ಅಂಜೂರದ ಗಿಡವು ಚಿಗುರದಿದ್ದರೂ,
ದ್ರಾಕ್ಷಾಲತೆಗಳಲ್ಲಿ ಹಣ್ಣು ಫಲಿಸದಿದ್ದರೂ,
ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ,
ಹೊಲಗಳು ಆಹಾರ ಕೊಡದಿದ್ದರೂ,
ಕುರಿಹಟ್ಟಿಗಳು ಬರಿದಾಗಿ ಹೋದರೂ,
ಕೊಟ್ಟಿಗೆಗಳಲ್ಲಿ ದನಕರುಗಳು ಇಲ್ಲವಾದರೂ,
ನಾನು ಯೆಹೋವ ದೇವರಲ್ಲಿ ಉಲ್ಲಾಸಿಸುವೆನು.
ನನ್ನ ರಕ್ಷಕರಾದ ದೇವರಲ್ಲಿ ಆನಂದಿಸುವೆನು.