೋಕ್ಷವೆಂಬುದು ಉಚಿತ ಕೊಡುಗೆಯಾಗಿದೆ.

"ನೀವು ಕೃಪೆಯಿಂದ, ನಂಬಿಕೆಯಿಂದ ರಕ್ಷಿಸಲ್ಪಟ್ಟಿದ್ದೀರಿ-ಮತ್ತು ಇದು ನಿಮ್ಮಿಂದಲ್ಲ, ನಿಮ್ಮ ಕರ್ಮಗಳಿಂದ ಅಲ್ಲ, ಇದು ದೇವರ ಉಡುಗೊರೆಯಾಗಿದೆ. ಯಾರೂ ಹೆಮ್ಮೆಪಡುವಂತಿಲ್ಲ" (ಎಫೆಸಿಯನ್ಸ್ 2:8-9).

ಸುವಾರ್ತಾ ಪ್ರಚಾರಕ ಬಿಲ್ಲಿ ಗ್ರಹಾಂರ ಮಾತುಗಳಲ್ಲಿ, "ದೇವರ ಕೃಪೆಯು, ಬಹಳ ಸರಳವಾಗಿ, ನಮ್ಮ ಬಗ್ಗೆ ದೇವರಿಗಿರುವ ಕರುಣೆ ಮತ್ತು ಒಳ್ಳೆಯತನವಾಗಿದೆ". ಕೃಪೆಗೂ ನಮಗೂ ಯಾವುದೇ ಸಂಬಂಧವಿಲ್ಲ ಮತ್ತು ಎಲ್ಲವೂ ದೇವರಿಗೆ ಸಂಬಂಧಿಸಿದ್ದು. ಅವನು ಅದನ್ನು ಪೂರೈಸುತ್ತಾನೆ ಮತ್ತು ನಾವು ಅದನ್ನು ಸ್ವೀಕರಿಸುತ್ತೇವೆ.

ನಮಗೆ ಬೇಕಾದುದನ್ನು ನಾವು ಸಂಪಾದಿಸಬೇಕು, ಅದರ ಕುರಿತಾಗಿ ಕೆಲಸ ಮಾಡಬೇಕು ಮತ್ತು ನಾವು ಏನನ್ನು ಬಯಸಿದ್ದೇವೋ ಅದಕ್ಕೆ ಅರ್ಹರಾಗಿರಬೇಕು, ಎಂದು ನಮ್ಮ ಜಗತ್ತಿನಲ್ಲಿ ನಮಗೆ ಕಲಿಸಲಾಗುತ್ತದೆ. ಅದಕ್ಕಾಗಿಯೇ ನಾವು ನಮ್ಮ ಕೆಲಸಗಳ ಗುಲಾಮರಾಗಿದ್ದೇವೆ, ರಾತ್ರಿಯಿಡೀ ಅಧ್ಯಯನ ಮಾಡುತ್ತೇವೆ, ನಮ್ಮ ದೌರ್ಬಲ್ಯಗಳನ್ನು ಮರೆಮಾಚುತ್ತೇವೆ ಮತ್ತು ನಮ್ಮ ಸುತ್ತಲಿನವರಿಗೆ ನಮ್ಮನ್ನು ಸಾಬೀತುಪಡಿಸುತ್ತೇವೆ. ನಾವು ಗಳಿಸಬೇಕು ಮತ್ತು ನಾವು ಬೆನ್ನಟ್ಟುತ್ತಿರುವ ಗುರಿಗೆ ನಾವು ಅರ್ಹರಾಗಿರಬೇಕು, ಎಂದು ಭಾವಿಸುತ್ತೇವೆ.

ದೇವರ ಕೃಪೆ ಇದಕ್ಕೆ ವಿರುದ್ಧವಾಗಿದೆ. ಕ್ರೈಸ್ತ ಧರ್ಮವು "ಮಾಡು" ಎಂದು ಹೇಳದೆ "ಮಾಡಿದೆ" ಎಂದು ಹೇಳುವ ಏಕೈಕ ಧರ್ಮವಾಗಿದೆ. ನಾವು ನಮ್ಮ ಉಳಿದ ಜೀವನದುದ್ದಕ್ಕೂ ಕೆಲಸ ಮಾಡಬಹುದು ಮತ್ತು ದೇವರ ಕೃಪೆಯನ್ನು ಗಳಿಸುವಷ್ಟು ಪರಿಪೂರ್ಣರಾಗಿರಲು ಪ್ರಯತ್ನಿಸಬಹುದು, ಆದರೆ ನಾವು ಯಾವತ್ತಿಗೂ ಸಾಕಷ್ಟು ಒಳ್ಳೆಯವರಾಗಲು ಸಾಧ್ಯವಿಲ್ಲ.

ಯೇಸು ಬಂದು ನಮ್ಮ ಸ್ಥಳದಲ್ಲಿ ಪರಿಪೂರ್ಣ ಜೀವನ ನಡೆಸಿದ್ದಾನೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರಿಗೂ ಅರ್ಹವಾದ ಮರಣವನ್ನು ಮರಣಿಸಿದನು. ಶಿಲುಬೆಯ ಮೇಲಿನ ಆತನ ತ್ಯಾಗ, ಆತನ ಕೆಲಸದಲ್ಲಿ ತಮ್ಮ ನಂಬಿಕೆ ಇರಿಸಿಕೊಳ್ಳುವ ಯಾರನ್ನಾದರೂ ದೇವರೊಂದಿಗೆ ಸರಿಸಮಾನವಾಗಿರಲು ಆಹ್ವಾನಿಸುತ್ತದೆ. ನಾವು ದೇವರ ಸ್ವೀಕಾರ ಮತ್ತು ಪ್ರೀತಿಯನ್ನು ಗಳಿಸಲು ಪ್ರಯತ್ನಿಸುವುದನ್ನು ನಿಲ್ಲಿಸಬಹುದು, ಮತ್ತು ಅದನ್ನು ನಮಗಾಗಿ ಪಡೆದುಕೊಳ್ಳಲು ಯೇಸು ಮಾಡಿದ ಕೆಲಸದಲ್ಲಿ ನಾವು ನಮ್ಮ ಹೆಜ್ಜೆ ಇಡಬಹುದು. ಅದುವೇ ಕೃಪೆ!

ಒಮ್ಮೆ ನಾವು ದೇವರ ಕೃಪೆಯನ್ನು ಅನುಭವಿಸಿದರೆ, ಅದು ನಮ್ಮ ಜೀವನ ವಿಧಾನವನ್ನು ಬದಲಾಯಿಸುತ್ತದೆ. ಕೃಪೆಯನ್ನು ಸ್ವೀಕರಿಸಲು ನಮ್ಮ ಪ್ರಯತ್ನಗಳ ಅಗತ್ಯವಿರುವುದಿಲ್ಲ, ಆದರೆ ಪಾಪಕ್ಕೆ ʼಇಲ್ಲʼ ಎಂದು ಹೇಳಲು ಮತ್ತು ದೈವಿಕ ಜೀವನವನ್ನು ನಡೆಸಲು ಅದು ನಮಗೆ ತರಬೇತಿ ನೀಡುತ್ತದೆ (ಟೈಟಸ್‌ 2:11-13). ಕೃಪೆ ನಮಗೆ ಒಳ್ಳೆಯ ಕಾರ್ಯಗಳನ್ನು ಮಾಡಲು ಅನುವು ಮಾಡಿಕೊಡುತ್ತದೆಃ

"ಮತ್ತು ದೇವರು ನಿಮಗೆ ಎಲ್ಲಾ ಕೃಪೆಯನ್ನು ಹೇರಳವಾಗಿ ನೀಡಲು ಶಕ್ತನಾಗಿದ್ದಾನೆ, ಆದ್ದರಿಂದ ನೀವು ಎಲ್ಲಾ ಸಮಯದಲ್ಲೂ ಎಲ್ಲ ವಿಷಯಗಳಲ್ಲಿ ಎಲ್ಲಾ ಸಾಮರ್ಥ್ಯ ಹೊಂದಿದ್ದೀರಿ, ನೀವು ಪ್ರತಿ ಒಳ್ಳೆಯ ಕೆಲಸವನ್ನು ಯಥೇಚ್ಚವಾಗಿ ಮಾಡಬಹುದು" (2 ಕೊರಿಂಥಿಯಾನ್ಸ್ 9: 8).

ಯೇಸು ನಮ್ಮನ್ನು ರಕ್ಷಿಸುತ್ತಾನೆ. ಆತನ ಕೃಪೆ ನಮ್ಮನ್ನು ಬದಲಿಸುತ್ತದೆ ಮತ್ತು ಬೇರೆ ಯಾವುದರಿಂದಲೂ ಸಾಧ್ಯವಿಲ್ಲದಂತೆ ನಮ್ಮನ್ನು ಮುಕ್ತಗೊಳಿಸುತ್ತದೆ.

About this Plan

ಗ್ರೇಸ್‌ ಇನ್‌ ಯುವರ್‌ ಸ್ಟೋರಿ

ನೀವು ಬಹುಶಃ "ಕೃಪೆ" ಎಂಬ ಪದವನ್ನು ಕೇಳಿದ್ದೀರಿ, ಆದರೆ ಅದರ ನಿಜವಾದ ಅರ್ಥವೇನು? ದೇವರ ಕೃಪೆ ನಮ್ಮ ಜೀವನವನ್ನು ಹೇಗೆ ರಕ್ಷಿಸಬಹುದು ಮತ್ತು ಪರಿವರ್ತಿಸಬಹುದು? ಈ ಅದ್ಭುತ ಕೃಪೆ ನಾವು ಇರುವ ಸ್ಥಳದಲ್ಲಿ ಹೇಗೆ ಸಂಧಿಸುತ್ತದೆ ಮತ್ತು ನಮ್ಮ ಜೀವನವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.

More