ಕ್ರಿಸ್ತನನ್ನು ಅನುಸರಿಸಲು预览

ಹಿಂಬಾಲಿಸುವುದು, ತಿಳಿದುಕೊಂಡಿರುವುದು ಎಂದು ಅರ್ಥೈಸುವುದಿಲ್ಲ
ಯೇಸುವನ್ನು ಹಿಂಬಾಲಿಸುವುದು ಉತ್ತೇಜಕವಾಗಿರುತ್ತದೆ ಏಕೆಂದರೆ ಹೆಚ್ಚಾಗಿ ನಾವು ಎಲ್ಲಾ ವಿವರಗಳನ್ನು ಹೊಂದಿರುವುದಿಲ್ಲ. ಸ್ಪೂರ್ತಿಯನ್ನು ಪಡೆಯಲು ನಮ್ಮ ವಿಶ್ವಾಸದ ನಾಯಕರನ್ನು ನೋಡಿ. ಅಬ್ರಹಾಮ್ ಮತ್ತು ಸಾರಾಳಿಗೆ ತಮ್ಮ ದೇಶವನ್ನು ಬಿಟ್ಟು ತಿಳಿಯದೆ ಸ್ಥಳಕ್ಕೆ ಹೋಗಲು ಹೇಳಲಾಯಿತು. ಹಾಗೆಯೇ, ನೋಹನು ತನ್ನ ಕುಟುಂಬ ಮತ್ತು ಪ್ರಾಣಿಗಳನು ಇರಿಸಲು ಒಂದು ದೊಡ್ಡ ನಾವೆಯನ್ನು ನಿರ್ಮಿಸುವ ಮೂಲಕ ಪ್ರವಾಹಕ್ಕೆ ಸಿದ್ದನಾಗಿರಲು ಹೇಳಲಾಯಿತು. ತನ್ನ ದೂರದ ತಾಯ್ನಾಡಿನ ಮುರಿದ ಗೋಡೆಗಳನ್ನು ಪುನರ್ನಿರ್ಮಿಸಲು ನೆಹೆಮಿಯನು ಕಾರಣನಾದನು. ಆ ಸಮಯದಲ್ಲಿ ಪ್ರವಾದಿಗಳು ಇನ್ನು ಕಾಣದ ಶತ್ರುಗಳಿಂದ ಮುಂಬರುವ ವಿಪತ್ತಿನ ಪತ್ರಗಳನ್ನು ಬರೆದರು. ಅವರಲ್ಲಿ ಯಾರೂ ಸಹ ಸಂಪೂರ್ಣವಾದ ಚಿತ್ರವನ್ನು ಹೊಂದಿರಲಿಲ್ಲ. ದೇವರು ಅವರಿಗೆ ನೋಡಲು ಅನುಮತಿಸಿದ ತುಣುಕುಗಳನ್ನು ಮಾತ್ರ ಅವರು ಹೊಂದಿದ್ದರು. ಆದರೆ ಉಳಿದ ಭಾಗಕ್ಕೆ ಅವರು ದೇವರನ್ನು ಪರೋಕ್ಷಕವಾಗಿ ನಂಬಬೇಕಾಗಿತ್ತು. ಮುಂದಿನ ಹಂತವು ಆಪತ್ತಿನಿಂದ ಅಪಾಯಕಾರಿಯಾಗಿ ಕಂಡುಬಂದಾಗಲೂ ಸಹ ದೇವರು ಅವರನ್ನು ಮುನ್ನಡೆಸಿದ ಸ್ಥಳಕ್ಕೆ ಹೋಗಲು ಇದು ಹಂತಹಂತದ ದಾಪುಗಾಲುಗಳನ್ನು ತೆಗೆದುಕೊಂಡಿತು. ಇಂದು ನಾವು ಯೇಸುವನ್ನು ಹಿಂಬಾಲಿಸುವಾಗ ಅದೇ ರೀತಿಯಾಗಿರುತ್ತದೆ. ನಾವು ಆತನ ಮಾತು ಹಾಗೂ ಧ್ವನಿಗೆ ವಿಧೇಯರಾಗಿ ಹೆಜ್ಜೆ ಇಡುವಾಗ, ಆತನು ನಮಗೆ ಹೆಚ್ಚಾಗಿ ಬಹಿರಂಗಪಡಿಸುವುದನ್ನು ನಾವು ನೋಡುತ್ತೇವೆ. ಯೇಸುವನ್ನು ಹಿಂಬಾಲಿಸಿದ ನಂತರ ನಿಮ್ಮ ಜೀವನಕ್ಕಾಗಿ ನೀವು ಸ್ಪಷ್ಟ ಮತ್ತು ಸಂಪೂರ್ಣ ನೀಲ ನಕ್ಷೆಯನ್ನು ಹುಡುಕುತ್ತಿದ್ದರೆ, ಅಂತಹ ಯಾವುದೇ ದಾಖಲೆ ಇಲ್ಲದಿರುವುದರಿಂದ ನೀವು ನಿರಾಶೆಗೊಳ್ಳಬಹುದು. ನಿಮ್ಮ ಬಳಿಯಲ್ಲಿರುವುದು ಆತನ ಮಾತು, ಅದು ಆತನ ಹೃದಯದಿಂದ ನಿಮ್ಮ ಹೃದಯಕ್ಕೆ ಬಂದ ಪ್ರೇಮ ಪತ್ರದಂತಿದೆ. ನೀವು ಆತನ ವಾಕ್ಯವನ್ನು ಓದಲು ಪ್ರಾರಂಭಿಸಿದಾಗ ಮತ್ತು ಅದನ್ನು ನಿಮ್ಮ ಹೃದಯಕ್ಕೆ ಒಪ್ಪಿಸಿ ನಂಬಿಕೆಯ ಪ್ರಯಾಣವನ್ನು ನಡೆಸುವಾಗ ಅದು ನಿಮ್ಮ ಪಾದಕ್ಕೆ ಬೆಳಕಾಗಿರುವುದನ್ನು ನೀವು ಕೊಂಡುಕೊಳ್ಳುವಿರಿ. ಆತನ ವಾಕ್ಯವು ನಿಮ್ಮನ್ನು ಬೀಳದಂತೆ ಕಾಯುಯುವುದು ಮಾತ್ರವಲ್ಲ ದೇವರು ನಿಮಗಾಗಿ ಉದ್ದೇಶಿಸಿದ ಮಾರ್ಗದಲ್ಲಿ ನಿಮ್ಮನ್ನು ಕರೆದೊಯ್ಯುತ್ತದೆ. ನೀವು ಈ ಮಾರ್ಗದಿಂದ ತಪ್ಪಬಹುದೇ? ಹೌದು, ನೀವು ತಪ್ಪಬಹುದು, ಆದರೆ ತಪ್ಪುವ ಕುರಿಗಳನ್ನು ಹಿಂಬಾಲಿಸುವ ಉತ್ತಮ ಕುರುಬನನ್ನು ನಾವು ಹೊಂದಿದ್ದೇವೆಂದು ನೀವು ಖಚಿತವಾಗಿರಬಹುದು. ಕುರುಬನು ನಿಮ್ಮನ್ನು ಹುಡುಕಲು ಮತ್ತು ನಿಮ್ಮನ್ನು ಮತ್ತೆ ಅದೇ ಮಾರ್ಗದಲ್ಲಿ ನಡೆಸಲು ಆತನಿಗೆ ನೀವು ಎಂದಿಗೂ ದೂರವಾಗಿರುವುದಿಲ್ಲ.
ಘೋಷಣೆ:ನನ್ನ ಭವಿಷ್ಯದ ವಿವರಗಳು ನನಗೆ ತಿಳಿದಿಲ್ಲದಿರಬಹುದು ಆದರೆ ನನ್ನ ದೇವರಿಗೆ ತಿಳಿದಿದೆ!
读经计划介绍

ಪ್ರತಿದಿನ ಯೇಸುವನ್ನು ಹೇಗೆ ಅನುಸರಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಸತ್ಯವೇದದ ಈ ಯೋಜನೆಯು ನಿಮಗೆ ಸೂಕ್ತವಾಗಿರುತ್ತದೆ. ಸಹಜವಾಗಿ ಯೇಸುವಗೆ ಒಪ್ಪಿಗೆ ಎಂದು ಹೇಳುವುದೇಈ ಪಠ್ಯಕ್ರಮದ ಮೊದಲನೆಯ ಹೆಜ್ಜೆಯಾಗಿರುತ್ತದೆ. ಜೀವಮಾನದಾದ್ಯಂತ ಪದೇ ಪದೇ ಒಪ್ಪಿಗೆ ಒಪ್ಪಿಗೆ ಎಂದು ಹೇಳಿ ಆತನೊಂದಿಗೆ ಹೆಜ್ಜೆ ಹಾಕುವ ಪ್ರಯಾಣವು ಇದನ್ನು ಹಿಂಬಾಲಿಸುವ ಹೆಜ್ಜೆಗಳಾಗಿವೆ.
More