BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುSample

"ರೋಮನ್ ದೇಶಾಧಿಪತಿಯಾದ ಪೊಂತ್ಯ ಪಿಲಾತನ ಅನುಮತಿಯಿಲ್ಲದೆ ಯೇಸುವಿಗೆ ಮರಣದಂಡನೆ ವಿಧಿಸಲು ದೇವಾಲಯದ ಮುಖಂಡರಿಂದ ಸಾಧ್ಯವಿರಲಿಲ್ಲ. ಆದ್ದರಿಂದ ಅವರುಯೇಸುವನ್ನು ರೋಮನ್ ಚಕ್ರವರ್ತಿಯ ವಿರುದ್ಧ ದಂಗೆಯನ್ನು ಎಬ್ಬಿಸುವ ಬಂಡಾಯ ರಾಜನೆಂದು ಆತನ ಮೇಲೆ ಆರೋಪ ಮಾಡಿದರು. ಪಿಲಾತನು ಯೇಸುವಿಗೆ,“ನೀನು ಯೆಹೂದ್ಯರ ಅರಸನಾ?” ಎಂದು ಕೇಳಿದನು. ಮತ್ತು ಯೇಸು, “ನೀವು ಹಾಗೆ ಹೇಳುತ್ತೀರಿ” ಎಂದು ಉತ್ತರಿಸುತ್ತಾರೆ. ಯೇಸು ನಿರಾಪಧಿಯಾದ ಮನುಷ್ಯನೂ ಮರಣದಂಡನೆಗೆ ಅರ್ಹನಲ್ಲ ಎಂದು ಪಿಲಾತನು ಅರಿತುಕೊಂಡನು, ಆದರೆ ಧಾರ್ಮಿಕ ನಾಯಕರು ಆತನು ಅಪಾಯಕಾರಿಯಾದ ಮನುಷ್ಯನು ಎಂದು ಅವನ ಮೇಲೆ ಒತ್ತಡವನ್ನು ಹಾಕಿದರು. ಆದ್ದರಿಂದ ಯೇಸುವನ್ನು ಹೆರೋದನ ಬಳಿಗೆ ಕಳುಹಿಸಿದನು ಆದರೆ ಆತನು ಅಲ್ಲಿಂದ ಹೊಡಿಸಿಕೊಂಡು ರಕ್ತಮಯವಾಗಿ ಪಿಲಾತನ ಬಳಿಗೆ ತಿರುಗಿ ಬಂದ ನಂತರ, ಅವರು ಒಂದು ಭಯಂಕರವಾದ ಸಂಚನ್ನು ರೂಪಿಸಿದರು. ಪಿಲಾತನು ಯೇಸುವಿಗೆ ಬದಲಾಗಿ ರೋಮಿಗೆ ವಿರುದ್ಧವಾಗಿದ್ದ ದಂಗೇ ಎದ್ದ ಬರಬ್ಬನು ಎಂಬ ನಿಜವಾದ ದಂಗೇಖೋರನನ್ನು ಬಿಡುಗಡೆ ಮಾಡಿದನು. ಅಪರಾಧಿಗೆ ಬದಲಿಗೆ ನಿರಾಪರಾಧಿಯನ್ನು ಒಪ್ಪಿಸಿಕೊಟ್ಟರು.
ಯೇಸುವನ್ನು ಬೇರೆ ಇಬ್ಬರು ಅಪರಾಧಿಗಳೊಂದಿಗೆ ಕರೆದುಕೊಂಡು ಹೋಗಿ ರೋಮನ್ನರು ಮರಣದಂಡನೆ ವಿಧಿಸುತ್ತಿದ್ದ ಸಾಧನಕ್ಕೆ ಮೊಳೆಯಿಂದ ಜಡಿದರು. ಆತನನ್ನು ಸಾರ್ವಜನಿಕ ನೋಟವಾಗಿ ಮಾಡಿದರು. ಜನರು ಆತನ ಬಟ್ಟೆಗಳನ್ನು ಹರಾಜು ಹಾಕಿ, "ನೀನು ಮೆಸ್ಸಿಯ ರಾಜನಾಗಿದ್ದರೆ, ನಿನ್ನನ್ನು ರಕ್ಷಿಸಿಕೋ!" ಎಂದು ಅಪಹಾಸ್ಯ ಮಾಡಿದರು. ಆದರೆ ಯೇಸು ತನ್ನ ಶತ್ರುಗಳನ್ನು ಕೊನೆಯ ಉಸಿರಿನವರೆಗೂ ಪ್ರೀತಿಸಿದನು. ಆತನು ತನ್ನನ್ನು ಕೊಂದವರಿಗೆ ಕ್ಷಮಾಪಣೆಯನ್ನು ಕೋರಿದನು, ಆತನ ಪಕ್ಕದಲ್ಲಿ ಸಾಯುತ್ತಿದ್ದ ಅಪರಾಧಿಗಳಲ್ಲಿ ಒಬ್ಬನಿಗೆ, "ಈ ಹೊತ್ತು ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ" ಎಂದು ಹೇಳಿ ಅವನಿಗೆ ನಿರೀಕ್ಷೆಯನ್ನು ಕೊಟ್ಟನು.
ಆಕಾಶವು ಇದ್ದಕ್ಕಿದ್ದಂತೆ ಕತ್ತಲಾಯಿತು, ದೇವಾಲಯದ ತೆರೆಯು ಹರಿದು ಎರಡು ಭಾಗವಾಯಿತು, ಯೇಸು ತನ್ನ ಕೊನೆಯ ಉಸಿರನ್ನು ಎಳೆಯುತ್ತಾ ದೇವರೇ, “ನಾನು ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ” ಎಂದು ಕೂಗಿದನು. ಅಲ್ಲಿದ್ದ ರೋಮನ್ ಶತಾಧಿಪತಿಯು ನಡೆದ್ದದ್ದೆಲ್ಲದಕ್ಕೆ ಸಾಕ್ಷಿಯಾಗಿ “ನಿಜವಾಗಿಯೂ ಈ ಮನುಷ್ಯನು ನಿರಪರಾಧಿಯಾಗಿದ್ದನು” ಎಂದು ಹೇಳಿದನು.
ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:
•ಯೇಸುವಿನ ಮರಣದ ಕುರಿತು ಲೂಕನು ಬರೆದಿರುವ ಕಥನವು ಇವತ್ತು ನಿಮ್ಮ ಮೇಲೆ ಎಂಥ ಪ್ರಭಾವ ಬೀರುತ್ತದೆ?
•ಯೇಸುವಿಗೆ ಮರಣದಂಡನೆ ವಿಧಿಸಬೇಕೆಂಬ ಬೇಡಿಕೆಯನ್ನಿಟ್ಟ ಧಾರ್ಮಿಕ ಜನರ ಗುಂಪಿನಿಂದ ಆತನನ್ನು ಬಿಡಿಸಲು ಪ್ರಯತ್ನಿಸಿದ ಪಿಲಾತನ ಮತ್ತು ಹೆರೋದನ ಪ್ರಯತ್ನಗಳನ್ನು ಹೋಲಿಸಿರಿ. ನೀವು ಅದರಲ್ಲಿ ಏನನ್ನು ಗಮನಿಸಿದ್ದೀರಿ? ಯೇಸುವಿಗೆ ವಿರುದ್ಧವಾಗಿ ಮಾಡಲಾದ ನಿಜವಾದ ಆರೋಪಗಳನ್ನು ನೀವು ಯೋಚಿಸುವಾಗ (ವಚನ 23: 2), ಅದು ಎಷ್ಟು ಅನಿರೀಕ್ಷಿತವಾಗಿತ್ತು?
•ಅಪರಾಧಿಗಳ ನಡುವಿನ ಸಂಭಾಷಣೆಯನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿರಿ (23:39-43 ಅನ್ನು ನೋಡಿರಿ). ನೀವು ಅದರಲ್ಲಿ ಏನನ್ನು ಗಮನಿಸಿದ್ದೀರಿ? ಅಪರಾಧಿಗಳ ಬಿನ್ನಹಕ್ಕೆ ಯೇಸು ಕೊಟ್ಟ ಉತ್ತರವು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಈ ಸಂಭಾಷಣೆಯನ್ನು ಕುರಿತು ನೀವು ಕಲಿಯುವಾಗ, ಯೇಸುವಿನ ರಾಜ್ಯದ ಸ್ವರೂಪದ ಕುರಿತು ನೀವು ಏನನ್ನು ಕಲಿತುಕೊಂಡಿರಿ?
•ತನ್ನ ಒಡನಾಡಿಗಳು ಮಾಡಿದ ಮಾರಕ ಸಂಕಲ್ಪವನ್ನು ವಿರೋಧಿಸಿದಂಥ ಯೋಸೇಫನೆಂಬ ಧಾರ್ಮಿಕ ನಾಯಕನ ಕುರಿತು ಲೂಕನು ಹೇಳುತ್ತಿರುವನು (23:50-51, 22:66-71, 23:1). ಯೋಸೇಫನು ಯೇಸುವಿನ ಮೇಲಿರುವ ತನ್ನ ಪ್ರೀತಿಯನ್ನು ಹೇಗೆ ತೋರಿಸಿದನು ಎಂಬುದನ್ನು ಗಮನಿಸಿರಿ (23:52-53 ನೋಡಿರಿ). ನಿಮ್ಮಿಂದ ಕೆಲವೊಂದನ್ನು ಒಪ್ಪಿಕೊಳ್ಳಲಾಗದ ಗುಂಪಿನ ಸದಸ್ಯರು ನೀವಾಗಿದ್ದೀರಾ? ನಿಮ್ಮ ನಂಬಿಕೆಗಳನ್ನು ನೀವು ಹೇಗೆ ತಿಳಿಯಪಡಿಸುವಿರಿ?
•ಪಿಲಾತನು, ಹೆರೋದನು, ಅಳುತ್ತಿರುವ ಜನರು, ಅಪಹಾಸ್ಯ ಮಾಡುತ್ತಿರುವ ಜನರು, ಸೀಮೋನನು, ಒಳಸಂಚು ರೂಪಿಸುತ್ತಿರುವ ಧಾರ್ಮಿಕ ಮುಖಂಡರು, ಭಿನ್ನಾಭಿಪ್ರಾಯುಳ್ಳ ಯೋಸೇಫನು, ಯೇಸುವಿನ ಎಡಭಾಗದಲ್ಲಿರುವ ಕಳ್ಳನು ಮತ್ತು ಅವರ ಬಲಭಾಗದಲ್ಲಿರುವ ಕಳ್ಳನು, ಇವರೆಲ್ಲರೂ ಯೇಸುವಿನೊಂದಿಗೆ ವಿಭಿನ್ನವಾದ ಒಡನಾಟ ಉಳ್ಳವರಾಗಿದ್ದರು. ಈ ಕಥೆಯಲ್ಲಿರುವ ಯಾವ ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ನೀವು ಹೆಚ್ಚು ಸಾದೃಶ್ಯವುಳ್ಳವರಾಗಿದ್ದೀರಿ?
•ನಿಮ್ಮ ಓದುವಿಕೆಯೂ ಪ್ರತಿಫಲನವೂ ನಿಮ್ಮ ಹೃದಯದಿಂದ ದೇವರಿಗೆ ಪ್ರಾರ್ಥನೆ ಮಾಡುವಂತೆ ನಿಮ್ಮನ್ನು ಪ್ರೇರೇಪಿಸಲಿ. ಆತನು ಪ್ರಾರ್ಥನೆಯನ್ನು ಕೇಳಿಸಿಕೊಳ್ಳುತ್ತಿದ್ದಾನೆ."
Scripture
About this Plan

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.
More
Related Plans

5 Spiritual Needs You Must Not Ignore

Holy, Healthy, Whole: Growing Fruits of the Spirit for Weight Loss and Wellness

Fatherless No More: Discovering God’s Father-Heart

The Story of God

5 Pillars of Faith & Finances: Anchored in God, Growing in Wealth

Heal Girl Heal

God's Will for Your Work

Celebrating Character

Helping Your Kids Know God's Good Design
