BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುSample

"ಯೇಸು ಪಟ್ಟಣಗಳಲ್ಲಿಯೂ ಹಳ್ಳಿಗಳಲ್ಲಿಯೂ ದೇವರ ರಾಜ್ಯದ ಕುರಿತು ಸಾರುವುದಕ್ಕೆ ಪ್ರಾರಂಭಿಸಿದನು ಎಂದು ಲೂಕನು ಹೇಳುತ್ತಿರುವನು. ಆದರೆ ಯೇಸು ವಿಶಿಷ್ಟ ರಾಜನಂತೆ ರಾಜ ಪರಿವಾರದೊಂದಿಗೆ ಪ್ರಯಾಣಿಸುವ ಬದಲು, ತಾನು ಆರಿಸಿಕೊಂಡಿದ್ದ ಹನ್ನೆರಡು ಮಂದಿಯ ಗಣನೆಗೆ ಬಾರದವರ ತಂಡದೊಂದಿಗೆ ಮತ್ತು ತಾನು ಗುಣಪಡಿಸಿ ಬಿಡುಗಡೆ ಮಾಡಿದ್ದ ಕೆಲವು ಸ್ತ್ರೀಯರೊಂದಿಗೆ ಪ್ರಯಾಣ ಮಾಡಿದನು. ಯೇಸುವಿನ ಸಹಚರರು ಕೇವಲ ಪ್ರಯಾಣಕ್ಕಾಗಿ ಮಾತ್ರ ಜೊತೆಗೆ ಹೋಗುವವರಾಗಿರಲಿಲ್ಲ; ಅವರು ಅದರಲ್ಲಿ ಭಾಗವಹಿಸುವವರಾಗಿದ್ದರು. ಯೇಸುವಿನ ಸುವಾರ್ತೆ, ಬಿಡುಗಡೆ ಮತ್ತು ಗುಣಪಡಿಸುವಿಕೆಯನ್ನು ಹೊಂದಿಕೊಂಡಿರುವವರು ಅದನ್ನು ಒಂದು ಊರಿನಿಂದ ಮತ್ತೊಂದು ಊರಿಗೆ ತಿಳಿಸುವಂಥವರಾಗಿರಬೇಕು.
ಅವರ ಪ್ರಯಾಣಗಳು ಅದ್ಭುತಕರವಾದ ಅನುಭವಗಳಿಂದ ಕೂಡಿತ್ತು. ಯೇಸು ಸಮುದ್ರದ ಬಿರುಗಾಳಿಯನ್ನು ಶಾಂತಗೊಳಿಸಿದನು, ಸಾವಿರಾರು ದೆವ್ವಗಳು ಹಿಡಿದ್ದ ವ್ಯಕ್ತಿಯನ್ನು ಬಿಡಿಸಿದನು, ಹನ್ನೆರಡು ವರ್ಷಗಳಿಂದ ರೋಗದಿಂದ ಬಳಲುತ್ತಿದ್ದ ಸ್ತ್ರೀಯನ್ನು ಗುಣಪಡಿಸಿದನು, ಹನ್ನೆರಡು ವರ್ಷದ ಹುಡುಗಿಯನ್ನು ಮರಣದಿಂದ ಜೀವಂತವಾಗಿ ಎಬ್ಬಿಸಿದನು ಮತ್ತು ಒಬ್ಬ ಹುಡುಗನ ಊಟದಿಂದ ಸಾವಿರಾರು ಜನರಿಗೆ ಆಹಾರವನ್ನು ಒದಗಿಸಿಕೊಟ್ಟನು - ಎಲ್ಲರೂ ಊಟ ಮಾಡಿದ ನಂತರವೂ ಹನ್ನೆರಡು ಬುಟ್ಟಿಗಳಷ್ಟು ಊಟವು ಉಳಿದಿತ್ತು!
ಇಂದಿನ ವಾಕ್ಯಭಾಗವನ್ನು ನೀವು ಓದುತ್ತಿರುವಾಗ, ಲೂಕನು “ಹನ್ನೆರಡು” ಎಂಬ ಪದವನ್ನು ಪದೇ ಪದೇ ಬಳಸಿರುವುದನ್ನು ನೀವು ಕಾಣುವಿರಿ. ಯೇಸು ತಾನು ಇಸ್ರಾಯೇಲಿನ ಹನ್ನೆರಡು ಕುಲಗಳನ್ನು ಪುನಃಸ್ಥಾಪಿಸುವೆನು ಎಂಬುದನ್ನು ತೋರಿಸುವುದಕ್ಕಾಗಿ ಉದ್ದೇಶಪೂರ್ವಕವಾಗಿಯೇ ಹನ್ನೆರಡು ಮಂದಿ ಶಿಷ್ಯರನ್ನು ನೇಮಿಸಿದನು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಲೂಕನು ಈ ಸಂಗತಿಯನ್ನು ಎತ್ತಿತೋರಿಸಲು ಬಯಸುತ್ತಿರುವುದ್ದರಿಂದ, ಅವನು ತನ್ನ ಸುವಾರ್ತಾ ಪುಸ್ತದಲ್ಲೆಲ್ಲಾ “ಹನ್ನೆರಡು” ಎಂಬ ಪದವನ್ನು ಹನ್ನೆರಡು ಬಾರಿ ಮತ್ತೇ ಮತ್ತೇ ಬಳಸಿದ್ದಾನೆ. ಅವನು ಒಂದೊಂದು ಸಾರಿಯೂ ಈ ಪದವನ್ನು ಬಳಸುವಾಗ, ಯೇಸು ಇಸ್ರಾಯೇಲರ ಹನ್ನೆರಡು ಕುಲಗಳನ್ನು ವಿಮೋಚಿಸುತ್ತಾನೆಂದೂ, ಇಸ್ರಾಯೇಲರ ಮೂಲಕ ಇಡೀ ಲೋಕವನ್ನುವಿಮೋಚಿಸುತ್ತಾನೆಂದೂ ತೋರಿಸುತ್ತಿರುವನು.
ಇಸ್ರಾಯೇಲರ ಹನ್ನೆರಡು ಕುಲಗಳ ಮೂಲಕ ಸಕಲ ರಾಷ್ಟ್ರಗಳು ಆಶೀರ್ವದಿಸಲ್ಪಡುತ್ತವೆ ಎಂದು ದೇವರು ವಾಗ್ದಾನ ಮಾಡಿದನು. ದೇವರು ಇಸ್ರಾಯೇಲರನ್ನು ಸಕಲ ರಾಷ್ಟ್ರಗಳಿಗೆ ಬೆಳಕಾಗಿರುವುದಕ್ಕಾಗಿ ಕರೆದನು. ಇಸ್ರಾಯೇಲರು ತಾವು ಮಾಡಬೇಕಾಗಿದ್ದ ಕರ್ತವ್ಯಗಳಲ್ಲಿ ವಿಫಲರಾದರು, ಆದರೆ ದೇವರು ತನ್ನ ವಾಗ್ದಾನಗಳಿಗೆ ನಂಬಿಗಸ್ತನಾಗಿದ್ದನು. ಲೋಕಕ್ಕೆ ಆಶೀರ್ವಾದವಾಗುವುದಕ್ಕೆ ಕರೆಯಲ್ಪಟ್ಟ ಇಸ್ರಾಯೇಲರ ಕರೆಯನ್ನು ಪುನಃಸ್ಥಾಪಿಸಲು ಯೇಸು ಬಂದನು, ದೇವರ ರಾಜ್ಯದ ಕುರಿತು ಸಾರಲು ಯೇಸುಹೊಸ ಹನ್ನೆರಡು ಮಂದಿಯನ್ನು ಕಳುಹಿಸುವ ಮೂಲಕ ಅದನ್ನು ಮಾಡಿದನು.
ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:
•ಮೆಸ್ಸೀಯನ ಸುವಾರ್ತೆಯನ್ನು ಸ್ವೀಕರಿಸಿಕೊಳ್ಳುವವರೇ (ಯೆಶಾಯ 61:1-3) “ಪಾಳುಬಿದ್ದ ಪಟ್ಟಣಗಳನ್ನು ಜೀರ್ಣೋದ್ಧಾರ ಮಾಡಲು” ಅದನ್ನು ಹಂಚಿಕೊಳ್ಳುವವರು ಆಗಿರುತ್ತಾರೆ (ಯೆಶಾಯ 1: 4). ಲೂಕನ ಸುವಾರ್ತೆಯಲ್ಲಿರುವ ಈ ವಾಕ್ಯಭಾಗಗಳ ಬೆಳಕಿನಡಿಯಲ್ಲಿ ಯೆಶಾಯ 61 ನೇ ಅಧ್ಯಾಯವನ್ನು ಪುನರವಲೋಕನ ಮಾಡಿರಿ. ಅದರಲ್ಲಿ ನೀವು ಏನನ್ನು ಗಮನಿಸಿದ್ದೀರಿ?
•ಯೆಶಾಯ 42:6-7 ಓದಿರಿ. ಇಸ್ರಾಯೇಲನ್ನು ದೇಶಗಳಿಗೆ ಬೆಳಕಾಗಿ ನೇಮಿಸುವುದರ ವಿಷಯದಲ್ಲಿರುವ ಯೆಹೋವನ ಬದ್ಧತೆಯ ಕುರಿತು ಚಿಂತನೆ ಮಾಡಿರಿ. ನೀವು ಅದರಲ್ಲಿ ಏನನ್ನು ಗಮನಿಸುದ್ದೀರಿ?
•ದೇವರ ರಾಜ್ಯವನ್ನು ಹೇಗೆ ಸ್ವೀಕರಿಸಿಕೊಳ್ಳಬಹುದು ಎಂಬುದನ್ನು ವಿವರಿಸಲು ಯೇಸು ಸಾಮ್ಯಗಳನ್ನು ಬೋಧಿಸಿದನು. ಬೀಜವನ್ನು ಬಿತ್ತುವಾಗ ಭೂಮಿಯು ಅದನ್ನು ಒಳ್ಳೆಯ ರೀತಿಯಲ್ಲಿ ಸ್ವೀಕರಿಸಿಕೊಂಡು ಹೇರಳವಾಗಿ ಫಲಕೊಡುವ ರೀತಿಯಲ್ಲಿ ಬೆಳೆಯಬಹುದು ಅಥವಾ ಅಡ್ಡಿಗಳನ್ನು ಎದುರಿಸಿ ಬೆಳೆಯುವುದರಲ್ಲಿ ವಿಫಲವಾಗಬಹುದು. ದೀಪದ ಬೆಳಕಿನಂತಿರಬಹುದು, ಆ ಬೆಳಕನ್ನು ಎಲ್ಲರೂ ಹೊಂದಿಕೊಳ್ಳುವ ರೀತಿಯಲ್ಲಿ ಅದನ್ನು ಇಡಬಹುದು, ಅಥವಾ ಅದನ್ನು ಬಚ್ಚಿಡಬಹುದು. ಯೇಸುವಿನ ಕುಟುಂಬದವರು ದೇವರ ವಾಕ್ಯಗಳನ್ನು ಸ್ವೀಕರಿಸಿಕೊಂಡು ಕ್ರಿಯೆಗಳ ಮೂಲಕ ಅದಕ್ಕೆ ಪ್ರತಿಕ್ರಿಯಿಸುತ್ತಾ ಲೋಕಕ್ಕೆ ಆಶೀರ್ವಾದವಾಗಿರುತ್ತಾರೆ (ಲೂಕನು 8:21). ದೇವರ ರಾಜ್ಯಕ್ಕೆ ಪ್ರಾಮಾಣಿಕವಾಗಿ ನೀವು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತೀರಿ? ಲೋಕಕ್ಕೆ ಆಶೀರ್ವಾದವಾಗುವ ಸಲುವಾಗಿ ಯೇಸುವಿನೊಂದಿಗೂ ಆತನ ಸೇವೆಯೊಂದಿಗೂ ಸೇರದಂತೆ ನಿಮ್ಮನ್ನು ಬೇರೆಡೆಗೆ ಸೆಳೆಯುವ ಯಾವುದಾದರೂ ಅಡ್ಡಿಗಳು, ಆತಂಕಗಳು ಅಥವಾ ಪ್ರಲೋಭನೆಗಳು ಇವೆಯೇ?
• ನಿಮ್ಮ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ಆಶ್ಚರ್ಯಗೊಳಿಸುವ ವಿಷಯದ ಕುರಿತು, ಆತನ ಸಂದೇಶವನ್ನು ನೀವು ಹೇಗೆ ಒಪ್ಪಿಕೊಳ್ಳುತ್ತೀರಿ, ಆತನ ಶುಭವಾರ್ತೆಯನ್ನು ಹಂಚಿಕೊಳ್ಳುವುದರಲ್ಲಿ ಯಾವ ವಿಷಯದಲ್ಲಿ ನೀವು ಕಷ್ಟಪಡುತ್ತಿದ್ದೀರಿ ಎಂಬುದರ ಕುರಿತು ಮತ್ತು ನಿಮಗೆ ಬೇಕಾದುದ್ದರ ಕುರಿತು ದೇವರೊಂದಿಗೆ ಮಾತನಾಡಿರಿ."
About this Plan

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.
More
Related Plans

Don’t Make It Happen: Understanding the Purpose and Beauty of Every Season

Vessels Unto Honour

Rich in Love: Growing Financial Peace Together

365 BIBLE

Why Money Stress Proves You're Thinking Too Small

New Attitudes for a New Year

Christmas Starts Here — Living the Spirit of Emmanuel

21 Days of Prayer & Fasting

Living God's Promise in the Present
