ಈಗ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮ್ಮ ಮಾರ್ಗಗಳನ್ನು ಆಲೋಚಿಸಿ ನೋಡಿರಿ. ಬಹಳವಾಗಿ ಬಿತ್ತಿದ್ದೀರಿ, ಆದರೆ ಕೊಂಚವಾಗಿ ಸುಗ್ಗಿ ಮಾಡಿದ್ದೀರಿ; ತಿನ್ನುತ್ತೀರಿ, ಆದರೆ ಸಾಕಾಗಲಿಲ್ಲ; ಕುಡಿಯುತ್ತೀರಿ, ಆದರೆ ತೃಪ್ತಿಯಾಗಲಿಲ್ಲ; ಬಟ್ಟೆಯನ್ನು ಧರಿಸುತ್ತೀರಿ, ಆದರೆ ಬೆಚ್ಚಗೆ ಆಗಲಿಲ್ಲ; ಸಂಬಳ ಸಂಪಾದಿಸುತ್ತೀರಿ, ಅದನ್ನು ತೂತುಗಳುಳ್ಳ ಚೀಲಗಳಲ್ಲಿ ಹಾಕಿಡುತ್ತೀರಿ.”