ಪುನಃ ಆತನು ನಿನ್ನನ್ನು ಕರೆದರೆ ಯೆಹೋವನೇ, ಅಪ್ಪಣೆಯಾಗಲಿ, ನಿನ್ನ ದಾಸನು ಕೇಳಿಸಿಕೊಳ್ಳುತ್ತಿದ್ದಾನೆ” ಎಂದು ಹೇಳು ಅಂದನು. ಸಮುವೇಲನು ತಿರುಗಿ ಹೋಗಿ ತನ್ನ ಸ್ಥಳದಲ್ಲಿ ಮಲಗಿಕೊಂಡನು. ಯೆಹೋವನು ಪ್ರತ್ಯಕ್ಷನಾಗಿ ಮುಂಚಿನಂತೆಯೇ “ಸಮುವೇಲನೇ, ಸಮುವೇಲನೇ” ಅಂದನು. ಸಮುವೇಲನು, “ಅಪ್ಪಣೆಯಾಗಲಿ, ನಿನ್ನ ದಾಸನು ಕೇಳಿಸಿಕೊಳ್ಳುತ್ತಿದ್ದಾನೆ” ಎಂದನು.