ಈ ಲೋಕತ್‍ರ ಆಕೀರ್ ದಿವಸತ್‍ಲ್ ಕಠಿಣ ಕಾಲ ಬಪ್ಪಾಂದ್ ಗೇನ ಬೆಚ್ಚ. ಜನ ಅಯಿಂಗಯಿಂಗಳ ಕುಶಿಪಡ್‌ತ್‌ವ ಸ್ವಾರ್ತಂಗಳಾಯಿತ್, ದುಡ್ಡ್‌ರ ಮೇಲೆ ಅತಿ ಆಸೆ ಉಳ್ಳಯಿಂಗಳಾಯಿತ್, ಅಯಿಂಗಳ ಅಯಿಂಗಳೇ ಹೊಗಳ್‌ವಯಿಂಗಳಾಯಿತ್, ಆಂಗಾರ ಉಳ್ಳಯಿಂಗಳಾಯಿತ್, ಮರ್ಯಾದೆ ಕೊಡ್‍ಕತಯಿಂಗಳಾಯಿತ್, ಅಯಿಂಗಡ ಅಪ್ಪವ್ವಂಡ ತಕ್ಕ್‌ನ ಕ್‍ೕಕತಯಿಂಗಳಾಯಿತ್, ಸಹಾಯ ಮಾಡ್‍ನಯಿಂಗಳ ಗೇನ ಮಾಡತಯಿಂಗಳಾಯಿತ್, ಅಪವಿತ್ರಯಿಂಗಳಾಯಿತ್, ಪ್ರೀತಿ ಇಲ್ಲತಯಿಂಗಳಾಯಿತ್, ಮನ್ನಿಚಿಡತಯಿಂಗಳಾಯಿತ್, ಚಾಡಿ ಎಣ್ಣ್‌ವಯಿಂಗಳಾಯಿತ್, ತನ್ನಡಕ್ಕ ಇಲ್ಲತಯಿಂಗಳಾಯಿತ್, ಕ್ರೂರಿಯಂಗಳಾಯಿತ್, ನಲ್ಲದ್‍ನ ವಿರೋದಿಚಿಡುವಯಿಂಗಳಾಯಿತ್, ದುಷ್ಟ ಬುದ್ದಿ ಉಳ್ಳಯಿಂಗಳಾಯಿತ್, ಎಂತ ಆಪಾಂದ್ ಗೇನ ಮಾಡತೆ ತಪ್ಪ್ ಮಾಡ್‌ವಕ್ ದೈರ್ಯ ಉಳ್ಳಯಿಂಗಳಾಯಿತ್, ಒಂದು ಇಲ್ಲತ ಇಂಜತೇಂಗಿಯು ಎಲ್ಲಾ ಉಳ್ಳಯಿಂಗಡನೆಕೆ ಪೆರುಮೆ ಕಾಟ್‌ವಯಿಂಗಳಾಯಿತು, ದೇವನ ಕುಶಿಪಡ್‍ತತೆ ಅಯಿಂಗಯಿಂಗಳ ಕುಶಿಪಡ್‍ತ್‍ವಯಿಂಗಳಾಯಿತ್, ದೇವಡ ಮೇಲೆ ಬಕ್ತಿ ಉಳ್ಳಯಿಂಗಡನೆಕೆ ವೇಷ ಇಡ್‌ವ, ಆಚೇಂಗಿ, ದೇವಡ ಶಕ್ತಿನ ಅಯಿಂಗಡ ಒಳ್‍ಲ್ ಕ್ರಿಯೆ ಮಾಡ್‌ವಕ್ ಬುಡುಲೆ. ಈಂಗಳ ಬುಟ್ಟಿತ್ ನೀನ್ ದೂರ ಇರ್.