YouVersion Logo
Search Icon

ಆದ್ಯತ್‌ರ ಪುಸ್ತಕ 3

3
ಪಾಪ ಲೋಕತ್‌ಲ್‌ ನುಗ್ಗ್‌ನದ್‌
1ಯೆಹೋವನಾನ ದೇವ ಸೃಷ್ಟಿ ಮಾಡ್‌ನ ಎಲ್ಲಾ ಕಾಡ್‌ ಪ್ರಾಣಿಯಕಿಂಜ ಪಾಂಬ್ ತಂತ್‌ರ ಬುದ್ದಿ ಉಳ್ಳದಾಯಿತ್‌ಂಜತ್. ಅದ್‌ ಪೊಣ್ಣಾಳ್‌ರ ಪಕ್ಕ ಬಂದಿತ್: ಈ ತೋಟತ್‌ರ ಮರತ್‌ರ ಪಣ್ಣ್‌ಲ್‌ ಒಂದ್‌ ಸಹ ನಿಂಗ ತಿಂಬಕ್ಕಾಗಾಂದ್‌ ದೇವ ನೇರಾಯಿತು ಎಣ್ಣ್‌ಚಾಂದ್‌ ಕ್‍ೕಟತ್. 2ಅದ್‌ಂಗ್‌ ಆ ಪೊಣ್ಣಾಳ್: ಈ ತೋಟತ್‌ಲ್‌ ಉಳ್ಳ ಏದ್‌ ಮರತ್‌ರ ಪಣ್ಣ್‌ನ ನಂಗ ತಿಂಗಲು. 3ಆಚೇಂಗಿ ತೋಟತ್‌ರ ಮದ್ಯತ್‌ಲ್‌ ಉಳ್ಳ ಮರತ್‌ರ ಪಣ್ಣ್‌ನ ಮಾತ್‌ರ ನಂಗ ತಿಂಬಕ್ಕಾಗ. ಅದನ ತಿಂಬಕು, ಮುಟ್ಟ್‌ವಕು ಸಹ ಆಗ. ಅನ್ನನೆ ಮಾಡ್‌ಚೇಂಗಿ ನಂಗ ಚತ್ತ್‌ ಪೋಪಾಂದ್‌ ಎಣ್ಣ್‌ಚೀಂದ್‌ ಎಣ್ಣ್‌ಚಿ. 4ಅಕ್ಕ ಪಾಂಬ್ ಆ ಪೊಣ್ಣಾಳ್‌ಕ್: ನಿಂಗ ನೇರಾಯಿತು ಚಾವುಲೇಂದ್‌ ಎಣ್ಣ್‌ಚಿ; 5ನಿಂಗ ಅದನ ತಿಂಬ ದಿವಸತ್‌ಲ್‌ ನಿಂಗಡ ಕಣ್ಣ್‌ ತೊರ್ಪಾಂದು, ನಿಂಗಕ್‌ ನಲ್ಲದ್‌ ಕೆಟ್ಟದ್‌ ಎಂತದ್‍ೕಂದ್‌ ಗೊತ್ತಾಯಿತ್‌ ನಿಂಗ ದೇವಡನೆಕೆ ಆಪಿರಾಂದು ದೇವಕ್‌ ಗೊತ್ತುಂಡ್‌ಂದ್‌ ಎಣ್ಣ್‌ಚಿ. 6ಅಕ್ಕ ಆ ಪೊಣ್ಣಾಳ್‌ಕ್, ಈ ಮರತ್‌ರ ಪಣ್ಣ್‌ ತಿಂಬಕ್‌ ನಲ್ಲದಾಯಿತು, ನೋಟ್‌ವಕ್‌ ಚಾಯಿ ಉಂಡ್‍ೕಂದು, ಅವಕ್‌ ಜ್ಞಾನ ಕ್‌ಟ್ಟ್‌ವಕ್‌ ಅದ್‌ ಬೋಂಡ್‍ೕಂದು ಗೊತ್ತಾಯಿತ್, ಅದ್‌ನ ಪರಿಚಿತ್‌ ಅವ ತಿಂದತ್. ಅವಡ ವಡಿಯಂಗು ಕೊಡ್‌ಪಕ, ಅಂವೊನು ಅದನ ತಿಂದತ್. 7ಅಕ್ಕಲೆ ಅಯಿಂಗ ದಂಡಾಳ್‌ರ ಕಣ್ಣ್‌ ತೊರ್‌ಂದತ್; ಅಯಿಂಗ ಬೆತ್ತಲೆ ಆಯಿತ್ತುಂಡ್‍ೕಂದ್‌ ಅರಿಂಜಿತ್‌ ಅತ್ತಿಪಣ್ಣ್‌ ಮರತ್‌ರ ಎಲ್ಕಂಡತ್‌ನ ಪೊಂದಿತ್‌ ಸುತ್ತಿಯಂಡತ್.
8ಬಯಿಟಾಪಕ, ತಂಪ್‌ಗಾಳಿ ಬೀಜಿಯಂಡಿಪ್ಪ ನೇರತ್‌ಲ್‌ ಯೆಹೋವನಾನ ದೇವ ತೋಟತ್‌ಲ್‌ ನಡ್‌ಪ ಸದ್ದ್ ಅಯಿಂಗಕ್‌ ಕ್‍ೕಟತ್. ಅಕ್ಕ ಅಯಿಂಗ ಅಂವೊಂಡ ಪ್ರಸನ್ನತಿಂಜ ಮರಂಜಿತ್‌ ಮರತ್‌ರ ಮದ್ಯತ್‌ಲ್‌ ಒಳ್‌ಚಂಡತ್. 9ಯೆಹೋವನಾನ ದೇವ ಆದಾಮನ ಕಾಕಿತ್: ನೀನ್‌ ಎಲ್ಲಿ ಉಳ್ಳಿಯಾಂದ್‌ ಕ್‍ೕಟತ್. 10ಅದಂಗ್‌ ಅಂವೊ, ನಾಕ್, ನೀನ್‌ ತೋಟತ್‌ಲ್‌ ನಡಪ್ಪ ಸದ್ದ್ ಕ್‍ೕಟಿಯೆ, ನಾನ್‌ ಬೆತ್ತಲೆಯಾಯಿತ್‌ ಉಳ್ಳಂಗ್‌ ನಾಕ್‍ ಪೋಡಿ ಆಯಿತ್, ನಾನ್‌ ಒಳ್‌ಚಂಡ್‍ೕಂದ್‌ ಎಣ್ಣ್‌ಚಿ. 11ಅದಂಗ್‌ ಅಂವೊ: ನೀನ್‌ ಬೆತ್ತಲೆಯಾಯಿತ್‌ ಉಳ್ಳಿಯಾಂದ್‌ ದಾರ್‌ ನೀಕ್‌ ಎಣ್ಣಿಯೆ? ನಾನ್‌ ನೀಕ್‌ ತಿಂಬಕ್ಕಾಗಾಂದ್‌ ಎಣ್ಣಿತ್‌ಂಜ ಮರತ್‌ಂಜ ತಿಂದಿಯಾಂದ್‌ ಕ್‍ೕಟತ್. 12ಅದ್‌ಂಗ್‌ ಆದಾಮ: ನೀನ್‌ ತಂದ ಆ ಪೊಣ್ಣಾಳ್‌ ನಾಕ್‍ ಆ ಪಣ್ಣ್‌ನ ತಂದಂಗ್‌ ನಾನ್‌ ತಿಂದಿಯೇಂದ್‌ ಎಣ್ಣ್‌ಚಿ. 13ಯೆಹೋವನಾನ ದೇವ ಆ ಪೊಣ್ಣಾಳ್‌ಕ್: ನೀನ್‌ ಎಂತ ಮಾಡಿಯಾಂದ್‌ ಕ್‍ೕಟತ್. ಅದಂಗ್‌ ಆ ಪೊಣ್ಣಾಳ್: ಆ ಪಾಂಬ್ ನಾಕ್‍ ವಂಚನೆ ಮಾಡ್‌ಚಿ, ಅದಂಗೇ ನಾನ್‌ ತಿಂದಂದ್‌ ಎಣ್ಣ್‌ಚಿ. 14ಅಕ್ಕ ಯೆಹೋವನಾನ ದೇವ ಆ ಪಾಂಬ್‌ಕ್: ನೀನ್‌ ಈ ಕಾರ್ಯತ್‌ನ ಮಾಡ್‍ನಗುಂಡ್, ಎಲ್ಲಾ ಚಾಕ್‌ ಪ್ರಾಣಿಯಡಿಂಜ, ಕಾಡ್‌ ಪ್ರಾಣಿಯಡಿಂಜ ಬೋರೆ ಆಯಿತ್‌ ನೀಕ್‌ ಶಾಪ ಕ್‌ಟ್ಟಿತ್‌ಪ್ಪ. ನೀನ್‌ ನೀಡ ಪೊಟ್ಟೆಯಿಂಜ ತೆವಳಿಯಂಡ್‌ ಪೋಪಿಯ ಪಿಂಞ ನೀನ್‌ ಜೀವವಾಯಿತ್‌ ಉಳ್ಳ ದಿವಸವೆಲ್ಲ ನೀನ್‌ ದೂಳ್‌ನ ತಿಂಬಿಯ.
15ನೀಕು ಪೊಣ್ಣಾಳ್‌ಕು, ನೀಡ ಸಂತಾನಕು ಪೊಣ್ಣಾಳ್‌ರ ಸಂತಾನಕು ಪಗೆತನ ಉಂಟ್ ಮಾಡ್‌ವಿ. #3.15 ಇದ್‌ ಯೇಸು ಕೃಸ್ತ ಸೈತಾನ ಗೆಳುವ ವಿಷಯತ್‌ ಪ್ರವಾಚನೆಯಾಯಿತ್‌ ಎಣ್ಣ್‌ನದ್‌ಅಂವೊ ನೀಡ ಮಂಡೆನ ಜಜ್ಜ್‌ವ, ನೀನ್‌ ಅಂವೊಂಡ ಕಾಲ್‌ರ ಮುಡಿನ ಕಡಿಪಿಯಾಂದ್‌ ದೇವ ಎಣ್ಣ್‌ಚಿ.
16ಅಲ್ಲಿಂಜ ಅಂವೊ ಆ ಪೊಣ್ಣಾಳ್‌ಕ್: ನೀನ್‌ ಕೆಲಕರ್ತಿಯಾಯಿತ್‌ಪ್ಪಕ ದುಂಬ ನೊಂಬಲತ್‌ನ ಉಂಟ್‌ಮಾಡ್‌ವಿ, ದುಂಬ ನೊಂಬಲತ್‌ಲ್‌ ನೀನ್‌ ಕುಂಞಿಯಳ ಪೆರುವಿಯ. ನೀಡ ಆಸೆಯೆಲ್ಲ ನೀಡ ವಡಿಯಂಡ ಮೇಲೆ ಇಪ್ಪ; ಆಚೇಂಗಿ ಅಂವೊ ನೀಡ ಮೇಲೆ ಅದಿಕಾರ ಮಾಡ್‌ವಾಂದ್‌ ಎಣ್ಣ್‌ಚಿ.
17ಪಿಂಞ ದೇವ ಆದಾಮನ ನೋಟ್ಟಿತ್: ನೀನ್‌ ನೀಡ ಪೊಣ್ಣ್‌ರ ತಕ್ಕ್‌ ಕ್‍ೕಟಿತ್, ನಾನ್‌ ತಿಂಬಕ್ಕಾಗಾಂದ್‌ ಎಣ್ಣಿತ್‌ಂಜ ಮರತ್‌ರ ಪಣ್ಣ್‌ನ ತಿಂದಂಗ್, ನೀಡಗುಂಡ್‌ ನೆಲಕ್‌ ಶಾಪ ಕ್‌ಟ್ಟ್‌ಚಿ. ನೀಡ ಆಯಿಸ್ಸೆಲ್ಲಾ ಕಷ್ಟಪಟ್ಟಿತ್‌ ಈ ಬೂಮಿರ ಪಸಲ್‌ನ ತಿಂಬಿಯ. 18ಈ ಬೂಮಿಲ್‌ ಮುಳ್ಳ್ ಗಿಡ ಪಿಂಞ ಕಳೆಯೆಲ್ಲಾ ದುಂಬ ಪುಟ್ಟ್‌ವ. ಅನ್ನನೆ ನೀನ್‌ ಅದ್‌ಂಡ ಪಸಲ್‌ನ ಅನುಬವಿಚಿಡ್‌ವಿಯ. 19ನಿನ್ನ ಮಣ್ಣ್‌ಂಜ ಎಡ್‌ತಾಂಗ್, ನೀನ್‌ ಮಣ್ಣ್‌ಕ್ ಪೋಪಕತ್ತನೆ ಬೆವರ್‌ ಸುರಿಸಿಯಂಡ್‌ ನೀಕ್‌ ಉಂಬಕುಳ್ಳದ್‌ನ ಸಂಪಾದನೆಮಾಡ್‌ವಿಯ. ನೀನ್‌ ಮಾಣ್ಣಾಯಿತ್‌ ಉಳ್ಳಿಯ, ಮಣ್ಣ್‌ಕೇ ಪೋಪಿಯಾಂದ್‌ ಎಣ್ಣ್‌ಚಿ.
ಯೆಹೋವನಾನ ದೇವಡ ನ್ಯಾಯತೀರ್‌ಪ್‌
20ಆದಾಮ ತಾಂಡ ಪೊಣ್ಣ್‌ಕ್ ಹವ್ವಾಂದ್‌ ಪೆದ ಬೆಚ್ಚತ್; ಎನ್ನಂಗೆಣ್ಣ್‌ಚೇಂಗಿ ಬದ್‌ಕಿಯಂಡುಳ್ಳಯಿಂಗಕೆಲ್ಲಾ ಅವಳೇ ಅವ್ವಳಾಯಾಯಿತುಂಡ್. 21ಯೆಹೋವನಾನ ದೇವ ಆದಾಮಂಗ್‌ ಪಿಂಞ ಅಂವೊಂಡ ಪೊಣ್ಣ್‌ಕ್ ಪ್ರಾಣಿರ ದೋಲ್‌ರ ಉಡ್‌ಪ್ ಮಾಡಿತ್‌ ಅಯಿಂಗಳ ಉಡ್‌ತತ್. 22ಪಿಂಞ ಯೆಹೋವನಾನ ದೇವ: ಈ ಮನುಷ್ಯ ನಲ್ಲದ್‌ ಕೆಟ್ಟದ್‌ ಏದ್‍ೕಂದ್‌ ಗೊತ್ತಾಯಿತ್‌ ನಂಗಡನೆಕೆ ಆಯಿತಲ್ಲ. ಇಂಞು ಅಂವೊ ತಾಂಡ ಕೈ ನ್‍ೕಟಿತ್, ಆ ಜೀವ ತಪ್ಪ ಮರತ್‌ರ ಪಣ್ಣ್‌ನ ಕೊಜ್ಜಿತ್‌ ತಿಂದಿತ್‌ ಕಾಲಕಾಲಕು ಬದ್‌ಕ್‌ವಕ್ಕಾಗಾಂದ್‌ ಎಣ್ಣಿತ್, 23ಅಂವೊನ ರೂಪ್‌ಚಿಟ್ಟ ನೆಲತ್‌ಲ್‌ ಬೇಲ್‌ ಪಣಿ ಮಾಡ್‌ವಕಾಯಿತ್‌ ಆದಾಮನ ಪಿಂಞ ಅಂವೊಂಡ ಪೊಣ್ಣ್‌ನ ಏದೆನ್‌ ತೋಟತ್‌ಂಜ ಪೊರಮೆ ಅಯಿಚಿರ್‌ತ್‌ 24ಅಯಿಂಗಳ ಏದೆನ್‌ ತೋಟತ್‌ಂಜ ಓಡಿಚಿಟ್ಟ ಪಿಂಞ, ಏದೆನ್‌ ತೊಟತ್‌ರ ಕ್‍ೕಕ್‌ ದಿಕ್ಕ್‌ಲ್‌ ಕೆರೂಬಿಯಂಗಳ ಪಿಂಞ ಬೀಜುವ ಮಿನ್ನಿಯಂಡಿಪ್ಪ ಕತ್ತಿನ, ಜೀವ ತಪ್ಪ ಮರತ್‌ರ ಪಕ್ಕ ಪೋಪ ಬಟ್ಟೇನೆ ಕಾಪಕಾಯಿತ್‌ ಬೆಚ್ಚತ್.

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy