ಕ್ರಿಸ್ತನನ್ನು ಅನುಸರಿಸಲು预览

ಕ್ರಿಸ್ತನನ್ನು  ಅನುಸರಿಸಲು

12天中的第1天

ಕರೆ

ಕ್ರಿಸ್ತನನ್ನು ತಿಳಿದುಕೊಳ್ಳುವುದು ಒಂದು ವಿಷಯವಾಗಿದೆ. ಆತನನ್ನು ಕರ್ತನನ್ನಾಗಿ ಮತ್ತು ರಕ್ಷಕನನ್ನಾಗಿ ಅಹ್ವಾನಿಸುವುದು ಎರಡನೆಯ ವಿಷಯವಾಗಿದೆ. ಆತನನ್ನು ಹಿಂಬಾಲಿಸುವುದು ಸಂಪೂರ್ಣವಾಗಿ ಬೇರೆ ವಿಷಯವಾಗಿದೆ. ಇದಕ್ಕೆ ಒಂದು ನಿರ್ದಿಷ್ಟ ಬದ್ಧತೆ ಮತ್ತು ಶಿಸ್ತಿನ ಅಗತ್ಯವಿರುವುದು. ನೀವು ಹಿಂದೆಂದೂ ಹೋಗದ ಸ್ಠಳಕ್ಕೆ ಹೋಗುವಾಗ ಗೂಗಲ್ ನಕ್ಷೆಗಳ ಸೂಚನೆಗಳನ್ನು ಅನುಸರಿಸುವುದನ್ನು ನೀವೇ ಚಿತ್ರಿಸಿಕೊಳ್ಳಿ. ನೀವು ನಿಮ್ಮ ನಿರ್ದಿಷ್ಟ ಸ್ಥಳವನ್ನು ತಲುಪಲು ನಿಮ್ಮನ್ನು ಮುನ್ನಡೆಸುವ ಧ್ವನಿ ಸೂಚನೆಗಳನ್ನು ನೀವು ನಿಖರವಾಗಿ ಅನುಸರಿಸಬೇಕಾಗುತ್ತದೆ. ಕೆಲವೊಮ್ಮೆ ಇದು ನಿಮ್ಮನ್ನು ತಪ್ಪಾದ ಸ್ಥಳಕ್ಕೆ ಕರೆದೊಯ್ಯಬಹುದು, ಆದರೆ ಯೇಸು ನಿಮ್ಮನ್ನು ಎಂದಿಗೂ ತಪ್ಪಾದ ದಾರಿಯಲ್ಲಿ ನಡೆಸುವುದಿಲ್ಲ. ಆತನು ನಿಮ್ಮನ್ನು ಕಷ್ಟಕರವಾದ ಹಾದಿಯಲ್ಲಿ ನಡೆಸುವಂತೆ ನಿಮಗೆ ಕೆಲವೊಮ್ಮೆ ಅನಿಸಬಹುದು, ಆದರೆ ಆತನು ನಿಮ್ಮನ್ನು ಎಲ್ಲಿಗೆ ಕರೆದೊಯ್ದರೂ ಆತನು ನಿಮ್ಮೊಂದಿಗಿರುವನು.

ಇಂದು ನಾವು ಸಾಮಾಜಿಕ ಮಾಧ್ಯಮದ ಯುಗದಲ್ಲಿ ವಾಸಿಸುತ್ತಿದ್ದೇವೆ. ಅಲ್ಲಿ ನಾವು ಯಾರನ್ನು ಅನುಸರಿಸುತ್ತೇವೆ ಮತ್ತು ಯಾರು ನಮ್ಮನ್ನು ಅನುಸರಿಸುತ್ತಾರೆ ಎಂಬುವುದರ ಬಗ್ಗೆ ನಮಗೆ ತಿಳಿದಿರುತ್ತದೆ. ನಾವು ಅನುಸರಿಸುವ ಯಾರಾದರೂ ನಾವು ಒಪ್ಪದ ವಿಷಯವನ್ನು ಹಂಚಿಕೊಂಡರೆ, ಅವರನ್ನು ಅನುಸರಿಸದಿರುವ ಆಯ್ಕೆಯನ್ನು ಸಹ ನಾವು ಹೊಂದಿದ್ದೇವೆ. ನಮ್ಮನ್ನು ಅನುಸರಿಸುವ ಯಾರಾದರೂ ನಮ್ಮನ್ನು ಅಧಿಕವಾಗಿ ಸಮೀಪಿಸಲು ಬಯಸಿದ್ದರೆ ನಾವು ಅವರನ್ನು ತಡೆಯಬಹುದು. ಯೇಸುವಿನೊಂದಿಗೆ ಹೆಣೆದುಕೊಂಡಿರುವ ಜೀವನವು ವಿಭಿನ್ನವಾಗಿರುತ್ತದೆ, ಆದರೂ! ಇದು ನಮ್ಮ ಜೀವನವನ್ನು ಆತನ ಧ್ವನಿಗೆ ಹೊಂದಿಸುವುದು ಮತ್ತು ಎಲ್ಲದಕ್ಕೂ ಆತನ ಮೇಲೆ ಅವಲಂಬಿಸುವುದನ್ನು ಅರ್ಥೈಸುತ್ತದೆ. ನೀವು ಆತನನ್ನು ಅನುಸರಿಸದಿರಲು ಅಥವಾ ತಡೆಯಲು ಆಯ್ಕೆಮಾಡಿದರೆ, ಆತನು ನಿಮಗಾಗಿ ಯೋಚಿಸಿರುವ ಎಲ್ಲಾವನ್ನೂ ನೀವು ಕಳೆದುಕೊಳ್ಳುವಿರಿ. ಆದರೂ ಆತನು ನಿಮಗಾಗಿ ಕಾಯುವುದನ್ನು ನಿಲ್ಲಿಸುವುದಿಲ್ಲ.

ಪ್ರಯಾಣವು ಕಷ್ಟಕರವಾಗಿದ್ದರೂ ಮತ್ತು ದೇವರು ನಿಮ್ಮ ಹೃದಯದ ಕಠಿಣವಾದ ಭಾಗದಲ್ಲಿ ಕ್ರಿಯೆ ಮಾಡುತ್ತೀದ್ದಾನೆಂದು ನಿಮಗೆ ಅನಿಸಿದಾಗಲೂ ಸಹ, ನೀವು ಆತನನ್ನು ಹಿಂಬಾಲಿಸಲು ಆಯ್ಕೆ ಮಾಡಬೇಕು. ಆತನ ಗುಣಪಡಿಸುವ ಸ್ಪರ್ಶ ಅಥವಾ ಆತನ ದೃಢವಾದ ಧ್ವನಿಯನ್ನು ತಡೆಯಲು ನೀವು ಬಯಸಿದ್ದಾಗಲೂ ಸಹ ಆತನು ನಮ್ಮನ್ನು ತನ್ನ ಕಡೆಗೆ ಸೆಳೆಯುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಆತನನ್ನು ಹಿಂಬಾಲಿಸುವುದು ಎನ್ನುವುದು ನಾವು ಆತನಿಗೆ ಸಾಧ್ಯವಾದಷ್ಟು ಹತ್ತಿರದಲ್ಲಿರಬೇಕು ಮತ್ತು ಇದರಿಂದ ನಾವ ಆತನ ಕೈಯ ಮೇಲೆ ನಮ್ಮ ಹಿಡಿತವನ್ನು ಇಟ್ಟುಕೊಳ್ಳಬಹುದು ಮತ್ತು ಆತನ ಸೌಮ್ಯವಾದ ಮಾರ್ಗದರ್ಶನಕ್ಕೆ ನಮ್ಮ ಇಂದ್ರಿಯಗಳನ್ನು ಎಚ್ಚರಿಸಗೊಳ್ಳಬಹುದು.

ಘೋಷಣೆ:ನಾನು ಎಲ್ಲಾ ವಿಲಕ್ಷಣಗಳ ವಿರುದ್ಧ ಯೇಸುವನ್ನು ಅನುಸರಿಸುತ್ತೇನೆ.

读经计划介绍

ಕ್ರಿಸ್ತನನ್ನು  ಅನುಸರಿಸಲು

ಪ್ರತಿದಿನ ಯೇಸುವನ್ನು ಹೇಗೆ ಅನುಸರಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಸತ್ಯವೇದದ ಈ ಯೋಜನೆಯು ನಿಮಗೆ ಸೂಕ್ತವಾಗಿರುತ್ತದೆ. ಸಹಜವಾಗಿ ಯೇಸುವಗೆ ಒಪ್ಪಿಗೆ ಎಂದು ಹೇಳುವುದೇಈ ಪಠ್ಯಕ್ರಮದ ಮೊದಲನೆಯ ಹೆಜ್ಜೆಯಾಗಿರುತ್ತದೆ. ಜೀವಮಾನದಾದ್ಯಂತ ಪದೇ ಪದೇ ಒಪ್ಪಿಗೆ ಒಪ್ಪಿಗೆ ಎಂದು ಹೇಳಿ ಆತನೊಂದಿಗೆ ಹೆಜ್ಜೆ ಹಾಕುವ ಪ್ರಯಾಣವು ಇದನ್ನು ಹಿಂಬಾಲಿಸುವ ಹೆಜ್ಜೆಗಳಾಗಿವೆ.

More