ಅನ್ನನೆ ನಿಂಗಳು ಎಚ್ಚರವಾಯಿತಿರಿ, ಎನ್ನಂಗೆಣ್ಣ್ಚೇಂಗಿ, ಮನೆರ ಎಜಮಾನ ಬಪ್ಪದ್ ಬೈಟಾಕು, ಅಥವ ನಡ್ಪಾದ್ರೆ ಆಕು, ಅಥವ ಪೊಲಾಕ ಮಲ್ಲಂಗೋಳಿ ಕೂವ ನೇರಾಯಿತಿಕ್ಕು, ಅಥವ ಪೊಲಾಕ ಆಯಿತಿಕ್ಕು. ಎಕ್ಕ ಬಯ್ಯಕ್ ವಾಪಸ್ ಬಪ್ಪ ಎಣ್ಣಿಯಂಡ್ ನಿಂಗಕ್ ಗೊತ್ತ್ಲ್ಲೆ. ನಿಂಗ ಗೇನ ಮಾಡತ ಸಮಯತ್ಲ್ ಅಂವೊ ಬಂತ್, ನಿಂಗ ವರಿಯಂಡಿಪ್ಪದ್ನ ಕಾಂಗತನೆಕೆ ಎಚ್ಚರವಾಯಿತಿರಿ. ನಾನ್ ನಿಂಗಕ್ ಎಂತ ಎಣ್ಣ್ವಿ, ಅದ್ನ ಎಲ್ಲಾರ್ಕು ಎಣ್ಣ್ವಿ, ಎಚ್ಚರವಾಯಿತ್ ಇರಿ.