ಕ್ರಿಸ್ತನನ್ನು ಅನುಸರಿಸಲು预览

ಕ್ರಿಸ್ತನನ್ನು  ಅನುಸರಿಸಲು

12天中的第5天

ಹಿಂಬಾಲಿಸುವುದರಿಂದ, ಸ್ವಸ್ಥತೆಯು ಹಿಂಬಾಲಿಸುವುದು ಎಂದು ಅರ್ಥೈಸುತ್ತದೆ.

ಯೇಸುವಿನ ಲೌಕಿಕ ಸೇವೆಯು ಅಸ್ವಸ್ಥರನ್ನು ಮತ್ತು ರೋಗಿಗಳನ್ನು ಸ್ವಸ್ಥಮಾಡುವುದನ್ನು ಒಳಗೊಂಡಿತ್ತು. ತನ್ನ ಬಳಿಗೆ ಬಂದಂತ ಪ್ರತಿಯೊಬ್ಬರನ್ನು ಯೇಸು ಹೇಗೆ ಸ್ವಸ್ಥಪಡಿಸಿದನು ಎಂದು ಸುವಾರ್ತೆ ವಿವರಿಸುತ್ತದೆ. ಆತನ ಬಳಿಗೆ ಬಂದಂತಹ ಯಾವುದೇ ರೋಗಿಯೂ ಸ್ವಸ್ಥತೆಯನ್ನು ಹೊಂದದೆ ಹಿಂದಿರುಗಲಿಲ್ಲ. ಆತನು ಎಲ್ಲಾ ರೀತಿಯ ರೋಗಗಳನ್ನು ಗುಣಪಡಿಸಿದನು ಎಂದು ಸತ್ಯವೇದ ಹೇಳುತ್ತದೆ. ಆತನು ಅಷ್ಟಕ್ಕೆ ನಿಲ್ಲಲಿಲ್ಲ, ಜನರನ್ನು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ದಂಡಿಸಿದ ದೆವ್ವಗಳ ದಬ್ಬಾಳಿಕೆಯಿಂದ ಬಿಡುಗಡೆ ಮಾಡಿದನು. ಇಂದು ಇದು ಭಿನ್ನವಾಗಿಲ್ಲ! ಆತನನ್ನು ಹಿಂಬಾಲಿಸುವ ನಮ್ಮೆಲ್ಲರನ್ನೂ ಯೇಸು ಇಂದೂ ಗುಣಪಡಿಸುವನು. ನಾವು ನಮ್ಮ ಸ್ವಸ್ಥತೆಯನ್ನು ತಕ್ಷಣವೇ ಸ್ವೀಕರಿಸದಿರಬಹುದು ಅಥವಾ ನಾವು ಕಲ್ಪಿಸಿಕೊಂಡ ರೀತಿಯಲ್ಲಿ ಅದು ಇಲ್ಲದಿರಬಹುದು, ಆದರೆ ಆತನನ್ನು ಪ್ರೀತಿಸುವವರಿಗೆ ಮತ್ತು ಹಿಂಬಾಲಿಸುವವರಿಗೆ ಆತನು ಯಾವಾಗಲೂ ಹತ್ತಿರ ಇರುತ್ತಾನೆ.

ನಾವು ಈ ದೇವರನ್ನು ಹಿಂಬಾಲಿಸಿದಾಗ, ನಮ್ಮ ಜೀವನವು ಅಕ್ಷರಶಃ ತಲೆಕೆಳಗಾಗಿರುತ್ತದೆ! ನಾವು ದಾಟಲು ಅಸಾಧ್ಯ ಎಂದು ಊಹಿಸದ ಕಠಿಣ ಹಾಗೂ ಸೋಲಿನ ಮಾರ್ಗದಿಂದ ನಮಗೆ ಹೊರಗೆ ತೆಗೆಯುತ್ತಾನೆ. ಜೀವನದ ಪ್ರಯಾಣ ಮುಂದುವರೆದಂತೆ, ಗುಣಪಡಿಸುವುದು ಕೇವಲ ಭೌತಿಕವಾಗಿ ಸಂಭವಿಸುವ ಸಂಗತಿಯಲ್ಲ ಆದರೆ ಸಮಗ್ರದ ಮಟ್ಟದಲ್ಲಿ ಎಂದು ನಾವು ಕಂಡುಕೊಳ್ಳುತ್ತೇವೆ. ನಾವು ಕೇವಲ ಭೌತಿಕ ದೇಹವನ್ನು ಹೊಂದಿದವರಲ್ಲ ಆದರೆ ಪರಸ್ಪರ ಸಂಕೀರ್ಣವಾಗಿ ಸಂಪರ್ಕ ಹೊಂದಿದ ಆತ್ಮ ಮತ್ತು ಜೀವವನ್ನು ಹೊಂದಿದ್ದೇವೆ ಎಂದು ಮಾನವರಾದ ನಾವು ನಮ್ಮ ಅಸ್ತಿತ್ವದಲ್ಲಿ ಅದ್ಭುತವಾಗಿ ಸಂಕೀರ್ಣರಾಗಿದ್ದೇವೆ.ನಮ್ಮಲ್ಲಿ ವಾಸಿಸುವ ಮತ್ತು ಚಲಿಸುವ ಪವಿತ್ರಾತ್ಮನು ಸಂಬಂಧವಾಗಿ, ಭಾವನಾತ್ಮಕವಾಗಿ, ದೈಹಿಕವಾಗಿ, ಸೃಜನಾತ್ಮಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸ್ವಸ್ಥತೆಯನ್ನು ತರುತ್ತಾನೆ. ಈ ಸ್ವಸ್ಥತೆಯು ಬಹುತೇಕ ಅಗ್ರಾಹ್ಯವಾಗಿದೆ ಆದರೆ ಕ್ರಮೇಣವಾಗಿ ನಮಗೆ ಮಾತ್ರವಲ್ಲ, ನಮ್ಮ ಸುತ್ತಮುತ್ತಲಿನವರೂ ಗುರುತಿಸಬಹುದಾದ ಸ್ಪಷ್ಟವಾದ ರೀತಿಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ! ಇಂದು, ಯೇಸುವಿನ ಕಾಲದಲ್ಲಿ ಬದುಕಿದ್ದವರಿಗೆ ಇಲ್ಲದಿರುವ ಒಂದು ಅಂಚು ನಮ್ಮಲ್ಲಿದೆ. ಇದು ಕ್ರಿಸ್ತನ ಪುನರುತ್ಥಾನದ ಶಕ್ತಿಯಾಗಿದ್ದು ಅದು ಯೇಸುವನ್ನು ಹಿಂಬಾಲಿಕರಿಗೂ ಪ್ರವೇಶಿಸಬಹುದಾಗಿದೆ. ಈ ಶಕ್ತಿಯು ನಮ್ಮ ದೇಹ, ಆತ್ಮ ಮತ್ತು ಜೀವದ ಮೂಲಕ ಹಾದು ಹೋದಾಗ ಸತ್ತಂತ ಎಲ್ಲದಕ್ಕೂ ಜೀವವನ್ನು ತರುತ್ತದೆ ಮತ್ತು ನಮ್ಮನ್ನು ಕ್ರಿಸ್ತನಂತೆಯೇ ಪರಿವರ್ತಿಸಲು ಪ್ರಾರಂಭಿಸುತ್ತದೆ. ನಾವು ಕ್ರಮೇಣವಾಗಿ, ದಿನದಿಂದ ದಿನಕ್ಕೆ, ಪರಿಸ್ಥಿತಿಯಿಂದ ಪರಿಸ್ಥಿತಿಗೆ, ಒಳಗಿನಿಂದ ಬದಲಾಗುತ್ತಿರುವಂತೆ ನಾವು ಮತ್ತೆ ಎಂದಿಗೂ ಒಂದೇ ಆಗಿರುವುದಿಲ್ಲ.

ಘೋಷಣೆ:ಯೇಸುವಿನ ಬಾಸುಂಡೆಗಳಿಂದ ನಾನು ಗುಣಹೊಂದಿದೆ!

读经计划介绍

ಕ್ರಿಸ್ತನನ್ನು  ಅನುಸರಿಸಲು

ಪ್ರತಿದಿನ ಯೇಸುವನ್ನು ಹೇಗೆ ಅನುಸರಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಸತ್ಯವೇದದ ಈ ಯೋಜನೆಯು ನಿಮಗೆ ಸೂಕ್ತವಾಗಿರುತ್ತದೆ. ಸಹಜವಾಗಿ ಯೇಸುವಗೆ ಒಪ್ಪಿಗೆ ಎಂದು ಹೇಳುವುದೇಈ ಪಠ್ಯಕ್ರಮದ ಮೊದಲನೆಯ ಹೆಜ್ಜೆಯಾಗಿರುತ್ತದೆ. ಜೀವಮಾನದಾದ್ಯಂತ ಪದೇ ಪದೇ ಒಪ್ಪಿಗೆ ಒಪ್ಪಿಗೆ ಎಂದು ಹೇಳಿ ಆತನೊಂದಿಗೆ ಹೆಜ್ಜೆ ಹಾಕುವ ಪ್ರಯಾಣವು ಇದನ್ನು ಹಿಂಬಾಲಿಸುವ ಹೆಜ್ಜೆಗಳಾಗಿವೆ.

More