BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣSample

ಯೇಸುವಿನ ರಾಜ್ಯವು ಪೀಡಿತರಿಗೆ ಒಳ್ಳೆಯ ಸುದ್ದಿ, ಮತ್ತು ದೇವರ ಅಗತ್ಯವನ್ನು ಅರ್ಥಮಾಡಿಕೊಳ್ಳುವ ಪ್ರತಿಯೊಬ್ಬರಿಗೂ ಇದು ಮುಕ್ತವಾಗಿದೆ. ಇದನ್ನು ವಿವರಿಸಲು, ಯೇಸು ಅವರ ಕ್ಷಮೆ, ಗುಣಪಡಿಸುವಿಕೆ ಮತ್ತು ಮತ್ತು ಉದಾರತೆಯನ್ನು ಪಡೆಯುವ ರೋಗಿಗಳು ಮತ್ತು ಬಡವರೊಂದಿಗೆ ಔತಣ ಕೂಟದಲ್ಲಿ ಪಾಲ್ಗೊಳ್ಳುವ ಬಗ್ಗೆ ಲ್ಯೂಕನು ಹೇಳುತ್ತಾನೆ. ಇದಕ್ಕೆ ವ್ಯತಿರಿಕ್ತವಾಗಿ, ಯೇಸು ತನ್ನ ಸಂದೇಶವನ್ನು ತಿರಸ್ಕರಿಸುವ ಮತ್ತು ಅವನ ವಿಧಾನಗಳ ಬಗ್ಗೆ ವಾದಿಸುವ ಧಾರ್ಮಿಕ ಮುಖಂಡರೊಂದಿಗೂ ಸಹ ಔತಣ ಕೂಟದಲ್ಲಿ ಪಾಲ್ಗೊಳ್ಳುತ್ತಾರೆ. ದೇವರ ರಾಜ್ಯವು ಏನೆಂದು ಅವರಿಗೆ ಅರ್ಥವಾಗುವುದಿಲ್ಲ, ಆದ್ದರಿಂದ ಅವನು ಅವರಿಗೆ ಒಂದು ಸಾಮ್ಯವನ್ನು ಹೇಳುತ್ತಾರೆ. ಅದು ಹೀಗಿದೆ.
ಒಬ್ಬ ತಂದೆಗೆ ಇಬ್ಬರು ಗಂಡು ಮಕ್ಕಳಿದ್ದರು. ಹಿರಿಯ ಮಗ ನಂಬಲರ್ಹ ಮತ್ತು ತಂದೆಯನ್ನು ಗೌರವಿಸುತ್ತಾನೆ, ಆದರೆ ಕಿರಿಯ ಮಗ ಅವ್ಯವಸ್ಥೆ. ಅವನು ತನ್ನ ಆನುವಂಶಿಕತೆಯನ್ನು ಮೊದಲೇ ಕಸಿದುಕೊಳ್ಳುತ್ತಾನೆ, ದೂರ ಪ್ರಯಾಣಿಸುತ್ತಾನೆ ಮತ್ತು ಅದನ್ನೆಲ್ಲ ಪಾರ್ಟಿ ಮಾಡಲು ಮತ್ತು ದಡ್ಡನಾಗಿ ಕಳೆಯುತ್ತಾನೆ. ನಂತರ ಬರಗಾಲ ಉಂಟಾಗುತ್ತದೆ, ಮತ್ತುಆ ಮಹಾನ ಹಣವೆಲ್ಲ ಖಾಲಿಯಾಗುತ್ತದೆ, ಆದ್ದರಿಂದ ಅವನು ಬೇರೊಬ್ಬರ ಹಂದಿಗಳನ್ನು ನೋಡಿಕೊಳ್ಳುವ ಕೆಲಸವನ್ನು ಪಡೆಯುತ್ತಾನೆ. ಒಂದು ದಿನ ಅವನು ಹಸಿವಿನಿಂದ ಬಳಲಿ ಹಂದಿಯಾ ಊಟದ ಎಂಜಿಲನ್ನು ತಿನ್ನಲು ಸಿದ್ಧನಾದನು, ಮತ್ತು ಅವನ ಮನೆಯಲ್ಲಿ ಅವನ ತಂದೆಗೆ ಕೆಲಸ ಎಷ್ಟೋ ಉತ್ತಮ ಎಂದು ಯೋಚಿಸಿದನು. ಆದ್ದರಿಂದ ಅವನು ತನ್ನ ಕ್ಷಮೆಯಾಚನೆಯನ್ನು ಪೂರ್ವಾಭ್ಯಾಸ ಮಾಡುತ್ತಾ ಮನೆಗೆ ಹಿಂದಿರುಗುತ್ತಾನೆ. ಮಗ ಇನ್ನೂ ದೂರದಲ್ಲಿದ್ದಾಗ, ತಂದೆ ಅವನನ್ನು ನೋಡಿ ತುಂಬಾ ಸಂತೋಷವಾಗುತ್ತಾನೆ. ಅವನ ಮಗ ಜೀವಂತವಾಗಿದ್ದಾನೆ! ಅವನು ಕ್ಷಾಮದಿಂದ ಬದುಕುಳಿದನು! ತಂದೆ ಅವನ ಬಳಿಗೆ ಓಡಿ ಅವನಿಗೆ ಮುತ್ತಿಟ್ಟು ತಬ್ಬಿಕೊಳ್ಳುವುದನ್ನು ನಿಲ್ಲಿಸಲು ಸಾಧ್ಯವೇ ಆಗಲಿಲ್ಲ. ಮಗನು ತನ್ನ ಭಾಷಣವನ್ನು ಪ್ರಾರಂಭಿಸುತ್ತಾನೆ, “ಅಪ್ಪಾ, ನಾನು ನಿನ್ನ ಮಗನಾಗಲು ಅರ್ಹನಲ್ಲ. ಬಹುಶಃ ನಾನು ಬಂದು ನಿಮಗಾಗಿ ಕೆಲಸ ಮಾಡಬಹುದು ... ” ಆದರೆ ಅವನು ಮುಗಿಸುವ ಮೊದಲೇ, ತಂದೆ ಉತ್ತಮವಾದ ನಿಲುವಂಗಿ, ಹೊಸ ಸ್ಯಾಂಡಲ್ ಮತ್ತು ಮಗನಿಗೆ ಅಲಂಕಾರಿಕ ಉಂಗುರವನ್ನು ತಾರೆಯಲು ತನ್ನ ಸೇವಕರಿಗೆ ಆದೇಶಿಸುತ್ತಾನೆ. ಏಕೆಂದರೆ ಅವರ ಮಗ ಮನೆಗೆ ಮರಳಿದ್ದನ್ನು ಆಚರಿಸಲು ಸಮಯವಾಗಿದ್ದರಿಂದ ಅವರು ಅತ್ಯುತ್ತಮ ಔತಣಕೂಟವನ್ನು ಸಿದ್ಧಪಡಿಸುತ್ತಾರೆ. ಪಾರ್ಟಿ ಪ್ರಾರಂಭವಾಗುತ್ತಿದ್ದಂತೆ, ಹಿರಿಯ ಮಗ ದೀರ್ಘ, ಕಠಿಣ ದಿನದ ಕೆಲಸದಿಂದ ಹಿಂತಿರುಗಿದಾಗ ಈ ಎಲ್ಲಾ ಸಂಗೀತ ಮತ್ತು ಆಹಾರವು ತನ್ನ ವಿಫಲ ಸಹೋದರನಿಗೆ ಎಂದು ತೊಳಿದುಕೊಳ್ಳುತ್ತಾನೆ. ಅವನು ಕೋಪಗೊಂಡು ಆಚರಣೆಗೆ ಸೇರಲು ನಿರಾಕರಿಸಿಸುತ್ತಾನೆ. ತಂದೆ ಹೊರಗೆ ತನ್ನ ಹಿರಿಯ ಮಗನನ್ನು ಭೇಟಿಯಾಗಿ, “ಮಗನೇ, ನೀವು ಈಗಾಗಲೇ ನಮ್ಮ ಕುಟುಂಬದಲ್ಲಿರುವೆ"" ಎಂದನು. ನನ್ನ ಬಳಿ ಇರುವುದೆಲ್ಲಾ ನಿನ್ನದೇ ! ಆದರೆ ನಾವು ನಿಮ್ಮ ಸಹೋದರನನ್ನು ಆಚರಿಸಬೇಕಾಗಿತ್ತು. ಅವನು ಕಳೆದುಹೋಗಿದ್ದನು, ಆದರೆ ಈಗ ಅವನನ್ನು ಕಂಡುಹಿಡಿದ್ದೇವೆ. ಅವನು ಸತ್ತಿದ್ದನು, ಆದರೆ ಈಗ ಅವನು ಜೀವಂತವಾಗಿದ್ದಾನೆ. ”
ಈ ಕಥೆಯಲ್ಲಿ, ಯೇಸು ಧಾರ್ಮಿಕ ಮುಖಂಡರನ್ನು ಹಿರಿಯ ಮಗನಿಗೆ ಹೋಲಿಸುತ್ತಿದ್ದಾರೆ. ಧಾರ್ಮಿಕ ಮುಖಂಡರು ಹೊರಗಿನವರನ್ನು ಸ್ವೀಕರಿಸುವ ಮೂಲಕ ಹೇಗೆ ಅಪರಾಧ ಮಾಡುತ್ತಾರೆಂದು ಯೇಸುವಿಗೆ ತಿಳಿದಿದೆ, ಆದರೆ ಅವರು ತಮ್ಮಂತಹ ಹೊರಗಿನವರನ್ನು ನೋಡಬೇಕೆಂದು ಯೇಸು ಬಯಸುತ್ತಾನೆ. ಸಮಾಜದ ಬಹಿಷ್ಕೃತರು ತಮ್ಮ ತಂದೆಯ ಬಳಿಗೆ ಮರಳುತ್ತಿರುವರು. ಅವರು ಬದುಕುಳಿದಿದ್ದರು ದೇವರ ಬಗ್ಗೆ ಒಳ್ಳೆಯದನ್ನು ತಿಳಿದುಕೊಳ್ಳಲು ಸಾಕಷ್ಟು ಇದೆ. ಅವನ ಬಳಿ ಇರುವ ಎಲ್ಲವೂ ಅವನು ತನ್ನ ಮಕ್ಕಳೆಂದು ಯಾರನ್ನು ಕರೆಯುವನೋ ಅವರಿಗೆ ಸೇರಿದೆ. ಅವನ ರಾಜ್ಯವನ್ನು ಆನಂದಿಸುವ ಏಕೈಕ ಅವಶ್ಯಕತೆಯೆಂದರೆ ಅದನ್ನು ನಮ್ರತೆಯಿಂದ ಸ್ವೀಕರಿಸುವುದು.
About this Plan

ಲ್ಯೂಕ್ ಮತ್ತು ಆ್ಯಕ್ಟ್ಸ್ ಮೂಲಕ ಪ್ರಯಾಣ, ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಲ್ಯೂಕ್ ಮತ್ತು ಆ್ಯಕ್ಟ್ಸ್ ಪುಸ್ತಕಗಳನ್ನು 40 ದಿನಗಳಲ್ಲಿ ಓದಲು ಪ್ರೇರೇಪಿಸುತ್ತದೆ. ಭಾಗವಹಿಸುವವರು ಯೇಸುವನ್ನು ಎದುರಿಸಲು ಮತ್ತು ಲ್ಯೂಕ್ ಅವರ ಅದ್ಭುತ ಸಾಹಿತ್ಯ ವಿನ್ಯಾಸ ಹಾಗೂ ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳಲು ಈ ಯೋಜನೆ ಅನಿಮೇಟೆಡ್ ವಿಡಿಯೋ ಮತ್ತು ಒಳನೋಟವುಳ್ಳ ಸಾರಾಂಶವನ್ನು ಒಳಗೊಂಡಿದೆ.
More
Related Plans

Self-Care

Beautifully Blended | Devotions for Couples

Forever Forward in Hope

Live Well | God's Plan for Your Wellbeing

Slaying Giants Before They Grow

The Bridge Back to God

NOAH: A Message of Faithfulness

Film + Faith - Parents, Family and Marriage

Just Read It: The Forgotten Secret That Changed a King’s Life Can Change Yours
