ಆಮೋಸ 1:1-2
ಆಮೋಸ 1:1-2 KERV
ಇದು ಆಮೋಸನ ಸಂದೇಶ. ಇವನು ತೆಕೋವ ಎಂಬ ಪಟ್ಟಣದ ಕುರುಬರಲ್ಲೊಬ್ಬನು. ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಸಮಯದಲ್ಲಿ ಮತ್ತು ಅದೇ ಸಮಯದಲ್ಲಿ ಯೋವಾಷನ ಮಗನಾದ ಯಾರೊಬ್ಬಾಮನು ಇಸ್ರೇಲನ್ನು ಆಳುತ್ತಿರುವಾಗ ಆಮೋಸನಿಗೆ ದೈವದರ್ಶನಗಳುಂಟಾದವು. ಭೂಕಂಪವಾಗುವುದಕ್ಕಿಂತ ಎರಡು ವರ್ಷಗಳಿಗೆ ಮೊದಲು ಈ ದರ್ಶನಗಳಾದವು. ಆಮೋಸನು ಹೇಳಿದ್ದೇನೆಂದರೆ, “ಚೀಯೋನಿನಲ್ಲಿ ಯೆಹೋವನು ಸಿಂಹದಂತೆ ಗರ್ಜಿಸುವನು. ಜೆರುಸಲೇಮಿನಿಂದ ಆರ್ಭಟಿಸುತ್ತಾನೆ. ಆಗ ಕುರುಬರ ಹಸಿರು ಹುಲ್ಲುಗಾವಲು ಕಂದುಬಣ್ಣವಾಗಿ ಸಾಯುವುದು. ಕರ್ಮೆಲ್ ಬೆಟ್ಟವು ಒಣಗಿ ಬರಡಾಗುವುದು.”