YouVersion Logo
Search Icon

ಆದ್ಯತ್‌ರ ಪುಸ್ತಕ 42

42
ಯೋಸೇಫಂಡ ಅಣ್ಣತಮ್ಮಣಂಗ ಐಗುಪ್ತ ದೇಶಕ್‌ ಬಪ್ಪದ್‌
1ಐಗುಪ್ತ ದೇಶತ್‌ಲ್‌ ಆಹಾರ ದಾನ್ಯ ಉಂಡ್‍ೕಂದ್‌ ಯಾಕೋಬಂಗ್‌ ಗೊತ್ತಾಪಕ, ಅಂವೊ ತಾಂಡ ಮಕ್ಕಕ್: ನಿಂಗ ಎನ್ನಂಗ್‌ ಒಬ್ಬನ ಒಬ್ಬನ ನೋಟಿಯಂಡ್‌ ಉಳ್ಳಿರ. 2ಐಗುಪ್ತ ದೇಶತ್‌ಲ್‌ ಆಹಾರ ದಾನ್ಯ ಉಂಡ್‍ೕಂದ್‌ ನಾಕ್‍ ಗೊತ್ತಾಚಿ. ನಂಗೆಲ್ಲಾ ಕೆಲಪೈಚಿತ್‌ ಚಾವಕಿಂಜ ಮಿಂಞ ಅಲ್ಲಿಕ್‌ ಪೋಯಿತ್‌ ಆಹಾರ ದಾನ್ಯತ್‌ನ ಕ್ರಯಕ್‌ ಎಡ್‌ತಂಡ್‌ ಬಾರೀಂದ್‌ ಎಣ್ಣ್‌ಚಿ. 3ಅನ್ನನೆ ಯೋಸೇಫಂಡ ಪತ್ತ್‌ ಅಣ್ಣಂಗ ಆಹಾರ ದಾನ್ಯ ಎಡ್‌ತಂಡ್‌ ಬಪ್ಪಕ್‌ ಐಗುಪ್ತ ದೇಶಕ್‌ ಪೊರ್‌ಟತ್. 4ಆಚೇಂಗಿ ಯಾಕೋಬ ಯೋಸೇಫಂಡ ತಮ್ಮಣ ಆನ ಬೆನ್ಯಾಮೀನ್‌ಕ್‌ ಎಂತಾಚೇಂಗಿ ತೊಂದರೆ ಆಕೂಂದ್‌ ಪೋಡಿಚಿಟ್ಟಂಡ್, ಅಂವೊಂಡ ಅಣ್ಣಂಗಡ ಕೂಡೆ ಅಂವೊನ ಅಯಿಚಿತ್‌ಲ್ಲೆ.
5ಕಾನಾನ್‌ ದೇಶತ್‌ಲ್‌ ಬರಗಾಲ ಬಂದಂಗ್‌ ಯಾಕೋಬಂಡ ಮಕ್ಕ ಐಗುಪ್ತ ದೇಶಕ್‌ ಆಹಾರ ದಾನ್ಯತ್‌ನ ಕ್ರಯಕ್‌ ಎಡ್‌ತಂಡ್‌ ಬಪ್ಪಯಿಂಗಡ ಕೂಡ ಬಾತ್. 6ಯೋಸೇಫ ಐಗುಪ್ತ ದೇಶಕ್‌ ಅದಿಪತಿಯಾಯಿತ್‌ಂಜತ್. ಅಂವೊನೇ ಆ ದೇಶತ್‌ರ ಜನಕ್‌ ಆಹಾರ ದಾನ್ಯತ್‌ನ ಮಾರಿಯಂಡಿಂಜತ್. ಯೋಸೇಫಂಡ ಅಣ್ಣತಮ್ಮಣಂಗ ಅಂವೊಂಡ ಪಕ್ಕ ಬಂತಿತ್, ಅಂವೊಂಡ ಮಿಂಞ ಅಡ್ಡ ಬುದ್ದತ್. 7ಯೋಸೇಫ ಅಯಿಂಗಳ ಅಕ್ಕಲೆ ಗುರ್‌ತ್‌ ಪುಡ್‌ಚತ್. ಆಚೇಂಗಿಯು ಅಯಿಂಗಳ ಅರಿಯತನಕೆ ಅಯಿಂಗಡ ಕೂಡೆ ಕಠಿಣವಾಯಿತ್‌ ತಕ್ಕ್‌ ಪರ್ಂದತ್. ಅಂವೊ ಅಯಿಂಗಳ ನೋಟಿತ್: ನಿಂಗ ಎಲ್ಲಿಂಜ ಬಂದಿರಾಂದ್‌ ಕ್‍ೕಟತ್. ಅಕ್ಕ ಅಯಿಂಗ: ನಂಗ ಕಾನಾನ್‌ ದೇಶತ್‌ಂಜ ಆಹಾರ ದಾನ್ಯತ್‌ನ ಕ್ರಯಕ್‌ ಎಡ್‌ತಂಡ್‌ ಪೋಪಕಾಯಿತ್‌ ಬಂದಿಯೇಂದ್‌ ಎಣ್ಣ್‌ಚಿ. 8ಯೋಸೇಫ ಅಯಿಂಗಳ ಗುರ್‌ತ್‌ ಪುಡ್‌ಚತೇಂಗಿಯು ಅಯಿಂಗಕ್‌ ಇಂವೊನ ಗುರ್‌ತ್‌ ಕ್‌ಟ್ಟಿತ್‌ಲ್ಲೆ. 9ಯೋಸೇಫ ಅಯಿಂಗಡ ವಿಷಯತ್‌ ಕಂಡ ದಂಡ್‌ ಸ್ವಪ್ನತ್‌ನ ಗೇನ ಮಾಡಿತ್, ಅಯಿಂಗಳ ನೋಟಿತ್: ನಿಂಗ ಗುಪ್ತಚಾರಂಗ. ನಂಗಡ ದೇಶ ಎಚ್ಚಕ್‌ ಬಲಹೀನವಾಯಿತುಂಡ್‍ೕಂದ್‌ ನೋಟ್‌ವಕ್‌ ಬಂದಿತುಳ್ಳಿರಾಂದ್‌ ಎಣ್ಣ್‌ಚಿ. 10ಅದ್‌ಂಗ್‌ ಅಯಿಂಗ: ಅನ್ನನೆ ಇಲ್ಲೆ ಸ್ವಾಮೀ, ನಿಂಗಡ ಆಳ್‌ವಳಾನ ನಂಗ ಆಹಾರ ದಾನ್ಯತ್‌ನ ಕ್ರಯಕ್‌ ಎಡ್‌ಪಕಾಯಿತ್‌ ಬಂದಿಯೇಂದ್‌ ಎಣ್ಣ್‌ಚಿ. 11ನಂಗೆಲ್ಲಾರು ಒರೇ ಅಪ್ಪಂಡ ಮಕ್ಕ. ನಂಗ ಸತ್ಯವಂತಂಗ, ನಿಂಗಡ ಆಳ್‌ವ ಗುಪ್ತಚಾರಂಗ ಅಲ್ಲಾಂದ್‌ ಎಣ್ಣ್‌ಚಿ. 12ಯೋಸೇಫ ಅಯಿಂಗಕ್: ಇಲ್ಲೆ ನಿಂಗೆಲ್ಲಾರು, ನಂಗಡ ದೇಶ ಎಚ್ಚಕ್‌ ಬಲಹೀನವಾಯಿತುಂಡ್‍ೕಂದ್‌ ನೋಟ್‌ವಕೇ ಬಂದಿತುಳ್ಳಿರಾಂದ್‌ ಎಣ್ಣ್‌ಚಿ. 13ಅದ್‌ಂಗ್‌ ಅಯಿಂಗ: ನಿಂಗಡ ಆಳ್‌ವಳಾನ ನಂಗ ಪನ್ನೆರಂಡ್‌ ಅಣ್ಣತಮ್ಮಣಂಗ. ನಂಗೆಲ್ಲಾರು ಕಾನಾನ್‌ ದೇಶತ್‌ಲ್‌ ಉಳ್ಳ ಒರೇ ಕುಟುಂಬತ್‌ರ ಮಕ್ಕ. ಎಲ್ಲಾಕಿಂಜ ಚೆರಿಯಂವೊ ನಂಗಡ ಅಪ್ಪಂಡ ಪಕ್ಕ ಉಂಡ್. ಇಂಞೊಬ್ಬ ಇಲ್ಲೇಂದ್‌ ಎಣ್ಣ್‌ಚಿ. 14ಆಚೇಂಗಿ ಯೋಸೇಫ ಅಯಿಂಗಕ್: ನಾನ್‌ ಎಣ್ಣ್‌ನನೆಕೆ ನಿಂಗ ಗುಪ್ತಚಾರಂಗಳೇ. 15ನಿಂಗಡ ಚೆರಿಯ ತಮ್ಮಣ ಇಲ್ಲಿಕ್‌ ಬಪ್ಪಕತ್ತನೆ, ನಿಂಗ ಐಗುಪ್ತ ದೇಶತ್‌ನ ಬುಟ್ಟಿತ್‌ ಪೋಪ್‌ಲೇಂದ್‌ ನಾನ್‌ ಫರೋಹನಂಡ ಜೀವತ್‌ರ ಮೇಲೆ ಆಣೆ ಮಾಡಿತ್‌ ಎಣ್ಣ್‌ವಿ. 16ನಿಂಗಡ ತಮ್ಮಣನ ಕಾಕಿಯಂಡ್‌ ಬಪ್ಪಕಾಯಿತ್‌ ನಿಂಗಡಲ್ಲಿ ಒಬ್ಬನ ಅಯಿರಿ. ಅಂವೊ ಬಪ್ಪಕತ್ತನೆ ನಿಂಗ ಎಲ್ಲಾರ್‌ನು ಜೈಲ್‌ಲ್‌ ಇಟ್ಟಿತಿಪ್ಪಿ. ಇನ್ನನೆ ನಿಂಗ ಎಣ್ಣ್‌ವ ವಿಷಯ ನೇರಾ ಪೊಟ್ಟಾ ಎಣ್ಣಿಯಂಡ್‌ ಪರೀಕ್ಷೆ ಮಾಡುವಿ. ನಿಂಗಕ್‌ ಚೆರಿಯ ತಮ್ಮಣ ಇಲ್ಲೇಂದ್‌ ಎಣ್ಣ್‌ಚೇಂಗಿ, ಅಕ್ಕ ನಿಂಗ ಗುಪ್ತಚಾರಂಗಳೇಂದ್‌ ಫರೋಹನಂಡ ಜೀವತ್‌ರ ಮೇಲೆ ಆಣೆ ಮಾಡಿತ್‌ ಎಣ್ಣ್‌ವೀಂದ್‌ ಎಣ್ಣ್‌ಚಿ. 17ಯೋಸೇಫ ಅಯಿಂಗಳ ಮೂಂದ್‌ ದಿವಸಕತ್ತನೆ ಜೈಲ್‌ಲ್‌ ಇಟ್ಟತ್.
18ಮೂಂದ್‌ನೆ ದಿವಸತ್‌ಲ್‌ ಯೋಸೇಫ ಅಯಿಂಗಳ ನೋಟಿತ್: ನಾನ್‌ ದೇವಕ್‌ ಬೊತ್ತ್‌ವ ಮನುಷ್ಯ. ನಿಂಗ ಜೀವವಾಯಿತ್‌ ಇಪ್ಪಕ್‌ ಒರ್‌ ವಿಷಯ ಮಾಡಿ. 19ನಿಂಗ ನೇರಾಯಿತು ಸತ್ಯವಂತಂಗಳಾಚೇಂಗಿ, ನಿಂಗಡಲ್ಲಿ ಒಬ್ಬನ ಮಾತ್‌ರ ಇಲ್ಲಿ ಬುಟ್ಟಿತ್‌ ಉಳ್‌ಂಜಯಿಂಗ ಪೊರ್‌ಟಿತ್‌ ಕೆಲಪಯಿಚಂಡುಳ್ಳ ನಿಂಗಡ ಮನೆಕಾರಕ್‌ ಆಹಾರ ದಾನ್ಯ ಎಡ್‌ತಂಡ್‌ ಪೋಯಿ. 20ಆಚೇಂಗಿ ನಿಂಗಡ ತಮ್ಮಣನ ನಾಡ ಪಕ್ಕ ಕಾಕಿಯಂಡ್‌ ಬರಂಡು. ಅಕ್ಕ ನಿಂಗ ಸತ್ಯ ಎಣ್ಣಿಯಂಡುಳ್ಳಿರಾಂದ್‌ ನಾಕ್‍ ಗೊತ್ತಾಪ. ಅಕ್ಕ ನಿಂಗ ಚಾವುಲೇಂದ್‌ ಎಣ್ಣ್‌ಚಿ. ಅದ್‌ಂಗ್‌ ಅಯಿಂಗ ಒತ್ತಂಡತ್. 21ಅಕ್ಕ ಅಯಿಂಗ: ನಂಗ ಯೋಸೇಫಂಗ್‌ ಅನ್ಯಾಯ ಮಾಡ್‌ನಂಗ್‌ ನಂಗಕ್‌ ಇನ್ನನೆ ಆಯಂಡುಂಡ್. ಅಂವೊ ಕರುಣೆ ಕಾಟೀಂದ್‌ ನಂಗಳ ಬೋಡ್‌ವಕ, ಅಂವೊಂಡ ಮನಸ್ಸ್‌ರ ನೊಂಬಲತ್‌ನ ನಂಗ ಕಂಡಿತು, ಅಂವೊಂಡ ತಕ್ಕ್‌ಕ್‌ ಕೆಮಿ ಕೊಡ್‌ಕತೆ ಪೋಚಲ್ಲಾ. ಅದ್‌ಂಗೇ ಇಕ್ಕ ನಂಗ ಈ ಅಪಾಯತ್‌ಲ್‌ ಉಂಡ್‍ೕಂದ್‌ ಅಯಿಂಗಯಿಂಗಳೇ ತಕ್ಕ್‌ ಪರ್ಂದತ್. 22ಅಕ್ಕ ರೂಬೇನ ಅಯಿಂಗಳ ನೋಟಿತ್: ಆ ಕ್‌ಣ್ಣಂಗ್‌ ವಿರೋದವಾಯಿತ್‌ ಪಾಪ ಮಾಡಂಡಾಂದ್‌ ನಾನ್‌ ನಿಂಗಕ್‌ ಎಣ್ಣಿತ್‌ಲ್ಲಿಯಾ? ಆಚೇಂಗಿ ನಿಂಗ ಕ್‍ೕಟಿತ್‌ಲ್ಲೆ. ಇಕ್ಕ ನೋಟಿ, ಅಂವೊಂಡ ಚೋರೆನ ಚೆಲ್ಲ್‌ನಂಗ್‌ ನಂಗ ಇಕ್ಕ ಚಾವಾಂದ್‌ ಎಣ್ಣ್‌ಚಿ. 23ಯೋಸೇಫ ಬಾಷಾಂತರ ಮಾಡುವ ಒಬ್ಬಂಡ ಮೂಲಕ ಅಯಿಂಗಡ ಕೂಡೆ ತಕ್ಕ್‌ ಪರ್‌ಂದಗುಂಡ್, ಅಯಿಂಗ ತಕ್ಕ್‌ ಪರ್‌ಂದಂಡುಳ್ಳದ್‌ ಯೋಸೇಫಂಗ್‌ ಅರ್ಥ ಆಪಾಂದ್‌ ಅಯಿಂಗಕ್‌ ಗೊತ್ತ್‌ಂಜ್‌ತ್‌ಲ್ಲೆ. 24ಯೋಸೇಫ ಅಲ್ಲಿಂಜ ಪೊರ್‌ಟ್ ಪೋಯಿತ್‌ ಮೊರ್‌ಟಿತ್, ಪುನಃ ಅಯಿಂಗಡ ಪಕ್ಕ ತಿರಿತ್‌ ಬಂದಿತ್‌ ಅಯಿಂಗಡ ಕೂಡೆ ತಕ್ಕ್‌ ಪರ್‌ಂದಿತ್, ಅಯಿಂಗಡಡೆಲ್‌ ಸಿಮೆಯೋನನ ಪುಡಿಚಿತ್‌ ಅಯಿಂಗಡ ಕಣ್ಣ್‌ರ ಮಿಂಞತೆ ಅಂವೊನ ಕೆಟ್ಟಿ ಇಟ್ಟತ್. 25ಅಲ್ಲಿಂಜ ಯೋಸೇಫ ಅಂವೊಂಡ ಆಳ್‌ವಕ್, ಅಯಿಂಗಡ ಚೀಲತ್‌ ಆಹಾರ ದಾನ್ಯತಿಂಜ ದುಂಬ್‌ಚಿಡುವಕು, ಅಯಿಂಗಯಿಂಗಡ ಪಣತ್‌ನ ಪುನಃ ಅಯಿಂಗಯಿಂಗಡ ಚೀಲತ್‌ಲ್‌ ಬೆಪ್ಪಕು, ಅಯಿಂಗಡ ಪ್ರಯಾಣಕ್‌ ಬೋಂಡಿಯಾನ ಆಹಾರತ್‌ನ ಕೊಡ್‌ಪಕು ಆಜ್ಞೆ ಮಾಡ್‌ಚಿ. ಆಳ್‌ವ ಅನ್ನನೆ ಅಯಿಂಗಕ್‌ ಮಾಡ್‌ಚಿ. 26ಅನ್ನನೆ ಅಂವೊಂಡ ಅಣ್ಣಂಗ ಅಯಿಂಗಡ ಕತ್ತೆಯಡ ಮೇಲೆ ಆಹಾರ ದಾನ್ಯತ್‌ನ ಬೆಚ್ಚಿತ್‌ ಅಲ್ಲಿಂಜ ಪೊರ್‌ಟತ್.
27ಆಚೇಂಗಿ ಬಯಿಟ್ ಅಯಿಂಗ ಒಳಿಯುವ ಜಾಗತ್‌ಲ್, ಒಬ್ಬ ಕತ್ತೆಯಕ್‌ ಉಂಬಕ್‌ ಮೇಚಿ ಕೊಡ್‌ಪಕಾಯಿತ್‌ ತಾಂಡ ಚೀಲತ್‌ನ ತೊರ್ಪಕ ಅಂವೊಂಡ ಪಣ ಅದ್‌ಲ್‌ ಉಳ್ಳದ್‌ನ ಕಂಡತ್. 28ಅಕ್ಕ ಅಂವೊ ತಾಂಡ ಅಣ್ಣತಮ್ಮಣಂಗಳ ನೋಟಿತ್: ನಾಡ ಪಣತ್‌ನ ತಿರಿತ್‌ ತಂದಿತ್. ಇದಾ, ಅದ್‌ ನಾಡ ಚೀಲತ್‌ಲ್‌ ಉಂಡ್‍ೕಂದ್‌ ಎಣ್ಣ್‌ಚಿ. ಅಕ್ಕ ಅಯಿಂಗಡ ಮನಸ್ಸ್‌ ಕುಂದಿಪೋಯಿತ್, ಅಯಿಂಗೆಲ್ಲಾರು ಬೊತ್ತಿಯಂಡ್‌ ಒಬ್ಬೊಬ್ಬಂಡ ಮೂಡ್‌ ನೋಟಿಯಂಡ್: ದೇವ ನಂಗಕ್‌ ಎಂತ ಮಾಡಿಯೇಂದ್‌ ಅಯಿಂಗಯಿಂಗಳೇ ತಕ್ಕ್‌ ಪರ್‌ಂದಂಡತ್.
29ಅಯಿಂಗ ಕಾನಾನ್‌ ದೇಶಕ್‌ ತಂಗಡ ಅಪ್ಪನಾನ ಯಾಕೋಬಂಡ ಪಕ್ಕ ಬಂದಿತ್‌ ನಡ್‌ಂದ ಎಲ್ಲಾ ವಿಷಯತ್‌ನ ಅರಿಚಿಟ್ಟತ್. 30ಆ ದೇಶತ್‌ರ ಅದಿಪತಿ, ನಂಗ ಆ ದೇಶ ಎಚ್ಚಕ್‌ ಬಲಹೀನವಾಯಿತುಂಡ್‍ೕಂದ್‌ ನೋಟ್‌ವಕ್‌ ಬಂದ ಗುಪ್ತಚಾರಂಗಾಂದ್‌ ಗೇನ ಮಾಡಿತ್‌ ನಂಗಡ ಕೂಡೆ ದುಂಬ ಕಠಿಣವಾಯಿತ್‌ ತಕ್ಕ್‌ ಪರ್‌ಂದತ್‍ೕಂದ್‌ ಎಣ್ಣ್‌ಚಿ. 31ಆಚೇಂಗಿ ನಂಗ ಅಂವೊಂಗ್: ನಂಗ ಸತ್ಯವಂತಂಗ, ಗುಪ್ತಚಾರಂಗ ಅಲ್ಲ. 32ನಂಗ ಪನ್ನೆರಂಡ್‌ ಅಣ್ಣತಮ್ಮಣಂಗ. ನಂಗೆಲ್ಲಾರು ಒರೇ ಅಪ್ಪಂಡ ಮಕ್ಕ. ಒಬ್ಬ ಇಲ್ಲೆ. ಎಲ್ಲಾಕಿಂಜ ಚೆರಿಯಂವೊ ಕಾನಾನ್‌ ದೇಶತ್‌ಲ್‌ ನಂಗಡ ಅಪ್ಪಂಡ ಪಕ್ಕ ಉಂಡ್‍ೕಂದ್‌ ಎಣ್ಣಿಯೇಂದ್‌ ಎಣ್ಣ್‌ಚಿ. 33ಅಕ್ಕ ಆ ದೇಶತ್‌ರ ಅದಿಪತಿ: ನಿಂಗ ನೇರಾಯಿತು ಸತ್ಯವಂತಂಗಾಂದ್‌ ನಾಕ್‍ ಗೊತ್ತಾಪನೆಕೆ ನಿಂಗಡಲ್ಲಿ ಒಬ್ಬನ ಮಾತ್‌ರ ಇಲ್ಲಿ ಬುಟ್ಟಿತ್ಪ ಪೋಯಿ. ಉಳ್‌ಜಯಿಂಗ ಪೊರ್‌ಟಿತ್‌ ಬರಗಾಲತ್‌ಂಜ ಕೆಲಪಯಿಚಿತುಳ್ಳ ನಿಂಗಡ ಮನೆಕಾರಕ್‌ ಆಹಾರ ದಾನ್ಯ ಎಡ್‌ತಂಡ್‌ ಪೋಯಿ ಕೊಡ್‌ತಿತ್, 34ನಿಂಗಡ ಚೆರಿಯ ತಮ್ಮಣನ ನಾಡ ಪಕ್ಕ ಕಾಕಿಯಂಡ್‌ ಬಾರಿ. ಅಕ್ಕ ನಾಕ್‍ ನಿಂಗ ಗುಪ್ತಚಾರಂಗ ಅಲ್ಲ, ಸತ್ಯವಂತಂಗಾಂದ್‌ ಅರ್‌ಂಜಂಡ್‌ ನಿಂಗಡ ಅಣ್ಣನ ಬುಡ್‍ಗಡೆ ಮಾಡುವಿ. ನಿಂಗ ಈ ದೇಶತ್‌ಲ್‌ ವ್ಯಾಪಾರ ಸಹ ಮಾಡಲೂಂದ್‌ ಅಂವೊ ಎಣ್ಣ್‌ಚೀಂದ್‌ ಈಂಗ ಎಣ್ಣ್‌ಚಿ. 35ಅಯಿಂಗ ತಂಗಡ ಚೀಲತ್‌ನ ತೊರ್‌ಂದಿತ್‌ ಕಾಲಿ ಮಾಡ್‌ವಕ, ಆಹಾರ ದಾನ್ಯ ಎಡ್‌ಪಕ್‌ ಕೊಡ್‌ತ ಪ್ರತಿಯೊಬ್ಬಂಡ ಪಣತ್‌ರ ಗಂಟ್ ಉಳ್ಳದ್‌ನ ಕಂಡತ್. ಆ ಪಣತ್‌ರ ಗಂಟ್‌ನ ಕಂಡಿತ್‌ ಅಯಿಂಗಕು, ಅಯಿಂಗಡ ಅಪ್ಪಂಗು ದುಂಬ ಪೋಡಿಯಾಚಿ. 36ಅಕ್ಕ ಅಯಿಂಗಡ ಅಪ್ಪನಾನ ಯಾಕೋಬ: ನಿಂಗ ನಾಕ್‍ ಮಕ್ಕ ಇಕ್ಕತನೆಕೆ ಮಾಡಿಯಂಡುಳ್ಳಿರ. ಯೋಸೇಫನು ಇಲ್ಲೆ, ಸಿಮೇಯೋನನು ಇಲ್ಲೆ. ಇಕ್ಕ ಬೆನ್ಯಾಮೀನನ ಸಹ ಕಾಕಿಯಂಡ್‌ ಪೋಪಕುಳ್ಳಿರ. ಈ ಎಲ್ಲಾ ಕಾರ್ಯಾವು ನಾಕ್‍ ಎದ್ರಾಯಿತೇ ನಡ್‌ದಂಡುಂಡ್‍ೕಂದ್‌ ಎಣ್ಣ್‌ಚಿ. 37ಅಕ್ಕ ರೂಬೇನ ಅಂವೊಂಡ ಅಪ್ಪನ ನೋಟಿತ್: ಅಂವೊನ ನಾಡ ಕೈಕ್‌ ಒಪ್ಪ್‌ಚಿಡ್. ನಾನ್‌ ಅಂವೊನ ತಿರಿತ್‌ ಕಾಕಿಯಂಡ್‌ ಬಪ್ಪಿ. ಅನ್ನನೆ ಕಾಕಿಯಂಡ್‌ ಬಕ್ಕತೆ ಪೋಚೇಂಗಿ ನಾಡ ದಂಡ್‌ ಕ್‌ಣ್ಣ ಮಕ್ಕಳ ನೀನ್‌ ಕೊಂದ್ರಲೂಂದ್‌ ಎಣ್ಣ್‌ಚಿ. 38ಆಚೇಂಗಿ ಯಾಕೋಬ: ನಾಡ ಮೋಂವೊ ನಿಂಗಡ ಕೂಡೆ ಬಪ್ಪುಲೆ, ಅಂವೊಂಡ ಅಣ್ಣ ಯೋಸೇಫ ಚತ್ತ್‌ ಪೋಚಿ. ಇಂವೊ ಒಬ್ಬನೆ ಬಾಕಿ. ನಿಂಗ ಪೋಪ ಬಟ್ಟೆಲ್‌ ಇಂವೊಂಗ್‌ ಎಂತ್ತೇಂಗಿ ಕೆಟ್ಟದ್‌ ನಡ್‌ಂದತೇಂಗಿ, ನಾಡ ಬೊಳ್‌ತ್‌ ಪೋನ ಮಂಡೆ ದುಃಖತ್‌ ತೂಟ್‌ಕಳಕ್‌ ಪೋಪಕ್‌ ನಿಂಗ ಕಾರಣ ಆಪಿರಾಂದ್‌ ಎಣ್ಣ್‌ಚಿ.

Highlight

Share

Copy

None

Want to have your highlights saved across all your devices? Sign up or sign in