YouVersion Logo
Search Icon

ಯಾಜಕಕಾಂಡ 12

12
ಬಾಣಂತಿಯರ ಶುದ್ಧೀಕರಣದ ವಿಷಯ
1ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ, ಹೇಳಿದ್ದೇನೆಂದರೆ, 2“ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳು: ‘ಒಬ್ಬ ಸ್ತ್ರೀಯು ಗರ್ಭಧರಿಸಿ, ಗಂಡು ಮಗುವನ್ನು ಹೆತ್ತರೆ, ಅವಳು ಏಳು ದಿನಗಳು ಅಶುದ್ಧಳಾಗಿರಬೇಕು. ತನ್ನ ಮುಟ್ಟಿಗಾಗಿ ಪ್ರತ್ಯೇಕಿಸಿದ ದಿನಗಳ ಪ್ರಕಾರ ಅವಳು ಅಶುದ್ಧಳಾಗಿರಬೇಕು. 3ಎಂಟನೆಯ ದಿನದಲ್ಲಿ ಮಗುವಿಗೆ ಸುನ್ನತಿ ಮಾಡಿಸಬೇಕು. 4ಅವಳು ಮೂವತ್ತಮೂರು ದಿನಗಳು ಶುದ್ಧೀಕರಣದಲ್ಲಿ ಮುಂದುವರಿಯಬೇಕು. ಅವಳ ಶುದ್ಧೀಕರಣದ ದಿನಗಳು ಪೂರೈಸುವ ತನಕ ಅವಳು ಪರಿಶುದ್ಧವಾದದ್ದನ್ನು ಮುಟ್ಟಬಾರದು, ಇಲ್ಲವೆ ಪರಿಶುದ್ಧ ಸ್ಥಳಕ್ಕೆ ಬರಬಾರದು. 5ಅವಳು ಹೆಣ್ಣು ಮಗುವನ್ನು ಹೆತ್ತರೆ, ಅವಳು ಮುಟ್ಟಿನಲ್ಲಿರುವಂತೆ ಎರಡು ವಾರಗಳು ಅಶುದ್ಧಳಾಗಿರಬೇಕು. ಅವಳು ಅರವತ್ತಾರು ದಿನಗಳು ಶುದ್ಧೀಕರಣದಲ್ಲಿ ಮುಂದುವರಿಯಬೇಕು.
6“ ‘ಮಗನಿಗಾಗಿ ಇಲ್ಲವೆ ಮಗಳಿಗಾಗಿ ಅವಳ ಶುದ್ಧ ದಿನಗಳು ಪೂರ್ತಿಯಾದರೆ, ಅವಳು ದಹನಬಲಿಗಾಗಿ ಒಂದು ವರ್ಷದ ಕುರಿಮರಿಯನ್ನೂ, ಪಾಪ ಪರಿಹಾರದ ಬಲಿಗಾಗಿ ಪಾರಿವಾಳದ ಮರಿಯನ್ನೂ, ಇಲ್ಲವೆ ಬೆಳವಕ್ಕಿಯನ್ನೂ ದೇವದರ್ಶನದ ಗುಡಾರದ ಬಾಗಿಲಲ್ಲಿ ಯಾಜಕನ ಬಳಿಗೆ ತರಬೇಕು. 7ಅವನು ಯೆಹೋವ ದೇವರ ಮುಂದೆ ಅದನ್ನು ಅರ್ಪಿಸಿ, ಅವಳಿಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ಅವಳು ತನ್ನ ರಕ್ತಸ್ರಾವದಿಂದಾದ ಅಶುದ್ಧತೆಯಿಂದ ಶುದ್ಧಳಾಗುವಳು.
“ ‘ಗಂಡು ಮಗುವನ್ನಾಗಲಿ, ಹೆಣ್ಣು ಮಗುವನ್ನಾಗಲಿ ಹೆತ್ತವಳಿಗೆ ನಿಯಮವು ಇದೆ. 8ಅವಳು ಕುರಿಮರಿಯನ್ನು ತರಲು ಅಶಕ್ತಳಾಗಿದ್ದರೆ, ಅವಳು ದಹನಬಲಿಗಾಗಿ ಒಂದು ಪಾಪ ಪರಿಹಾರದ ಬಲಿಗಾಗಿ, ಇನ್ನೊಂದು ಎಂಬಂತೆ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು ಮತ್ತು ಯಾಜಕನು ಅವಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವಳು ಶುದ್ಧಳಾಗುವಳು.’ ”

Highlight

Share

Copy

None

Want to have your highlights saved across all your devices? Sign up or sign in

Videos for ಯಾಜಕಕಾಂಡ 12