YouVersion Logo
Search Icon

ಜ್ಞಾನತ್‌ರ ಪಡಿಮ 3

3
ಯೆಹೋವನ ನಂಬ್‌ವದ್‌
1ನಾಡ ಮೋನೇ, ನಾಡ ಬೋದನೆನ ಮರ್‌ಕತೆ. ನಾಡ ಆಜ್ಞೆನ ನೀಡ ಹೃದಯತ್‌ಲ್‌ ಗೇನ ಬೆಚ್ಚ.
2ನೀನ್‌ ಅನ್ನನೆ ಮಾಡ್‌ಚೇಂಗಿ ನೀನ್‌ ದುಂಬ ಕಾಲ ಬದ್‌ಕ್‌ವಿಯ. ಆ ಬದ್‌ಕ್‌ ಸಮಾದಾನ ಪಿಂಞ ಐಶ್ವರ್ಯ ದುಂಬ್‌ನದಾಯಿತ್‌ಪ್ಪ.
3ಕೃಪೆಯು ಸತ್ಯವು ನಿನ್ನ ಬುಟ್ಟಿತ್‌ ಪೋಕತನೆಕೆ ಬೆಚ್ಚ; ಅದ್‌ನ ನೀನ್‌ ನೀಡ ಬೋಳೆಕ್‌ ಕೆಟ್ಟಿಯಂಡ್, ನೀಡ ಹೃದಯತ್‌ಲ್‌ ಒಳ್‌ದಿ ಬೆಚ್ಚ.
4ಅಕ್ಕ ನೀಕ್‌ ದೇವಡ ಮಿಂಞತು ಮನುಷ್ಯಂಡ ಮಿಂಞತು ದಯೆ ಕ್‍ಟ್ಟಿತ್, ನೀನ್‌ ನಲ್ಲ ಪೆದತನ ಸಂಪಾದನೆ ಮಾಡ್‌ವಿಯ.
5ನೀಡ ಸ್ವಂತ ಬುದ್ದಿರ ಮೇಲೆ ನಂಬಿಕೆ ಇಡತೆ, ನೀಡ ಪೂರ್ತಿ ನಂಬಿಕೆನ ಯೆಹೋವಂಡ ಮೇಲೆ ಇಡ್.
6ನೀನ್‌ ಮಾಡುವ ಎಲ್ಲಾ ವಿಷಯತ್‌ಲು ಅಂವೊನ ಗೇನ ಮಾಡ್; ಅಕ್ಕ ಅಂವೊ, ನೀಡ ಬದ್‌ಕ್‌ರ ಬಟ್ಟೆನ ಚಾಯಿ ಮಾಡುವ.
7ನೀನೇ ಜ್ಞಾನಿ ಎಣ್ಣಿಯಂಡ್‌ ಗೇನ ಮಾಡತೆ, ಯೆಹೋವಂಗ್‌ ಬೊತ್ತಿಯಂಡ್‌ ಪಾಳ್‌ ಬಟ್ಟೆಯಿಂಜ ದೂರ ಇರ್.
8ನೀನ್‌ ಇನ್ನನೆ ಮಾಡ್‌ಚೇಂಗಿ, ಅದ್‌ ನೀಡ ತಡಿಕ್‌ ನಲ್ಲ ಆರೋಗ್ಯತ್‌ನ, ಮೂಳೆಕ್‌ ಪುದಿಯ ಬಲತ್‌ನ ತಪ್ಪ.
9ನೀಡ ಐಶ್ವರ್ಯತ್‌ಂಜಲು, ನೀಡ ಬೂಮಿಲ್‌ ಬೊಳೆಯುವ ಎಲ್ಲಾ ಆದ್ಯ ಫಲತ್ತಿಂಜಲು ಯೆಹೋವನ ಗನಪಡ್‌ತ್.
10ಅಕ್ಕ ನೀಡ ಪತ್ತಾಯ ಕೋಂಬರೆ ದುಂಬಿತ್‌ಪ್ಪ. ನೀಡ ದ್ರಾಕ್ಷಿರಸ ಬರಣಿಲ್‌ ದುಂಬಿತ್‌ ತುಳುಕಿಯಂಡ್‌ ಪೋಪ.
11ನಾಡ ಮೋನೇ, ಯೆಹೋವ ನೀಕ್‌ ಶಿಕ್ಷೆ ತಪ್ಪಕ ಅದ್‌ನ ಅಲ್ಲಗೆಳೆಯತೆ. ಅಂವೊ ನೀಡ ತಪ್ಪ್‌ನ ಸರಿಪಡ್‌ತ್‌ವಕಾಯಿತ್‌ ಚೂಕ್‌ವಕ ತಳ್‌ಂದ್‌ ಪೋಕತೆ.
12ಎನ್ನಂಗೆಣ್ಣಚೇಂಗಿ, ಅಪ್ಪ ತಾಂಡ ಕೊದಿರ ಮೋಂವೊಂಗ್‌ ಶಿಕ್ಷೆ ತಪ್ಪನೆಕೆ, ಯೆಹೋವ ಸಹ ತಾನ್‌ ಪ್ರೀತಿಚಿಡುವಯಿಂಗಕ್‌ ಶಿಕ್ಷೆ ತಪ್ಪ.
13ಜ್ಞಾನತ್‌ನ ಕಂಡ್‌ಪುಡಿಪ ಮನುಷ್ಯನು ಬುದ್ದಿನ ಸಂಪಾದನೆ ಮಾಡುವ ಮನುಷ್ಯನು ಆಶೀರ್ವಾದ ಪಡ್‌ಂದಯಿಂಗ.
14ಎನ್ನಂಗೆಣ್ಣ್‌ಚೇಂಗಿ, ಜ್ಞಾನ ಬೊಳ್ಳಿಕಿಂಜ ಲಾಬವುಳ್ಳದು, ಅದ್‌ಂಡ ಆದಾಯ ಪೊನ್ನ್‌ಕಿಂಜ ಮಹತ್‌ವವಾನದು ಆಯಿತುಂಡ್.
15ಜ್ಞಾನ ಪವಳಕಿಂಜಿ ಉತ್ತಮವಾನದ್. ನೀನ್‌ ಕುಶಿ ಪಡುವ ಏದ್‌ ವಸ್ತು ಅದ್‌ಂಗ್‌ ಸರಿಸಮವಾಯಿತ್‌ ಇಲ್ಲೆ.
16ಜ್ಞಾನ ಅದ್‌ಂಡ ಬಲತ್‌ಕೈಯಿಲ್‌ ದೀರ್ಘಾಯಸ್ಸು (ದುಂಬ ಆಯಸ್ಸು), ಅದ್‌ಂಡ ಎಡತ್‌ಕೈಯಿಲ್‌ ಐಶ್ವರ್ಯವು ಗನವು ಉಂಡ್.
17ಜ್ಞಾನ ನಿನ್ನ ಸುಕವಾನ ಬಟ್ಟೆಲ್‌ ನಡ್‌ತಿಯಂಡ್‌ ಪೋಪ. ಅದ್‌ ನಿನ್ನ ಸಮಾದಾನತ್‌ಲ್‌ ನಡ್‌ತ್‌ವ.
18ಜ್ಞಾನತ್‌ನ ನಂಬ್‌ನಯಿಂಗಕ್‌ ಜ್ಞಾನ ಜೀವತಪ್ಪ ಮರವಾಯಿತ್‌ಪ್ಪ. ಅದ್‌ನ ಗಟ್ಟಿಯಾಯಿತ್‌ ಪುಡ್‌ಚಯಿಂಗ ಆಶೀರ್ವಾದ ಪಡ್‌ಂದಯಿಂಗಳಾಯಿತ್‌ಪ್ಪ.
19ಯೆಹೋವ ಜ್ಞಾನತ್‌ಂಜ ಬೂಮಿಕ್‌ ಅಡಿಪಾಯ ಇಟ್ಟಿತ್, ಬುದ್ದಿಯಿಂಜ ಬಾನ ಮಂಡಲತ್‌ನ ಸ್ತಾಪನೆ ಮಾಡ್‌ಚಿ.
20ಅಂವೊಂಡ ಜ್ಞಾನತ್‌ಂಜ ಬೂಮಿರ ನೀರ್‌ರ ಆಳತ್‌ನ ಬಾಗ ಮಾಡ್‌ಚಿ, ಮೋಡ ಮಂಜಿ ತುಳಿನ ಬೂವನೆಕೆ ಮಾಡ್‌ಚಿ.
ಸೃಷ್ಟಿಲ್‌ ದೇವಡ ಜ್ಞಾನ
21ನಾಡ ಮೋನೇ, ನೇರಾನ ಜ್ಞಾನತ್‌ನ ಪಿಂಞ ನಲ್ಲ ಆಲೋಚನೇನ ಬದ್ರವಾಯಿತ್‌ ಬೆಚ್ಚ, ಅದ್‌ ನೀಡ ಕಣ್ಣ್‌ಯಿಂಜ ದೂರ ಪೋಪಕ್‌ ಬುಡತೆ.
22ಅದ್‌ ನೀಡ ಆತ್ಮಕ್‌ ಜೀವವಾಯಿತು, ನೀಡ ಬೋಳೆಕ್‌ ಚಿಂಗಾರತ್‌ರ ಆಭರಣವಾಯಿತು ಇಪ್ಪ.
23ಅಕ್ಕ ನೀನ್‌ ಪೋಡಿಯಿಲ್ಲತೆ ನೀಡ ಬಟ್ಟೆಲ್‌ ಪೋಪಿಯ, ನೀಡ ಕಾಲ್‌ ತಟ್ಟಿತ್‌ ಬೂವುಲೆ.
24ನೀನ್‌ ಬುದ್ದೊಕ ಪೋಡಿಯಿಲ್ಲತೆ ಇಪ್ಪಿಯ; ನೀನ್‌ ಬುದ್ದಂಡ್‌ ಸುಕತ್‌ಲ್‌ ವರುವಿಯ.
25ಬಲ್‌ಂಗನೆ ಬಪ್ಪ ಅಪಾಯಕು, ದುಷ್ಟಂಗಡ ಮೇಲೆ ಬಪ್ಪ ನಾಶಕು ನೀನ್‌ ಪೋಡಿಚಿಡಂಡ.
26ಎನ್ನಂಗೆಣ್ಣ್‌ಚೇಂಗಿ, ಯೆಹೋವ ನೀಡ ನಂಬಿಕೆಯಾಯಿತ್‌ ಇಂಜಿತ್, ನೀಡ ಕಾಲ್‌ ಬಲೆಕ್‌ ಚಿಕ್ಕಿಪೋಕತನೆಕೆ ಕಾಪಾಡುವ.
27ನಲ್ಲದ್‌ ಮಾಡ್‌ವಕ್‌ ನೀಕ್‌ ಶಕ್ತಿ ಉಂಡೇಂಗಿ, ಅದ್‌ನ ಬೋಂಡಿಯಾನಯಿಂಗಕ್‌ ಮಾಡತೆ ಇರತೆ.
28ನೀಡ ನೆರೆಮನೆಕಾರ ಕ್‍ೕಪ ವಸ್ತು ನೀಡ ಪಕ್ಕ ಇಪ್ಪಕ, ಪೋಯಿತ್‌ ನಾಳೆ ಬಾ, ತಪ್ಪಿ ಎಣ್ಣಿಯಂಡ್‌ ಎಣ್ಣತೆ#3.28 ಅಕ್ಕಲೆ ಅಂವೊಂಗ್‌ ಸಹಾಯ ಮಾಡ್‌.
29ನಿನ್ನ ನಂಬಿತ್‌ ನೀಡ ಕೂಡೆ ವಾಸಮಾಡ್‌ವ ನೆರೆಮನೆಕಾರಂಗ್‌ ವಿರೋದವಾಯಿತ್‌ ಏದ್‌ ಕ್‍ೕಡು ಗೇನ ಮಾಡತೆ.
30ನೀಕ್‌ ಏದ್‌ ಕ್‍ೕಡು ಮಾಡತಂವೊಂಡ ಮೇಲೆ ಅನ್ಯಾಯವಾಯಿತ್‌ ದೂರ್‌ ಎಣ್ಣತೆ.
31ಹಿಂಸೆ ಪಡುತ್‌ವಂವೊನ ನೋಟಿತ್‌ ಹೊಟ್ಟೆಕಿಚ್ಚ್‌ ಪಡತೆ. ಅಂವೊಂಡ ಒರು ಬಟ್ಟೆಲೂ ಪೋಕತೆ.
32ಅಂತ ದುಷ್ಟ ಮನುಷ್ಯ ಯೆಹೋವಂಗ್‌ ಅಸಹ್ಯ. ಆಚೇಂಗಿ ನೀತಿಲ್‌ ನಡ್‌ಪಯಿಂಗಡ ಕೂಡೆ ಅಂವೊ ನಂಬಿಕೇಲ್‌ ಇಪ್ಪ.
33ದುಷ್ಟಂಗಡ ಕುಟುಬಂತ್‌ರ ಮೇಲೆ ಯೆಹೋವಂಡ ಶಾಪ ಇಪ್ಪ, ಆಚೇಂಗಿ ನೀತಿವಂತಯಿಂಗಡ ಕುಟುಬಂತ್‌ನ ಅಂವೊ ಆಶೀರ್ವಾದ ಮಾಡ್‌ವ.
34ಪರಿಹಾಸ ಮಾಡ್‌ವಂವೊನ ಯೆಹೋವ ಪರಿಹಾಸ ಮಾಡುವ. ತಗ್ಗಿತ್‌ ಉಳ್ಳಯಿಂಗಕ್‌ ಕರುಣೆ ಕಾಟುವ.
35ಜ್ಞಾನಿಯಂಗಕ್‌ ಗನ ಕ್‌ಟ್ಟುವ, ಆಚೇಂಗಿ, ಮೂಡಂಗಕ್‌ ಅವಮಾನ ಆಪ.

Highlight

Share

Copy

None

Want to have your highlights saved across all your devices? Sign up or sign in