YouVersion Logo
Search Icon

1 ಸಮು 3

3
ಸಮುವೇಲನಿಗಾದ ದೈವೋಕ್ತಿ
1ಬಾಲಕನಾದ ಸಮುವೇಲನು ಏಲಿಯ ಕೈಕೆಳಗಿದ್ದುಕೊಂಡು ಯೆಹೋವನ ಸೇವೆಮಾಡುತ್ತಿದ್ದನು. #3:1 ಅಮೋ. 8:11ಆ ಕಾಲದಲ್ಲಿ ದೈವೋಕ್ತಿಗಳು ವಿರಳವಾಗಿದ್ದವು; ದೇವದರ್ಶನಗಳು ಅಪರೂಪವಾಗಿದ್ದವು. 2ಏಲಿಯ ಕಣ್ಣುಗಳು ದಿನದಿನಕ್ಕೆ ಮೊಬ್ಬಾಗುತ್ತಾ ಬಂದು ಸರಿಯಾಗಿ ಕಾಣಿಸದೆಹೋಗಿದ್ದವು. ಅವನು ಒಂದು ರಾತ್ರಿ ತನ್ನ ಸ್ಥಳದಲ್ಲಿ ಮಲಗಿದ್ದನು; 3ಸಮುವೇಲನು ಯೆಹೋವನ ಮಂದಿರದಲ್ಲಿ ದೇವರ ಮಂಜೂಷವಿದ್ದ ಸ್ಥಳದಲ್ಲಿ ಮಲಗಿದ್ದನು. ಆಗ #3:3 ವಿಮೋ 27:20-21.ದೇವದೀಪವು ಇನ್ನೂ ಉರಿಯುತ್ತಿತ್ತು. 4ಯೆಹೋವನು ಸಮುವೇಲನನ್ನು ಕರೆದನು; ಸಮುವೇಲನು “ಇಗೋ ಬಂದೆ” ಎಂದು ಉತ್ತರಕೊಟ್ಟು ಒಡನೆ ಏಲಿಯ ಬಳಿಗೆ ಹೋಗಿ, 5“ಇಗೋ ಬಂದಿದ್ದೇನೆ; ನೀನು ನನ್ನನ್ನು ಕರೆದೆಯಲ್ಲವೇ?” ಅಂದನು. ಆಗ ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ, ಹೋಗಿ ಮಲಗಿಕೋ” ಅಂದನು. ಸಮುವೇಲನು ಹೋಗಿ ಮಲಗಿದನು. 6ಯೆಹೋವನು ತಿರುಗಿ, “ಸಮುವೇಲನೇ” ಎಂದು ಕರೆದನು. ಸಮುವೇಲನು ಕೂಡಲೆ ಎದ್ದು ಏಲಿಯ ಬಳಿಗೆ ಹೋಗಿ, “ಇಗೋ, ಬಂದಿದ್ದೇನೆ; ನೀನು ನನ್ನನ್ನು ಕರೆದೆಯಲ್ಲಾ” ಅನ್ನಲು ಅವನು, “ನನ್ನ ಮಗನೇ, ನಾನು ನಿನ್ನನ್ನು ಕರೆಯಲಿಲ್ಲಾ, ಹೋಗಿ ಮಲಗಿಕೋ” ಎಂದನು. 7ಆವರೆಗೂ ಸಮುವೇಲನಿಗೆ ಯೆಹೋವನ ಅನುಭವವಿರಲಿಲ್ಲ; ಅವನು ದೈವೋಕ್ತಿಗಳನ್ನು ಹೊಂದಿರಲಿಲ್ಲ. 8ಯೆಹೋವನು ಸಮುವೇಲನನ್ನು ಮೂರನೆಯ ಸಾರಿ ಕರೆದನು. ಅವನು ತಟ್ಟನೆ ಏಲಿಯ ಹತ್ತಿರ ಹೋಗಿ, “ಇಗೋ, ಬಂದಿದ್ದೇನೆ, ನನ್ನನ್ನು ಕರೆದಿಯಲ್ಲಾ” ಅನ್ನಲು, ಹುಡುಗನನ್ನು ಕರೆದವನು ಯೆಹೋವನೇ ಎಂದು ಏಲಿಯು ತಿಳಿದು ಅವನಿಗೆ, “ಹೋಗಿ ಮಲಗಿಕೋ; 9ಪುನಃ ಆತನು ನಿನ್ನನ್ನು ಕರೆದರೆ ಯೆಹೋವನೇ, ಅಪ್ಪಣೆಯಾಗಲಿ, ನಿನ್ನ ದಾಸನು ಕೇಳಿಸಿಕೊಳ್ಳುತ್ತಿದ್ದಾನೆ” ಎಂದು ಹೇಳು ಅಂದನು. ಸಮುವೇಲನು ತಿರುಗಿ ಹೋಗಿ ತನ್ನ ಸ್ಥಳದಲ್ಲಿ ಮಲಗಿಕೊಂಡನು. 10ಯೆಹೋವನು ಪ್ರತ್ಯಕ್ಷನಾಗಿ ಮುಂಚಿನಂತೆಯೇ “ಸಮುವೇಲನೇ, ಸಮುವೇಲನೇ” ಅಂದನು. ಸಮುವೇಲನು, “ಅಪ್ಪಣೆಯಾಗಲಿ, ನಿನ್ನ ದಾಸನು ಕೇಳಿಸಿಕೊಳ್ಳುತ್ತಿದ್ದಾನೆ” ಎಂದನು.
11ಯೆಹೋವನು ಸಮುವೇಲನಿಗೆ “ನಾನು ಇಸ್ರಾಯೇಲ್ಯರಲ್ಲಿ ಒಂದು ವಿಶೇಷಕಾರ್ಯವನ್ನು ನಡೆಸುವೆನು; #3:11 ಯೆರೆ 19:3.ಅದರ ವಿಷಯ ಕೇಳುವವರ ಎರಡು ಕಿವಿಗಳೂ ನಿಮಿರುವುವು. 12ಏಲಿಯ ಮನೆಯನ್ನು ಕುರಿತು ತಿಳಿಸಿದ್ದೆಲ್ಲವನ್ನೂ ಆ ದಿನದಲ್ಲಿ ತಪ್ಪದೆ ನೆರವೇರಿಸುವೆನು. 13ಅವನ ಮಕ್ಕಳು #3:13 ಅಥವಾ ದೇವದೂಷಕರೆಂದು.ಶಾಪಗ್ರಸ್ತರಾದರೆಂದು ಅವನಿಗೆ ತಿಳಿದು ಬಂದರೂ ಅವನು ಅವರನ್ನು ಗದರಿಸಲಿಲ್ಲ. ಈ ಪಾಪದ ನಿಮಿತ್ತವಾಗಿ ಅವನ ಮನೆಯನ್ನು ನಿತ್ಯದಂಡನೆಗೆ ಗುರಿಮಾಡಿದ್ದೇನೆಂದು ಅವನಿಗೆ ಮೊದಲೇ ತಿಳಿಸಿದೆನು. 14#3:14 ಯೆಶಾ 22: 14.ಏಲಿಯ ಮನೆಯವರ ಅಪರಾಧಕ್ಕೆ ಯಜ್ಞ ಅಥವಾ ನೈವೇದ್ಯಗಳಿಂದ ಎಂದಿಗೂ ಪ್ರಾಯಶ್ಚಿತ್ತವಾಗುವುದಿಲ್ಲ ಎಂಬುದಾಗಿ ಆಣೆಯಿಟ್ಟಿದ್ದೇನೆ” ಎಂದು ಹೇಳಿದನು.
15ಅನಂತರ ಸಮುವೇಲನು ಮಲಗಿ ಮುಂಜಾನೆಯಲ್ಲೇ ಎದ್ದು ಯೆಹೋವನ ಮಂದಿರದ ಬಾಗಿಲುಗಳನ್ನು ತೆರೆದನು. ಅವನು ತಾನು ಕಂಡದ್ದನ್ನು ಏಲಿಗೆ ತಿಳಿಸುವುದಕ್ಕೆ ಭಯಪಟ್ಟನು. 16ಆದರೆ ಏಲಿಯು, “ನನ್ನ ಮಗನೇ, ಸಮುವೇಲನೇ” ಎಂದು ಕರೆಯಲು ಅವನು, “ಇಗೋ, ಇದ್ದೇನೆ” ಎಂದನು. 17ಆಗ ಏಲಿಯು ಅವನಿಗೆ, “ಯೆಹೋವನು ನಿನಗೆ ತಿಳಿಸಿದ್ದೇನು? ಆತನ ಮಾತುಗಳಲ್ಲಿ ಒಂದನ್ನಾದರೂ ಮುಚ್ಚಿಡಬೇಡ; #3:17 ರೂತ 1:17.ಮುಚ್ಚಿಟ್ಟರೆ ಆತನು ಬೇಕಾದ ಹಾಗೆ ನಿನ್ನನ್ನು ದಂಡಿಸಲಿ” ಎಂದು ಹೇಳಲು 18ಸಮುವೇಲನು ಮುಚ್ಚುಮರೆಯಿಲ್ಲದೆ ಎಲ್ಲವನ್ನು ತಿಳಿಸಿದನು. ಏಲಿಯು ಅದನ್ನು ಕೇಳಿ, #3:18 ಯೋಬ 1:21; 2:10.“ಆತನು ಯೆಹೋವನು; ತನಗೆ ಸರಿಕಾಣುವುದನ್ನು ಮಾಡಲಿ” ಎಂದನು.
19ಸಮುವೇಲನು ದೊಡ್ಡವನಾಗುತ್ತಾ ಬಂದನು. ಯೆಹೋವನು ಅವನೊಡನೆ ಇದ್ದುದ್ದರಿಂದ #3:19 ಅಥವಾ ಯೆಹೋವನ.ಅವನ ಪ್ರವಾದನೆಗಳಲ್ಲಿ ಒಂದೂ ಬಿದ್ದುಹೋಗಲಿಲ್ಲ. 20ಯೆಹೋವನು ಅವನನ್ನು ತನ್ನ ಪ್ರವಾದಿಯನ್ನಾಗಿ ನೇಮಿಸಿಕೊಂಡದ್ದು ದಾನ್ ಊರಿನಿಂದ ಬೇರ್ಷೆಬದವರೆಗಿದ್ದ ಎಲ್ಲಾ ಇಸ್ರಾಯೇಲರಿಗೆ ಗೊತ್ತಾಯಿತು. 21ಯೆಹೋವನು ಶೀಲೋವಿನಲ್ಲಿ ದರ್ಶನಕೊಡುವುದಕ್ಕೆ ಪ್ರಾರಂಭಿಸಿ ತನ್ನ ವಾಕ್ಯದಿಂದ ಸಮುವೇಲನಿಗೆ ತನ್ನನ್ನು ಪ್ರಕಟಿಸಿಕೊಳ್ಳುತ್ತಾ ಬಂದನು. ಸಮುವೇಲನು ಇಸ್ರಾಯೇಲರೆಲ್ಲರಿಗೆ ದೈವೋತ್ತರಗಳನ್ನು ತಿಳಿಸುತ್ತಿದ್ದನು.

Currently Selected:

1 ಸಮು 3: IRVKan

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy