ಗ್ರೇಸ್ ಇನ್ ಯುವರ್ ಸ್ಟೋರಿSample

ಅದ್ಭುತ ಕೃಪೆ
1772 ರಲ್ಲಿ ಬರೆಯಲಾದ ಒಂದು ಹಾಡು ನೂರಾರು ವರ್ಷಗಳ ಕಾಲ ಹೇಗೆ ಜೀವಂತವಾಗಿರುತ್ತದೆ? ಒಬ್ಬ ವ್ಯಕ್ತಿಯ ಅನುಭವದ ಬಗೆಗಿನ ಮಾತುಗಳು ಇಂದು ನಮ್ಮ ಜೀವನಕ್ಕೆ ಹೇಗೆ ಪ್ರಸ್ತುತವಾಗಿವೆ?
ಬಹುಶಃ ಈ ಸಾಹಿತ್ಯ ನಮ್ಮಲ್ಲಿ ಪ್ರತಿಯೊಬ್ಬರಿಗೂ ಇರುವ ನಮ್ಮೊಳಗಿನ ಅಗತ್ಯದೊಂದಿಗೆ ಮಾತನಾಡುತ್ತದೆಃ ಅದು ಕೃಪೆದ ಅಗತ್ಯ. ಬಹುಶಃ ಒಬ್ಬ ವ್ಯಕ್ತಿಯ ಕಥೆ ನಮ್ಮದೇ ಆಗಿರಬಹುದುಃ ಇಲ್ಲಿ ಕಳೆದುಹೋಗಿರುವುದನ್ನು ಹುಡುಕಬೇಕಾಗಿದೆ.
ಈ ಕಾರಣಗಳಿಂದಲೇ ʼಅಮೇಜಿಂಗ್ ಗ್ರೇಸ್ʼ ಹಾಡು ಇಂದಿಗೂ ಜೀವಂತವಾಗಿದೆ.
ಇಂಗ್ಲಿಷ್ ಪಟ್ಟಣ ಓಲ್ನಿಯಲ್ಲಿ ಈ ಪ್ರಸಿದ್ಧ ಪದಗಳನ್ನು ಬರೆದ ವ್ಯಕ್ತಿಯ ಕಥೆ ಯಾರಿಗೂ ಅಷ್ಟಾಗಿ ತಿಳಿದಿಲ್ಲ.
ಯುವಕರಾಗಿಜಾನ್ ನ್ಯೂಟನ್ ಪ್ರಾರ್ಥನೆ ಮಾಡುವುದಕ್ಕಿಂತ ಶಪಿಸಿದ್ದೇ ಹೆಚ್ಚು. ಅವರು ಜನರನ್ನು ಪ್ರೀತಿಸುವ ಬದಲು ಶೋಷಿಸುತ್ತಿದ್ದರು. ಆತನಲ್ಲಿ ಆಶಾವಾದಕ್ಕಿಂತ ಹತಾಶೆಯ ಭಾವನೆಯೇ ಹೆಚ್ಚಿತ್ತು. ಗುಲಾಮನ್ನು ಸಾಗಿಸುತ್ತಿದ್ದ ಹಡಗಿನ ಕ್ಯಾಪ್ಟನ್ ಆಗಿ, ಅವರು ದೇವರಿಂದ ದೂರವಾಗಿದ್ದರು, ತನ್ನ ತಾಯಿ ಬಾಲ್ಯದಲ್ಲಿ ಕಲಿಸಿದ್ದ ಕ್ರಿಶ್ಚಿಯನ್ ಮೌಲ್ಯಗಳನ್ನು ತ್ಯಜಿಸಿದ್ದರು.
ಇನ್ನೊಂದರ್ಥದಲ್ಲಿ ನ್ಯೂಟನ್ ಕಳೆದುಹೋಗಿದ್ದರು. ಸಂಪೂರ್ಣವಾಗಿ, ನಿರ್ವಿವಾದವಾಗಿ ಅವರು ಕಳೇದೇಹೋಗಿದ್ದರು. ಆದರೆ ಆತನ ಕಥೆ ಇಷ್ಟಕ್ಕೇ ಮುಗಿಯಲಿಲ್ಲ.
1748 ರಲ್ಲಿ, ನ್ಯೂಟನ್ ತಮ್ಮ ಹಡಗನ್ನು ಭಾರೀ ಚಂಡಮಾರುತಕ್ಕೆ ಎದುರಾಗಿ ಮುನ್ನಡೆಸುತ್ತಿದ್ದರು. ಹಡಗು ಮತ್ತು ಅವರ ಸಿಬ್ಬಂದಿ ಅಲೆಗಳಡಿ ಮುಳುಗಿಯೇ ಬಿಡುತ್ತಾರೆ, ಮತ್ತು ತನ್ನ ಜೀವವೂ ಸೇರಿದಂತೆ ಎಲ್ಲವೂ ಕಳೆದುಹೋಗುತ್ತದೆ ಎಂದು ಅವರಿಗೆ ಭಯವಾಗಿತ್ತು. ಆಗ, ಆ ಕಷ್ಟಕಾಲದಲ್ಲಿ ನ್ಯೂಟನ್ ತನ್ನ ತಾಯಿ ಕಲಿಸಿದ ದೇವರನ್ನು ನೆನಪಿಸಿಕೊಂಡರು. ಅವರು ದೇವರನ್ನು ಕರೆದು, ಸಮುದ್ರದಲ್ಲಿ ಸಾಯುವುದರಿಂದ ಮತ್ತು ತಾನಾಗಿರುವ ಮನುಷ್ಯನಿಂದ ರಕ್ಷಿಸುವಂತೆ ಗೋಗರೆದು ಬೇಡಿಕೊಂಡರು.
ಇದು ನ್ಯೂಟನ್ ಬದುಕಿನಲ್ಲಿ ಮಹತ್ವದ ತಿರುವಾಯಿತು. ಹಡಗು ಸುರಕ್ಷಿತವಾಗಿ ದಡ ತಲುಪಿತು, ಮತ್ತು ಅವರು ಕ್ರಿಸ್ತನೊಂದಿಗೆ ತನ್ನ ಹೊಸ ಜೀವನ ಪ್ರಾರಂಭಿಸಿದರು. ಹಳೆಯದು ಕೊನೆಯಾಯಿತು ಮತ್ತು ಹೊಸ ಜೀವನ ಪ್ರಾರಂಭವಾಯಿತು.
ನ್ಯೂಟನ್ನರು ಅವರ ಕಾಲದ ಅತ್ಯಂತ ಪ್ರಭಾವಶಾಲಿ ಪಾದ್ರಿಗಳಲ್ಲಿ ಒಬ್ಬರಾದರು, ಮತ್ತು ತಾವೇ ಹಿಂದೊಮ್ಮೆ ಉತ್ತೇಜಿಸಿದ್ದ ಗುಲಾಮಗಿರಿಯನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ತನ್ನ ಜೀವನದುದ್ದಕ್ಕೂ, ನ್ಯೂಟನ್ ಎರಡು ವಿಷಯಗಳನ್ನು ಎಂದಿಗೂ ಮರೆಯಲಿಲ್ಲ. "ತಾನೊಬ್ಬ ಹಿಂದೊಮ್ಮೆ ಮಹಾನ್ ಪಾಪಿಯಾಗಿದ್ದೆ ಮತ್ತು ಕ್ರಿಸ್ತನು ಒಬ್ಬ ಮಹಾನ್ ರಕ್ಷಕನಾಗಿದ್ದಾನೆ". ನ್ಯೂಟನ್ನರಿಗೆ ತಮ್ಮ ಕಥೆ ಬದಲಾಗಲು ದೇವರ ಕೃಪೆಯೇ ಕಾರಣವೆಂದು ತಿಳಿದಿತ್ತು.
"ನೀವು ಕೃಪೆಯಿಂದ, ನಂಬಿಕೆಯ ಮೂಲಕ ರಕ್ಷಿಸಲ್ಪಟ್ಟಿದ್ದೀರಿ-ಮತ್ತು ಇದು ನಿಮ್ಮಿಂದಲ್ಲ, ಇದು ದೇವರ ಉಡುಗೊರೆ-ಕರ್ಮಗಳಿಂದಲ್ಲ, ಇಲ್ಲಿ ಯಾರೂ ಹೆಮ್ಮೆಪಡುವಂತಿಲ್ಲ" (ಎಫೆಸಿಯನ್ಸ್ 2:8-9)
ಜಾನ್ ನ್ಯೂಟನ್ ಬಹಳ ಹಿಂದೆಯೇ ಈ ಭೂಮಿಯನ್ನು ತೊರೆದಿದ್ದಾರೆ, ಆದರೆ ಅವರ ಜೀವನ ಗೀತೆ ತೊರೆದಿಲ್ಲ -ಅಮೇಜಿಂಗ್ ಗ್ರೇಸ್ಃ
ಅಮೇಜಿಂಗ್ ಗ್ರೇಸ್! ಆ ಶಬ್ದವು ಎಷ್ಟು ಸಿಹಿಯಾಗಿತ್ತು,
ಅದು ನನ್ನಂತಹ ದುರ್ಜನನನ್ನು ಉಳಿಸಿತು!
ನಾನು ಒಮ್ಮೆ ಕಳೆದುಹೋಗಿದ್ದೆ, ಆದರೆ ಈಗ ಕಂಡುಕೊಂಡಿದ್ದೇನೆ
ಕುರುಡನಾಗಿದ್ದೆ, ಆದರೆ ಈಗ ನಾನು ನೋಡುತ್ತಿದ್ದೇನೆ
Scripture
About this Plan

ನೀವು ಬಹುಶಃ "ಕೃಪೆ" ಎಂಬ ಪದವನ್ನು ಕೇಳಿದ್ದೀರಿ, ಆದರೆ ಅದರ ನಿಜವಾದ ಅರ್ಥವೇನು? ದೇವರ ಕೃಪೆ ನಮ್ಮ ಜೀವನವನ್ನು ಹೇಗೆ ರಕ್ಷಿಸಬಹುದು ಮತ್ತು ಪರಿವರ್ತಿಸಬಹುದು? ಈ ಅದ್ಭುತ ಕೃಪೆ ನಾವು ಇರುವ ಸ್ಥಳದಲ್ಲಿ ಹೇಗೆ ಸಂಧಿಸುತ್ತದೆ ಮತ್ತು ನಮ್ಮ ಜೀವನವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.
More
Related Plans

Simon Peter's Journey: 'Grace in Failure' (Part 1)

Gospel-Based Conversations to Have With Your Preteen

Reimagine Influence Through the Life of Lydia

The Bible in a Month

Never Alone

Positive and Encouraging Thoughts for Women: A 5-Day Devotional From K-LOVE

Everyday Prayers for Christmas

Who Am I, Really? Discovering the You God Had in Mind

Sharing Your Faith in the Workplace
