YouVersion Logo
Search Icon

ಕ್ರಿಸ್ತನನ್ನು ಅನುಸರಿಸಲುSample

ಕ್ರಿಸ್ತನನ್ನು  ಅನುಸರಿಸಲು

DAY 2 OF 12

ಹಿಂಬಾಲಿಸುವುದರಿಂದ ತ್ಯಾಗ

ಯೇಸುವನ್ನು ಹಿಂಬಾಲಿಸುವಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಸ್ವಯಂ ನಿರಾಕರಣೆ ಮತ್ತು ತ್ಯಾಗದ ಅಗತ್ಯವಿದೆ. ಯೇಸು ತನ್ನನ್ನು ಹಿಂಬಾಲಿಸುವವರಿಗೆ ತನ್ನನ್ನು ಹಿಂಬಾಲಿಸುವುದು ಏನೆಂದು ಹೇಳಿದಾಗ ಆತನು ಮಾತುಗಳನ್ನು ಕೆಣಕಲಿಲ್ಲ ಅಥವಾ ಆತನು ಹೊಡೆತವನ್ನು ಮೆತ್ತಲಿಲ್ಲ. ಆತನ ಶಿಷ್ಯರಾಗಲೂ ಬಯಸುವವರು, ತಮ್ಮನ್ನು ನಿರಾಕರಿಸಬೇಕು ಮತ್ತು ತಮ್ಮ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಂಡು ಆತನನ್ನು ಹಿಂಬಾಲಿಸಬೇಕು ಎಂದು ಯೇಸು ಸ್ಪಷ್ಟವಾಗಿ ಹೇಳಿದನು. ಇಡೀ ಲೋಕದ ಪಾಪಗಳಿಗಾಗಿ ಶಿಲುಬೆಗೇರಿಸಲು ಯೇಸು ತನ್ನ ಶಿಲುಬೆಯನ್ನು ಹೊತ್ತುಕೊಂಡು ಬೆಟ್ಟದ ಮೇಲೆ ನಡೆಯುವ ಮೊದಲಿನ ದಾರಿ ಇದಾಗಿತ್ತು.

ಆದರೂ ನಮ್ಮಲ್ಲಿ ಪ್ರತಿಯೊಬ್ಬರಿಗೂ ಈ ಶಿಲುಬೆ ಹೇಗೆ ಕಾಣುತ್ತದೆ?

ಯೇಸುವಿಗೆ, ಶಿಲುಬೆಯು ಆತನ ಯೋಜನೆಯಾಗಿತ್ತು. ಆತನಿಗೆ ವಹಿಸಲ್ಪಟ್ಟ ಮಹತ್ವವಾದ ರಾಜ್ಯದ ನೇಮಕವಾಗಿತ್ತು ಮತ್ತು ಇದನ್ನು ಆತನು ಸ್ವಇಚ್ಛೆಯಿಂದ ತನ್ನ ಮೇಲೆ ತಾನೇ ತೆಗೆದುಕೊಂಡನು. ಆತನನ್ನು ಹಿಂಬಾಲಿಸುವ ಪ್ರತಿಯೊಬ್ಬರಿಗೂ ಇದು ಭಿನ್ನವಾಗಿರುವುದಿಲ್ಲ. ದೇವರೇ ನಮಗೆ ನೀಡಿದ ನಿರ್ದಿಷ್ಟ ರಾಜ್ಯದ ಯೋಜನೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಇರುವುದು. ನಾವು ಈ ಲೋಕದಲ್ಲಿ ಹುಟ್ಟುವ ಮೊದಲೇ ಇವುಗಳನ್ನು ನಮಗೆ ನಿಯೋಜಿಸಲಾಗಿದೆ. ಆದರೆ ನಾವು ಯೇಸುವನ್ನು ನಮ್ಮ ರಕ್ಷಕನಾಗಿ ಸ್ವೀಕರಿಸಿದಾಗ, ಆ ಯೋಜನೆ ಏನೆಂಬುವುದನ್ನು ಅನಾವರಣಗೊಳಿಸಲು ಮತ್ತು ಅರ್ಥಮಾಡಿಕೊಳ್ಳಲು ನಮಗೆ ಪವಿತ್ರಾತ್ಮನ ಸಹಾಯವಿರುತ್ತದೆ. ಈ ಯೋಜನೆಯು ನಿಮ್ಮ ಜೀವನದ ಉದ್ದೇಶವಾಗುತ್ತದೆ ಮತ್ತು ನಿಮ್ಮ ಹೆಚ್ಚಿನ ಶಕ್ತಿ ಹಾಗೂ ಉತ್ಸಾಹ ಇದಕ್ಕೆ ನಿರ್ದೇಶಿಸಲ್ಪಡುವುದನ್ನು ನೀವು ಕಂಡುಕೊಳ್ಳುತ್ತೀರಿ.

ನೀವು ಶಿಲುಬೆಯನ್ನು ಹೊತ್ತುಕೊಂಡು ಯೇಸುವನ್ನು ಹಿಂಬಾಲಿಸು ಎನ್ನುವುದು, ನೀವು ನಿಮ್ಮ ಸೌಕರ್ಯವನ್ನು ತ್ಯಾಗ ಮಾಡುವುದು ಮತ್ತು ನಿಮಗಾಗಿ ನೇಮಿಸಲಾದ ಕೆಲಸವನ್ನು ಮಾಡುವಾಗ ಆತನಿಗೆ ಸಂಪೂರ್ಣವಾಗಿ ವಿಧೇಯರಾಗಿರುವುದನ್ನು ಸೂಚಿಸುತ್ತದೆ. ಆಗಾಗ್ಗೆ, ನಮ್ಮ ರಾಜ್ಯದ ಯೋಜನೆಯನ್ನು ಹೊತ್ತುಕೊಳ್ಳಲು ನಾವು ಒಗ್ಗಿಕೊಳ್ಳಬಹುದಾದ ಸೌಕರ್ಯಗಳನ್ನು ತ್ಯಜಿಸುವುದು ಅವಶ್ಯಕವಾಗಿದೆ ಮತ್ತು ಇದರಿಂದ ಯಾವುದೂ ನಮಗೆ ಹಿಡಿದಿಟ್ಟುಕೊಳ್ಳದೆ ದೇವರ ಸೇವೆಯನ್ನು ಮಾಡಲು ನಾವು ಸ್ವತಂತ್ರರಾಗಿರುತ್ತೇವೆ. ನಮ್ಮ ಯೋಜನೆಯ ಮಹತ್ವವು ನಾವು ಕ್ರಿಸ್ತನೊಂದಿಗೆ ಒಂದಾಗಿರುವುದರಿಂದ ನಮ್ಮ ಸುತ್ತಲಿರುವ ದೇವರ ಮಹಿಮೆಗೆ ಕಾರಣವಾಗಿದೆ.ದೇವರ ಮಹಿಮೆಯು ಮಹತ್ವದಾಗಿರುತ್ತದೆ, ಮತ್ತು ನಾವು ನಮ್ಮ ರಾಜ್ಯದ ಯೋಜನೆಯನ್ನು ಸ್ವೀಕರಿಸಲು ಆಯ್ಕೆಮಾಡಿದಾಗ, ನಾವು ಆಗಾಗ್ಗೆ ಅದರ ಮಹತ್ವವನ್ನು ಅನುಭವಿಸುತ್ತೇವೆ. ಅದು ತನ್ನ ಸವಾಲುಗಳು ಮತ್ತು ವಿಜಯಗಳೊಂದಿಗೆ ಬರುತ್ತದೆ. ಇದೆಲ್ಲಾದರಲ್ಲಿಯೂ, ಯೇಸು ನಮ್ಮೊಂದಿಗಿರುವ ವಾಗ್ದಾನವನ್ನು ಮಾಡಿದ್ದಾನೆ!

ಘೋಷಣೆ:ರಾಜ್ಯದ ಮಹತ್ವವಾದ ಯೋಜನೆಯನ್ನು ನಿರ್ವಹಿಸಲು ಯೇಸುವೇ ನನಗೆ ಸಹಾಯ ಮಾಡುವನು.

About this Plan

ಕ್ರಿಸ್ತನನ್ನು  ಅನುಸರಿಸಲು

ಪ್ರತಿದಿನ ಯೇಸುವನ್ನು ಹೇಗೆ ಅನುಸರಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಸತ್ಯವೇದದ ಈ ಯೋಜನೆಯು ನಿಮಗೆ ಸೂಕ್ತವಾಗಿರುತ್ತದೆ. ಸಹಜವಾಗಿ ಯೇಸುವಗೆ ಒಪ್ಪಿಗೆ ಎಂದು ಹೇಳುವುದೇಈ ಪಠ್ಯಕ್ರಮದ ಮೊದಲನೆಯ ಹೆಜ್ಜೆಯಾಗಿರುತ್ತದೆ. ಜೀವಮಾನದಾದ್ಯಂತ ಪದೇ ಪದೇ ಒಪ್ಪಿಗೆ ಒಪ್ಪಿಗೆ ಎಂದು ಹೇಳಿ ಆತನೊಂದಿಗೆ ಹೆಜ್ಜೆ ಹಾಕುವ ಪ್ರಯಾಣವು ಇದನ್ನು ಹಿಂಬಾಲಿಸುವ ಹೆಜ್ಜೆಗಳಾಗಿವೆ.

More