ಕ್ರಿಸ್ತನನ್ನು ಅನುಸರಿಸಲು预览

ಕ್ರಿಸ್ತನನ್ನು  ಅನುಸರಿಸಲು

12天中的第11天

ನಿಮ್ಮ ಪೂರ್ಣ ದೇಹದಿಂದ ಆತನನ್ನು ಹಿಂಬಾಲಿಸಿ

ಯೇಸುವನ್ನು ಹಿಂಬಾಲಿಸುವುದು ಎನ್ನುವುದು ನಮ್ಮಲ್ಲಿಪ್ರತಿಯೊಬ್ಬರೂ ಆತನಿಗೆ ವಿಧೇಯರಾಗಲು ಹೆಜ್ಜೆಯನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿರುತ್ತದೆ. ಆತನ ವಾಕ್ಯವನ್ನು ಓದುವುದು ಮತ್ತು ಆತನು ನಮ್ಮ ಹೃದಯ ಮತ್ತು ಮನಸ್ಸನ್ನು ರೂಪಿಸಲು ಅವಕಾಶ ನೀಡುವುದು ಅತ್ಯಗತ್ಯವಾಗಿದ್ದರೂ ಸಹಆತನು ನಿಮಗೆ ಹೇಳುವುದನ್ನು ಮಾಡುವುದು ಅಷ್ಟೇ ಮುಖ್ಯವಾಗಿರುತ್ತದೆ. ಆತನು ನಡೆಸುವಲ್ಲಿ ನೀವು ಹೋಗುವಿರಾ, ಆತನು ನಿಮಗೆ ಮಾತನಾಡು ಎನ್ನುವುದನ್ನು ಮಾತನಾಡುವಿರಾ ಮತ್ತು ಆತನು ಮಾಡು ಎನ್ನುವುದನ್ನು ಮಾಡುವಿರಾ? ಅದು ದೊಡ್ಡ ಪ್ರಶ್ನೆಯಾಗಿದೆ. ದೇವರಿಗೆ ನಮ್ಮ ವಿಧೇಯತೆಯು ನಮ್ಮ ಶಿಷ್ಯತ್ವದ ಗುಣಮಟ್ಟದ ಬಗ್ಗೆ ಬಹಳಷ್ಟು ಹೇಳುತ್ತದೆ. ಶಿಷ್ಯ ಎಂದರೆ ದೇವರಿಗೆ ವಿಧೇಯನಾಗುವವನು. ನಾವು ಕೆಲವೊಂದರಲ್ಲಿ ಮಾತ್ರ ದೇವರಿಗೆ ವಿಧೇಯರಾಗಲೂ ಆರಿಸಿಕೊಳ್ಳುವುದೇ ನಮ್ಮಲ್ಲಿರುವ ಸಮಸ್ಯೆಯಾಗಿದೆ. ನಮಗೆ ಕೆಲವು ವಿಷಯಗಳು ಸುಲಭ, ಕೆಲವು ಕಠಿಣ ಅಥವಾ ಕೆಲುವು ಅಸಾಧ್ಯವೆಂದು ತೋರುತ್ತದೆ. ಅಂತಹ ಅಪೂರ್ಣ ವಿಧೇಯತೆಯು ದೇವರ ದೃಷ್ಟಿಯಲ್ಲಿ ಸಂಪೂರ್ಣ ಅವಿಧೇಯತೆಯಾಗಿರುತ್ತದೆ.

ನೀವು ಏನು ಮಾಡಬೇಕೆಂದು ದೇವರು ನಿಮ್ಮ ಮೇಲೆ ಏನು ಪ್ರಭಾವ ಬೀರಿದ್ದಾನೇ? ಯಾರೊಂದಿಗಾದರೂ ಸಮಧಾನದಿಂದಿರಲು ಆತನು ನಿಮಗೆ ಹೇಳುತ್ತಿದ್ದಾನೇ? ಯಾವುದೇ ವಿಷಕಾರಿ ಸಂಬಂಧವನ್ನು ಕೊನೆಗೊಳಿಸಲು ಆತನು ನಿಮ್ಮನ್ನು ಒತ್ತಾಯಿಸುತ್ತಿದ್ದಾನೇ? ಕೆಲಸದಲ್ಲಿರುವ ಯಾರೊಂದಿಗಾದರೂ ನಿಮ್ಮ ರಕ್ಷಣೆಯ ಕಥೆಯನ್ನು ಹಂಚಿಕೊಳ್ಳಲು ಆತನು ನಿಮ್ಮನ್ನು ಕೇಳುತ್ತಿದ್ದಾನೇ? ನೀವು ಯಾವುದೇ ಕಾಲೇಜ್ ಸ್ನೇಹಿತನಿಗಾಗಿ ಪ್ರಾರ್ಥಿಸಬೇಕೆಂದು ನಿಮಗೆ ಅನಿಸುತ್ತಿದೆಯೇ?

ನಿಮ್ಮನ್ನು ಕೆರೆದಾತನು ನಿಮ್ಮೊಂದಿಗಿರುದ್ದಾನೆ ಮತ್ತು ಆತನು ಕ್ರಿಯೆಯನ್ನು ಪೂರ್ಣಗೊಳಿಸುತ್ತಾನೆ ಎಂಬ ಸಂಪೂರ್ಣ ನಂಬಿಕೆಯಿಂದ ದೇವರು ಹೇಳುವುದನ್ನು ಮಾಡಿರಿ. ದೇವರಾತ್ಮವು ಹೃದಯಗಳನ್ನು ಮತ್ತು ಮನಸ್ಸನ್ನು ಮುಟ್ಟುವಾಗ ಆತನು ನಮ್ಮನ್ನು ರೂಪಾಂತರಗೊಳಿಸಿ ನೀವು ದೇವರಿಗೆ ವಿಧೇಯರಾಗಲು ನಿಮ್ಮನ್ನು ಸಿದ್ಧಪಡಿಸುತ್ತಾನೆ. ಕ್ರಿಯೆಗಳಿಲ್ಲದ ನಂಬಿಕೆ ಸತ್ತದಾಗಿದೆ. ಆದುದರಿಂದ ದೇವರು ನಿಮಗೆ ಹೊರಗೆ ಹೆಜ್ಜೆ ಹಾಕಲು ಮತ್ತು ಆತನನ್ನು ಹಿಂಬಾಲಿಸಲು ಕರೆನೀಡಿದಾಗ, ಆತನ ಮಾರ್ಗವನ್ನು ಹಿಂಬಾಲಿಸಿರಿ. ಆತನ ಅನುಗ್ರಹವು ನಿಮ್ಮನ್ನು ಎಲ್ಲಿ ಬೆಂಬಲಿಸುವುದಿಲ್ಲವೋ ಮತ್ತು ಆತನ ಉಪಸ್ಥಿತಿ ನಿಮ್ಮನ್ನು ಎಲ್ಲಿ ಮರೆಮಾಡುವುದಿಲ್ಲವೋ ಅಲ್ಲಿಗೆ ಆತನು ನಿಮ್ಮನ್ನು ಎಂದಿಗೂ ಕರೆದೊಯ್ಯುವುದಿಲ್ಲ.

ನಾವುಯಾರನ್ನುಹಿಂಬಾಲಿಸುತ್ತೇವೆ ಎಂಬುವುದು ಮುಖ್ಯ. ನಾವುಒಬ್ಬನೇ ನಿಜವಾದ ದೇವರನ್ನುಹಿಂಬಾಲಿಸುತ್ತೇವೆ. ಆದುದರಿಂದ ಬೋಧಕರು, ನಾಯಕರು, ಆರಾಧನೆ ನಾಯಕರೂ, ಪ್ರಸಿದ್ಧ ವ್ಯಕ್ತಿಗಳು ಹಿಂದೆ ಹೋಗದೆ ಇರಲು ಪ್ರಯತ್ನಿಸಿ, ಬದಲಿಗೆ ಕ್ರಿಸ್ತನನ್ನು ಅನುಸರಿಸಿರಿ!

ಘೋಷಣೆ:ನಾನು ಪೂರ್ಣ ಹೃದಯ, ಮನಸ್ಸು ಮತ್ತು ಶಕ್ತಿಯಿಂದ ದೇವರನ್ನು ಅನುಸರಿಸುತ್ತೇನೆ.

读经计划介绍

ಕ್ರಿಸ್ತನನ್ನು  ಅನುಸರಿಸಲು

ಪ್ರತಿದಿನ ಯೇಸುವನ್ನು ಹೇಗೆ ಅನುಸರಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಸತ್ಯವೇದದ ಈ ಯೋಜನೆಯು ನಿಮಗೆ ಸೂಕ್ತವಾಗಿರುತ್ತದೆ. ಸಹಜವಾಗಿ ಯೇಸುವಗೆ ಒಪ್ಪಿಗೆ ಎಂದು ಹೇಳುವುದೇಈ ಪಠ್ಯಕ್ರಮದ ಮೊದಲನೆಯ ಹೆಜ್ಜೆಯಾಗಿರುತ್ತದೆ. ಜೀವಮಾನದಾದ್ಯಂತ ಪದೇ ಪದೇ ಒಪ್ಪಿಗೆ ಒಪ್ಪಿಗೆ ಎಂದು ಹೇಳಿ ಆತನೊಂದಿಗೆ ಹೆಜ್ಜೆ ಹಾಕುವ ಪ್ರಯಾಣವು ಇದನ್ನು ಹಿಂಬಾಲಿಸುವ ಹೆಜ್ಜೆಗಳಾಗಿವೆ.

More