ಕ್ರಿಸ್ತನನ್ನು ಅನುಸರಿಸಲು预览

ಕ್ರಿಸ್ತನನ್ನು  ಅನುಸರಿಸಲು

12天中的第6天

ಮಾರ್ಗವನ್ನು ಹಿಂಬಾಲಿಸುವುದು ಎನ್ನುವುದು ಆತನು ಎಲ್ಲಾ ರೀತಿಯಲ್ಲಿಯೂ ನಮ್ಮೊಂದಿಗಿದ್ದಾನೆ ಎಂದು ಅರ್ಥೈಸುತ್ತದೆ

ಯೇಸುವನ್ನು ಹಿಂಬಾಲಿಸುವುದು ಎನ್ನುವುದು ನಾವು ಅಗಲವಾದ ಮಾರ್ಗದ ಬದಲಿಗೆ ಇಕ್ಕಟ್ಟಾದ ಮಾರ್ಗವನ್ನು ಆರಿಸಿಕೊಳ್ಳುವುದನ್ನು ಅರ್ಥೈಸುತ್ತದೆ. ಇಕ್ಕಟ್ಟಾದ ಮಾರ್ಗವನ್ನು ಸರಿಯಾಗಿ ಕರೆಯಲಾಗಿದೆ ಏಕೆಂದರೆ ಅದು ದೇವರನ್ನು ಮೆಚ್ಚಿಸುವ ಮತ್ತು ಗೌರವಿಸುವ ರೀತಿಯಲ್ಲಿ ಜೀವಿಸಲು ಆಯ್ಕೆ ಮಾಡುವುದನ್ನು ಒಳಗೊಂಡಿರುತ್ತದೆ. ಈ ರೀತಿಯಾಗಿ ನೀವು ನಿಯತಕಾಲಿಕವಾಗಿ ನಿಮ್ಮ ಸ್ವಂತ ಆಸೆಗಳಿಗೆ ಮತ್ತು ಆಕಾಂಕ್ಷೆಗಳಿಗೆ ಸಾಯಬೇಕು ಮತ್ತು ದೇವರು ನಿಮಗೆ ಕರೆದೊಯ್ಯುವ ಸ್ಥಳಕ್ಕೆ ಹಿಂಬಾಲಿಸಬೇಕು. ಅಗಲವಾದ ಮಾರ್ಗ ಎನ್ನುವುದು ಎಲ್ಲಿ ಬೇಕಾದರೂ ಹೋಗುವ ಜೀವನವನ್ನು ಒಳಗೊಂಡಿರುತ್ತದೆ. ಇಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ನೀವು ಜೀವಿಸಬಹುದು, ವೈಯಕ್ತಿಕವಾಗಿ ನಿಮಗಾಗಿ ಕೆಲಸ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಬಹುದು ಮತ್ತು ನಿಮಗೆ ಸಂತೋಷ ತರುವುದನ್ನು ನೀವು ಮಾಡಬಹುದು. ಇಕ್ಕಟ್ಟಾದ ಮಾರ್ಗವು ನಿತ್ಯಜೀವನಕ್ಕೆ ಮತ್ತು ಅಗಲವಾದ ಮಾರ್ಗವು ನಾಶನಕ್ಕೆ ಕಾರಣವಾಗುತ್ತದೆ ಎಂದು ಯೇಸು ತನ್ನನ್ನು ಹಿಂಬಾಲಿಸಿದವರಿಗೆ ಸ್ಪಷ್ಟವಾಗಿ ಬೋಧಿಸಿದನು. ಆದರೂ ಕುತುಹಲಕಾರವಾದ ಸಂಗತಿಯೆಂದರೆ, ನಾವು ನಡೆಯಲು ಯೇಸು ಬೋಧಿಸುವ ಇಕ್ಕಟ್ಟಾದ ಮಾರ್ಗವು ಹೆದ್ದಾರಿಯಾಗಿದ್ದು, ಅಲ್ಲಿ ಆಶ್ಚರ್ಯಕರ ತಿರುವುಗಳು, ಅನಿರೀಕ್ಷಿತ ಎತ್ತರಗಳು, ತಗ್ಗುಗಳು ಮತ್ತು ಅಸಾಮಾನ್ಯ ಒಣ ತೇಪೆಗಳ ನಂತರ ಸೊಂಪಾದ ವಿಸ್ತರಣೆಗಳಿರುತ್ತದೆ. ನಾವು ಜೀವನದ ಕೊನೆಯ ತುದಿಗಳಲ್ಲಿ, ಅರಣ್ಯದ ದಾರಿಗಳಲ್ಲಿ, ಬಂಡೆಯ ಅಂಚುಗಳಲ್ಲಿ ನಿಂತಾಗಲೂ ದೇವರು ನಮ್ಮೊಂದಿಗಿದ್ದಾನೆ. ನಮ್ಮ ಜೀವನದ ಯಾವುದೇ ಋತುವಿನಲ್ಲಿಯೂ ಆತನು ನಮ್ಮನ್ನು ನಾವೇ ರಕ್ಷಿಸಿಕೊಳ್ಳುವಂತೆ ಬಿಡುವುದಿಲ್ಲ. ನಾವು ಉದ್ದೇಶಪೂರ್ವಕವಾಗಿ ಆತನಿಂದ ದೂರ ಹೋಗದ ಹೊರೆತು ಆತನು ನಮ್ಮನ್ನು ನಮ್ಮದೇ ಆದ ಮಾರ್ಗದಲ್ಲಿ ಸುತ್ತಲು ಬಿಡುವುದಿಲ್ಲ.

ನೀವು ಯೋಬ ಪುಸ್ತಕದ31ನೇ ಅಧ್ಯಾಯವನ್ನು ಓದುವಾಗ, ಯೋಬನು ತನ್ನ ಜೀವನದಲ್ಲಿ ಮಾಡಿದ ನಿರ್ಧಾರಗಳನ್ನು ಕಂಡುಕೊಳ್ಳುತ್ತೀರಿ. ಈ ಅಧ್ಯಾಯವನ್ನು ಓದುವುದು ಮತ್ತು ನಮ್ಮ ಜೀವನದಲ್ಲಿ ದೇವರಿಗೆ ಅಹಿತಕರವಾದ ಏನಾದರೂ ಇದೆಯೇ ಎಂದು ಹತ್ತಿರದಿಂದ ನೋಡಲು ಇದು ಆಸಕ್ತಿದಾಯಕವಾಗಿರುತ್ತದೆ. ಒಂದು ವೇಳೆ ಇದ್ದರೆ, ನಾವು ಮಾಡಬೇಕಾಗಿರುವುದು ಪಶ್ಚತ್ತಾಪದ ಪ್ರಾರ್ಥನೆಯನ್ನು ಸಲ್ಲಿಸುವುದು ಮತ್ತು ದೇವರಿಗೆ ನಮ್ಮ ನ್ಯೂನತೆಗಳ ಪಶ್ಚಾತ್ತಾಪ ಸಲ್ಲಿಸಬೇಕು ಮತ್ತು ಆತನು ಮುಕ್ತವಾಗಿ ಅನುಗ್ರಹಿಸುವ ಕ್ಷಮೆಯನ್ನು ಸ್ವೀಕರಿಸುವುದಾಗಿದೆ!"ಮನುಷ್ಯನ ಮಾರ್ಗಗಳು ಕರ್ತನನ್ನು ಮೆಚ್ಚಿಸಿದಾಗ ಆತನ ಶತ್ರುಗಳು ಸಹ ಆತನೊಂದಿಗೆ ಸಮಧಾನದಲ್ಲಿರುವಂತೆ ಆತನು ಮಾಡುತ್ತಾನೆ ಎಂದು ಜ್ಞಾನೋಕ್ತಿಯ ಲೇಖಕನು ಹೇಳಿರುವನು. ಎಂಥಹ ವಾಗ್ದಾನ!

ಘೋಷಣೆ:ನಾನು ಇಂದೂ ಎಂದೂ ಇಕ್ಕಟ್ಟಾದ ಮಾರ್ಗವನ್ನೇ ಆರಿಸಿಕೊಳ್ಳುವೆನು.

读经计划介绍

ಕ್ರಿಸ್ತನನ್ನು  ಅನುಸರಿಸಲು

ಪ್ರತಿದಿನ ಯೇಸುವನ್ನು ಹೇಗೆ ಅನುಸರಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಸತ್ಯವೇದದ ಈ ಯೋಜನೆಯು ನಿಮಗೆ ಸೂಕ್ತವಾಗಿರುತ್ತದೆ. ಸಹಜವಾಗಿ ಯೇಸುವಗೆ ಒಪ್ಪಿಗೆ ಎಂದು ಹೇಳುವುದೇಈ ಪಠ್ಯಕ್ರಮದ ಮೊದಲನೆಯ ಹೆಜ್ಜೆಯಾಗಿರುತ್ತದೆ. ಜೀವಮಾನದಾದ್ಯಂತ ಪದೇ ಪದೇ ಒಪ್ಪಿಗೆ ಒಪ್ಪಿಗೆ ಎಂದು ಹೇಳಿ ಆತನೊಂದಿಗೆ ಹೆಜ್ಜೆ ಹಾಕುವ ಪ್ರಯಾಣವು ಇದನ್ನು ಹಿಂಬಾಲಿಸುವ ಹೆಜ್ಜೆಗಳಾಗಿವೆ.

More