BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳSample

ಮೂರು ಮತ್ತು ನಾಲ್ಕು ಅಧ್ಯಾಯಗಳಲ್ಲಿ, ದೇವರ ಆತ್ಮದ ಶಕ್ತಿಯು ಯೇಸುವಿನ ಅನುಯಾಯಿಗಳನ್ನು ಹೇಗೆ ಧೈರ್ಯದಿಂದ ರಾಜ್ಯವನ್ನು ಹಂಚಿಕೊಳ್ಳಲು ಅಮೂಲ್ಯಾಗ್ರವಾಗಿ ಬದಲಾಯಿಸಿತು ಎಂಬುದನ್ನು ಲೂಕನು ನಮಗೆ ತೋರಿಸುತ್ತಾನೆ. ಅವನು ಪಾರ್ಶ್ವವಾಯುವಿಗೆ ಒಳಗಾದ ಮನುಷ್ಯನನ್ನು ಆತ್ಮದ ಶಕ್ತಿಯಿಂದ ಗುಣಪಡಿಸಿದ ಯೇಸುವಿನ ಶಿಷ್ಯರಾದ ಪೇತ್ರ ಮತ್ತು ಯೋಹಾನನ ಕುರಿತಾದ ಕಥೆಯೊಂದಿಗೆ ಪ್ರಾರಂಭವಾಗುತ್ತದೆ ಪವಾಡವನ್ನು ನೋಡುವವರು ಆಶ್ಚರ್ಯಚಕಿತರಾಗುತ್ತಾರೆ ಮತ್ತು ಪೇತ್ರನನ್ನು ಸ್ವತಃ ಎಲ್ಲವನ್ನು ತಾನೇ ಮಾಡಿದಂತೆ ನೋಡಲಾರಂಭಿಸುತ್ತಾರೆ. ಆದರೆ ಈ ಪವಾಡಕ್ಕಾಗಿ ಯೇಸುವಿಗೆ ಮಾತ್ರ ಮನ್ನಣೆ ನೀಡುವಂತೆ ಪೇತ್ರನು ಜನಸಮೂಹಕ್ಕೆ ಸವಾಲು ಹಾಕುತ್ತಾನೆ ಮತ್ತು ಎಲ್ಲಾ ಜನರ ಪುನಃಸ್ಥಾಪನೆಗಾಗಿ ಯೇಸು ಹೇಗೆ ಮರಣಹೊಂದಿ ಮತ್ತೆ ಎದ್ದರು ಎಂಬುದನ್ನು ಹಂಚಿಕೊಳ್ಳುತ್ತಾನೆ.
ದೇವಾಲಯದಲ್ಲಿ ಜನರು ಯೇಸುವನ್ನು ಶಿಲುಬೆಗೇರಿಸಿದವರು ಎಂದು ಪೇತ್ರನಿಗೆ ತಿಳಿದಿದೆ, ಆದ್ದರಿಂದ ಯೇಸುವಿನ ಬಗ್ಗೆ ಮನಸ್ಸು ಬದಲಾಯಿಸಲು ಮತ್ತು ಕ್ಷಮೆ ಕೇಳಲು ಅವರನ್ನು ಆಹ್ವಾನಿಸಲು ಅವನು ಅವಕಾಶವನ್ನು ತೆಗೆದುಕೊಳ್ಳುತ್ತಾನೆ. ಪ್ರತಿಕ್ರಿಯೆಯಾಗಿ, ಸಾವಿರಾರು ಜನರು ಪೇತ್ರನ ಸಂದೇಶವನ್ನು ನಂಬಿ ಯೇಸುವನ್ನು ಹಿಂಬಾಲಿಸಲು ಪ್ರಾರಂಭಿಸುತ್ತಾರೆ. ಆದರೆ ಎಲ್ಲರೂ ಅಲ್ಲ. ಪೇತ್ರನು ಯೇಸುವಿನ ಹೆಸರಿನಲ್ಲಿ ಉಪದೇಶ ಮಾಡುವುದನ್ನು ಮತ್ತು ಗುಣಪಡಿಸುತ್ತಿರುವುದನ್ನು ನೋಡಿದ ಧಾರ್ಮಿಕ ಮುಖಂಡರು ಕೋಪಗೊಂಡು ಪೇತ್ರನನ್ನು ಮತ್ತು ಯೋಹಾನರನ್ನು ಅಲ್ಲಿಯೇ ಬಂಧಿಸುತ್ತಾರೆ. ಅಂಗವಿಕಲನು ಹೇಗೆ ನಡೆಯಲು ಪ್ರಾರಂಭಿಸಿದನೆಂದು ಪೇತ್ರ ಮತ್ತು ಯೋಹಾನರು ವಿವರಿಸಬೇಕೆಂದು ಧಾರ್ಮಿಕ ಮುಖಂಡರು ಒತ್ತಾಯಿಸುತ್ತಾರೆ ಮತ್ತು ಹೇಗೆ ಅವರನ್ನು ಉಳಿಸಲು ಸಮರ್ಥವಾಗಿರುವ ಏಕೈಕ ಹೆಸರು ಯೇಸು ಎಂದು ಹಂಚಿಕೊಳ್ಳಲು ಪವಿತ್ರಾತ್ಮವು ಪೇತ್ರನಿಗೆ ಅಧಿಕಾರ ನೀಡುತ್ತದೆ. ಪೇತ್ರನ ಧೈರ್ಯವಾದ ಸಂದೇಶವನ್ನು ಕೇಳುವಾಗ ಮತ್ತು ಯೋಹಾನನ ವಿಶ್ವಾಸವನ್ನು ಗಮನಿಸಿ ಧಾರ್ಮಿಕ ಮುಖಂಡರು ಗೊಂದಲಕ್ಕೊಳಗಾಗುತ್ತಾರೆ. ಯೇಸುವಿನ ಕಾರಣದಿಂದಾಗಿ ಪೇತ್ರನು ಮತ್ತು ಯೋಹಾನರು ಎಷ್ಟು ಬದಲಾಗಿದ್ದಾರೆಂದು ಅವರು ನೋಡಬಹುದಾಗಿತ್ತು, ಮತ್ತು ಮಾಡಿದ ಪವಾಡವನ್ನು ಅವರು ಅಲ್ಲಗಳೆಯುವಂತಿಲ್ಲ.
ಓದಿ, ಯೋಚಿಸಿ ಮತ್ತು ಪ್ರತಿಫಲಿಸಿ :
• ಯೇಸುವಿನ ಪುನರುತ್ಥಾನಕ್ಕೆ ಸಾಕ್ಷಿಯಾದ ನಂತರ ಮತ್ತು ಪವಿತ್ರಾತ್ಮನ ಶಕ್ತಿಯನ್ನು ಪಡೆದ ನಂತರ ಪೇತ್ರನು ಒಬ್ಬ ಹೊಸ ವ್ಯಕ್ತಿ. ಇದು ಅದ್ಭುತವಾಗಿದೆ! ನೀವೇ ನೋಡಿ. ಪವಿತ್ರಾತ್ಮರನ್ನು ಸ್ವೀಕರಿಸುವ ಮೊದಲು ಪೇತ್ರನು ತನ್ನನ್ನು ಪ್ರಶ್ನಿಸಿದವರಿಗೆ ನೀಡಿದ ಪ್ರತಿಕ್ರಿಯೆಯನ್ನು (ಲೂಕ 22: 54-62 ನೋಡಿ) ಪವಿತ್ರಾತ್ಮರನ್ನು ಪಡೆದ ನಂತರ ಅವರ ಪ್ರತಿಕ್ರಿಯೆಯೊಂದಿಗೆ ಹೋಲಿಸಿ (ಅಪೊಸ್ತಲರ ಕೃತ್ಯಗಳ 4: 5-14 ನೋಡಿ). ವಿವರಗಳಿಗೆ ಗಮನ ಕೊಡಿ. ಎರಡು ದೃಶ್ಯಗಳ ನಡುವಿನ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ಗಮನಿಸಿ. ನೀವು ಏನು ಗಮನಿಸುತ್ತೀರಿ?
• ಯೇಸು ನಿಮ್ಮನ್ನು ಅಥವಾ ನಿಮಗೆ ತಿಳಿದಿರುವ ವ್ಯಕ್ತಿಯನ್ನು ಯಾವ ನಿರ್ದಿಷ್ಟ ರೀತಿಯಲ್ಲಿ ಬದಲಾಯಿಸಿದ್ದಾರೆ?
• ನಿಮ್ಮ ಓದುವಿಕೆ ಹಾಗು ಪ್ರತಿಬಿಂಬವು ಒಂದು ಪ್ರಾರ್ಥನೆಯನ್ನು ಪ್ರೇರೇಪಿಸಲಿ. ವಿಷ್ಮಯವನ್ನು ಪ್ರೇರೇಪಿಸಿದ್ದೇನು ಎಂಬುದರ ಬಗ್ಗೆ ದೇವರೊಂದಿಗೆ ಮಾತನಾಡಿ, ನಿಮಗೆ ಬೇಕಾದುದನ್ನು ಕುರಿತು ಪ್ರಾಮಾಣಿಕವಾಗಿರಿ ಮತ್ತು ನಿಮ್ಮ ಜೀವನವನ್ನು ಬದಲಾಯಿಸಲು ಅವರನ್ನು ಆಹ್ವಾನಿಸಿ.
Scripture
About this Plan

ವ್ಯಕ್ತಿಗಳು, ಸಣ್ಣ ಗುಂಪುಗಳು ಮತ್ತು ಕುಟುಂಬಗಳನ್ನು 20 ದಿನಗಳಲ್ಲಿ ಅಪೊಸ್ತಲರ ಕೃತ್ಯಗಳನ್ನು ಓದಲು ಪ್ರೇರೇಪಿಸಲು ಬೈಬಲ್ ಪ್ರಾಜೆಕ್ಟ್ ಅಪ್‌ಸೈಡ್-ಡೌನ್ ಕಿಂಗ್ಡಮ್ ಭಾಗ 2 ವಿನ್ಯಾಸಗೊಳಿಸಿದೆ. ಈ ಯೋಜನೆಯು ಅನಿಮೇಟೆಡ್ ವೀಡಿಯೊಗಳು, ಒಳನೋಟವುಳ್ಳ ಸಾರಾಂಶಗಳು ಮತ್ತು ಪ್ರತಿಫಲಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ, ಇದು ಭಾಗವಹಿಸುವವರಿಗೆ ಯೇಸುವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಲೇಖಕರ ಅದ್ಭುತ ಸಾಹಿತ್ಯ ವಿನ್ಯಾಸ ಮತ್ತು ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳುತ್ತದೆ.
More
Related Plans

The Vision of His Glory by Anne Graham Lotz

Praying With Women of the Bible

Two-Year Chronological Bible Reading Plan (First Year-October)

Five Miracles of the Bible

Psalm 33 - Cosmic Vision

Discern and Overcome Common Temptations

Growing in Faith in the Psalms

Always Remember: 6 Days of Wisdom From Friends

Carried Through Cancer: Five Stories of Faith
