ಕ್ರಿಸ್ತನನ್ನು ಅನುಸರಿಸಲು预览

ಕ್ರಿಸ್ತನನ್ನು  ಅನುಸರಿಸಲು

12天中的第4天

ಹಿಂಬಾಲಿಸುವುದು, ಬಿರುಗಾಳಿ ಎದುರಿಸುವುದು ಎಂದು ಅರ್ಥೈಸುತ್ತದೆ.

ಜೀವನದ ಬಿರುಗಾಳಿಗಳು ಬಹಳ ನೈಜವಾಗಿರುತ್ತವೆ ಮತ್ತು ಕೆಲವೊಮ್ಮೆ ಅದು ಬಹಳ ಅನಿರೀಕ್ಷಿತವಾಗಿರುತ್ತವೆ! ಆರೋಗ್ಯದ ಬಿಕ್ಕಟ್ಟು, ಸಂಬಂಧದ ಸ್ಥಗಿತ, ಆರ್ಥಿಕ ಕುಸಿತ ಅಥವಾ ಉದ್ಯೋಗ ನಷ್ಟವು ನಿಮ್ಮನ್ನು ಹೊರಹಾಕಿದಂತಿರಬಹುದು ಅಥವಾ ನಿಮ್ಮನ್ನು ಸಂಪೂರ್ಣವಾಗಿ ಅಘಾತಕ್ಕೊಳಗಾಗಿಸಬಹುದು. ಯೇಸುವನ್ನು ಹಿಂಬಾಲಿಸುವುದು ಜೀವನದ ಹೋರಾಟಗಳು ಮತ್ತು ಹಿನ್ನಡೆಗಳಿಂದ ನಿಮ್ಮನ್ನು ಮುಕ್ತಗೊಳಿಸುವುದಿಲ್ಲ, ಆದರೆ ನಿಮ್ಮ ಸುತ್ತಲಿರುವ ಬಿರುಗಾಳಿಯ ಮಧ್ಯದಲ್ಲಿ ಒಂದು ಕ್ಷಣ ಸಹ ನಿಮ್ಮನ್ನು ಬಿಟ್ಟುಹೋಗದ ಆತನ ಪ್ರಸನ್ನತೆಯ ಬಗ್ಗೆ ನೀವು ಪ್ರತಿಶತ ಭರವಸೆಯನ್ನು ಹೊಂದಬಹುದು. ಅನೇಕ ಬಾರಿ ದೇವರು ನಿಮ್ಮ ಸುತ್ತಲಿನ ಬಿರುಗಾಳಿಯನ್ನು ಶಾಂತಗೊಳಿಸುವ ಮೊದಲು ಆತನು ನಿಮ್ಮೊಳಗಿನ ಬಿರುಗಾಳಿಯನ್ನು ಶಾಂತಗೊಳಿಸುತ್ತಾನೆ. ನಮ್ಮ ಹೃದಯವು ಆತಂಕಗೊಂಡಾಗ ಅಥವಾ ಭಾರವಾಗಿರುವಾಗ ಒಳಗಿನ ಬಿರುಗಾಳಿಯು ಸಾಮಾನ್ಯವಾಗಿ ಹೆಚ್ಚಾಗುತ್ತದೆ. ನಮೊಳ್ಳಗೆ ಆಲೋಚನೆಗಳು ಹೆಚ್ಚಾಗುವಾಗ ಮತ್ತು ನಮ್ಮ ಮನಸ್ಸು ಗೊಂದಲಮಯವಾಗುವಾಗ ಅಥವಾ ಅಸ್ಪಷ್ಟವಾಗುವಾಗಿರುವಾಗ ನಮ್ಮೊಳಗೆ ಬಿರುಗಾಳಿಯು ಹೆಚ್ಚಾಗುತ್ತದೆ. ನಾವು ಯೇಸುವಿಗೆ ಸಂಪೂರ್ಣವಾಗಿ ಅಧೀನವಾಗುವಾಗ, ನಮ್ಮ ಹೃದಯ ಮತ್ತು ಮನಸ್ಸನ್ನು ಕಾಪಾಡಲು ಆತನ ಸಮಧಾನ ನಮ್ಮೊಂದಿಗಿರುವುದು ಎಂದು ಆತನು ವಾಗ್ದಾನ ಮಾಡಿರುವನು. ಆತನ ಸಂತೋಷವು ನಮ್ಮಲ್ಲಿರುತ್ತದೆ ಮತ್ತು ನಮ್ಮ ಸಂತೋಷವು ಪೂರ್ಣಗೊಳ್ಳುತ್ತದೆ ಎಂಬ ವಾಗ್ದಾನ ಮಾಡಿರುವನು.

ಎಂತಹ ಭರವಸೆ! ಬಿರುಗಾಳಿಯ ನಡುವೆ ಶಾಂತಿ ಮತ್ತು ಸಂತೋಷವನ್ನು ಯಾರಾದರೂ ಕೇಳಿದ್ದಾರೆ? ಆದರೂ, ಅದು ದೇವರ ಮಕ್ಕಳಾದ ನಮ್ಮ ಪಿತ್ರಾರ್ಜಿತ! ಬಿರುಗಾಳಿ ನಿಮ್ಮ ಸುತ್ತಲೂ ಇರುವಾಗ ನೀವು ಆತನನ್ನು ಹಿಂಬಾಲಿಸುವಾಗ, ಒಂದೇ ಮಾತಿನಿಂದ ಅವುಗಳನ್ನು ನಿಲ್ಲಿಸಬಹುದಾದ ಸರ್ವಶಕ್ತನಾದ ದೇವರ ಉಪಸ್ಥಿತಿಯು ಹೆಚ್ಚು ನೈಜವಾಗಿದೆ. ಭೌತಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬಿರುಗಾಳಿ ಮತ್ತು ಅಲೆಗಳು ಆತನಿಗೆ ವಿಧೇಯವಾಗಿರುತ್ತದೆ ಎಂದು ತಿಳಿದುಕೊಳ್ಳುವುದರಿಂದ ಸ್ವತಃ ಈಜ್ಞಾನವು ನಮಗೆ ಹೆಚ್ಚಿನ ಸೌಕರ್ಯವನ್ನು ತರಬೇಕು. ಬಿರುಗಾಳಿಯು ನಿಮ್ಮನ್ನು ಇನ್ನು ಮುಂದೆ ಹೆದರಿಸಬಾರದು ಏಕೆಂದರೆ ಅದನ್ನು ಶಾಂತಗೊಳಿಸುವನು ನಿಮ್ಮೊಂದಿಗಿದ್ದಾನೆ!

ಘೋಷಣೆ:ಕ್ರಿಸ್ತನು ಲೋಕವನ್ನು ಜಯಿಸಿದ್ದರಿಂದ ನಾನು ಸಂತೋಷದಿಂದ ಇರುವೆನು!

读经计划介绍

ಕ್ರಿಸ್ತನನ್ನು  ಅನುಸರಿಸಲು

ಪ್ರತಿದಿನ ಯೇಸುವನ್ನು ಹೇಗೆ ಅನುಸರಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಸತ್ಯವೇದದ ಈ ಯೋಜನೆಯು ನಿಮಗೆ ಸೂಕ್ತವಾಗಿರುತ್ತದೆ. ಸಹಜವಾಗಿ ಯೇಸುವಗೆ ಒಪ್ಪಿಗೆ ಎಂದು ಹೇಳುವುದೇಈ ಪಠ್ಯಕ್ರಮದ ಮೊದಲನೆಯ ಹೆಜ್ಜೆಯಾಗಿರುತ್ತದೆ. ಜೀವಮಾನದಾದ್ಯಂತ ಪದೇ ಪದೇ ಒಪ್ಪಿಗೆ ಒಪ್ಪಿಗೆ ಎಂದು ಹೇಳಿ ಆತನೊಂದಿಗೆ ಹೆಜ್ಜೆ ಹಾಕುವ ಪ್ರಯಾಣವು ಇದನ್ನು ಹಿಂಬಾಲಿಸುವ ಹೆಜ್ಜೆಗಳಾಗಿವೆ.

More